ಕಣ್ಣಲ್ಲಿ ನೀರು.. ಮೈದಾನದಲ್ಲಿ ಹೆಜ್ಜೆ – ಸದ್ದಿಲ್ಲದೆ ಹೊರ ನಡೆದರಾ ಧೋನಿ?
ತಲಾ ಫಾರ್ ಎ ರೀಸನ್.. ಹೇಗಿತ್ತು ಜರ್ನಿ?

ಹೈದ್ರಾಬಾದ್ ವಿರುದ್ಧ ಸೋಲುವ ಮೂಲಕ ಚೆನ್ನೈ ಟೀಂ ಆಲ್ಮೋಸ್ಟ್ ಪ್ಲೇಆಫ್ಸ್ ರೇಸ್ನಿಂದ ಹೊರಬಿದ್ದಾಗಿದೆ. ಇಲ್ಲ ಮ್ಯಾಥಮೆಟಿಕಲಿ ಚಾನ್ಸ್ ಇದೆ ಅಂದ್ರೂ ನೆಟ್ ರನ್ ರೇಟ್ ಸಪೋರ್ಟ್ ಮಾಡಲ್ಲ. ಸೋ ನೆಕ್ಸ್ಟ್ ಗುಜರಾತ್ ವಿರುದ್ಧದ ಪಂದ್ಯ ಈ ಸೀಸನ್ನ ಕೊನೇ ಪಂದ್ಯ ಆಗಬಹುದು. ಆದ್ರೆ ಚೆನ್ನೈ ಪ್ಲೇಆಫ್ಸ್ ರೇಸ್ನಿಂದ ಹೊರಬಿತ್ತು ಅನ್ನೋದಕ್ಕಿಂತ ಮಹೇಂದ್ರ ಸಿಂಗ್ ಧೋನಿ ಸದ್ದಿಲ್ಲದೆ ತೆರೆಮರೆಗೆ ಸರಿದುಬಿಟ್ರಾ ಅನ್ನೋ ಚರ್ಚೆ ಶುರುವಾಗಿದೆ. ಹೈದ್ರಾಬಾದ್ ವಿರುದ್ಧದ ಪಂದ್ಯದ ಬಳಿಕ ಚೆಪಾಕ್ ಮೈದಾನದಲ್ಲಿ ನಡೆದ ಕ್ಷಣಗಳೇ ಇದನ್ನ ಸಾರಿ ಸಾರಿ ಹೇಳ್ತಿದೆ. ಕಣ್ಣಲ್ಲಿ ತುಂಬಿದ್ದ ನೀರು, ಮೈದಾನದಲ್ಲಿ ಹಾಕಿದ ಭಾರವಾರ ಹೆಜ್ಜೆಗಳು, ಅಭಿಮಾನಿಗಳತ್ತ ಕೈಬೀಸಿದ ಬಗೆಯೇ ಇದಕ್ಕೆ ಪುಷ್ಠಿ ನೀಡ್ತಿದೆ.
ಇದನ್ನೂ ಓದಿ : ಧೋನಿ ಎದುರಲ್ಲೇ ನೆಲ ಕಚ್ಚಿದ CSK – ವಿಶಿಲ್ ಹಾಕಿ ಮನೆಗೆ ಕಳಿಸಿದ ಕಿಶನ್
ಮಹೇಂದ್ರ ಸಿಂಗ್ ಧೋನಿ.. ಟೀಂ ಇಂಡಿಯಾ ಕಂಡಂತಹ ಲೆಜೆಂಡರಿ ಪ್ಲೇಯರ್. ಭಾರತ ತಂಡದ ನಾಯಕರಾಗಿ ಒಟ್ಟು 3 ಐಸಿಸಿ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ವೈಟ್ಬಾಲ್ನಲ್ಲಿ ಮೂರೂ ವಿಭಿನ್ನ ಐಸಿಸಿ ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕ. ಹಾಗೇ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿ ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ ಸಕ್ಸಸ್ಫುಲ್ ಲೀಡರ್. ಆದ್ರೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಐಪಿಎಲ್ನಲ್ಲಿ ಧೋನಿ ನಿವೃತ್ತಿ ಬಗ್ಗೆಯೇ ಬಾರೀ ಚರ್ಚೆಯಾಗ್ತಿತ್ತು. ಪರವಿರೋಧದ ವಾರ್ ನಡೀತಿತ್ತು. ತಮ್ಮ ಕ್ರಿಕೆಟ್ ಕರಿಯರ್ನಲ್ಲಿ ಕೂಲ್ ಕ್ಯಾಪ್ಟನ್ ಅಂತಾನೇ ಕರೆಸಿಕೊಳ್ತಿದ್ದ ಧೋನಿ ಈಗ ಅಷ್ಟೇ ಕೂಲಾಗಿ ಐಪಿಎಲ್ ಅಂಗಳದಿಂದಲೂ ಹೊರನಡೆದಂತಿದೆ.
ಕಣ್ಣೀರು.. ಭಾರವಾರ ಹೆಜ್ಜೆ.. ಸೆಲ್ಫಿಯೊಂದಿಗೆ ವಿದಾಯ?
ಚೆನ್ನೈ ಸೂಪರ್ ಕಿಂಗ್ಸ್ ಪಾಲಿನ ಜೀವಾಳವಾಗಿರೋ ಧೋನಿ ಈಗ ಐಪಿಎಲ್ ಅಂಗಳಕ್ಕೂ ಗುಡ್ ಬೈ ಹೇಳಿದ್ರಾ ಅನ್ನೋ ಚರ್ಚೆಗಳು ನಡೀತಿವೆ. ಈ ಸೀಸನ್ ಆರಂಭಕ್ಕೂ ಮುನ್ನವೇ ಮೊದಲ ಮೂರು ಪಂದ್ಯಗಳನ್ನ ಆಡಲ್ಲ ಅಂತಾ ಫ್ರಾಂಚೈಸಿಯೇ ಅಧಿಕೃತವಾಗಿ ಹೇಳಿತ್ತು. ಹೀಗಾಗಿ ನಂತ್ರದ ಪಂದ್ಯಗಳಿಗಾಗಿ ಫ್ಯಾನ್ಸ್ ಕಾಯ್ತಿದ್ರು. ಆದ್ರೆ ನೆಟ್ ಸೆಷನ್ನಲ್ಲಿ ಕಾಣಿಸಿಕೊಳ್ತಿದ್ದ ಧೋನಿ ಆ ಬಳಿಕ ಪಂದ್ಯಗಳ ವೇಳೆಯೂ ಕಾಣಿಸಿಕೊಳ್ತಾ ಇರ್ಲಿಲ್ಲ. ಈಗ ಹೈದ್ರಾಬಾದ್ ವಿರುದ್ಧದ ಕೊನೇ ಮ್ಯಾಚಲ್ಲಿ ತವರಿನಲ್ಲಿ ಆಡ್ತಾರೆ ಅನ್ನೋ ನಿರೀಕ್ಷೆ ಇತ್ತು. ಅದಕ್ಕಾ ಕಾರಣ ಹಿಂದೊಮ್ಮೆ ಧೋನಿ ನಾನು ಚೆಪಾಕ್ನಲ್ಲಿಯೇ ಕೊನೆಯ ಪಂದ್ಯವನ್ನ ಆಡಿ ನಿವೃತ್ತಿ ಘೋಷಣೆ ಮಾಡ್ತೀನಿ ಅಂದಿದ್ರು,. ಈ ಸೀಸನ್ನಲ್ಲಿ ಚೆಪಾಕ್ನಲ್ಲಿ ಕೊನೇ ಮ್ಯಾಚ್ ಆಗಿದ್ರಿಂದ ಆಡ್ತಾರೆ ಅಂತಾ ಎಲ್ರೂ ಕಾಯ್ತಿದ್ರು. ಅದ್ರಂತೆ ಡಗೌಟ್ನಲ್ಲೂ ಕಾಣಿಸಿಕೊಂಡಿದ್ರು. ಆದ್ರೆ ಮೈದಾನಕ್ಕೆ ಮಾತ್ರ ಇಳಿಯಲೇ ಇಲ್ಲ. ಕೊನೆಗೆ ಪಂದ್ಯ ಮುಗಿದ ಮೇಲೆ ಮೈದಾನದ ತುಂಬಾ ಹೆಜ್ಜೆ ಹಾಕಿದ್ದಾರೆ. ಅಭಿಮಾನಿಗಳ ಜೊತೆ ಸೆಲ್ಫೀ ತಗೊಂಡಿದ್ದಾರೆ. ಅವರ ಕಣ್ಣುಗಳಲ್ಲೇ ತುಂಬಿದ್ದ ನೀರು ಇದು ವಿದಾಯದ ಹೆಜ್ಜೆ ಅನ್ನೋದನ್ನ ಸಾರಿ ಸಾರಿ ಹೇಳ್ತಿತ್ತು. ಆದ್ರೆ ಅಧಿಕೃತವಾಗಿ ಘೋಷಣೆ ಮಾಡದಿರೋದಕ್ಕೆ ನೆಕ್ಸ್ಟ್ ಸೀಸನ್ ಆಡ್ಲಿ ಅನ್ನೋ ಕೂಗು ಎದ್ದಿದೆ.
2027ರ ಐಪಿಎಲ್ ನಲ್ಲಿ ಆಡ್ತಾರಾ ಧೋನಿ?
ಕಾಲಿನ ಸ್ನಾಯು ಸೆಳೆತದಿಂದ ಬಳಲ್ತಿರೋ ಧೋನಿ ಈ ಸೀಸನ್ನಲ್ಲಿ ಒಂದೂ ಪಂದ್ಯ ಆಡೋಕೆ ಸಾಧ್ಯವಾಗಿಲ್ಲ. ಹೀಗಾಗಿ ಮುಂದಿನ ಆವೃತ್ತಿಯಲ್ಲಿ ಆಡಲಿ ಅನ್ನೋದು ಕೆಲವರ ಅಭಿಪ್ರಾಯ. ಇನ್ನು ಸಿಎಸ್ಕೆಯಲ್ಲಿ ಚಿನ್ನ ತಲಾ ಅಂತಾನೇ ಕರೆಸಿಕೊಳ್ಳೋ ಸುರೇಶ್ ರೈನಾ ನಿನ್ನೆ ಈ ಬಗ್ಗೆ ಧೋನಿಯವ್ರನ್ನ ಪ್ರಶ್ನೆ ಮಾಡಿದ್ದಾರೆ. ನೀವು ಈ ಸೀಸನ್‌ಗೆ ಮಿಸ್ಡ್ ಕಾಲ್ ಕೊಟ್ಟಿದ್ದೀರಿ, ಹಾಗಾಗಿ ಮುಂದಿನ ವರ್ಷ (2027) ಮರಳಿ ಆಡಲೇಬೇಕು ಎಂದಿದ್ದಾರೆ. ಈ ವೇಳೆ ಧೋನಿ ನಗುತ್ತಲೇ ನೋಡೋಣ ಎಂದಿದ್ದಾರೆ. ಹಾಗೇ Body is a little weak ಅಂದ್ರೆ ದೇಹಕ್ಕೆ ಸ್ವಲ್ಪ ಸುಸ್ತಾಗಿದೆ ಅನ್ನೋದನ್ನೂ ಒಪ್ಪಿಕೊಂಡಿದ್ದಾರೆ. ಇನ್ನು ಟೀಂ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಅವರು, ಧೋನಿ ತಮ್ಮ ಕೊನೆಯ ಪಂದ್ಯವನ್ನು ಚೆಕಾಪ್ ಅಭಿಮಾನಿಗಳ ಎದುರು ಆಡಿ ವಿದಾಯ ಹೇಳಲು ಬಯಸುತ್ತಾರೆ. ಈ ಸಲ ಆಡದೇ ಇರೋದ್ರಿಂದ 2027ಕ್ಕೆ ಅದೇ ಮೈದಾನದಲ್ಲಿ ಆಡಿ ವಿದಾಯ ಹೇಳ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಆದ್ರೆ ಮುಂಬರುವ ದಿನಗಳಲ್ಲಿ ಧೋನಿ ವಿದಾಯ ಘೋಷಣೆ ಮಾಡಲೂಬಹುದು.
ಚೆನ್ನೈನಲ್ಲಿ ತಲಾ ಫಾರ್ ಎ ರೀಸನ್ ಆಗಿ ಬೆಳೆದಿದ್ದೇ ರಣರೋಚಕ!
ರಾಂಚಿಯಲ್ಲಿ ಹುಟ್ಟಿ ಬೆಳೆದ ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನ ಸಾಮ್ರಾಟನಾಗಿ ಮೆರೆದಿದ್ದಾರೆ. ಧೋನಿಗಾಗಿ ಚೆನ್ನೈನ ಸಪೋರ್ಟ್ ಮಾಡೋ ಸಾಕಷ್ಟು ಅಭಿಮಾನಿಗಳಿದ್ದಾರೆ. ಅದ್ರಲ್ಲೂ ಅವ್ರ ನಂಬರ್ 7 ಜೆರ್ಸಿಯಂತೂ ತಲಾ ಫಾರ್ ಎ ರೀಸನ್ ಅಂತಾನೇ ಫೇಮಸ್ ಆಗಿದೆ. ಪಂದ್ಯದ ಫಲಿತಾಂಶ ಸೋಲು ಗೆಲುವು ಏನೇ ಆಗಿದ್ರೂ 7 ಅನ್ನೋ ಸಂಖ್ಯೆ ಇತ್ತಂದ್ರೆ ತಲಾ ಫಾರ್ ಎ ರೀಸನ್ ಅಂತಾ ತಲೆ ಮೇಲೆ ಹೊತ್ತು ಮೆರೆಸ್ತಾರೆ. ಎಷ್ಟೋ ಸಲ ಆಪೋಸಿಟ್ ಟೀಮ್ಸ್ ಕೂಡ ಚೆನ್ನೈನ ಟ್ರೋಲ್ ಮಾಡಲು ಇದೇ ಸ್ಟೈಲ್ನಲ್ಲಿ ಕೌಂಟರ್ ಕೊಟ್ಟಿದ್ದೂ ಇದೆ. ಆದ್ರೆ ಮೈದಾನದಲ್ಲಿ ಯಾವತ್ತೂ ಅತಿರೇಖವಾಗಿ ವರ್ತಿಸದ ಧೋನಿ ಐದು ಬಾರಿ ಚಾಂಪಿಯನ್ಸ್ ಆಗಿ ತಂಡವನ್ನ ಮುನ್ನಡೆಸಿದ್ದಾರೆ. ನಾಯಕನಾಗಿ 130 ಕ್ಕೂ ಹೆಚ್ಚು ಪಂದ್ಯಗಳನ್ನು ಗೆದ್ದುಕೊಟ್ಟು, ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. 12 ಬಾರಿ ಪ್ಲೇ-ಆಫ್ಸ್ ಹಂತಕ್ಕೆ ಮತ್ತು 10 ಬಾರಿ ಫೈನಲ್‌ಗೆ ಮುನ್ನಡೆಸಿದ ದಾಖಲೆ ಅವ್ರ ಹೆಸರಲ್ಲಿದೆ. ಒಟ್ನಲ್ಲಿ ಧೋನಿ ಅಂದ್ರೆ ಬರೀ ಆಟಗಾರನಲ್ಲ. ಯಾವುದೋ ಒಂದು ತಂಡಕ್ಕೆ ಸೀಮಿತವಾದ ಪ್ಲೇಯರ್ ಅಲ್ಲ. ಕ್ಯಾಪ್ಟನ್ ಕೂಲ್ ಪರ್ಸನಾಲಿಟಿ, ವಿಶಿಷ್ಟ ನಾಯಕತ್ವ, ಐಸಿಸಿ ಟ್ರೋಫಿಗಳ ದಾಖಲೆ, ಜಗತ್ತಿನ ಶ್ರೇಷ್ಠ ಫಿನಿಶರ್, ಸ್ಟಂಪ್ಸ್ ಹಿಂದಿನ ಮ್ಯಾಜಿಶಿಯನ್, ಯಂಗ್ ಪ್ಲೇಯರ್ಸ್ ಪಾಲಿನ ರೋಲ್ ಮಾಡೆಲ್, ಸಿಂಪ್ಲಿಸಿಟಿ ಹೀಗೆ ಎಲ್ಲಾ ವಿಚಾರಗಳಲ್ಲೂ ಧೋನಿ ನಂಬರ್ 1. ಐಪಿಎಲ್ನಿಂದ ಧೋನಿ ದೂರಾದ್ರೆ ಬರೀ ಚೆನ್ನೈ ತಂಡ ಅಷ್ಟೇ ಅಲ್ಲ ಐಪಿಎಲ್ ಕೂಡ ಅವ್ರನ್ನ ಮಿಸ್ ಮಾಡಿಕೊಳ್ಳುತ್ತೆ.

ನೋಡಿರಿ

