ಪಾಂಡೆ ಲವ್ಸ್ ಪಾಂಡ್ಯ? – ಡೇಟಿಂಗ್, ಚಾಟಿಂಗ್, ಡ್ಯಾನ್ಸಿಂಗ್!!
ಡಿವೋರ್ಸ್‌ಗೆ ಇದೇ ಕಾರಣ ಆಯ್ತಾ?

ಹಾರ್ದಿಕ್ ಪಾಂಡ್ಯ ಹಾಗೂ ನತಾಶ ಈಗ ನಾನೊಂದು ತೀರಾ.. ನೀನೊಂದು ತೀರಾ ಅಂತಾ ಬೇರೆ ಬೇರೆಯಾಗಿದ್ದಾರೆ. ಡಿವೋರ್ಸ್ ಪಡೆದ ನತಾಶ ಮಗನೊಂದಿಗೆ ವಿದೇಶಕ್ಕೆ ಹೋಗಿದ್ರೆ ಇತ್ತ ಪಾಂಡ್ಯ ಮಾತ್ರ ಫುಲ್ ಚಿಲ್ ಮೂಡ್‌ನಲ್ಲಿದ್ದಾರೆ.. ಡಿವೋರ್ಸ್ ಪಡೆದ ವಿಚಾರ ಅನೌನ್ಸ್ ಮಾಡ್ತಿದ್ದಂತೆ ಹಾರ್ದಿಕ್‌ನ ಒಂದೊದೇ ವಿಚಾರಗಳು ರಿವೀಲ್ ಆಗ್ತಾ ಇದೆ. ಅಷ್ಟೇ ಅಲ್ಲದೇ ಪಾಂಡ್ಯ ಜೊತೆ ಒಂದೊಂದೇ ಹೆಸರು ತಳುಕು ಹಾಕಿಕೊಳ್ಳುತ್ತಿದೆ. ಇದೀಗ ಪಾಂಡ್ಯ ಖ್ಯಾತ ನಟಿಯೊಂದಿಗೆ ಡೇಟಿಂಗ್ ಮಾಡ್ತಾ ಇದ್ದಾರೆ ಎಂಬ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಾ ಇದೆ. ಅಷ್ಟಕ್ಕೂ ಪಾಂಡ್ಯ ಯಾರೊಂದಿಗೆ ಡೇಟಿಂಗ್ ಮಾಡ್ತಾ ಇದ್ದಾರೆ? ಪಾಂಡ್ಯ ಹೊಸ ಸಮಚಾರ ಏನು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮುಂಬೈಗೆ RO & SKY ಗುಡ್ ಬೈ – ₹30 ಕೋಟಿ ಆಫರ್ ಕೊಟ್ಟ ಶಾರುಖ್?
ನತಾಶ ಹಾಗೂ ಪಾಂಡ್ಯ ಡಿವೋರ್ಸ್ ಪಡೆದಿರೋ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇಬ್ಬರು ವಿಚ್ಛೇದನ ಪಡೆದಿರುವುದಾಗಿ ಸೋಶಿಯಲ್ ಮೀಡಿಯಾ ಮೂಲಕ ಅನೌನ್ಸ್ ಮಾಡಿದ್ರು.. ಮಗ ಅಗಸ್ತ್ಯನನ್ನು ಯಾವುದೇ ಕೊರತೆಯಿಲ್ಲದಂತೆ ನಾವಿಬ್ಬರೂ ಕೋ ಪೇರೆಂಟ್ ಆಗಿ ನೋಡಿಕೊಳ್ಳುತ್ತೇವೆ ಎಂದು ಖಚಿತಪಡಿಸಿದ್ದರು. ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟ್ಯಾಂಕೋವಿಚ್ ಡಿವೋರ್ಸ್ ಪಡೆದು ಕೆಲವೇ ದಿನಗಳಾಗಿದೆ. ಈ ಮಧ್ಯೆ ಹಾರ್ದಿಕ್ ನ ಒಂದೊಂದೇ ವಿಚಾರಗಳು ಸದ್ದು ಮಾಡ್ತಾ ಇದೆ. ಪಾಂಡ್ಯ ಕೆಟ್ಟವರು.. ಮಾಡಬಾರದ ಕೆಲಸವನ್ನ ಮಾಡಿದ್ದಾರೆ. ಇದಕ್ಕಾಗಿಯೇ ಡಿವೋರ್ಸ್ ಆಗಿದೆ ಎಂಬಾ ಸುದ್ದಿ ಗುಲ್ಲೆಬ್ಬಿದೆ. ಇದಿಷ್ಟೇ ಅಲ್ಲ ಹಾರ್ದಿಕ್ ಪಾಂಡ್ಯ ಡಿವೋರ್ಸ್ ಪಡೆದುಕೊಳ್ಳುತ್ತಿದ್ದಂತೆ ಅವರ ಜೊತೆ ಹೊಸ ಹೊಸ ಹೆಸರು ತಳುಕು ಹಾಕಿಕೊಳ್ಳುತ್ತಿದೆ. ಮಾಡೆಲ್ ಪ್ರಾಚಿ ಸೋಲಂಕಿ ಜೊತೆ ಪಾಂಡ್ಯ ಡೇಟಿಂಗ್ ಮಾಡ್ತಾ ಇದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದ್ರೀಗ ಹಾರ್ದಿಕ್ ಬಾಲಿವುಡ್ ಬೆಡಗಿಯ ಜತೆ ಹೊಸ ಸಂಬಂಧ ಬೆಳೆಸಲು ಮುಂದಾದ್ರಾ ಎನ್ನುವ ಅನುಮಾನ ಆರಂಭವಾಗಿದೆ.
ಹೌದು, ನತಾಶ ಸೆರ್ಬಿಯಾಗೆ ತೆರಳುತ್ತಿದ್ದಂತೆ ಪಾಂಡ್ಯ ಜೊತೆ ಬಾಲಿವುಡ್ ನಟಿ ಅನನ್ಯಾ ಪಾಂಡೆ ಹೆಸರು ತಳುಕು ಹಾಕಿಕೊಂಡಿದೆ. ಅದಕ್ಕೆ ಕಾರಣವಾಗಿದ್ದು ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಸಮಾರಂಭ. ಈ ಮದುವೆ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರೆ, ಇಷ್ಟು ಸುದ್ದಿಯಾಗುತ್ತಿರಲಿಲ್ಲ. ಆನಂತರ ಇಬ್ಬರ ನಡೆ ಗುಸುಗುಸುಗೆ ಕಾರಣವಾಗಿದೆ. ಅಂಬಾನಿ ಕುಟುಂಬದ ಮದುವೆಯಲ್ಲಿ ಹಾರ್ದಿಕ್ ಪಾಂಡ್ಯ ಸೇರಿದಂತೆ ಬಂದಿದ್ದ ಗಣ್ಯರೆಲ್ಲರೂ ಭರ್ಜರಿಯಾಗಿ ಹೆಜ್ಜೆ ಹಾಕಿದ್ದರು. ಅದರಲ್ಲಿ ಹಾರ್ದಿಕ್ ಪಾಂಡ್ಯ ಕೂಡ ಬಾಲಿವುಡ್ ಸೆಲೆಬ್ರೆಟಿಗಳ ಜೊತೆ ಮಸ್ತ್ ಆಗಿ ಹೆಜ್ಜೆ ಹಾಕಿದ್ದರು. ಅದರಲ್ಲಿ ಅನನ್ಯಾ ಪಾಂಡೆ ಕೂಡ ಇದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದಿಷ್ಟೇ ಆದ್ರೆ ಫ್ಯಾನ್ಸ್ ಈ ಬಗ್ಗೆ ಅಷ್ಟೊಂದಾಗಿ ಚರ್ಚೆ ಮಾಡ್ತಾ ಇರ್ಲಿಲ್ಲ.. ಮದುವೆ ಸಮಾರಂಭ ಮುಗಿಸಿ ಹೊರಬರುತ್ತಿದ್ದಂತೆ ಇಬ್ಬರು ಕ್ಲೋಸ್ ಆಗಿದ್ದಾರೆ. ಹಾರ್ದಿಕ್ ಪಾಂಡ್ಯ ಹಾಗೂ ಅನನ್ಯಾ ಪಾಂಡೆ ಇಬ್ಬರೂ ಒಬ್ಬರನ್ನೊಬ್ಬರು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡುವುದಕ್ಕೆ ಶುರು ಮಾಡಿದ್ದಾರೆ. ಡೇಟಿಂಗ್, ಚಾಟಿಂಗ್ ಶುರು ಮಾಡಿದ್ದಾರೆ ಎಂದು ಹೇಳಲಾಗ್ತಿದೆ. ಸಿಕ್ಕಿದ್ದೇ ಚಾನ್ಸ್ ಅಂತಾ ಪಾಂಡ್ಯ ಫ್ಯಾನ್ಸ್ ಹೊಸ ಅತ್ತಿಗೆ ಸಿಕ್ಕೇ ಬಿಟ್ರು ಅಂತಾ ಶರಾ ಬರೆದಿದ್ದಾರೆ. ಇದೀಗ ಇವರಿಬ್ಬರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡ್ತಾ ಇದ್ದಾರೆ.
ಹಾರ್ದಿಕ್ ಪಾಂಡ್ಯ ಹಾಗೂ ಅನನ್ಯ ಪಾಂಡೆ ವಿಚಾರ ಮುನ್ನೆಲೆಗೆ ಬಂದಾಗಿನಿಂದ ಹತ್ತು ಹಲವು ಪ್ರಶ್ನೆಗಳು ಫ್ಯಾನ್ಸ್ ಗೆ ಕಾಡಲು ಶುರುವಾಗಿದೆ. ಹಾರ್ದಿಕ್ ಪಾಂಡ್ಯ ವಿಚ್ಛೇದನಕ್ಕೆ ಈ ವಿಚಾರವೇ ಕಾರಣ ಆಯ್ತಾ? ಅಥವಾ ಡಿವೋರ್ಸ್ ಬಳಿಕ ನಟಿಯ ಹಿಂದೆ ಬಿದ್ರಾ? ಅನ್ನೋ ಪ್ರಶ್ನೆ ಫ್ಯಾನ್ಸ್‌ಗೆ ಕಾಡುತ್ತಿದೆ. ಇನ್ನು ಕೆಲವರು ಪತ್ನಿಗೆ ವಿಚ್ಛೇದನ ನೀಡಿದ ಬಳಿಕವೇ ಇನ್ನೊಬ್ಬ ನಟಿಗೆ ಹಾರ್ದಿಕ್ ಪಾಂಡ್ಯ ಮನ ಸೋತರೇ? ಎಂದು ಪ್ರಶ್ನೆ ಮಾಡುವುದಕ್ಕೆ ಶುರು ಮಾಡಿದ್ದಾರೆ. ಸದ್ಯ ಈ ಸುದ್ದಿ ಬಾಲಿವುಡ್ ಅಂಗಳದಲ್ಲಿ ಬಾರಿ ಚರ್ಚೆಯಾಗುತ್ತಿದೆ. ಅಷ್ಟೇ ಅಲ್ಲದೇ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಅಂತಾ ಹೇಳ್ತಿದ್ದಾರೆ.
ಇನ್ನು ಅನನ್ಯ ಪಾಂಡೆ ಆಗಾಗ ಸುದ್ದಿಯಲ್ಲಿರುತ್ತಾರೆ. ಈಗಾಗ್ಲೇ ಅನನ್ಯ ಪಾಂಡೆ ಬಾಲಿವುಡ್ ನಟ ಆದಿತ್ಯ ರಾಯ್ ಕಪೂರ್ ಸೇರಿ ಮೂವರೊಂದಿಗೆ ಡೇಟಿಂಗ್ ನಡೆಸಿದ್ದಾರೆ. ಪಾಂಡ್ಯ ನಾಲ್ಕನೆಯವರು ಅಂತಾ ಫ್ಯಾನ್ಸ್ ಹೇಳ್ತಿದ್ದಾರೆ. ಅನನ್ಯಾ ಪಾಂಡೆ ಹಾಗೂ ಆದಿತ್ಯ ರಾಜ್ ಕಪೂರ್ ಇಬ್ಬರೂ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ, ಇಬ್ಬರೂ ಡೇಟಿಂಗ್ ಮಾಡುತ್ತಿರುವ ವಿಷಯದ ಬಗ್ಗೆ ಬಾಯಿಬಿಟ್ಟಿರಲಿಲ್ಲ. ಹಾಗೇ ಕೆಲವು ದಿನಗಳ ಹಿಂದಷ್ಟೇ ಈ ಜೋಡಿ ಬ್ರೇಕಪ್ ಮಾಡಿಕೊಂಡಿದೆ ಅನ್ನೋ ಸುದ್ದಿನೂ ಓಡಾಡಿತ್ತು. ಈ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಹಾಗೂ ಅನನ್ಯಾ ಪಾಂಡೆ ಲವ್ವಿ ಡವ್ವಿ ಶುರುಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರ ಸ್ನೇಹ ಎಂತದ್ದು? ಮುಂದೆ ಮದುವೆ ಆಗ್ತಾರ ಅಂತಾ ಕಾದು ನೋಡ್ಬೇಕಾಗಿದೆ.