ಕಳಶ ಇಲ್ಲ.. ಶಿಖರ ಇಲ್ಲ! – ಪ್ರಾಣಪ್ರತಿಷ್ಠಾಪನೆಯೇ ತಪ್ಪಾ? ಮೋದಿಗೆ ಶಂಕರಾಚಾರ್ಯರ ಬಹಿಷ್ಕಾರ?

ಕಳಶ ಇಲ್ಲ.. ಶಿಖರ ಇಲ್ಲ! – ಪ್ರಾಣಪ್ರತಿಷ್ಠಾಪನೆಯೇ ತಪ್ಪಾ? ಮೋದಿಗೆ ಶಂಕರಾಚಾರ್ಯರ ಬಹಿಷ್ಕಾರ?

ರಾಮಮಂದಿರ ವಿಚಾರದಲ್ಲಿ ಇಲ್ಲೊಂದು ಇಂಪಾರ್ಟೆಂಟ್ ವಿಚಾರ ಈಗ ಹೈಲೈಟ್ ಆಗ್ತಾ ಇದೆ. ಅಪೂರ್ಣವಾದ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ಸರೀನಾ? ತಪ್ಪಾ? ಅನ್ನೋದು. ಮಂದಿರವನ್ನ ಸಂಪೂರ್ಣವಾಗಿ ಕಟ್ಟದೆ ಪ್ರಾಣ ಪ್ರತಿಷ್ಠಾಪನೆ ಮಾಡುವಂತಿಲ್ವಾ ಹಾಗಾದ್ರೆ? ಉತ್ತರಾಖಂಡ್​ನ ಶಂಕರಾಚಾರ್ಯ ಪೀಠದ ಅವಿಮುಕ್ತೇಶ್ವರಾನಂದ್ ಹೇಳೋ ಪ್ರಕಾರ, ಮಂದಿರ ಅನ್ನೋದು ಭಗವಂತನ ದೇಹ ಇದ್ದಂತೆ. ದೇವಾಲಯದ ಶಿಖರ ಭಗವಂತನ ಕಣ್ಣುಗಳಿದ್ದಂತೆ. ದೇವಾಲಯದ ಮೇಲಿರೋ ಕಳಶ ದೇವರ ಶಿರವನ್ನ ಪ್ರತಿನಿಧಿಸುತ್ತೆ. ದೇವಾಲಯದ ಮೇಲ್ಬಾಗದಲ್ಲಿ ಹಾರಾಡುವ ಧ್ವಜ ದೇವರ ಕೂದಲಿಗೆ ಸಮಾನ. ಆದ್ರೀಗ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ತಲೆ ಅಂದ್ರೆ ಕಳಶ, ಕಣ್ಣು ಅಂದ್ರೆ ದೇಗುಲದ ತುದಿ, ಕೂದಲು ಅಂದ್ರೆ ಧ್ವಜ ಇವಿಲ್ಲದೆ ರಾಮನ ಪ್ರಾಣ ಪ್ರತಿಷ್ಠಾಪನೆ ಮಾದೋದು ಸರಿಯಲ್ಲ. ಇದು ಹಿಂದೂ ಧರ್ಮಗ್ರಂಥಗಳಿಗೆ, ಶಾಸ್ತ್ರಗಳಿಗೆ ವಿರುದ್ಧವಾದ ನಿರ್ಣಯ ಅನ್ನೋದು ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ್ ಶ್ರೀಗಳ ಪ್ರತಿಪಾದನೆ.

ಇದನ್ನೂ ಓದಿ: ರಾಮಮಂದಿರ ಲೋಕಾರ್ಪಣೆ ದಿನ ಅಯೋಧ್ಯೆಯಲ್ಲಿ ಬಿಗಿ ಭದ್ರತೆ – ಹೈಟೆಕ್‌ ಸೆಕ್ಯೂರಿಟಿ ಹೇಗಿರಲಿದೆ ಗೊತ್ತಾ?

ಖ್ಯಾತ ಇತಿಹಾಸಕಾರ, ಬರಹಗಾರ,  ಸೀಕ್ರೆಟ್ ಆಫ್ ನಾಗಾಸ್ ಸೇರಿದಂತೆ ಹಲವು ಪುಸ್ತಕಗಳನ್ನ ಬರೆದಿರೋ, ಹಿಂದೂಯಿಸಂ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿರೋ ಅಮಿಶ್ ತ್ರಿಪಾಟಿ ಕೂಡ ಈ ವಿವಾದದ ಬಗ್ಗೆ ಮಾತನಾಡಿದ್ದಾರೆ. ಅವರು ಹೇಳೋ ಪ್ರಕಾರ, ಪ್ರಾಚೀನ ಕಾಲದಿಂದಲೂ ಮಂದಿರ ನಿರ್ಮಾಣದ ಆರಂಭದಲ್ಲಿ ಗರ್ಭಗುಡಿಯ ಕಾರ್ಯಕ್ರಮ ನಡೆಯುತ್ತಿತ್ತು. ಗರ್ಭಗುಡಿಯನ್ನ ನಿರ್ಮಾಣ ಮಾಡೋ ಮುನ್ನ ಪೂಜೆ ಮಾಡಲಾಗ್ತಾ ಇತ್ತು. ಮೊದಲಿಗೆ ಗರ್ಭಗುಡಿಯನ್ನ ನಿರ್ಮಾಣ ಮಾಡಿ ಬಳಿಕ ದೇವರ ಮೂರ್ತಿಯನ್ನ ಪ್ರತಿಷ್ಠಾಪನೆ ಸಂದರ್ಭದಲ್ಲಿ ಎರಡನೇ ಹಂತದ ಪೂಜೆ ನಡೆಯುತ್ತಿತ್ತು. ದೇವರ ಮೂರ್ತಿಯ ಪ್ರತಿಷ್ಠಾಪನೆ ಆದ ಮೇಲೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಗ್ತಾ ಇತ್ತು. ಪವಿತ್ರೀಕರಣ ಅನ್ನೋದು ಪಾಶ್ಚಿಮಾತ್ಯ ಪದ. ಅವರ ಪ್ರಕಾರ ಏನಾದ್ರೂ ದೈವಿಕ ಕಾರ್ಯ ಮಾಡಿದ ಬಳಿಕ ಪವಿತ್ರೀಕರಣ ನಡೆಸಲಾಗುತ್ತೆ. ಆದ್ರೆ ಹಿಂದೂಯಿಸಂನಲ್ಲಿ ಎಲ್ಲವೂ ಕೂಡ ದೈವಿಕ ಕಾರ್ಯವೇ. ಗರ್ಭಗುಡಿಯಲ್ಲಿ ದೇವರ ಮೂರ್ತಿಯನ್ನ ಪ್ರತಿಷ್ಠಾಪಿಸಿದಾಗ, ದೇವ ಅಥವಾ ದೇವಿಯನ್ನ ಆ ಮೂರ್ತಿಗೆ ತುಂಬೋದನ್ನ ಪ್ರಾಣ ಪ್ರತಿಷ್ಠೆ ಅಂತಾ ಹೇಳಲಾಗುತ್ತಿದೆ. ಅಂದ್ರೆ ಮೂರ್ತಿಗೆ ಭಗವಂತನ ಜೀವ ಕೊಡೋದು. ಹೀಗಾಗಿ ಅಮಿಶ್ ತ್ರಿಪಾಟಿ ಪ್ರಕಾರ ಪ್ರಾಣ ಪ್ರತಿಷ್ಠಾಪನೆಗೆ ಇಡೀ ಮಂದಿರದ ನಿರ್ಮಾಣ ಕಂಪ್ಲೀಟ್ ಆಗಲೇಬೇಕು ಅಂತೇನಿಲ್ಲ. ಗರ್ಭಗುಡಿಯ ನಿರ್ಮಾಣವಾಗಿರಬೇಕು ಅಷ್ಟೇ.

ಆದ್ರೆ ಈ ವಿಚಾರದಲ್ಲಿ ಸಾಕಷ್ಟು ಪರ-ವಿರೋಧದ ಚರ್ಚೆಗಾಳ್ತಾ ಇವೆ. ಅಯೋಧ್ಯೆ ತುಂಬಾ ಸಾಕಷ್ಟು ದೇಗುಲಗಳಿವೆ. ಅಲ್ಲಿನ ಒಬ್ಬೊಬ್ಬರು ಅರ್ಚಕರು ಒಂದೊಂದು ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸ್ತಾ ಇದ್ದಾರೆ.   ಅಯೋಧ್ಯೆಯಲ್ಲಿರೋ ರತ್ನ ಸಿನ್ಹಾಸನ್ ದೇವಾಲಯದ ಅರ್ಚಕರಾದ ಅರುಣ್ ದಾಸ್ ಪ್ರಕಾರ, ಇಡೀ ದೇವಾಲಯದ ನಿರ್ಮಾಣ ಕಾರ್ಯ ಕಂಪ್ಲೀಟ್ ಆಗದೆ ಪ್ರಾಣ ಪ್ರತಿಷ್ಠಾಪನೆ ಮಾಡೋದು ಹಿಂದೂ ಸಂಪ್ರದಾಯದ ಪ್ರಕಾರ ಸರಿಯಲ್ಲ ಅಂತಾರೆ. ಆದ್ರೆ ಅಲ್ಲೇ ಅಯೋಧ್ಯೆಯ ಹನುಮಾನ್​ಗರಿ ದೇವಾಲಯದ ಅರ್ಚಕರಾದ ಸಂತ್ರಾಮ್​​ದಾಸ್, ನಾನು ಎಲ್ಲಾ ರೀತಿಯ ಅನುಕೂಲ ಇರುವಂತಾ ಮನೆಯಲ್ಲಿ ವಾಸಿಸ್ತಾ ಇದ್ದೇನೆ. ಆದ್ರೆ ನಮ್ಮ ಭಗವಂತ ಶ್ರೀರಾಮ ಟೆಂಟ್​​ನಲ್ಲಿ ವಾಸ ಮಾಡ್ತಾ ಇದ್ರು. ಹೀಗಾಗಿ ರಾಮ ಇನ್ನಾದ್ರೂ ದೇವಾಲಯದ ಒಳಗಿರಲಿ. ಮಂದಿರ ನಿರ್ಮಾಣ ಕಾರ್ಯ ಮುಂದುವರಿಯಲಿ ಅಂತಿದ್ದಾರೆ. ಅಷ್ಟೇ ಅಲ್ಲ, ಆದಿ ಶಂಕರಾಚಾರ್ಯ ಪೀಠದ ಸ್ವಾಮೀಜಿಗಳ ಟೀಕೆಗೆ ಪ್ರತಿಕ್ರಿಯಿಸಿರುವ ಸಂತ್ರಾಮ್​​ದಾಸ್, ಅವರು ಶಂಕರಾಚಾರ್ಯರ ಅನುಯಾಯಿಗಳು. ಶಿವನನ್ನ ಪೂಜಿಸ್ತಾರೆ. ನಾನು ರಾಮನನ್ನ ಪೂಜಿಸ್ತೇನೆ. ಅವರು ಸನ್ಯಾಸಿಗಳು, ನಾವು ಬೈರಂಗಿಗಳು. ರಾಮನ ಆರಾಧಕರಿಗೂ, ಶಿವನ ಆಧಾರಕರಿಗೂ ಸಾಕಷ್ಟು ವ್ಯತ್ಯಾಸ ಇದೆ. ಅವರು ಪ್ರಾಣ ಪ್ರತಿಷ್ಠಾಪನೆಗೆ ಬಂದಿಲ್ಲ ಅಂದ್ರೂ ಏನೂ ಪರಿಣಾಮವಾಗೋದಿಲ್ಲ ಅಂತಾ ಅಯೋಧ್ಯೆಯ ಹನುಮಾನ್​ಗರಿ ದೇವಾಲಯದ ಅರ್ಚಕರು ಹೇಳ್ತಾರೆ.

ಶಂಕರಾಚಾರ್ಯರು ಶೈವ ಪಂಥಕ್ಕೆ ಸೇರಿದವರಾಗಿದ್ದು, ಅದೇ ರಾಮಾನಂದರು ವೈಷ್ಣವ ಪಂಥಕ್ಕೆ ಸೇರಿದವರು. ಇತಿಹಾಸಕಾರ ಧಿರೇಂದ್ರ ಕೆ ಝಾ ಅವರು ಹೇಳೋ ಪ್ರಕಾರ, ಅಯೋಧ್ಯೆಯಲ್ಲಿ ಹಿಂದೂ ಪಂಥಗಳ ನಡುವೆ ಕಲಹ ನಡೆದು ರಕ್ತಪಾತವೇ ಆಗಿತ್ತಂತೆ. ಹನುಮಾನ್​ಗರಿ ದೇವಾಲಯದ ಮೇಲೆ ಹಿಡಿತ ಸಾಧಿಸೋಕೆ ಶೈವರು ಮತ್ತು ರಾಮಾನಂದ ಪಂಥದ ಜನರ ಮಧ್ಯೆ ಭಾರಿ ಕಿತ್ತಾಟವೇ ನಡೆದಿದ್ಯಂತೆ. ರಾಮಮಂದಿರಕ್ಕೆ ಹತ್ತಿರದಲ್ಲೇ ಇರೋ ಅಮವಾ ದೇವಾಲಯದ ಅರ್ಚಕರೊಬ್ಬರು, ಪ್ರಧಾನಿ ಮೋದಿ ಪ್ರಾಣ ಪ್ರತಿಷ್ಠಾಪನೆ ಮಾಡ್ತಿರೋದನ್ನ ಶಂಕರಾಚಾರ್ಯ ಮಠದ ಸ್ವಾಮೀಜಿಗಳಿಗೆ ಸಹಿಸಿಕೊಳ್ಳೋಕೆ ಆಗ್ತಿಲ್ಲ. ಅವರು ಹೊಟ್ಟೆಕಿಚ್ಚು ಪಟ್ಟುಕೊಳ್ತಾ ಇದ್ದಾರೆ. ಯಾರು ಏನೇ ಹೇಳಲಿ, ಶ್ರೀರಾಮಚಂದ್ರನ ಆಶಯದಂತೆಯೇ ಈಗ ಪ್ರಾಣ ಪ್ರತಿಷ್ಠಾಪನೆಯಾಗ್ತಿದೆ. ಪ್ರಧಾನಿ ಮೋದಿ ಮತ್ತು ಯೋಗಿ ಆದಿತ್ಯನಾಥ್ ಆ ಆಶಯವನ್ನ ಹೊತ್ತು ಸಾಗುತ್ತಿದ್ದಾರೆ ಅಷ್ಟೇ ಅನ್ನೋದು ಅಯೋಧ್ಯೆಯ ಅರ್ಚಕರ ಅಭಿಪ್ರಾಯ.

ಅಂತೂ ರಾಮಮಂದಿರ, ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ವಿಚಾರದಲ್ಲಿ ರಾಜಕೀಯವಾಗಿ, ಧಾರ್ಮಿಕವಾಗಿ ಏನೇ ಪರ-ವಿರೋಧ ಕೇಳಿ ಬಂದ್ರೂ, ಕಿತ್ತಾಟ ನಡೀತಾ ಇದ್ರೂ ಒಂದು ವಿಚಾರವನ್ನ ಮಾತ್ರ ಎಲ್ಲರೂ ಒಪ್ಪಿಕೊಳ್ಳಲೇಬೇಕಾಗುತ್ತೆ. ಬರೋಬ್ಬರಿ 500 ವರ್ಷಗಳ ಬಳಿಕ ರಾಮಲಲ್ಲಾ ಕೊನೆಗೂ ಮಂದಿರವನ್ನ ಸೇರ್ತಾ ಇದ್ದಾನೆ. ಇಷ್ಟು ವರ್ಷ ಟೆಂಟ್​​ನೊಳಗಿದ್ದ ರಾಮನಿಗೆ ವಾಸಕ್ಕೆ ಯೋಗ್ಯವಾದ ಮಂದಿರ ನಿರ್ಮಾಣವಾಗ್ತಾ ಇದೆ.

 

Sulekha