ಚಳಿಗಾಲದಲ್ಲಿ ಬಿಸಿ ನೀರು ಕುಡಿಯುತ್ತೀರಾ? – ಪದೇ ಪದೇ ಬಿಸಿನೀರು ಕುಡಿಯೋದು ಒಳ್ಳೆದಾ?

ಈಗ ಸಿಕ್ಕಾಪಟ್ಟೆ ಚಳಿ.. ಚಳಿ ಇದೆ ಅಂತ ಅನೇಕರು ಬಾಯಿ ಸುಡುವಷ್ಟು ಬಿಸಿನೀರು ಕುಡಿತಾ ಇದ್ದಾರೆ. ಆದ್ರೆ ಪದೇ ಪದೇ ಬಿಸಿನೀರು ಕುಡಿಯೋದು ಆರೋಗ್ಯದ ಮೇಲೆ ಪರಿಣಾಮ ಬೀಳುತ್ತಾ ಅನ್ನೋ ಗೊಂದಲ ಅನೇಕರಿಗಿದೆ.
ಚಳಿಗಾಲದಲ್ಲಿ ಬಿಸಿನೀರು ಕುಡಿಯುವುದು ಒಳ್ಳೆಯದೇ. ಇದ್ರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಬಿಸಿ ನೀರು ಕುಡಿಯೋದ್ರಿಂದ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ದೇಹವನ್ನು ಬೆಚ್ಚಗಿಡುತ್ತದೆ. ಶೀತ ಮತ್ತು ಕೆಮ್ಮು ಕಡಿಮೆ ಮಾಡುತ್ತದೆ. ಬಡ್ಲ್ ಸರ್ಕ್ಯುಲೇಷನ್ ನ ಸರಿಪಡಿಸಿ, ಒತ್ತಡವನ್ನು ಕಡಿಮೆ ಮಾಡುತ್ತದೆ. ಆದ್ರೆ ದಿನವಿಡೀ ಬಿಸಿ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಹೊಟ್ಟೆಯ ಒಳಪದರದ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಬಿಸಿನೀರನ್ನು ಪದೇ.. ಪದೇ ಕುಡಿಯೋದ್ರಿಂದ ದೇಹದ ತಾಪಮಾನ ಹೆಚ್ಚಾಗುತ್ತದೆ. ಇದ್ರಿಂದಾಗಿ ಹೊಟ್ಟೆಯ ಸಮಸ್ಯೆ ಕಾಣಿಸಿಕೊಳ್ಳಬಹುದು.. ಗ್ಯಾಸ್ಟ್ರಿಕ್, ಅಜೀರ್ಣ ಶುರುವಾಗ್ಬೋದು ಎಂದು ತಜ್ಞರು ಹೇಳುತ್ತಾರೆ.
ಇನ್ನು ಊಟ ಮಾಡಿದ ತಕ್ಷಣ ಬಿಸಿನೀರು ಕುಡಿಯುವುದು ಕೂಡ ಒಳ್ಳೆಯದಲ್ಲ. ಊಟ ಮಾಡಿದ ಅರ್ಧ ಗಂಟೆಯ ನಂತರ ಸೂಕ್ತ ಪ್ರಮಾಣದಲ್ಲಿ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು ಉತ್ತಮ. ಉಗುರು ಬೆಚ್ಚಗಿನ ನೀರು ಮಾತ್ರ ಕುಡಿಯಿರಿ. ತುಂಬಾ ಬಿಸಿಯಾಗಿರುವ ನೀರನ್ನು ಕುಡಿಯಬೇಡಿ. ಆದಷ್ಟು ಆರಿಸಿದ ಬಿಸಿನೀರು ಕುಡಿಯಿರಿ. ಇನ್ನು ಮಲಗುವ ಟೈಮ್‌ನಲ್ಲಿ ಹೆಚ್ಚು ಬಿಸಿನೀರು ಕುಡಿಯಬೇಡಿ. ಯಾಕಂದ್ರೆ, ಚಳಿ ಅಂತ ಅನೇಕರು ಮಲಗುವಾಗ ಮುಸುಕು ಹಾಕಿಕೊಂಡು ಮಲಗ್ತಾರೆ. ಇದ್ರಿಂದಾಗಿ ಉಸಿರಾಟದ ಸಮಸ್ಯೆ ಕೂಡ ಶುರುವಾಗ್ಬೋದು ಎಂದು ತಜ್ಞರು ಎಚ್ಚರಿಸಿದ್ದಾರೆ. ಸೋ ಚಳಿಗಾಲದಲ್ಲಿ ಬೆಚ್ಚಗಿನ ನೀರು ಪದೇ ಪದೇ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು, ಆದರೆ ಸರಿಯಾದ ತಾಪಮಾನದಲ್ಲಿ ಮತ್ತು ಮಿತವಾಗಿ ಕುಡಿಯಿರಿ.

ನೋಡಿರಿ

