ರಕ್ಷಿತ್‌ ಶೆಟ್ಟಿ ಜೊತೆ ಮದುವೆಯಾಗಲಿದ್ದಾರಾ ಶರಣ್ಯ ಶೆಟ್ಟಿ? – ಮೊದಲ ಬಾರಿಗೆ ಮೌನ ಮುರಿದ ನಟಿ!

ರಕ್ಷಿತ್‌ ಶೆಟ್ಟಿ ಜೊತೆ ಮದುವೆಯಾಗಲಿದ್ದಾರಾ ಶರಣ್ಯ ಶೆಟ್ಟಿ? – ಮೊದಲ ಬಾರಿಗೆ ಮೌನ ಮುರಿದ ನಟಿ!

ರಕ್ಷಿತ್ ಶೆಟ್ಟಿ ಕನ್ನಡ ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್. ಈ ಹಿಂದಿನಿಂದಲೂ ರಕ್ಷಿತ್ ಶೆಟ್ಟಿ ಪ್ರೀತಿ, ಪ್ರೇಮ, ಮದುವೆ ಹಾಗೂ ಎಂಗೇಜ್‌ಮೆಂಟ್ ವಿಷಯಗಳ ಕುರಿತಾಗಿ ಸಾಕಷ್ಟು ಸುದ್ದಿಗೀಡಾಗಿ ಚರ್ಚೆಗೆ ಒಳಗಾದವರೇ. ಹೌದು, ಕಿರಿಕ್ ಪಾರ್ಟಿ ಸಿನಿಮಾ ಬಳಿಕ ಅದೇ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ರಶ್ಮಿಕಾ ಮಂದಣ್ಣ ಜತೆ ರಕ್ಷಿತ್ ಶೆಟ್ಟಿ ಪ್ರೀತಿಯಲ್ಲಿ ಬಿದ್ದದ್ದರು. ಇವರಿಬ್ಬರು ಮನೆಯವರನ್ನು ಒಪ್ಪಿಸಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ದುರದೃಷ್ಟವಶಾತ್ ಈ ಜೋಡಿ ಮದುವೆಯಾಗಲಿಲ್ಲ. ಇವರ ಎಂಗೇಜ್ಮೆಂಟ್ ಆದ ನಂತರ ಸಂಬಂಧ ಮುರಿದುಬಿತ್ತು.

ರಶ್ಮಿಕಾ ಜೊತೆ ಮದುವೆ ಮುರಿದು ಬಿದ್ದ ಬಳಿಕ ರಕ್ಷಿತ್‌ ಶೆಟ್ಟಿ ಮತ್ತೆ ಸಿಂಗಲ್‌ ಆಗಿಯೇ ಇದ್ದಾರೆ. ರಕ್ಷಿತ್‌ ಶೆಟ್ಟಿ ನಟಿಯರ ಜೊತೆ ಫೋಟೋ ತೆಗಿಸಿಕೊಂಡರೂ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರಾ ಅಂತಾ ಗಾಸಿಪ್‌ಗಳು ಹುಟ್ಟಿಕೊಳ್ಳುತ್ತಿವೆ. ರಕ್ಷಿತ್ ಶೆಟ್ಟಿ ಜೊತೆ  ಶರಣ್ಯ ಶೆಟ್ಟಿ ನಟಿಸಿದ್ದರು. ಇವರಿಬ್ಬರು ಮದುವೆಯಾಗುತ್ತಿದ್ದಾರೆ ಅಂತಾ ತುಂಬಾನೆ ದೊಡ್ಡ ಗಾಸಿಪ್ ಹರಡಿತ್ತು. ಈ ಬಗ್ಗೆ ಮೊದಲ ಬಾರಿಗೆ ನಟಿ ಶರಣ್ಯ ಶೆಟ್ಟಿ ಮಾತನಾಡಿದ್ದಾರೆ. ತಮ್ಮ ಹಾಗೂ ರಕ್ಷಿತ್‌ ಶೆಟ್ಟಿ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ಮಾಜಿ ಪತಿ ನಾಗಚೈತನ್ಯ ಸಹಿಯ ಟ್ಯಾಟೂ ಕಾಣಿಸುತ್ತಿಲ್ಲ – ಪ್ರೀತಿಯ ನೆನಪನ್ನು ಸಂಪೂರ್ಣ ಅಳಿಸಿಹಾಕಿದ್ರಾ ನಟಿ ಸಮಂತಾ?

ದುಬೈನಲ್ಲಿ ನಡೆದ ಸೈಮಾ 2023 ಅವಾರ್ಡ್ ಫಂಕ್ಷನ್‌ನಲ್ಲಿ ರಕ್ಷಿತ್‌ ಶೆಟ್ಟಿ ಹಾಗೂ ಶರಣ್ಯ ಇಬ್ಬರು ಭಾಗವಹಿಸಿದ್ದರು. ಪ್ರಶಸ್ತಿ ಪಡೆದಿದ್ದ ರಕ್ಷಿತ್ ಶೆಟ್ಟಿ, ಇದೇ ಸಮಾರಂಭದಲ್ಲಿ ನಟಿ ಶರಣ್ಯ ಶೆಟ್ಟಿ ಜೊತೆ ಫೋಟೋ ತೆಗೆಸಿಕೊಂಡಿದ್ದರು. ಈ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಅಷ್ಟೇ ಅಲ್ಲದೇ ರಕ್ಷಿತ್ ಶೆಟ್ಟಿ ಹೊಸ ಗರ್ಲ್ ಫ್ರೆಂಡ್ ಶರಣ್ಯ ಶೆಟ್ಟಿ. ಇವರಿಬ್ಬರು ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂದೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿ ಹರಡಿತ್ತು. ಇದೀಗ ಮೊದಲ ಬಾರಿಗೆ ಟ್ರೋಲ್ ಗೆ ಉತ್ತರ ನೀಡಿರುವ ಶರಣ್ಯ ಶೆಟ್ಟಿ, ನಿಮ್ಮ ಜೋಡಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗ್ತಿದೆ, ಇದಕ್ಕೆ ಏನಂತೀರಿ ಎಂದು ಕೇಳಿರೋದಕ್ಕೆ ನಟಿ ಹೌದಾ, ನಮ್ಮ ಜೋಡಿ ಚೆನ್ನಾಗಿದ್ಯಾ ಎಂದು ಪ್ರಶ್ನಿಸಿದ್ದಾರೆ.

ಅಲ್ಲದೇ ಏನ್ ಹೇಳೋದು ಇದ್ರ ಬಗ್ಗೆ, ಪಾಪ ರಕ್ಷಿತ್ ಶೆಟ್ಟಿಯವ್ರು ಅವರು ಯಾರ ಜೊತೆ ಫೋಟೋ ಹಾಕಿದ್ರೂ ಜನರು ಮದುವೆ ಮಾಡಿಸಿ ಬಿಡ್ತಾರೆ. ಏನು ಮಾಡಕ್ಕಾಗಲ್ಲ. ಇದರ ಬಗ್ಗೆ ಅವರು ಮಾತನಾಡಿದ್ರು ಎಂದು ಹೇಳಿ ನಕ್ಕರು. ಜೊತೆಗೆ ನಮ್ಮಿಬ್ಬರ ನಡುವೆ ಏನೂ ಇಲ್ಲ. ನನಗೆ ರಕ್ಷಿತ್ ಶೆಟ್ಟಿ ಅವರ ಮೇಲೆ ಮತ್ತು ಅವರ ಕೆಲಸದ ಮೇಲೆ ಅಪಾರ ಅಭಿಮಾನ ಇದೆ ಅಷ್ಟೇ ಬೇರೇನೂ ಹೇಳೋದು ಏನು ಇಲ್ಲ ಎಂದು ಹೇಳಿ ಶರಣ್ಯ ಮಂದಹಾಸ ಬೀರಿದ್ದಾರೆ.

ನಟ ರಕ್ಷಿತ್ ಶೆಟ್ಟಿ ಸದ್ಯ ಸಪ್ತಸಾಗರದಾಚೆ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರವು ಯಶಸ್ಸು ಕಂಡಿದೆ. ಇದೀಗ ಸೈಡ್ ಬಿ ಬಿಡುಗಡೆಗೆ ಕಾಯುತ್ತಿದ್ದಾರೆ. ಇನ್ನು ಶರಣ್ಯ ಶೆಟ್ಟಿ ಸಹ ಹಲವಾರು ಸಿನಿಮಾ ಮತ್ತು ಆಲ್ಬಂ ಹಾಡುಗಳಲ್ಲಿ ಬ್ಯುಸಿಯಾಗಿದ್ದಾರೆ.

Shwetha M