KGF ಸಿನಿಮಾ ಕಥೆ ಕದ್ದಿದ್ದಾ? – 16 ವರ್ಷ ಹಿಂದಿನ ಸ್ಟೋರಿ ಕದ್ರಾ ನೀಲ್?
ಸಿಕ್ಕೇ ಬಿಡ್ತು ದೊಡ್ಡ ಸಾಕ್ಷಿ?

ಕೆಜಿಎಫ್ ಸಿನಿಮಾ ಯಾರಿಗೆ ಗೊತ್ತಿಲ್ಲ. ಪ್ಯಾನ್ ಇಂಡಿಯಾವನ್ನೇ ಶೇಕ್ ಮಾಡಿದ್ದ ಕನ್ನಡ ಸಿನಿಮಾ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿ ಎಲ್ಲ ದಾಖಲೆಗಳನ್ನು ಪುಡಿಗಟ್ಟಿತ್ತು. ಕೆಜಿಎಫ್ ಚಾಪ್ಟರ್ ಒನ್, ಚಾಪ್ಟರ್ 2 ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ, ಭಾರತೀಯ ಚಿತ್ರರಂಗದಲ್ಲಿ ಹೊಸದೊಂದು ಮೈಲಿಗಲ್ಲನ್ನು ಸೃಷ್ಟಿಸಿದ ಸಿನಿಮಾ. ಕನ್ನಡಿಗರ, ಕನ್ನಡ ಸಿನಿಮಾ ತಾಕತ್ತನ್ನು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಿದ ಸಿನಿಮಾ ಕೆಜಿಎಫ್. ಸಿನಿಮಾದ ಟೈಟಲ್ ನಿಂದ ಹಿಡಿದು ಹಲವು ಪವರ್ಫುಲ್ ಅಂಶಗಳನ್ನು ಈ ಸಿನಿಮಾ ಒಳಗೊಂಡಿತ್ತು. ಈಗಲೂ ಕೆಜಿಎಫ್ ಹವಾ ಜೋರಾಗೇ ಇದೆ. ಇನ್ನೇನು ಕೆಜಿಎಫ್ 3 ಗೂ ಸಿದ್ಧತೆ ನಡೆಸಲಾಗ್ತಿದೆ. ಈ ಬೆನ್ನಲ್ಲೇ ಶಾಕಿಂಗ್ ಸುದ್ದಿಯೊಂದು ಭಾರಿ ಚರ್ಚೆಯಾಗುತ್ತಿದೆ. ಈ ಸಿನಿಮಾ 16 ವರ್ಷಗಳ ಹಿಂದಿನ ಸಿನಿಮಾ ಸ್ಟೋರಿಯನ್ನೇ ಪ್ರಶಾಂತ್ ನೀಲ್ ಕದ್ರಾ ಅನ್ನೋ ಪ್ರಶ್ನೆ ಎದುರಾಗಿದೆ.. ಇದಕ್ಕೆ ಸಂಬಂಧ ಪಟ್ಟ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ:
ಕೆಜಿಎಫ್ 1 ಹಾಗೂ ಕೆಜಿಎಫ್ 2 ಸಿನಿಮಾಗಳು ಕನ್ನಡ ಚಿತ್ರರಂಗಕ್ಕೆ ಹೊಸ ಮೆರುಗು ತಂದುಕೊಟ್ಟವು. ಈ ಸಿನಿಮಾಗಳಿಗೆ ನಿರ್ದೇಶನ ಮಾಡಿದ ಪ್ರಶಾಂತ್ ನೀಲ್ ಅವರ ಖ್ಯಾತಿ ದೇಶಾದ್ಯಂತ ಹಬ್ಬಿತು. ನಟ ಯಶ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದರು. ಸೋಶಿಯಲ್ ಮೀಡಿಯಾದಲ್ಲಿ ಕೆಜಿಎಫ್ ಹವಾ ಈಗಲೂ ಇದೆ. ಸಿನಿಮಾದ ಹಲವು ತುಣುಕುಗಳು. ಮೀಮ್ಸ್‌ಗಳು ಆಗಾರ ವೈರಲ್ ಆಗುತ್ತಲೇ ಇರುತ್ತವೆ. ಇನ್ನು ಬೇರೆ ಸಿನಿಮಾಗಳಿಂದ ಸ್ಫೂರ್ತಿ ಪಡೆದು ಹೊಸ ಸಿನಿಮಾಗಳನ್ನು ಮಾಡೋದು, ಕಥೆ ಮಾಡೋದು ಚಿತ್ರರಂಗದಲ್ಲಿ ಸರ್ವೇ ಸಾಮಾನ್ಯ. ಆದರೆ ಅದನ್ನ ಸಾಕ್ಷಿ ಸಮೇತ ಈಗ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ತೆರೆದಿಡುತ್ತಾರೆ. ಇದೀಗ ಕೆಜಿಎಫ್‌ಗೆ ಸಂಬಂಧ ಪಟ್ಟ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಈ ಸಿನಿಮಾದಿಂದಲೇ ಕಥೆ ಕದ್ದಿದ್ದಾರೆ ಅಂತಾ ತಮಾಷೆಯಾಗಿ ಹೇಳ್ತಾ ಇದ್ದಾರೆ.
ಹೌದು, ತೆಲುಗಿನ ನೇನಿಂತೆ ಸಿನಿಮಾದ ಕಾಮಿಡಿ ಸೀನ್‌ವೊಂದನ್ನ KGF ಕಥೆಗೆ ಲಿಂಕ್ ಮಾಡಿ ಯಾರೋ ಮೀಮ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಪೂರಿ ಜಗನ್ನಾಥ್ ನಿರ್ದೇಶನದ ‘ನೇನಿಂತೆ’ ಸಿನಿಮಾ 2008ರಲ್ಲಿ ತೆರೆಗೆ ಬಂದಿತ್ತು. ಈ ಚಿತ್ರದಲ್ಲಿ ರವಿತೇಜಾ ಹೀರೊ ಆಗಿ ಆಕ್ಟ್ ಮಾಡಿದ್ರು. ಸಿನಿಮಾ ನಿರ್ದೇಶಕ ಆಗಬೇಕು ಎಂದು ಕನಸು ಕಾಣುವ ಮಧ್ಯಮ ವರ್ಗದ ಕುಟುಂಬದ ಯುವಕನ ಕಥೆಯನ್ನು ಚಿತ್ರದಲ್ಲಿ ಪೂರಿ ಜಗನ್ನಾಥ್ ಕಟ್ಟಿಕೊಟ್ಟಿದ್ದಾರೆ. ಸುಬ್ಬಾರಾಜು ಸಿನಿಮಾ ಹೀರೊ ಮಲ್ಲಿಕ್ ಎನ್ನುವ ಪಾತ್ರದಲ್ಲಿ ನಟಿಸಿದ್ದರು. ಹಾಸ್ಯ ನಟ ವೇಣು ಮಾಧವ್ ಸಿನಿಮಾ ನಿರ್ದೇಶನ ಅವಕಾಶಕ್ಕಾಗಿ ಸ್ಟೂಡಿಯೋಗಳ ಸುತ್ತಾ ಸುತ್ತುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಈ ಸಿನಿಮಾದಲ್ಲಿ ಸೆಂಥಿಲ್, ಮಲ್ಲಿಕ್‌ಗೆ ಬಂದು ಕಥೆ ಹೇಳುವುದನ್ನು ನೋಡಬಹುದು. ಇದನ್ನು ತಮಾಷೆಯಾಗಿ ಪೂರಿ ಜಗನ್ನಾಥ್ ಚಿತ್ರದಲ್ಲಿ ತೋರಿಸಿದ್ದರು. ಹೀರೊ, ನಿರ್ದೇಶಕ ಆಗಬೇಕು ಎಂದು ಅವಕಾಶ ಕೇಳಿಕೊಂಡು ಚಿತ್ರರಂಗದಲ್ಲಿ ಓಡಾಡುವವರ ಬಗ್ಗೆ ವಿಡಂಬನಾತ್ಮಕವಾಗಿ ಈ ಸನ್ನಿವೇಶದಲ್ಲಿ ತೋರಿಸಲಾಗಿತ್ತು. ಈ ವಿಡಿಯೋವನ್ನೇ ಇಟ್ಟುಕೊಂಡು ಮೀಮ್ಸ್ ವೊಂದನ್ನ ಮಾಡಲಾಗಿದೆ. ಇದಕ್ಕೆ ಕೆಜಿಎಫ್ ಸಿನಿಮಾದ ಸೀನ್ ಅನ್ನ ಲಿಂಕ್ ಮಾಡಲಾಗಿದೆ. ಕಣ್ಣಿನಿಂದ ಜೂಮ್ ಹಾಕಿ ಬ್ಯಾಕ್ ಬಂದರೆ ಫಸ್ಟ್ ಶಾಟ್.. ಹೀರೋ ಚಪ್ಪಲಿ ಹೊಲಿಯುವವನು ಪಾಪ. ಇಂಟ್ರೊಡಕ್ಷನ್ ಅಲ್ಲಿ ಒಂದಷ್ಟು ವಾಹನಗಳು ಗಾಳಿಯಲ್ಲಿ ಮೇಲೆ ಹಾರುತ್ತವೆ. ಬಳಿಕ ಹೀರೊ ಬೆಂಜ್ ಕಾರ್‌ನಲ್ಲಿ ಬರ್ತಾನೆ. ಮನೆಗೆ ಬಂದು ನೋಡಿದ್ರೆ ತಾಯಿ ಹಾರ್ಟ್ ಹೋಲ್, ಮನೆಗೆ ಹೋಗಿ ಹೀರೋ ಹೀಗಾಯ್ತಾ ಅಂತ ಅಳುತ್ತಿರುತ್ತಾನೆ. ಹೀರೊಯಿನ್ ಕೋಟ್ಯಾಧಿಪತಿ ಮಗಳು. ಹೀರೊ ಅಳುತ್ತಿದ್ದಾಗ ಹೀರೊಯಿನ್ ಬಂದು ತಬ್ಬಿಕೊಳ್ಳುತ್ತಾಳೆ, ಕಟ್ ಮಾಡಿದ್ರೆ ಒಂದು ಹಾಡು” ಎಂದು ಕಥೆ ಹೇಳುವ ಸನ್ನಿವೇಶ ಅದು. ಸದ್ಯ ಈ ವಿಡಿಯೋ ನೋಡಿ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಲ್ಲಿಕ್‌ಗೆ ಸೆಂಥಿಲ್ ಹೇಳುವ ಕಥೆ KGF ಚಿತ್ರಕ್ಕೆ ಸ್ಫೂರ್ತಿ ಎಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಅರೇ, ಪ್ರಶಾಂತ್ ನೀಲ್ ಈ ಸೀನ್ ನೋಡಿ ಸ್ಫೂರ್ತಿಗೊಂಡು KGF ಕಥೆ ಮಾಡಿದ್ರಾ? ಪೂರಿ ಜಗನ್ನಾಥ್ ತಮಾಷೆಯಾಗಿ ತೋರಿಸಿದ್ದನ್ನು ನೀಲ್ ಗಂಭೀರವಾಗಿ ತೆರೆಗೆ ತಂದ್ರಾ? ಪೂರಿ ಜಗನ್ನಾಥ್ ಈಗ ಪ್ರಶಾಂತ್ ನೀಲ್ ಮೇಲೆ ಕಾಪಿರೈಟ್ ಕೇಸ್ ಹಾಕಬಹುದು ಎಂದು ತಮಾಷೆಯಾಗಿ ಕಾಮೆಂಟ್ ಹಾಕುತ್ತಿದ್ದಾರೆ.
ಎರಡು ಭಾಗಗಳಾಗಿ ಬಂದ KGF ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ತೆಲುಗು ಪ್ರೇಕ್ಷಕರಿಂದ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ತೆಲುಗಿನಲ್ಲಿ ಈಗ ಪ್ರಶಾಂತ್ ನೀಲ್ ಸ್ಟಾರ್ ನಿರ್ದೇಶಕರಾಗಿಬಿಟ್ಟಿದ್ದಾರೆ. ಮೂರನೇ ಬಾರಿಗೆ ಪ್ರಶಾಂತ್ ನೀಲ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕೆಜಿಎಫ್ ಚಾಪ್ಟರ್ 3 ಮಾಡಲು ನೀಲ್ ಸಜ್ಜಾಗಿದ್ದಾರೆ. ಬೆಳ್ಳಿ ತೆರೆಯ ಮೇಲೆ ಮತ್ತೊಮ್ಮೆ ರಾಕಿಭಾಯ್ ಅಬ್ಬರಿಸಲು ಸಜ್ಜಾಗಿದ್ದಾನೆ. ಇದರ ನಡುವೆ ಬಂದಿರುವ ಮತ್ತೊಂದು ದೊಡ್ಡ ಸುದ್ದಿ ಏನಂದ್ರೆ ಅದು ಕೆಜಿಎಫ್ ಚಾಪ್ಟರ್ 3ಗೆ ತಮಿಳು ದಿಗ್ಗಜ ನಟ ಅಜಿತ್ ಎಂಟ್ರಿ ಕೊಡಲಿದ್ದಾರೆ ಅನ್ನೋದು. ಹೌದು ತಮಿಳು ಅಜಿತ್ರನ್ನ ಪ್ರಶಾಂತ್ ನೀಲ್ ಭೇಟಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ ಅಜಿತ್ಗಾಗಿ ಪ್ರಶಾಂತ್ ನೀಲ್ ಒಂದು ಸಿನಿಮಾವನ್ನು ರೆಡಿ ಮಾಡಿದ್ದಾರೆ. ಆ ಸಿನಿಮಾ ಬಗ್ಗೆ ಮಾತುಕತೆಯಾಗಿದ್ದು ಸದ್ಯದಲ್ಲಿಯೇ ಶೂಟಿಂಗ್ ಶುರುವಾಗುವ ಸೂಚನೆ ಇದೆ. ಈ ಸಿನಿಮಾ ಮುಗಿದ ಬಳಿಕ ಕೆಜಿಎಫ್ 3ನಲ್ಲೂ ನಟಿಸಲು ಅಜಿತ್ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದ್ದು ಸದ್ಯದಲ್ಲಿಯೇ ಎಲ್ಲವೂ ಫೈನಲ್ ಆಗಲಿದೆ. ಈ ಎರಡು ಚಿತ್ರಕ್ಕೂ ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು ಅವರೇ ಬಂಡವಾಳ ಹೂಡಲಿದ್ದಾರೆ ಎನ್ನಲಾಗುತ್ತಿದೆ.