ಹೆಲ್ಮೆಟ್ ಧರಿಸುವಾಗ ಈ ತಪ್ಪು ಮಾಡ್ತೀರಾ? – ಒಂದು ತಪ್ಪು.. ನಿಮ್ಮ ಕೂದಲಿಗೆ ಕುತ್ತು!

ದ್ವಿಚಕ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ. ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ಧರಿಸಲೇಬೇಕು. ಆದ್ರೆ ಕೆಲವರು ಕೂದಲು ಉದುರುತ್ತೆ ಅನ್ನೋ ಕಾರಣಕ್ಕೆ ಹೆಲ್ಮೆಟ್ ಧರಿಸಲ್ಲ. ಆದ್ರೆ ಕೂದಲು ಉದುರುವಿಕೆಗೆ ನಿಜಕ್ಕೂ ಹೆಲ್ಮೆಟ್ ಕೂಡಾ ಕಾರಣವೇ? ಹೆಲ್ಮೆಟ್ ಧರಿಸುವುದರಿಂದ ಕೂದಲು ಹೇಗೆ ಉದುರುತ್ತದೆ ಅನ್ನೋ ಬಗ್ಗೆ ಅನೇಕರಿಗೆ ಸಂಶಯ ಇದೆ. ಕೂದಲು ಉದುರಲು ಹೆಲ್ಮೆಟ್ ನೇರ ಕಾರಣವಲ್ಲ. ಹೆಲ್ಮೆಟ್ ಧರಿಸುವಾಗ ನಾವು ಮಾಡುವ ಕೆಲ ತಪ್ಪುಗಳು ಕೂದಲು ಉದುರಲು ಪ್ರಮುಖ ಕಾರಣ ಅಂತ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ರೈಲ್ವೇ ಪ್ರಯಾಣಿಕರಿಗೆ ಬಿಗ್ಶಾಕ್! – ಇನ್ಮುಂದೆ ರೈಲ್ವೇ ಟಿಕೆಟ್ ಬುಕಿಂಗ್ಗೆ ಆಧಾರ್ ಲಿಂಕ್ ಕಡ್ಡಾಯ!
ಸ್ಪಚ್ಛವಾದ ಹೆಲ್ಮೆಟ್ ಧರಿಸೋದ್ರಿಂದ ಯಾವುದೇ ಸಮಸ್ಯೆ ಇಲ್ಲ. ಆದ್ರೆ ಕೊಳಕಾದ ಹೆಲ್ಮೆಟ್ ಧರಿಸಿದ್ರೆ, ಇನ್ಫೆಕ್ಷನ್ ಆಗೋ ಸಾಧ್ಯತೆ ಇದೆ. ಇದ್ರಿಂದಾಗಿ ನೆತ್ತಿಯಲ್ಲಿ ಡ್ಯಾಂಡ್ರಫ್ ಆಗ್ಬೋದು. ಇದು ಹೇರ್ ರೂಟ್ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಇದು ಕೂಡ ಕೂದಲು ಉದುರುವಿಕೆಗೆ ಕಾರಣವಾಗ್ಬೋದು. ಇನ್ನು ಬಿಗಿಯಾದ ಹೆಲ್ಮೆಟ್ ಧರಿಸಿದ್ರೆ ಕೂದಲಿನ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಟೈಟ್ ಆಗಿರುವ ಹೆಲ್ಮೆಟ್ ಧರಿಸಿದ್ರೆ ನೆತ್ತಿಯಲ್ಲಿ ಹೆಚ್ಚು ಬೆವರು ಉತ್ಪತ್ತಿಯಾಗುತ್ತದೆ. ಇದರಿಂದ ಹೇರ್ ರೂಟ್ ದುರ್ಬಲಗೊಳ್ಳುತ್ತದೆ. ಇದು ಕೂಡ ಕೂದಲು ಉದುರಲು ಪ್ರಮುಖ ಕಾರಣ. ಹೀಗಾಗಿ ಆದಷ್ಟು ಸ್ಪಚ್ಚವಾಗಿರೋ ಹೆಲ್ಮೆಟ್ ಅನ್ನ ಧರಿಸಿ. ಇದ್ರ ಜೊತೆಗೆ ನಿಮಗೆ ಕಂಫರ್ಟ್ ಇರುವಂತಹ ಹೆಲ್ಮೆಟ್ ಅನ್ನ ಧರಿಸಿ. ಇದ್ರ ಜೊತೆಗೆ ಆಗಾಗ ಹೆಲ್ಮೆಟ್ ಅನ್ನ ಕ್ಲೀನ್ ಮಾಡಿಕೊಂಡು ಇರಿ. ಹೀಗೆ ಮಾಡಿದ್ರೆ ನಿಮ್ಮ ಕೂದಲಿನ ಮೇಲೆ ಯಾವುದೇ ಪರಿಣಾಮ ಬೀಳಲ್ಲ.

ನೋಡಿರಿ

