ತುಪ್ಪ-ಸಕ್ಕರೆ- ಚಪಾತಿ ಕಾಂಬಿನೇಷನ್! – ತಿನ್ಬೇಕಾ? ತಿನ್ನಬಾರದಾ?

ತುಪ್ಪ-ಸಕ್ಕರೆ- ಚಪಾತಿ ಕಾಂಬಿನೇಷನ್! – ತಿನ್ಬೇಕಾ? ತಿನ್ನಬಾರದಾ?

ಅನೇಕರಿಗೆ ರಾತ್ರಿ ಊಟಕ್ಕೆ ಚಪಾತಿ ಬೇಕೇ ಬೇಕು.. ಕೆಲವರು ಪಲ್ಯದಲ್ಲಿ ಚಪಾತಿ ತಿಂದ್ರೆ, ಇನ್ನೂ ಕೆಲವರು ತುಪ್ಪ ಹಾಗೂ ಸಕ್ಕರೆ ಹಾಕಿ ತಿಂತಾರೆ. ನೀವೂ ಕೂಡ ಚಪಾತಿಗೆ ತುಪ್ಪ ಹಾಗೂ ಸಕ್ಕರೆ ಹಾಕಿ ತಿಂತಾ ಇದ್ರೆ ಈ ವಿಚಾರ ತಿಳಿದುಕೊಳ್ಳೋದು ಉತ್ತಮ.

ಭಾರತೀಯ ಅಡುಗೆ ಮನೆಯಲ್ಲಿ ತುಪ್ಪಕ್ಕೆ ವಿಶೇಷವಾದ ಸ್ಥಾನವಿದೆ. ಅಲ್ಲದೆ ಚಪಾತಿ ಎಲ್ಲರ ಮನೆಯ ಊಟದ ಒಂದು ಭಾಗ. ಇನ್ನು ಚಪಾತಿ ಜೊತೆ ತುಪ್ಪ ಹಾಗೂ ಸಕ್ಕರೆಯನ್ನು ಅನೇಕರು ತಿನ್ನುತ್ತಾರೆ. ಹೆಚ್ಚಿನ ಜನರು ಚಪಾತಿ ಮಾಡುವಾಗ ಹಾಗೇ ತಮ್ಮ ಮಕ್ಕಳಿಗೆ ಬಿಸಿ ಚಪಾತಿ, ಸಕ್ಕರೆ ಮತ್ತು ತುಪ್ಪವನ್ನು ಸವರಿ ಸುರುಳಿ ಸುತ್ತಿ ಕೊಡುತ್ತಾರೆ. ಅಲ್ಲದೆ, ಕೆಲವರು ಸಕ್ಕರೆ, ತುಪ್ಪ, ಚಪಾತಿ  ತಿನ್ನಲು ಬಹಳ ಇಷ್ಟಪಡುತ್ತಾರೆ. ಆದ್ರೆ ಚಪಾತಿ ಜೊತೆ ತುಪ್ಪ ಹಾಗೂ ಸಕ್ಕರೆ ತಿನ್ನೋದು ಆರೋಗ್ಯದ ದೃಷ್ಟಿಯಿಂದ ಒಳ್ಳೆದಾ, ಕೆಟ್ಟದ್ದಾ ಅಂತಾ ಅನೇಕರಿಗೆ ಗೊಂದಲ ಇದೆ.

ಇದನ್ನೂ ಓದಿ: ಆ ಮಹಾನುಬಾವರಿಗೆ ನಮೋ ನಮಃ! – ಸಿದ್ದು ಗರ್ವ ಭಂಗ ಆಗಬೇಕು ಎಂದ HDD

ತೂಕ ಇಳಿಸುವ ಪ್ರಕ್ರಿಯಲ್ಲಿ ತುಪ್ಪ ತುಂಬಾ ಸಹಾಯಕಾರಿ. ತುಪ್ಪವು ನಿಮ್ಮನ್ನು ಹೊಟ್ಟೆ ತುಂಬಿಸುತ್ತದೆ. ಇದಲ್ಲದೆ, ಕೊಬ್ಬು ಕರಗಬಲ್ಲ ಜೀವಸತ್ವಗಳನ್ನು ಒಳಗೊಂಡಿದ್ದು, ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಹಾರ್ಮೋನುಗಳ ಸಮತೋಲನ ಮತ್ತು ಆರೋಗ್ಯಕರ ಕೊಲೆಸ್ಟ್ರಾಲ್ ನಿರ್ವಹಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಸಂಶೋಧಕರ ಪ್ರಕಾರ, ಒಂದು ರೊಟ್ಟಿಗೆ ಸಣ್ಣ ಟೀ ಚಮಚದಷ್ಟು ತುಪ್ಪ ಉತ್ತಮವಾಗಿರುತ್ತದೆ. ಆದರೆ ಮಿತಿಮೀರಿದ ತುಪ್ಪ‌ ಸೇವನೆ ದೇಹಕ್ಕೆ ಹಾನಿಕಾರಕ ಎಂದೂ ತಜ್ಞರು ಎಚ್ಚರಿಸುತ್ತಾರೆ. ಅಲ್ಲದೆ, ಸಕ್ಕರೆ ಹೆಚ್ಚಾಗಿ ತಿನ್ನುವುದರಿಂದಲೂ ಸಹ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳು ಅತಿಯಾಗಿ ಸಕ್ಕರೆ ತಿಂದ್ರೆ ಹೊಟ್ಟೆ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಸಕ್ಕರೆ ಹೆಚ್ಚು ತಿನ್ನೋದ್ರಿಂದ ತೂಕ ಹೆಚ್ಚಳಕ್ಕೂ ಕಾರಣವಾಗುತ್ತದೆ. ಇನ್ನು ಮಧುಮೇಹ ಸಮಸ್ಯೆ ಹೊಂದಿರುವವರು ಚಪಾತಿ ಜೊತೆ ತುಪ್ಪ, ಸಕ್ಕರೆ ತಿನ್ನಬಾರದು ಅಂತಾ ವೈದ್ಯರು ಸಲಹೆ ನೀಡುತ್ತಾರೆ. ಹೀಗಾಗಿ ಆರೋಗ್ಯದ ದೃಷ್ಟಿಯಿಂದ ಎಚ್ಚರ ವಹಿಸೋದು ಉತ್ತಮ.

Shwetha M