ಉಗ್ರಂ + ಕೆಜಿಎಫ್ = ಸಲಾರ್? – ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ಬಗ್ಗೆ ಜನ ಹೇಳೋದೇನು..?

ಉಗ್ರಂ + ಕೆಜಿಎಫ್ = ಸಲಾರ್? – ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ಬಗ್ಗೆ ಜನ ಹೇಳೋದೇನು..?

ಟಾಲಿವುಡ್ ನ ಖ್ಯಾತ ನಟ ಪ್ರಭಾಸ್ ಅಭಿನಯದ ಸಲಾರ್ ಚಿತ್ರದ ಟ್ರೇಲರ್ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್​ನಡಿ ನಿರ್ಮಾಣವಾಗಿರುವ ಸಲಾರ್ ಚಿತ್ರದ ಟ್ರೇಲರ್ ಶನಿವಾರ ಸಂಜೆ 7.29ಕ್ಕೆ ರಿಲೀಸ್ ಆಗಿದೆ. ಆ್ಯಕ್ಷನ್‍, ಥ್ರಿಲ್‍ ಮತ್ತು ರಕ್ತಸಿಕ್ತ ಸೀನ್​ಗಳು ಟ್ರೇಲರ್ ನಲ್ಲಿದ್ದು ಸಿನಿಮಾ ಬಗೆಗಿನ ನಿರೀಕ್ಷೆಗಳು ದುಪ್ಪಟ್ಟಾಗುವಂತೆ ಮಾಡಿದೆ.

ಪ್ರಭಾಸ್ ಸಲಾರ್ ಚಿತ್ರದಲ್ಲಿ ಹಿಂದೆಂದಿಗಿಂತಲೂ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗೇ ಟ್ರೇಲರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಎಲ್ಲಾ ಭಾಷೆಗಳಲ್ಲೂ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದಿದೆ. ಇಬ್ಬರು ಬಾಲ್ಯದ ಗೆಳೆಯರ ಕಥೆಯೊಂದಿಗೆ ಆರಂಭವಾಗುವ ಟ್ರೇಲರ್ ನಂತರ ರಕ್ತಸಿಕ್ತ ಅಧ್ಯಾಯದತ್ತ ಸಾಗುತ್ತದೆ. ಆರಂಭದಲ್ಲಿ ಉಗ್ರಂ ಚಿತ್ರ ಕಥೆಯನ್ನು ನೆನಪಿಸುವ ಟ್ರೇಲರ್ ಕೆಜಿಎಫ್ ಚಿತ್ರದ ಮೇಕಿಂಗ್ ಅನ್ನು ಕಣ್ಣ ಮುಂದೆ ತರುತ್ತೆ. ಇನ್ನು ಸಲಾರ್ ಚಿತ್ರದಲ್ಲಿ ಬಹುದೊಡ್ಡ ತಾರಾಬಳಗವೇ ಇದ್ದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಡಿಸೆಂಬರ್ 22ರಂದು ರಿಲೀಸ್ ಆಗಲಿದೆಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಶನ್​ನ ಈ ಚಿತ್ರ ಭಾರೀ ನಿರೀಕ್ಷೆ ಮೂಡಿಸಿದೆ.

ಇದನ್ನೂ ಓದಿ : ಪ್ರಶಾಂತ್ ನೀಲ್ ಸೃಷ್ಟಿಸಿದ ಸಲಾರ್ ಪ್ರಪಂಚ ಹೇಗಿದೆ? – ಧೂಳೆಬ್ಬಿಸಿದ ಪ್ರಭಾಸ್ ಸಿನಿಮಾದ ಟ್ರೈಲರ್

ಎರಡು ವರ್ಷಗಳಿಂದ ಚಿತ್ರತಂಡ ಈ ಬಹು ನಿರೀಕ್ಷಿತ ಚಿತ್ರದ ತಯಾರಿಕೆಯಲ್ಲಿದೆ. ಇದು ಮಲಯಾಳಂ ಸ್ಟಾರ್ ಪೃಥ್ವಿರಾಜ್ ಅವರ ತೆಲುಗಿನ ಚೊಚ್ಚಲ ಚಿತ್ರವಾಗಿದ್ದು, ಚಿತ್ರದಲ್ಲಿ ನಟಿ ಶ್ರುತಿ ಹಾಸನ್, ಜಗಪತಿ ಬಾಬು, ಈಶ್ವರಿ ರಾವ್ ಮತ್ತು ಶ್ರೀಯಾ ರೆಡ್ಡಿ ಚಿತ್ರದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಸಲಾರ್ ಚಿತ್ರದ ಟ್ರೈಲರ್ ಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು,  ಈ ಟ್ರೈಲರ್‌ ನೋಡಿದವರು ಅದ್ಭುತವಾಗಿದೆ ಅಂತ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇನ್ನೂ ಕೆಲವರು ಸಲಾರ್‌ ಸಿನಿಮಾವನ್ನು ಬೇರೆ ಬೇರೆ ಸಿನಿಮಾಗಳಿಗೆ ಕಂಪೇರ್ ಮಾಡುತ್ತಿದ್ದಾರೆ. ಇದರ ನಡುವೆಯೇ ಟ್ರೈಲರ್ ಉಗ್ರಂ ಚಿತ್ರದ ಹೊಸ ವರ್ಷನ್ ಎಂಬಂತಿದೆ ಎಂಬ ಮಾತುಗಳೂ ಇವೆ. ಸೋಷಿಯಲ್‌ ಮೀಡಿಯಾದಲ್ಲಿ ಸಲಾರ್‌ ಟ್ರೈಲರ್‌ ನೋಡಿದವರು ಇದೇನ್‌ ಗುರೂ ಸೇಮ್‌ ಕಬ್ಜ ಸಿನಿಮಾ ಥರಾನೇ ಇದೆ ಅಂತ ಪೋಸ್ಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರಂತೂ ಕಬ್ಜ ಸಿನಿಮಾದ ಟ್ರೈಲರ್‌ ಸಲಾರ್‌ ಟ್ರೈಲರ್‌ಗಿಂತ ಚೆನ್ನಾಗಿದೆ ಅಂತಿದ್ದಾರೆ.

Shantha Kumari