ಕೆನಡಾ ಹುಡುಗನ ಹೃದಯ ಕದಿಯಲು ರಾಶಿಕಾ ಪ್ರಯತ್ನ – ಸೂರಜ್ ಸಿಂಗ್ ಮೇಲೆ ಸ್ಪಂದನಾ ಕಣ್ಣು
ಸೂರಜ್ ಮೇಲೆ ರಾಶಿಕಾ-ಸ್ಪಂದನಾ ಪ್ರೀತಿ?

ಕೆನಡಾ ಹುಡುಗನ ಹೃದಯ ಕದಿಯಲು ರಾಶಿಕಾ ಪ್ರಯತ್ನ – ಸೂರಜ್ ಸಿಂಗ್ ಮೇಲೆ ಸ್ಪಂದನಾ ಕಣ್ಣುಸೂರಜ್ ಮೇಲೆ ರಾಶಿಕಾ-ಸ್ಪಂದನಾ ಪ್ರೀತಿ?

ಬಿಗ್‌ಬಾಸ್ ಮನೆಯಲ್ಲಿ ಮೂರುವಾರ ಜಗಳ ಕಂಡವರಿಗೆ ಈ ವಾರ ಸ್ವಲ್ಪ ಚೇಂಜಸ್ ಕಂಡುಬಂದಿದೆ. ಬೈದಾಡುವ ಜಾಗದಲ್ಲಿ ಲವ್ ಟ್ರ್ಯಾಕ್ ಶುರುವಾಗುತ್ತಿದೆ. ಕೆಲವರಿಗೆ ತಾವು ಮಾಡಿರುವ ತಪ್ಪಿನ ಅರಿವಾಗುತ್ತಿದೆ. ಗಿಲ್ಲಿ, ಕಾವ್ಯ ಮಾತು ಬಿಟ್ಟಿದ್ದಾರೆ. ಇದರ ನಡುವೆ ಕೆನಡಾ ಹುಡುಗನ ಹೃದಯ ಕದಿಯಲು ರಾಶಿಕಾ ಮತ್ತು ಸ್ಪಂದನಾ ನಡುವೆ ಪೈಪೋಟಿ ಶುರುವಾಗಿದೆ.

ಇದನ್ನೂ ಓದಿ:  ಕಿಚ್ಚ ಬೈದ್ರೂ ಅಶ್ವಿನಿ, ಜಾಹ್ನವಿಗೆ ನಾಚಿಕೆ ಇಲ್ವಾ?  – ಕಿಚ್ಚನಿಗೆ ಬಿಗ್‌ ಬಾಸ್‌ ಸರ್‌ಪ್ರೈಸ್‌!  

ಬಿಗ್ ಬಾಸ್ ಮನೆಯಲ್ಲಿ ಲವ್ ಸ್ಟೋರಿ ಶುರುವಾಗುವ ಸಮಯ ಬಂದಿದೆ. ಕೆನಡಾದಿಂದ ಬಂದ ಸೂರಜ್ ಸಿಂಗ್‌ ಸ್ಟೈಲ್‌ಗೆ ರಾಶಿಕಾ ಹಾಗೂ ಸ್ಪಂದನಾ ಫಿದಾ ಆಗಿದ್ದಾರೆ. ಬಿಗ್ ಬಾಸ್ ಆರಂಭ ಆಗಿ ಒಂದು ತಿಂಗಳು ಕಳೆಯುತ್ತಾ ಬಂದರೂ ಯಾವುದೇ ಲವ್​ ಸ್ಟೋರಿ ಶುರುವಾಗಿರಲಿಲ್ಲ. ಇದೊಂದು ಬಾಕಿಯಿತ್ತು ಅನ್ನುವಾಗಲೇ , ಸರಿಯಾದ ಸಮಯಕ್ಕೆ ಸೂರಜ್ ಸಿಂಗ್ ಎಂಟ್ರಿ ಆಗಿದೆ. ಅವರು ಕೆನಡಾದಲ್ಲಿ ಇದ್ದು, ಈಗ ಭಾರತಕ್ಕೆ ಮರಳಿದ್ದಾರೆ. ಅವರು ತಮ್ಮ ಹ್ಯಾಂಡ್ಸಮ್ ಲುಕ್​ನಿಂದ ಗಮನ ಸೆಳೆಯುತ್ತಿದ್ದಾರೆ. ಈಗ ಅವರ ಹಿಂದೆ ಇಬ್ಬರು ಹುಡುಗಿಯರು ಬಿದ್ದಿದ್ದಾರೆ. ಸ್ಪಂದನ ಹಾಗೂ ರಾಶಿಕಾ ಸೂರಜ್ ಮನಸನ್ನು ತಮ್ಮತ್ತು ಸೆಳೆಯಲು ಪ್ರಯತ್ನ ಮಾಡುತ್ತಿದ್ದಾರೆ.

ಬಿಗ್ ಬಾಸ್​ಗೆ ಬಂದ ದಿನವೇ ಸೂರಜ್ ಅವರು ಗುಲಾಬಿ ಹೂವನ್ನು ರಾಶಿಕಾಗೆ ನೀಡಿ, ‘ಅವರು ಕ್ಯೂಟ್ ಆಗಿ ಕಾಣಿಸುತ್ತಾರೆ’ ಎಂದರು. ಅಂದಿನಿಂದಲೂ ರಾಶಿಕಾ ಸೂರಜ್ ಅವರನ್ನು ಕಂಡಾಕ್ಷಣ ನಾಚುತ್ತಿದ್ದಾರೆ. ಅಶ್ವಿನಿ ಗೌಡ ಹಾಗೂ ಜಾನ್ವಿ ಬಳಿ ಈ ವಿಚಾರವನ್ನು ರಾಶಿಕಾ ಮಾತನಾಡಿದ್ದಾರೆ. ‘ನಾನು ಬಿಗ್ ಬಾಸ್ ಮನೆಗೆ ಬರೋದಕ್ಕೂ ಮೊದಲು ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್ ಬಂದಿತ್ತು. ಹ್ಯಾಂಡ್ಸಮ್ ಆಗಿದ್ದಾನೆ ಅಂತ ಪ್ರಾಫೈಲ್ ಚೆಕ್ ಮಾಡಿದೆ. ಇಲ್ಲಿ ಅವರನ್ನೇ ನೋಡಿದ ಬಳಿಕ ಫ್ಲ್ಯಾಶ್ ಆಯ್ತು’ ಎಂದು ಸೂರಜ್ ಬಗ್ಗೆ ಅಶ್ವಿನಿ ಅವರು ಹೇಳಿದ್ದಾರೆ. ‘ಯಾರಿಗೆ ಅವನು ಇಷ್ಟ’ ಎಂದು ಅಶ್ವಿನಿ ಅವರು ರಾಶಿಕಾ ಹಾಗೂ ಸ್ಪಂದನಾ ಬಳಿ ಪ್ರಶ್ನೆ ಮಾಡಿದರು. ‘ಇಬ್ಬರೂ ಲಿಸ್ಟ್​ನಲ್ಲಿ ಇದ್ದಾರೆ’ ಎಂಬ ಮಾತು ಕೇಳಿಬಂದಿದೆ.

Sulekha