ಇವಳು ಪುಟ್ಟಗೌರಿನಾ? ಬಾಲಿವುಡ್ ಬೆಡಗಿನಾ? – ಪಡ್ಡೆ ಹುಡುಗರ ನಿದ್ದೆಗೆಡಿಸಿದ ಸಾನ್ಯಾ ಐಯ್ಯರ್ ಹಾಟ್ ಅವತಾರ!

ಪುಟ್ಟಗೌರಿ ಖ್ಯಾತಿಯ ಸಾನ್ಯಾ ಐಯ್ಯರ್ ಎಲ್ಲರಿಗೂ ಗೊತ್ತೇ ಇದೆ. ‘ಬಿಗ್ ಬಾಸ್’ ಮನೆಗೆ ಹೋಗಿ ಬಂದ ನಂತರ ನಟಿ ಸಾನ್ಯಾ ಐಯ್ಯರ್ ಅವರ ಖ್ಯಾತಿ ಹೆಚ್ಚಿದೆ. ಹಲವು ಫೋಟೋಶೂಟ್ ಮಾಡಿಸಿ ಅವರು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಹೊಸ ಹೊಸ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇದ್ದಾರೆ. ಇದೀಗ ಸಾನ್ಯಾ ಐಯ್ಯರ್ ಹಾಟ್ ಅವತಾರದಲ್ಲಿ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ.
ಸಾನ್ಯಾ ಐಯ್ಯರ್ ಅವರು ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಗೌರಿ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಕಿರುತೆರೆಯಲ್ಲಿ ಲಂಗ ದವಣಿ ಧರಿಸಿಕೊಂಡು ಓಡಾಡುತ್ತಿದ್ದ ಪುಟ್ಟಗೌರಿ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾಗಾಗಿ ಸಾಕಷ್ಟು ಬದಲಾವಣೆ ಕಂಡುಕೊಳ್ಳುತ್ತಿದ್ದಾರೆ. ಸಖತ್ ಹಾಟ್ ಹಾಟ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿದ್ದ ಸಾನ್ಯಾ ಐಯ್ಯರ್, ಇದೀಗ ಮತ್ತೊಂದು ಫೋಟೋ ಶೂಟ್ ನಲ್ಲಿ ಭಾಗಿಯಾಗಿದ್ದು, ಆ ಫೋಟೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಸಲಾರ್, ಡಂಕಿ ಸಿನಿಮಾ ಜೊತೆ ಹಾಲಿವುಡ್‌ನ ಬಿಗ್‌ಬಜೆಟ್ ಚಿತ್ರ ರಿಲೀಸ್ – ಬಾಕ್ಸ್ಆಫೀಸ್ ವಾರ್ ಆಗೋದು ಗ್ಯಾರಂಟಿ..!
ಕ್ರೀಮ್ ಕಲರ್ ಡ್ರೆಸ್ ಧರಿಸಿ ಸಾನ್ಯಾ ಐಯ್ಯರ್ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಆಕೆ ಧರಿಸಿರುವ ಡ್ರೆಸ್‌ಗೆ ಹೇರ್ ಸ್ಟೈಟ್, ಮೇಕ್‍ಅಪ್ ಎಲ್ಲ ಮ್ಯಾಚ್ ಆಗುತ್ತಿದೆ. ಸೂಪರ್ ಆಗಿ ಕಾಣ್ತಾ ಇದ್ದಾರೆ. ಆಕೆ ಫೋಟೋ ನೋಡಿದ ಅಭಿಮಾನಿಗಳು ಇವಳು ಪುಟ್ಟಗೌರಿನಾ? ಬಾಲಿವುಡ್ ಬೆಡಗಿನಾ? ಅಂತಾ ಕೇಳುತ್ತಿದ್ದಾರೆ. ಸದ್ಯ ಸಾನ್ಯಾ ಐಯ್ಯರ್ ಲುಕ್‌ಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಬ್ಲೌಸ್ ಇಲ್ಲದೇ ಕೇವಲ ಸೀರೆ ಉಟ್ಟುಕೊಂಡು ಫೋಟೋ ಶೂಟ್ ಮಾಡಿಸಿಕೊಂಡಿರುವ ಸಾನ್ಯಾ ಅಯ್ಯರ್ ಆ ಫೋಟೋದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಬ್ಯಾಕ್ ಲೆಸ್ ಪೋಸ್ ಕೂಡ ನೀಡಿದ್ದಾರೆ. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿವೆ. ಕೆಲವರು ಪಾಸಿಟಿವ್ ಕಾಮೆಂಟ್ ಮಾಡಿದರೆ, ಇನ್ನೂ ಕೆಲವರು ನೆಗೆಟಿವ್ ಕಾಮೆಂಟ್ ಕೂಡ ಮಾಡಿದ್ದಾರೆ.
ಈ ಹಿಂದೆಯೂ ಸಾನ್ಯಾ ಐಯ್ಯರ್ ಬಿಕಿನಿ ಫೋಟೋಶೂಟ್‌ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಈಗ ಹೊಸ ಲುಕ್‌ನಲ್ಲಿ ಸ್ಟೈಲೀಶ್ ಗೆಟಪ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ನೀಡಿದ್ದಾರೆ. ಬ್ಲೌಸ್ ಇಲ್ಲದೇ ಸೀರೆ ತೊಟ್ಟಿದ್ದಾರೆ.
ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸಾನ್ಯಾ ಐಯ್ಯರ್ ಸ್ಪಧಿಯಾಗಿ ಭಾಗವಹಿಸಿದ್ದರು. ರೂಪೇಶ್ ಶೆಟ್ಟಿ ಜೊತೆಗಿನ ಸಾನ್ಯ ಸ್ನೇಹ ಹೈಲೆಟ್ ಆಗಿತ್ತು. ಈ ಸೀಸನ್‌ನಲ್ಲಿ ರೂಪೇಶ್ ಶೆಟ್ಟಿ ವಿನ್ನರ್ ಆಗಿದ್ದರು. ಇದೀಗ ಸಾನ್ಯಾ ಐಯ್ಯರ್ ಹೊಸ ಸಿನಿಮಾವನ್ನು ಒಪ್ಪಿಕೊಂಡು ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ. ಎರಡು ಹಂತದ ಶೂಟಿಂಗ್ ಕೂಡ ಮುಗಿದಿದೆ ಎಂದು ಹೇಳಲಾಗುತ್ತಿದೆ.