ಪ್ರೀತಿಯಲ್ಲಿ ಬಿದ್ದ ಪಡಿಕ್ಕಲ್?  – ಖ್ಯಾತ ನಟಿ ಜೊತೆ ಕನ್ನಡಿಗನ ಮದ್ವೆ?

ಪ್ರೀತಿಯಲ್ಲಿ ಬಿದ್ದ ಪಡಿಕ್ಕಲ್?  – ಖ್ಯಾತ ನಟಿ ಜೊತೆ ಕನ್ನಡಿಗನ ಮದ್ವೆ?

ದೇವದತ್‌ ಪಡಿಕ್ಕಲ್..‌ RCBಯ ಸ್ಟೋಟಕ ಬ್ಯಾಟರ್..‌ ಆನ್​ಫೀಲ್ಡ್​​ನಲ್ಲಿ ಘರ್ಜಿಸ್ತಿರೋ ಪಡಿಕ್ಕಲ್​ ಆಟಕ್ಕೆ ಎದುರಾಳಿಗಳು ಥಂಡಾ ಹೊಡೆದಿದ್ದಾರೆ. ಕ್ಲಾಸ್​ ಆಟಕ್ಕೂ ಸೈ.. ಮಾಸ್​ ಆಟಕ್ಕೂ ಜೈ ಎಂಬಂತಿದೆ ಕನ್ನಡಿಗನ ಆರ್ಭಟ. ಆದ್ರೀಗ ಪಡಿಕ್ಕಲ್‌ ಬೇರೆ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಇದೀಗ ಖ್ಯಾತ ನಟಿ ಜೊತೆ ಪಡಿಕ್ಕಲ್‌ ಹೆಸರು ಸೌಂಡ್‌ ಮಾಡ್ತಿದೆ. ಬಾಲಿವುಡ್‌ ನಟಿ ಜೊತೆ ಡೇಟಿಂಗ್‌ ಮಾಡ್ತಿದ್ದಾರೆ ಅನ್ನೋ ಸುದ್ದಿ ಸದ್ದು ಮಾಡ್ತಿದೆ.

ಇದನ್ನೂ ಓದಿ: ಹಳ್ಳಿ ಹೈದನ ಗೆಟಪ್‌ನಲ್ಲಿ ಗಿಲ್ಲಿ ನಟ – ಸರ್ವೇ ನಂಬರ್ 45 ಸಿನಿಮಾದಲ್ಲಿ ಗಿಲ್ಲಿ ಹೀರೋ

IPL ಸೀಸನ್​ 19ರಲ್ಲಿ ಆರ್​​ಸಿಬಿಯ ಅಬ್ಬರದ ಜೊತೆ ಜೊತೆಗೆ ಕನ್ನಡಿಗನ ಪರಾಕ್ರಮ ಜೋರಾಗಿದೆ. ಕಳೆದ ಸೀಸನ್​​ನಲ್ಲಿ ತವರಿನ ತಂಡಕ್ಕೆ ಕಮ್​ಬ್ಯಾಕ್​ ಮಾಡಿರೋ ದೇವದತ್ತ್​​ ಪಡಿಕ್ಕಲ್ ಕೂಲ್‌ ಆಗಿ ಆಟ ಆಡ್ತಿದ್ದಾರೆ. ಸ್ಪೋಟಕ ಬ್ಯಾಟಿಂಗ್‌ ಮೂಲಕ ತಂಡದ ಗೆಲುವಿಗೆ ನೆರವಾಗ್ತಿದ್ದಾರೆ. ಇದೀಗ ಪಡಿಕ್ಕಲ್‌ ಕ್ರಿಕೆಟ್‌ ಜೊತೆಗೆ ಬೇರೆ ಕಾರಣಕ್ಕೂ ಸುದ್ದಿಯಲ್ಲಿದ್ದಾರೆ. ಪಡಿಕ್ಕಲ್‌ ಪ್ರೀತಿಯಲ್ಲಿ ಬಿದ್ದಿದ್ದಾರಂತೆ. ಫೇಮಸ್‌ ಆಕ್ಟರ್‌ ಜೊತೆ ಡೇಟಿಂಗ್‌ ನಡೆಸ್ತಿದ್ದಾರೆ ಅನ್ನೋ ಸುದ್ದಿ ಭಾರಿ ಸೌಂಡ್‌ ಮಾಡ್ತಿದೆ. ಆ ನಟಿ ಬೇರೆ ಯಾರು ಅಲ್ಲ.. ಶೆಹನಾಜ್ ಗಿಲ್..

ಹೌದು.. ನಟಿ ಶೆಹನಾಜ್ ಗಿಲ್ ಜೊತೆ ಪಡಿಕ್ಕಲ್‌ ಹೆಸರು ತಳುಕುಹಾಕಿಕೊಂಡಿದೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆಯಾಗ್ತಿದೆ. ಇದಕ್ಕೆ ಕಾರಣ ಶೆಹನಾಜ್‌ ಗಿಲ್‌ ಮ್ಯಾಚ್‌ ನೋಡಲು ಮೈದಾನಕ್ಕೆ ಬಂದಿದ್ದು.. ಅಲ್ಲಿಂದಲೇ ಈ ಗಾಸಿಪ್‌ ಹರಿದಾಡಲು ಶುರುವಾಗಿದ್ದು. ಶೆಹನಾಜ್ ಗಿಲ್ ಆರ್‌ಸಿಬಿ Vs KKR ಪಂದ್ಯಗಳನ್ನು ನೋಡಲು ಸ್ಟೇಡಿಯಂಗೆ ತೆರಳಿದ್ದರು. ಈ ವೇಳೆ ಅವರು ಕೊಲ್ಕತ್ತಾ ತಂಡಕ್ಕೆ ಸಪೋರ್ಟ್ ಮಾಡಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದ್ರೆ, ಈ ನಟಿ ಆರ್‌ಸಿಬಿ ಜರ್ಸಿ ಧರಿಸಿ ಸ್ಟೇಡಿಯಂನಲ್ಲಿ ಸರ್‌ಪ್ರೈಸ್‌ ನೀಡಿದ್ರು. ಆರ್‌ಸಿಬಿ ತಂಡಕ್ಕೆ ಫುಲ್‌ ಸಪೋರ್ಟ್‌ ಮಾಡಿದ್ರು. ಫ್ಯಾನ್ಸ್‌ ಜೊತೆ ತಾವೂ ಕೂಡ ಆರ್‌ ಸಿಬಿ ಅಂತ ಸ್ಟೇಡಿಯಂನಲ್ಲಿ ಕೂಗಿದ್ರು. ಆಕೆ ಸ್ಟೇಡಿಯಂನಲ್ಲಿ ಆರ್‌ಸಿಬಿಗೆ ಸಪೋರ್ಟ್‌ ಮಾಡ್ತಿರೋ ಫೋಟೋ, ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಈ ಬೆನ್ನಲ್ಲೇ ದೇವದತ್ ಪಡಿಕ್ಕಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರಾ? ಎಂದು ಅನುಮಾನವನ್ನು ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ.  ಆದ್ರೆ ಯಾವ ಆಧಾರದ ಮೇಲೆ ಇವರಿಬ್ಬರ ಮಧ್ಯೆ ಸಂಬಂಧ ಕಲ್ಪಿಸಿದ್ರು ಅನ್ನೋದು ಇನ್ನೂ ಗೊತ್ತಾಗಿಲ್ಲ.. ಯಾಕಂದ್ರೆ ಶೆಹನಾಜ್‌ ಹಾಗೂ ಪಡಿಕ್ಕಲ್‌ ಎಲ್ಲೂ ಒಟ್ಟಿಗೆ ಕಾಣಿಸಿಕೊಂಡಿಲ್ಲ.. ಇನ್ನು ಸೋಶಿಯಲ್‌ ಮೀಡಿಯಾದಲ್ಲೂ ಒಬ್ನರನ್ನೊಬ್ಬರು ಫಾಲೋ ಮಾಡ್ತಿಲ್ಲ. ಇವರಿಬ್ಬರು ಕೂಡ ಪ್ರೀತಿ, ಡೇಟಿಂಗ್‌ ಮಾಡ್ತಿರೋದ್ರ ಬಗ್ಗೆ ಎಲ್ಲೂ ಹೇಳಿಕೆ ನೀಡಿಲ್ಲ.. ಹೀಗಾಗಿ ಶೆಹನಾಜ್‌ ಗಿಲ್‌ ಹಾಗೂ ಪಡಿಕ್ಕಲ್‌ ಪ್ರೀತಿಯಲ್ಲಿ ಬಿದ್ದಿದ್ದಾರೆ ಅನ್ನೋದಕ್ಕೆ ಯಾವುದೇ ಪುರಾವೆ ಇಲ್ಲ.. ಇದೀಗ ಹರಿದಾಡ್ತಿರೋ ರೂಮರ್ಸ್‌ ಬಗ್ಗೆ ಕ್ಲಾರಿಟಿ ಕೊಡ್ತಾರಾ ಅಂತ ಕಾದುನೋಡ್ಬೇಕು..

ಇನ್ನು ಈ ಶೆಹನಾಜ್‌ ಗಿಲ್‌ ಯಾರು ಅಂತ ನೋಡೋದಾದ್ರೆ, ಶೆಹನಾಜ್ ಗಿಲ್ ಹಿಂದಿ ಕಿರುತೆರೆ ಹಾಗೂ ಬಾಲಿವುಡ್‌ನಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಅಲ್ಲದೇ ಬಿಗ್ ಬಾಸ್ 13 ರಿಯಾಲಿಟಿ ಶೋನ ಸ್ಪರ್ಧಿ ಕೂಡ ಹೌದು. ಈ ಸೀಸನ್‌ನಲ್ಲಿ 2ನೇ ರನ್ನರ್‌ ಅಪ್‌ ಆಗಿ ಹೊರ ಹೊಮ್ಮಿದ್ದರು. ಪಂಜಾಬಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ, ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್ ನಟಿಸಿರುವ ‘ಕಿಸಿ ಕಾ ಬಾಯ್ ಕಿಸಿ ಕಾ ಜಾನ್’, ‘ಥ್ಯಾಂಕ್ಯೂ ಫಾರ್ ಕಮಿಂಗ್’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ‘ಸಿಂಗ್ Vs ಕೌರ್ 2’ ಅನ್ನೋ ಪಂಜಾಬಿ ಸಿನಿಮಾ ಹಾಗೂ ‘ಸಬ್ ಫಸ್ಟ್‌ ಕ್ಲಾಸ್’ ಅನ್ನೋ ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಅಂದ್ಹಾಗೆ ಈ ಸಿನಿಮಾ ಫೀಲ್ಡ್‌ ಹಾಗೇ ಕ್ರಿಕೆಟ್‌ ಲೋಕದಲ್ಲಿ ಗಾಸಿಪ್‌ ಅನ್ನೋದು ಕಾಮನ್‌. ಕ್ರಿಕೆಟರ್ಸ್ ಹಾಗೂ ಬಾಲಿವುಡ್ ನಟಿಯರ ಮಧ್ಯೆ ಡೇಟಿಂಗ್ ರೂಮರ್‌ಗಳು ಪದೇ ಪದೆ ಹುಟ್ಟಿಕೊಳ್ತಿರುತ್ತೆ. ಅದರಲ್ಲೂ ಐಪಿಎಲ್ ಸಮಯದಲ್ಲಿ ಇಂತಹ ಗಾಳಿ ಸುದ್ದಿಗಳು ಲೆಕ್ಕವಿಲ್ಲದಷ್ಟು ಹರಿದಾಡ್ತಾನೆ ಇರುತ್ತೆ. ಕಳೆದ ವರ್ಷ ದೇವದತ್‌ ಪಡಿಕ್ಕಲ್‌ ಜೊತೆ ಸ್ಯಾಂಡಲ್‌ವುಡ್‌ ನಟಿ ಧನ್ಯ ರಾಮ್‌ಕುಮಾರ್ ಹೆಸರು ತಳುಕುಹಾಕಿಕೊಂಡಿತ್ತು. ಧನ್ಯ ಅವರು RCB ಜೆರ್ಸಿ ಧರಿಸಿ ಸ್ಟೇಡಿಯಂಗೆ ಬಂದಿದ್ರು. ಆ ಜೆರ್ಸಿಯಲ್ಲಿ ಪಡಿಕ್ಕಲ್‌ ಜರ್ಸಿ ನಂಬರ್‌ ಇತ್ತು ಅನ್ನೋ ಕಾರಣಕ್ಕೆ ಡೇಟಿಂಗ್‌ ರೂಮರ್‌ ಹಬ್ಬಿತ್ತು. ಇದೀಗ ಕನ್ನಡಿಗ ದೇವದತ್ತ್‌ ಪಡಿಕ್ಕಲ್‌ ಹಾಗೇ ಶೆಹನಾಜ್‌ ಗಿಲ್‌ ಡೇಟಿಂಗ್‌ ನಡೆಸ್ತಿದ್ದಾರೆ ಅನ್ನೋ ಸುದ್ದಿ ಸದ್ದು ಮಾಡ್ತಿದೆ. ಮುಂದಿನ ದಿನಗಳಲ್ಲಿ ಈ ಗಾಸಿಪ್‌ ಎಲ್ಲಿವರೆಗೆ ತಲುಪುತ್ತೆ ಅನ್ನೋದನ್ನ ಕಾದುನೋಡ್ಬೇಕು.

Shwetha M

Leave a Reply

Your email address will not be published. Required fields are marked *