ಗಿಲ್ಲಿ ಮೇಲೆ ರಕ್ಷಿತಾಗೆ ಪೊಸೆಸಿವ್‌ನೆಸ್.. ಲವ್ ಮಾಡ್ತಿದ್ಯಾ ಎಂದು ಕೇಳೇ ಬಿಟ್ಟ ಗಿಲ್ಲಿ! – ರಕ್ಷಿತಾ POSSESSIVE ಗುಟ್ಟು ಕಡೆಗೂ ರಟ್ಟು!

ರಕ್ಷಿತಾ ಶೆಟ್ಟಿ.. ಪಟ ಪಟ ಮಾತಾಡೋ ಈ ಕುಡ್ಲದ ಹುಡುಗಿ ಬಿಗ್‌ಬಾಸ್ ಮನೆಯಲ್ಲಿ ಸಖತ್ ಹೈಲೈಟ್. ಕನ್ನಡ ಮಾತನಾಡಲು ಸರಿಯಾಗಿ ಬಂದಿಲ್ಲ ಅಂದ್ರೂ, ತನಗೆ ತೋಚಿದ್ದನ್ನ ಮಾತನಾಡುತ್ತಾ ಎಲ್ಲರನ್ನ ರಂಜಿಸ್ತಾ ಇದ್ದಾರೆ. ಆದ್ರೀಗ ರಕ್ಷಿತಾ ಶೆಟ್ಟಿ ಬೇರೆ ಕಾರಣಕ್ಕೆ ಸುದ್ದಿಯಾಗಿದ್ದಾರೆ. ರಕ್ಷಿತಾ ಜೊತೆ ಗಿಲ್ಲಿ ಹೆಸರು ತಳುಕುಹಾಕಿಕೊಂಡಿದೆ. ರಕ್ಷಿತಾಗೆ ಗಿಲ್ಲಿ ಮೇಲೆ ಇರೋದು ಜಸ್ಟ್ ಕ್ರಶ್ ಅಥವಾ ಪ್ರೀತಿನಾ ಅನ್ನೋ ಪ್ರಶ್ನೆ ಈಗ ವೀಕ್ಷಕರನ್ನ ಕಾಡ್ತಿದೆ.
ಇದನ್ನೂ ಓದಿ: ಈ ಟೈಮ್‌ನಲ್ಲಿ ಇಂಥಾ ಮಾತು ಬೇಕಿತ್ತಾ? – ಅಶ್ವಿನಿ ಕೆಣಕಿದ ಗಿಲ್ಲಿಗೆ ಕಿಚ್ಚನ ಕ್ಲಾಸ್!
ರಕ್ಷಿತಾ ಶೆಟ್ಟಿ ಬಿಗ್‌ಬಾಸ್‌ಗೆ ಕಾಲಿಡೋದಿಕ್ಕೂ ಮುನ್ನವೇ ಸಖತ್ ಫೇಮಸ್. ಫುಡ್ ಬ್ಲಾಗ್ ಮಾಡ್ತಿದ್ದ ರಕ್ಷಿತಾ ಬರೀ ಟ್ರೋಲ್ ಪೇಜ್‌ಗಳಿಗೆ ಆಹಾರ ಆಗ್ತಿದ್ದಿದ್ದು ನಿಮ್ಗೆಲ್ಲಾ ಗೊತ್ತೇ ಇದೆ. ಆದ್ರೆ ದೊಡ್ಮನೆಗೆ ಕಾಲಿಟ್ಮೇಲೆ ಜನರಿಗೆ ಆಕೆ ಮೇಲಿದ್ದ ಒಪಿನಿಯನ್ ಕಂಪ್ಲೀಟ್ ಚೇಂಜ್ ಆಯ್ತು. ಬೈತಾ ಇದ್ದವರಿಗೆಲ್ಲಾ ಈಗ ಈಕೆಯೇ ಫೇವರಿಟ್. ಇನ್ನು ಬಿಗ್‌ಬಾಸ್ ವಿಚಾರಕ್ಕೆ ಬಂದ್ರೆ, ರಕ್ಷಿತಾ ಎಲ್ಲರ ಜೊತೆಯೂ ಮಿಂಗಲ್ ಆಗ್ತಿದ್ದಾಳೆ. ಆದ್ರೆ ಗಿಲ್ಲಿ ಜೊತೆ ರಕ್ಷಿತಾ ಸಖತ್ ಕ್ಲೋಸ್. ಇಬ್ಬರ ಮಧ್ಯೆ ಒಳ್ಳೆಯ ಬಾಂಡಿಂಗ್ ಇದೆ. ಆರಂಭದಲ್ಲಿ ಜಾಹ್ನವಿ ಮತ್ತು ಅಶ್ವಿನಿ ರಕ್ಷಿತಾಳಿಗೆ ತೊಂದರೆ ಕೊಡುವಾಗಲೂ ಗಿಲ್ಲಿಯೇ ಅವಳ ಪರ ನಿಂತಿದ್ದು. ಇದ್ರಿಂದಾಗಿ ಇವರಿಬ್ಬರು ತುಂಬಾ ಕ್ಲೋಸ್ ಆದ್ರು. ಆದ್ರೀಗ ರಕ್ಷಿತಾಗೆ ಗಿಲ್ಲಿ ಮೇಲೆ ಪ್ರೀತಿ ಹುಟ್ಟಿದ್ಯಾ ಅನ್ನೋ ಅನುಮಾನ ವೀಕ್ಷಕರಿಗೆ ಶುರುವಾಗಿದೆ.
ಹೌದು, ರಕ್ಷಿತಾಗೆ ಗಿಲ್ಲಿನಟ ಮೇಲೆ ಪೊಸೆಸ್ಸಿವ್‌ನೆಸ್ ಶುರುವಾಗಿದೆ. ಗಿಲ್ಲಿ ಬೇರೆಯವರ ಜೊತೆ ಕ್ಲೋಸ್ ಆದ್ರೆ ರಕ್ಷಿತಾಗೆ ಇಷ್ಟ ಅಗ್ತಿಲ್ಲ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ, ಕೆಲ ವಾರದ ಹಿಂದೆ ಕಾವ್ಯ ಹಾಗೂ ಗಿಲ್ಲಿ ದೂರವಾಗಿದ್ರು. ಈ ವೇಳೆ ರಕ್ಷಿತಾ ಗಿಲ್ಲಿಗೆ ಹತ್ತಿರವಾಗಲು ಪ್ರಯತ್ನಿಸಿದ್ಲು. ಕಾವ್ಯಾಳಿಂದ ಗಿಲ್ಲಿಗೆ ತೊಂದರೆ ಎಂಬರ್ಥದಲ್ಲಿಯೇ ಮಾತಾಡಿದಳು. ಗಿಲ್ಲಿ ಮತ್ತು ಕಾವ್ಯಾ ಫ್ರೆಂಡ್‌ಶಿಪ್ ಮುಂದುವರಿಬಾರ್ದು. ಅವರಿಬ್ಬರು ದೂರ ಆಗ್ಬೇಕು ಅನ್ನೋ ಹಾಗೇ ಇತ್ತು ಆಕೆ ವರ್ತನೆ. ಆದ್ರೆ ಗಿಲ್ಲಿ ಕಾವ್ಯಳನ್ನ ಬಿಟ್ಟುಕೊಟ್ಟಿಲ್ಲ. ರಕ್ಷಿತಾ ಮೇಲೆಯೂ ಸಿಟ್ಟು ಮಾಡಿಕೊಂಡಿಲ್ಲ. ರಕ್ಷಿತಾ ತನ್ನ ವಂಶದ ಕುಡಿ ಎಂದು ಹೆಮ್ಮೆಯಿಂದ ಹೇಳಿಕೊಂಡು ಬಂದಿದ್ದಾರೆ ಗಿಲ್ಲಿ. ಇದೀಗ ಗಿಲ್ಲಿ ವಿಷಯದಲ್ಲಿ ರಕ್ಷಿತಾ ವರ್ತನೆ ನೋಡಿ ಮನೆಮಂದಿಗೂ ಡೌಟ್ ಬರೋದಿಕ್ಕೆ ಶುರುವಾಗಿದೆ. ಅಷ್ಟೇ ಅಲ್ಲ ಇತ್ತೀಚೆಗೆ ಮದುವೆ ವಿಚಾರ ಬಂದಾಗಲೂ ರಕ್ಷಿತಾ ಗಿಲ್ಲಿ ಹೆಸರನ್ನೇ ಹೇಳಿದ್ದು.
ಕಳೆದ ವೀಕೆಂಡ್‌ನಲ್ಲಿ ಆಂಕರ್ ಅನುಪಮಾ ದೊಡ್ಮನೆಗೆ ಬಂದಿದ್ರು. ಈ ವೇಳೆ ರಕ್ಷಿತಾ ಬಳಿಕ ನೀನು ಮದುವೆ ಆಗುವ ಹುಡುಗ ಹೇಗಿರಬೇಕು? ಎಂದು ಕೇಳಿದ್ದಾರೆ. ಅದಕ್ಕೆ ರಕ್ಷಿತಾ ನನಗೆ ಗಿಲ್ಲಿಯಂಥ ಹುಡುಗನೇ ಬೇಕು. ಆದರೆ ಗಿಲ್ಲಿ ಬೇಡ ಅಂದಿದ್ಲು. ಆಗ ಗಿಲ್ಲಿಯೇ ಯಾಕಾಗಬಾರದು ಎಂದು ಕಾವ್ಯಾ ಪ್ರಶ್ನಿಸಿದ್ದಕ್ಕೆ ಇಲ್ಲ ಗಿಲ್ಲಿ ನನ್ನ ಫ್ರೆಂಡ್ ಅಷ್ಟೇ..ಆದರೆ ಅಂಥವನನ್ನೇ ನಾನು ಮದುವೆ ಆಗ್ತೇನೆ ಎಂದು ರಕ್ಷಿತಾ ಹೇಳಿದ್ರು. ಇದು ಇಲ್ಲಿಗೆ ನಿಂತಿಲ್ಲ. ರಕ್ಷಿತಾ ಮತ್ತೊಮ್ಮೆ ಗಿಲ್ಲಿ ಬಗ್ಗೆ ಮನಸಿನ ಮಾತು ಹೇಳಿದ್ದಾರೆ. ಹೊಸ ವರ್ಷದ ಆಚರಣೆ ವೇಳೆ ರಕ್ಷಿತಾ, ಗಿಲ್ಲಿಗೆ ಒಂದು ಹಾಡು ಹೇಳಿದ್ದಾರೆ. ಗಿಲ್ಲಿಗೆ ಐ ಲವ್ ಯುವರ್ ಲೈಫ್ ಎಂದು ಹೇಳಿದ್ಲು. ರಕ್ಷಿತಾ ಸಾಂಗ್ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.
ಮತ್ತೊಂದ್ಕಡೆ ರಕ್ಷಿತಾ ಕ್ಲೋಸ್ ಆಗೋದನ್ನ ನೋಡಿ ಗಿಲ್ಲಿಗೆ ಆರಂಭದಲ್ಲೇ ಡೌಟ್ ಶುರುವಾಗಿದೆ. ಮನೆಯವರ ಜೊತೆ ಕೂತು ಮಾತನಾಡುವಾಗ ರಕ್ಷಿತಾ ಕೂಡ ಅಲ್ಲೇ ಇದ್ರು. ಈ ವೇಳೆ ಗಿಲ್ಲಿ ನೇರವಾಗೇ ರಕ್ಷಿತಾ ಬಳಿ ನೀನು ನನ್ನ ಲವ್ ಮಾಡ್ತಿದ್ಯಾ ಅಂತ ಕೇಳಿದ್ರು. ಆಗ ರಕ್ಷಿತಾ ಇದಕ್ಕೆ ಏನೂ ರೆಸ್ಪಾನ್ಸ್ ಮಾಡಿಲ್ಲ. ಆದ್ರೆ ಗಿಲ್ಲಿ ನನಗೆ ನಿನ್ನ ಸಹವಾಸವೇ ಬೇಡ ಅಂತ ತಮಾಷೆಯಾಗೇ ಹೇಳಿದ್ದಾರೆ.
ಒಟ್ಟಾರೆ ಬಿಗ್‌ಬಾಸ್ ಮನೆಯಲ್ಲಿ ರಕ್ಷಿತಾ ಹಾಗೂ ಗಿಲ್ಲಿನಟನ ಮಧ್ಯೆ ಒಳ್ಳೆ ಬಾಂಡಿಂಗ್ ಇದೆ. ರಕ್ಷಿತಾಗೆ ಗಿಲ್ಲಿ ಮೇಲೆ ನಿಜವಾಗ್ಲೂ ಕ್ರಶ್ ಆಗಿದ್ಯಾ ಅಥವಾ ಇದು ಆಕೆಯ ಸ್ಟ್ಯಾಟರ್ಜಿಯಾ ಅನ್ನೋದು ಗೊತ್ತಿಲ್ಲ. ಆದ್ರೆ, ರಕ್ಷಿತಾ ಹಾಗೂ ಗಿಲ್ಲಿ ಕಾಂಬಿನೇಷನ್ ವೀಕ್ಷಕರಿಗೆ ಸಖತ್ ಮನರಂಜನೆ ನೀಡಿದೆ.

ನೋಡಿರಿ

