ಮಗು ಅಳದೇ ಇದ್ದರೂ ಅಪಾಯವಿದೆಯೇ? – ಪುಟ್ಟ ಮಕ್ಕಳಲ್ಲಿ ಈ ಬದಲಾವಣೆ ಗುರುತಿಸೋದು ಹೇಗೆ?
ಸಣ್ಣ ಮಕ್ಕಳು ಪದೇ ಪದೇ ಅಳ್ತಾನೆ ಇರ್ತಾರೆ. ಇದು ಕಾಮನ್.. ಆದ್ರೆ ಕೆಲ ಮಕ್ಕಳು ತುಂಬಾ ಸೈಲೆಂಟ್ ಆಗಿ ಇರ್ತಾರೆ.. ಅಳೋದೇ ಇಲ್ಲ.. ನಿಮ್ಮ ಮಕ್ಕಳು ಅಳದೇ.. ಸೈಲೆಂಟ್ ಆಗಿ ಇದ್ರೆ ಎಚ್ಚರ ವಹಿಸೋದು ಮುಖ್ಯ..
ಕೆಲವು ಮಕ್ಕಳು ಅತಿಯಾಗಿ ಅಳುತ್ತಲಿದ್ದರೆ, ಇನ್ನು ಕೆಲವು ಮಕ್ಕಳು ಅಳುವುದನ್ನೇ ಕಡಿಮೆ ಮಾಡಿರುತ್ತವೆ. ಅತಿಯಾಗಿ ಅಳ್ತಾ ಇದ್ರೆ, ಆರೋಗ್ಯ ಸರಿ ಇಲ್ಲ ಅಂತಾ ವೈದ್ಯರ ಬಳಿ ಕರ್ಕೊಂಡು ಹೋಗ್ಬೋದು. ಆದ್ರೆ ಮಗಳು ಅಳದೇ ಇದ್ರೆ, ಇದು ಕೂಡ ತಾಯಂದಿರಿಗೆ ತಲೆನೋವಾಗುವಂತಹ ವಿಷ್ಯಾ. ನವಜಾತ ಶಿಶು ಯಾವೆಲ್ಲಾ ಕಾರಣಕ್ಕಾಗಿ ಅಳುವುದಿಲ್ಲ ಅಂತಾ ಇಲ್ಲಿದೆ.
ಇದನ್ನೂ ಓದಿ: ಮಗುವಿನ ಕಿವಿ ಚುಚ್ಚಿಸೋದು ಏಕೆ? – ಸಂಪ್ರದಾಯದ ಹಿಂದಿನ ವೈಜ್ಞಾನಿಕ ಕಾರಣಗಳೇನು?
ನವಜಾತ ಶಿಶು ಅಳದಿರುವಾಗ ಮಗುವಿಗೆ ಕಿವಿ ಕೇಳುವುದಿಲ್ಲವೇ ಅಥವಾ ಬೇರೆ ಏನಾದರೂ ಸಮಸ್ಯೆ ಇದೆಯಾ ಅಂತಾ ಪೋಷಕರಿಗೆ ಗಾಬರಿ ಆಗುವುದು ಸಹಜ. ನವಜಾತ ಶಿಶುಗಳು ಅಳದೇ ಇರಲು ಕೆಲವು ಕಾರಣಗಳು ಇವೆ. ಬೇರೆ ಮಕ್ಕಳಿಗಿಂತ ಈ ಮಕ್ಕಳು ಹೆಚ್ಚು ನಿದ್ರಿಸುತ್ತಿರಬಹುದು ಅಥವಾ ಶಾಂತವಾಗಿರಬಹುದು ಅಂತಾ ನೀವು ಅಂದುಕೊಳ್ಳಬಹುದು. ಆದರೆ ಅಳದೆ ಇರುವುದು ಕೂಡ ಮಕ್ಕಳಲ್ಲಿನ ಆರೋಗ್ಯ ಸಮಸ್ಯೆಯ ಸೂಚನೆಗಳಾಗಿವೆ. ನವಜಾತ ಶಿಶುಗಳಲ್ಲಿ ಕೆಲವು ಮಕ್ಕಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ತುಂಬಾ ಕಷ್ಟಪಡಬಹುದು. ಹೀಗಾಗಿ ವೈದ್ಯರನ್ನು ಬೇಟಿಯಾಗೋದು ಒಳ್ಳೇದು..
ಇನ್ನು ಮಗುವಿನ ಭಾವನೆ ತಿಳಿಯುವುದು ಹೇಗೆ ಮತ್ತು ಇದಕ್ಕೆ ಏನು ಮಾಡಬೇಕು ಅಂತಾ ನೀವು ಕೇಳ್ಬೋದು.. ಅದನ್ನೂ ಹೇಳ್ತೆನೆ. ಮಗು ಅಳದೇ ಇದ್ದರೆ ಆಗ ನೀವು ಮಗುವಿನ ಚಲನೆ ಮತ್ತು ಸಂಜ್ಞೆಗಳನ್ನು ಬೇಗನೆ ತಿಳಿಯಬೇಕು. ಮಗುವಿನ ಬೇಡಿಕೆಗಳು ಏನು ಮತ್ತು ಅದರ ನಿದ್ರೆಯ ಸಮಯ, ಹಾಲಿನ ಸಮಯ ಡೈಪರ್ ಬದಲಾಯಿಸುವ ಬಗ್ಗೆ ಗಮನ ನೀಡಬೇಕು. ಮಗು ಅಳದೇ ಇದ್ದರೆ ಅಥವಾ ಕಣ್ಣೀರು ಸುರಿಸದೆ ಇದ್ದರೆ ಆಗ ನೀವು ಈ ಸಂಜ್ಞೆಗಳಿಂದ ಗುರುತಿಸಲು ಪ್ರಯತ್ನಿಸಿ. ಆದರೂ ಮಗು ಅಳದೇ ಇರುವುದು ಅಸಾಮಾನ್ಯ ಎಂದು ನಿಮಗೆ ಅನಿಸಿದರೆ ಆಗ ನೀವು ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು..