2027ರ ವಿಶ್ವಕಪ್ ಆಡಲ್ಲ ರೋಹಿತ್? – IPL ನಡುವೆ ODIಗೂ ಗುಡ್ ಬೈ?
KING ಫಿಕ್ಸ್.. HITಮ್ಯಾನ್ ಯಾಕಿಲ್ಲ?

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ.. ಟೀಂ ಇಂಡಿಯಾದ ಲೆಜೆಂಡರಿ ಪ್ಲೇಯರ್ಸ್.. ಇವ್ರಿಬ್ರು ಪಂದ್ಯ ಆಡ್ತಿದ್ದಾರೆ ಅಂದ್ರೆ ಅದ್ರ ಕ್ರೇಜೇ ಬೇರೆ. ಮೈದಾನಗಳೂ ಕೂಡ ಹೌಸ್ಫುಲ್ ಆಗುತ್ವೆ. 2027ರ ವಿಶ್ವಕಪ್ ಗೆದ್ದೇ ಗೆಲ್ಬೇಕು ಅಂತಾ ಪಣ ತೊಟ್ಟಿರೋ ಈ ಜೋಡೆತ್ತು ಈಗ ಭಾರತದ ಪರ ಏಕದಿನ ಮಾದರಿ ಪಂದ್ಯಗಳನ್ನ ಮಾತ್ರ ಆಡ್ತಿದ್ದಾರೆ. ಇಲ್ಲಿ ಇರುವಂಥ ಕನ್ಫ್ಯೂಷನ್ ಅಂದ್ರೆ ವಿಶ್ವಕಪ್ ಆಡೋಕೆ ವಿರಾಟ್ ಕೊಹ್ಲಿ ದಾರಿ ಏನೋ ಕ್ಲಿಯರ್ ಆಗಿದೆ. ಬಟ್ ರೋಹಿತ್ ಶರ್ಮಾ ವಿಚಾರದಲ್ಲಿ ಕನ್ಫ್ಯೂಷನ್ ಶುರುವಾಗಿದೆ.
ಇದನ್ನೂ ಓದಿ : ದೇಶಿ ಕ್ರಿಕೆಟ್ನಲ್ಲಿ ಸರ್ಫರಾಜ್ ಖಾನ್ ಅಬ್ಬರ – ರಣಜಿ ಟೂರ್ನಿಯಲ್ಲಿ ಮತ್ತೊಂದು ದ್ವಿಶತ
2027ರ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವಕಾಶ ಕೊಡ್ಬೇಕಾ ಅನ್ನೋ ಬಗ್ಗೆ ಪದೇಪದೆ ಚರ್ಚೆಯಾಗ್ತಾನೇ ಇರುತ್ತೆ. ಇದಕ್ಕೆ ಪರವಿರೋಧ ಎರಡೂ ಇದೆ. ಬಿಸಿಸಿಐ ಕಡೆಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಹೀಗಿದ್ರೂ ತಮ್ಮ ಬ್ಯಾಟಿಂಗ್ ಮೂಲಕವೇ ವಿರೋಧಿಗಳಿಗೆ ಉತ್ತರ ಕೊಡ್ತಿದ್ದಾರೆ. ಅದೂ ಭರ್ಜರಿ ಫಾರ್ಮ್ನಲ್ಲಿರೋ ವಿರಾಟ್ ಕೊಹ್ಲಿ ವಿಶ್ವಕಪ್‌ನಲ್ಲಿ ಚಾನ್ಸ್ ಕೊಡ್ಲೇಬೇಕು ಅನ್ನೋ ಥರ ಪರ್ಫಾಮ್ ಮಾಡ್ತಿದ್ದಾರೆ. ಆದ್ರೆ ರೋಹಿತ್ ಶರ್ಮಾ ಮಂಕಾಗಿದ್ದು ಆತಂಕ ಮೂಡಿಸಿದ್ದಾರೆ.
ಕೊಹ್ಲಿ ಫಾರ್ಮ್ & ಪರ್ಫಾಮೆನ್ಸ್ ಗೆ ಬಿಸಿಸಿಐ ಕ್ಲೀನ್ ಬೌಲ್ಡ್!
ರನ್ ಮಷಿನ್, ಚೇಸಿಂಗ್ ಮಾಸ್ಟರ್, ಸೆಂಚುರಿ ಸ್ಟಾರ್ ವಿರಾಟ್ ಕೊಹ್ಲಿ ಪರ್ಫಾಮೆನ್ಸ್ ಬಗ್ಗೆ ಯಾರೂ ಸೊಲ್ಲೆತ್ತುವಂತೆಯೂ ಇಲ್ಲ. ಫಿಟ್ನೆಸ್ ಮತ್ತು ಫಾರ್ಮ್ನಲ್ಲಿ ಯಂಗ್ಸ್ಟರ್ಸ್ ಕೂಡ ನಾಚಿಕೊಳ್ಳುವಂತೆ ಅಬ್ಬರಿಸ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿ ವೇಳೆ ಮೊದಲ ಎರಡು ಪಂದ್ಯಗಳಲ್ಲಿ ಡಕ್ ಔಟ್ ಆಗಿದ್ರು. ಈ ವೇಳೆ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ರು. ಆದ್ರೆ ಆಸೀಸ್ ಸರಣಿಯ ಕೊನೇ ಪಂದ್ಯದಿಂದ ವಿರಾಟ್ ವಿಂಟೇಜ್ ಸ್ಟೈಲಲ್ಲೇ ಅಬ್ಬರ ಶುರು ಮಾಡಿದ್ರು. ಆ ನಂತ್ರ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ಸರಣಿಯಲ್ಲೂ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದ್ರು. ಕೊನೆ 7 ಪಂದ್ಯಗಳಲ್ಲಿ 3 ಶತಕಗಳ ಸಮೇತ 616 ರನ್ ಕಲೆಹಾಕಿರುವ ಕೊಹ್ಲಿಯೇ ಭಾರತ ಏಕದಿನ ತಂಡದ ಆಧಾರ ಸ್ತಂಭವಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧವೂ ಬೆಸ್ಟ್ ಇನ್ನಿಂಗ್ಸ್ ಬಂದಿದೆ. ಹೀಗಾಗಿ ಸದ್ಯಕ್ಕೆ ಅವರ ನಿವೃತ್ತಿ ಬಗ್ಗೆ ಯಾರೂ ಮಾತಾಡುವಂತಿಲ್ಲ. ಕೊಹ್ಲಿ ಪ್ರದರ್ಶನ ನೋಡಿದ ಮೇಲೆ ಬಿಸಿಸಿಐನ ಬಾಸ್ಗಳೂ ಕೂಡ ಸೈಲೆಂಟ್ ಆಗಿದ್ದಾರೆ. ಆದ್ರೆ ರೋಹಿತ್ ವಿಚಾರದಲ್ಲಿ ಹೀಗಿಲ್ಲ.
15 ಪಂದ್ಯ.. 1 ಶತಕ.. ರೋಹಿತ್ ಆಟದ ಬಗ್ಗೆ ಅಸಮಾಧಾನ!
ಒಂದ್ಕಡೆ ವಿರಾಟ್ ಕೊಹ್ಲಿ ದಿ ಬೆಸ್ಟ್ ಪರ್ಫಾಮೆನ್ಸ್ ಕೊಡ್ತಿದ್ರೆ ಇತ್ತ ರೋಹಿತ್ ಶರ್ಮಾ ಇತ್ತೀಚೆಗೆ ಡಲ್ ಆಗಿದ್ದಾರೆ. ಆಸ್ಟ್ರೇಲಿ ಸರಣಿಯಲ್ಲಿ ಶತಕ, ಅರ್ಧಶತಕ ಸಮೇತ 202 ರನ್ಗಳಿಸಿ ಸರಣಿಯ ಹೈಯೆಸ್ಟ್ ರನ್ ಸ್ಕೋರರ್ ಆಗಿದ್ದ ರೋಹಿತ್ ಆ ಬಳಿಕ ಸೌತ್ ಆಫ್ರಿಕಾ ವಿರುದ್ಧವೂ ಸಿಡಿಯಲಿಲ್ಲ. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಮೂರು ಏಕದಿನ ಪಂದ್ಯಗಳಲ್ಲಿ ಒಂದೇ ಒಂದು ಅರ್ಧಶತಕ ಬರ್ಲಿಲ್ಲ. ಅಲ್ದೇ ಕಳೆದ 15 ಪಂದ್ಯಗಳಲ್ಲಿ 1 ಶತಕ, ಕಳೆದ ಐದು ಪಂದ್ಯಗಳಲ್ಲಿ ಒಂದು ಅರ್ಧಶತಕ ಮಾತ್ರ ಬಂದಿದೆ. ಹೀಗಾಗಿ ರೋಹಿತ್ರನ್ನ ಕಂಟಿನ್ಯೂ ಮಾಡ್ಬೇಕಾ ಬೇಡ್ವಾ ಅನ್ನೋದು ಕೂಡ ಪ್ರಶ್ನೆಯಾಗಿದೆ. ಅಲ್ದೇ ಕಳೆದ ಐಪಿಎಲ್ ವೇಳೆ ರೋಹಿತ್ ದಿಢೀರ್ ಅಂತಾ ಟೆಸ್ಟ್ ಫಾರ್ಮೆಟ್ಗೆ ಗುಡ್ ಬೈ ಹೇಳಿದ್ರು. ಸೋ ಈ ಬಾರಿಯ ಐಪಿಎಲ್ನಲ್ಲೂ ಅಂಥದ್ದೇ ನಿರ್ಧಾರ ಮಾಡ್ತಾರೋ ಏನೋ ಎನ್ನುವಂತ ಆತಂಕವೂ ಇದೆ.
ರೋಹಿತ್ ಪಾಲಿಗೆ ಗಗನ ಕುಸುಮವಾಗಿರುವ ಏಕದಿನ ವಿಶ್ವಕಪ್!
ರೋಹಿತ್ ಶರ್ಮಾ ಕ್ಯಾಪ್ಟನ್ ಆಗಿ ಭಾರತದ ಪರ ಏಷ್ಯಾಕಪ್, ಐಸಿಸಿ ಟಿ20 ವಿಶ್ವಕಪ್ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದಾರೆ. ಆದ್ರೆ ಹಿಟ್‌ಮ್ಯಾನ್‌ಗೆ ಐಸಿಸಿ ಏಕದಿನ ವಿಶ್ವಕಪ್ ಗೆಲ್ಲುವ ಕನಸು ಕನಸಾಗಿಯೇ ಉಳಿದಿದೆ. 2011ರಲ್ಲಿ ಭಾರತ ಏಕದಿನ ವಿಶ್ವಕಪ್ ಗೆದ್ದಾಗ ರೋಹಿತ್ ಶರ್ಮಾ ಭಾರತ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಬಳಿಕ 2015, 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಆಡಿದ್ದರಾದ್ರೂ ತಂಡ ಸೆಮಿಫೈನಲ್‌ನಲ್ಲೇ ಮುಗ್ಗರಿಸಿತ್ತು. 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ನಾಯಕತ್ವದಲ್ಲಿ ತಂಡ ಫೈನಲ್ಗೆ ಲಗ್ಗೆ ಇಟ್ರೂ ಆಸೀಸ್ ವಿರುದ್ಧ ಸೋತು ಟ್ರೋಫಿಯಿಂದ ಜಸ್ಟ್ ಮಿಸ್ ಆಗಿತ್ತು. ಹೀಗಾಗಿ 2027ರ ವಿಶ್ವಕಪ್ನಾದ್ರೂ ಗೆಲ್ಲೋಣ ಅಂತಾ ರೋಹಿತ್ ಮತ್ತು ಕೊಹ್ಲಿ ತಂಡದಲ್ಲಿ ಆಡ್ತಿದ್ದಾರೆ. ಆದ್ರೆ ಈಗ ರೋಹಿತ್ ಫಾರ್ಮ್ ನೋಡ್ತಿದ್ರೆ ವಿಶ್ವಕಪ್‌ವರೆಗೂ ತಂಡದಲ್ಲಿ ಮುಂದುವರಿಯುವ ಬಗ್ಗೆ ಅನುಮಾನಗಳಿವೆ. 2027ರ ವಿಶ್ವಕಪ್‌ಗೂ ಮುನ್ನ ಭಾರತ 5 ಸರಣಿಗಳನ್ನ ಆಡಲಿದೆ. ಈ ಪೈಕಿ 15 ಏಕದಿನ ಪಂದ್ಯಗಳನ್ನಾಡಲಿದೆ. ಪ್ರಸ್ತುತ ಭಾರತ ನ್ಯೂಜಿಲೆಂಡ್ ವಿರುದ್ಧ ಟಿ20ಐ ಸರಣಿ ಆದ್ಮೇಲೆ ವಿಶ್ವಕಪ್ ಆಡಲಿದ್ದು ಆ ನಂತ್ರ ಟಿಂ ಇಂಡಿಯಾ ಆಟಗಾರರು ಐಪಿಎಲ್ನಲ್ಲಿ ಬ್ಯುಸಿ ಆಗ್ತಾರೆ. ಸೋ ಇನ್ನು ಆರು ತಿಂಗಳು ರೋಕೋ ಜೋಡಿ ಭಾರತದ ಜೆರ್ಸಿ ಹಾಕೋದಿಲ್ಲ.

ನೋಡಿರಿ

