ಸಿನಿಮಾದಲ್ಲಿ ನಟಿಸ್ತಾರಾ ಕ್ಯಾಪ್ಟನ್ ಕೂಲ್ ಧೋನಿ?
ಚಿತ್ರರಂಗದಲ್ಲಿ ಬ್ಯುಸಿಯಾದ ಕ್ಯಾಪ್ಟನ್ ಕೂಲ್

ಸಿನಿಮಾದಲ್ಲಿ ನಟಿಸ್ತಾರಾ ಕ್ಯಾಪ್ಟನ್ ಕೂಲ್ ಧೋನಿ?ಚಿತ್ರರಂಗದಲ್ಲಿ ಬ್ಯುಸಿಯಾದ ಕ್ಯಾಪ್ಟನ್ ಕೂಲ್

ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಟೀಮ್ ಇಂಡಿಯಾ ಸೋತ ಮೇಲೆ ಕ್ರಿಕೆಟ್ ಪ್ರೇಮಿಗಳಿಗೆ ಮೊದಲು ನೆನಪಾಗಿದ್ದೇ ಕೂಲ್ ಕ್ಯಾಪ್ಟನ್ ಎಂ. ಎಸ್ ಧೋನಿ. ಅನೇಕ ಅಭಿಮಾನಿಗಳು ಧೋನಿಯನ್ನ ನೆನಪು ಮಾಡಿಕೊಳ್ಳದ ಕ್ಷಣವಿಲ್ಲ. ಹೀಗಿರುವಾಗಲೇ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್, ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಪ್ಟನ್ ಎಂ.ಎಸ್ ಧೋನಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಚಿತ್ರರಂಗದ ಜೊತೆ ಈಗಾಗಲೇ ನಂಟು ಬೆಳೆಸಿಕೊಂಡಿರುವ ಧೋನಿ, ಈಗಾಗಲೇ ‘ಧೋನಿ ಎಂಟರ್‌ಟೈನ್ಮೆಂಟ್’ ಹೆಸರಿನ ನಿರ್ಮಾಣ ಸಂಸ್ಥೆ ಆರಂಭಿಸಿದ್ದರು. ಇದೀಗ ಧೋನಿ ನಟನೆ ಮಾಡಲು ಮನಸು ಮಾಡ್ತಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ:ಸಿಕ್ಕಾಪಟ್ಟೆ ಟ್ರೋಲ್ ಗಳಿಂದ ನೊಂದ ರಶ್ಮಿಕಾಗೆ ರಮ್ಯಾ ಹೇಳಿದ್ದೇನು?

ಟೀಂ ಇಂಡಿಯಾ ಮಾಜಿ ಬೌಲರ್ ಶ್ರೀಶಾಂತ್, ಇರ್ಫಾನ್ ಪಠಾಣ್ ಸೇರಿ ಅನೇಕರು ದೊಡ್ಡ ಪರದೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಧೊನಿಯ ಸರದಿ. ‘ವಿಕ್ರಮ್’ ಅಂತಹ ಸೂಪರ್ ಹಿಟ್ ಚಿತ್ರ ನೀಡಿದ ಲೋಕೇಶ್ ಕನಗರಾಜ್ ಮುಂದಿನ ಪ್ರಾಜೆಕ್ಟ್‌ಲ್ಲಿ ಧೋನಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಸಿಗಬೇಕಿದೆ. ಲೋಕೇಶ್ ಅವರು ತಮ್ಮ ಮುಂದಿನ ಪ್ರಾಜೆಕ್ಟ್ ಮೇಲೆ ಗಮನ ಹರಿಸುತ್ತಿದ್ದಾರೆ. ಈ ಚಿತ್ರದ ಧೋನಿಗೆ ಒಂದು ಪ್ರಮುಖ ಪಾತ್ರ ನೀಡಬೇಕು ಎನ್ನುವ ಆಲೋಚನೆಯಲ್ಲಿ ಲೋಕೇಶ್ ಇದ್ದಾರೆ. ಲೋಕೇಶ್ ಕನಗರಾಜ್ ಹಾಗೂ ದಳಪತಿ ವಿಜಯ್ ಅವರು ಒಂದಾಗುತ್ತಿದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘ದಳಪತಿ 67’ ಎಂದು ನಾಮಕರಣ ಮಾಡಲಾಗಿದೆ. ಈ ಚಿತ್ರದಲ್ಲಿ ಧೋನಿ ನಟಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಧೋನಿಗೆ ಈ ಮೊದಲಿನಿಂದಲೂ ಸಿನಿಮಾ ಬಗ್ಗೆ ಆಸಕ್ತಿ ಇದ್ದು, ಈಗ ಅಭಿನಯಕ್ಕೂ ಮುಂದಾಗಿರುವುದು ಅಭಿಮಾನಿಗಳು ನೆಚ್ಚಿನ ನಾಯಕನನ್ನ ದೊಡ್ಡ ಪರದೆ ನೋಡಲು ಕಾತರರಾಗಿದ್ದಾರೆ.

suddiyaana