50 ಕೋಟಿಗೆ ರೋಹಿತ್ ಶರ್ಮಾ ಹರಾಜು? – Hitman ಪಂಜಾಬ್ ಟೀಮ್ ಸೇರ್ತಾರಾ?
ಮುಂಬೈ ಇಂಡಿಯನ್ಸ್ ಒಪ್ಪಿಕೊಳ್ಳುತ್ತಾ?

50 ಕೋಟಿಗೆ ರೋಹಿತ್ ಶರ್ಮಾ ಹರಾಜು? – Hitman ಪಂಜಾಬ್ ಟೀಮ್ ಸೇರ್ತಾರಾ?ಮುಂಬೈ ಇಂಡಿಯನ್ಸ್ ಒಪ್ಪಿಕೊಳ್ಳುತ್ತಾ?

ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಯಾರ್ ಏನೇ ಹೇಳಿದ್ರೂ ಈ ಬಾರಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಇರಲ್ಲ ಅನ್ನೋದು ಕನ್ಫರ್ಮ್ ಆಗಿದೆ. ಹಾಗಾದ್ರೆ ಹಿಟ್ ಮ್ಯಾನ್ ಸವಾರಿ ಯಾವ ತಂಡದತ್ತ ಎಂಬ ಪ್ರಶ್ನೆ ಕೂಡಾ ಮೂಡಿದೆ. ಆರ್ಸಿಬಿ ಕ್ಯಾಪ್ಟನ್ ಆಗಿ ರೋಹಿತ್ ಶರ್ಮಾ ಬರ್ತಾರೆ ಅನ್ನೋ ಸುದ್ದಿ ಕೂಡಾ ಓಡಾಡ್ತಿದೆ. ಈಗಾಗಲೇ ಆರ್ಸಿಬಿ, ಡೆಲ್ಲಿ, ಕೆಕೆಆರ್ ಎಲ್ಲಾ ತಂಡಗಳಲ್ಲೂ ಒಂದ್ ರೌಂಡ್ ರೋಹಿತ್ ಶರ್ಮಾ ಸುದ್ದಿ ಓಡಾಡಿಯೂ ಆಗಿದೆ. ಇದೀಗ ಮತ್ತೊಂದು ಲೇಟೇಸ್ಟ್ ಅಪ್ಡೇಟ್ ಏನಪ್ಪಾ ಅಂದ್ರೆ, ಮತ್ತೊಂದು ಟೀಮ್ ರೋಹಿತ್ ಶರ್ಮಾಗೆ ಗಾಳ ಹಾಕಿದೆ. ಹಿಟ್ಮ್ಯಾನ್ ಗಾಗಿ ಕೋಟಿ ಕೋಟಿ ರೂಪಾಯಿ ಇಟ್ಕೊಂಡು ಕಾಯ್ತಿದೆ ಅನ್ನೋದು. ಯಾವ ಟೀಮ್ ತೆಕ್ಕೆಗೆ ಹಿಟ್ ಮ್ಯಾನ್ ಬೀಳ್ತಿದ್ದಾರೆ? ರೋಹಿತ್ ಶರ್ಮಾ ಯಾವ ತಂಡದ ಕ್ಯಾಪ್ಟನ್ ಆಗಿ ಕಣಕ್ಕಿಳಿಯುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Kohli ಜರ್ಸಿ ಸೇಲ್‌.. ದಾಖಲೆ ಬರೆದ Rohit ಬ್ಯಾಟ್‌! -KL ರಾಹುಲ್‌ ಗೆ ಹಣದ ಹೊಳೆ..!

ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ ಮೇಲೆ ಅದೆಷ್ಟೇ ಪಶ್ಚಾತಾಪ ಪಟ್ರೂ ಅಷ್ಟೇ. ಮುಂಬೈಕರ್ ಮುಂಬೈ ಟೀಮ್ ನಲ್ಲಿ ಇರಲ್ಲ ಅನ್ನೋದು ಗ್ಯಾರಂಟಿ. ಈ ಬಾರಿ ಐಪಿಎಲ್ನಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯುವುದಿಲ್ಲ ಅಂತಾ ಗೊತ್ತಾಗ್ತಿದ್ದಂತೆ ಐಪಿಎಲ್ ತಂಡಗಳ ಪ್ರಾಂಚೈಸಿಗಳು ಇವರನ್ನ ಹರಾಜಿನಲ್ಲಿ ಖರೀದಿಸಲು ತುದಿಗಾಲಲ್ಲಿ ನಿಂತಿವೆ. ರೋಹಿತ್ ಶರ್ಮಾ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವುದನ್ನು ಹಲವು ಫ್ರಾಂಚೈಸಿಗಳು ಎದುರು ನೋಡುತ್ತಿದೆ. ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಗಳು ರೋಹಿತ್ ಶರ್ಮಾ ಅವರನ್ನ ಬಲೆಗೆ ಬೀಳಿಸಿಕೊಳ್ಳಲು ಕಾಯುತ್ತಿವೆ. ಜೊತೆಗೆ ಆರ್ಸಿಬಿ ಕೂಡಾ ಹಿಟ್ ಮ್ಯಾನ್ ಬಂದ್ರೆ ಕಪ್ ನಮ್ದೇ ಅಂತಾ ಕನಸು ಕಾಣ್ತಿದ್ದಾರೆ ಅಂತಾನೂ ಹೇಳಲಾಗ್ತಿದೆ. ಇದೀಗ ಮತ್ತೊಂದು ತಂಡದ ಸೇರ್ಪಡೆಯಾಗಲಿದ್ದಾರೆ ಅನ್ನೋ ಸುದ್ದಿ ಜೋರಾಗಿ ಸದ್ದು ಮಾಡುತ್ತಿದೆ.

ಯೆಸ್. ಪಂಜಾಬ್ ಕಿಂಗ್ಸ್ ರೋಹಿತ್ ಶರ್ಮಾರಿಗೆ ಗಾಳ ಹಾಕ್ತಿದೆ. ಹಿಟ್ ಮ್ಯಾನ್ ಟೀಮ್ ಗೆ ಬರಬೇಕು ಅಂತಾ ಪಂಜಾಬ್ ಟೀಮ್ ಬಯಸ್ತಿದೆ. ಹಿಟ್ಮ್ಯಾನ್ ಹರಾಜಿನಲ್ಲಿ ಕಾಣಿಸಿಕೊಳ್ಳಲು ಬಯಸಿದರೆ, ಅವರ ಖರೀದಿಗಾಗಿಯೇ 50 ಕೋಟಿ ರೂ. ತೆಗೆದಿಡಲು ಪಂಜಾಬ್ ಕಿಂಗ್ಸ್ ರೆಡಿಯಾಗಿದೆ. ಟೀಮ್ ಇಂಡಿಯಾ ಕ್ಯಾಪ್ಟನ್ ಮೇಲೆ ಬಾಜಿ ಕಟ್ಟಲು ಬರೋಬ್ಬರಿ 50 ಕೋಟಿ ರೂಪಾಯಿ ತೆಗೆದಿಟ್ಟಿದೆ ಪಂಜಾಬ್ ಕಿಂಗ್ಸ್ ಪ್ರಾಂಚೈಸಿ. ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ಹಿಟ್ ಲಿಸ್ಟ್ನಲ್ಲಿ ರೋಹಿತ್ ಶರ್ಮಾ ಹೆಸರು ಇರೋದ್ರ ಜೊತೆಗೆ ದುಡ್ಡಿನ ವಿಚಾರ ಕೂಡಾ ಬಹಿರಂಗವಾಗಿದೆ.

ಮುಂದಿನ ಸೀಸನ್ ಐಪಿಎಲ್ಗಾಗಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಹೊಸ ನಾಯಕನ ಅಗತ್ಯತೆಯಿದೆ. ಹಾಲಿ ನಾಯಕರಾಗಿರುವ ಶಿಖರ್ ಧವನ್ ಅವರನ್ನು ಪಂಜಾಬ್ ಫ್ರಾಂಚೈಸಿ ರಿಟೈನ್ ಮಾಡಿಕೊಳ್ಳುವ ಸಾಧ್ಯತೆಯಿಲ್ಲ. ಹೀಗಾಗಿ ನಾಯಕತ್ವ ಗುಣವಿರುವ ಕೆಲ ಆಟಗಾರರ ಹಿಟ್ ಲಿಸ್ಟ್ ಅನ್ನು ಪಂಜಾಬ್ ಕಿಂಗ್ಸ್ ರೆಡಿ ಮಾಡಿಕೊಂಡಿದೆ. ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ ಹೆಸರು ಮುಂಚೂಣಿಯಲ್ಲಿದೆ. ಒಂದು ವೇಳೆ ಹಿಟ್ಮ್ಯಾನ್ ಹರಾಜಿನಲ್ಲಿ ಕಾಣಿಸಿಕೊಂಡರೆ ಅವರ ಖರೀದಿಗೆ ಪಂಜಾಬ್ ಕಿಂಗ್ಸ್ ಬರೋಬ್ಬರಿ 50 ಕೋಟಿ ರೂಪಾಯಿ ಮೀಸಲಿಟ್ಟಿದೆ. ಇದಕ್ಕೆ ಸಾಕ್ಷಿ ಇತ್ತೀಚೆಗೆ ಸಂಜಯ್ ಬಂಗಾರ್ ನೀಡಿರುವ ಹೇಳಿಕೆ. ಪಂಜಾಬ್ ಕಿಂಗ್ಸ್ ಅಭಿವೃದ್ಧಿಯ ಮುಖ್ಯಸ್ಥರಾಗಿರುವ ಸಂಜಯ್ ಬಂಗಾರ್ ಅವರಲ್ಲಿ ರೋಹಿತ್ ಶರ್ಮಾ ಅವರ ಖರೀದಿ ಬಗ್ಗೆ ಪ್ರಶ್ನಿಸಲಾಗಿದೆ. ರೋಹಿತ್ ಶರ್ಮಾ ಅವರು ಹರಾಜಿಗೆ ಬಂದರೆ ಬೃಹತ್ ಮೊತ್ತ ಪಡೆಯಲಿದ್ದಾರೆ ಎಂಬ ಸುಳಿವು ನೀಡಿದ್ದಾರೆ. ಈ ಹೀಗಾಗಿ ರೋಹಿತ್ ಶರ್ಮಾ ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರೆ ಬಿಡ್ಡಿಂಗ್ ಪೈಪೋಟಿಯಂತು ಕಂಡು ಬರಲಿದೆ. ಅದರಲ್ಲೂ ನಾಯಕನ ಹುಡುಕಾಟದಲ್ಲಿರುವ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಹಿಟ್ಮ್ಯಾನ್ ಖರೀದಿಗಾಗಿ ಇನ್ನಿಲ್ಲದ ಪ್ರಯತ್ನ ನಡೆಸುವುದು ಕೂಡಾ ಗುಟ್ಟಾಗಿ ಉಳಿದಿಲ್ಲ.

ಮುಂಬೈ ಇಂಡಿಯನ್ಸ್ ರೋಹಿತ್ ಅವರನ್ನು ಬಿಡುಗಡೆ ಮಾಡಿದರೆ ದೆಹಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಕೂಡಾ ಹಿಟ್ ಮ್ಯಾನ್ ಖರೀದಿಗೆ ಕಾದು ಕೂತಿವೆ. ಈ ಎರಡು ಫ್ರಾಂಚೈಸಿಗಳು ರೋಹಿತ್ರನ್ನು ಖರೀದಿಸಲು ಕೋಟಿ ಕೋಟಿ ರೂಪಾಯಿ ಮೀಸಲಿಟ್ಟಿವೆ. ಇದ್ರ ಮಧ್ಯೆ ಪಂಜಾಬ್ ಟೀಮ್ ಕೋಟಿ ಎಷ್ಟಾದ್ರೂ ಓಕೆ, ಹಿಟ್ ಮ್ಯಾನ್ ಟೀಮ್ ಕ್ಯಾಪ್ಟನ್ ಆಗಿ ಬರಬೇಕು ಎಂಬ ಹಠದಲ್ಲಿದೆ. ಹೀಗಾಗಿ ರೋಹಿತ್ ಶರ್ಮಾ ಹರಾಜಿಗೆ ಬಂದರೆ ಬಾಜಿ ಭರಾಟೆ ಜೋರಾಗಿಯೇ ಇರಲಿದೆ.

Shwetha M