ಗಂಭೀರ್-ಕೊಹ್ಲಿ ದೋಸ್ತಿಯಾದ್ರಾ? – RCB ಕಂದ ಕೊಹ್ಲಿ ಎಂದಿದ್ಯಾರು?
ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯದಲ್ಲಿ ನಮ್ ಬೆಂಗಳೂರು ತಂಡ ಸೋತಿರಬಹುದು.. ಆದ್ರೆ ಗೌತಮ್ ಗಂಭೀರ್ ಕಡೆಗೂ ಕಿಂಗ್ ಕೊಹ್ಲಿಗೆ ಸರೆಂಡರ್ ಆದಂತಿದೆ.. ಕೊಹ್ಲಿ ಮಾತ್ರ ಮೊದ್ಲು ಎಂದಿನ ಗತ್ತು ತೋರಿಸಿದ್ರೂ ತಾನಾಗಿಯೇ ಮಾತಾಡಿಸಲು ಬಂದ ಗಂಭೀರ್ ಅವರನ್ನು ಕಡೆಗೆ ಹಗ್ ಮಾಡಿ ಪ್ರೀತಿ ತೋರಿಸಿದ್ದಾರೆ.. ಅಲ್ಲಿಗೆ ಇಬ್ಬರ ನಡುವಿನ ಜಗಳಕ್ಕೊಂದು ವಿರಾಮ ಸಿಕ್ಕಂತಾಗಿದೆ.. ಅದರಲ್ಲೂ 2023ರಲ್ಲಿ ಗಂಭೀರ್ ಮತ್ತು ಕೊಹ್ಲಿ ನಡುವೆ ನಡೆದ ಫೈಟ್ ನೋಡಿದ್ದ ಅಭಿಮಾನಿಗಳಿಗಂತೂ ಈ ಇಬ್ಬರು ಕ್ರಿಕೆಟ್ ದಿಗ್ಗಜರ ನಡುವಿನ ಮಾತುಕತೆ, ಸ್ನೇಹ ವಿನಿಮಯ ಖುಷಿ ಕೊಟ್ಟಿದೆ..
ಇದನ್ನೂ ಓದಿ:ಕೊಹ್ಲಿಗೆ ಮಾತ್ರನಾ ಮ್ಯಾಚ್? – ಉದ್ಧಟ ಗಂಭೀರ್ ಗೆ ಉತ್ತರವಿಲ್ವಾ?
ಆರ್‌ಸಿಬಿ ಮತ್ತು ಕೆಕೆಆರ್‌ನ ಸ್ಟ್ರಾಟಜಿಕ್ ಟೈಮ್ ಔಟ್ ವೇಳೆ ನಡೆದ ಘಟನೆ ಈಗಾಗ್ಲೇ ಸಾಕಷ್ಟು ವೈರಲ್ ಆಗಿದೆ.. ಅದರಲ್ಲೂ ದೆಹಲಿಯ ಈ ಇಬ್ಬರೂ ದಿಗ್ಗಜ ಆಟಗಾರರು ಒಂದಾಗಲಿ ಎನ್ನುವ ಬಯಕೆ ಅಭಿಮಾನಿಗಳಲ್ಲಿ ಇದ್ದೇ ಇತ್ತು.. ಯಾಕಂದ್ರೆ ಕ್ರಿಕೆಟ್ ಎನ್ನುವುದು ಜಂಟಲ್‌ಮನ್ ಗೇಮ್.. ಅಲ್ಲಿ ಆಟಗಾರರು ಎಷ್ಟೇ ಎದುರಾಬದುರು ಟೀಂನಲ್ಲಿದ್ದಾಗ ಬ್ಯಾಟ್-ಬಾಲ್‌ಗಳ ಮೂಲಕ ಹೊಡೆದಾಡಬಹುದು.. ಆದ್ರೆ ಅದರಾಚೆಗೆ ಕ್ರಿಕೆಟಿಗರ ನಡುವೆ ಒಂದು ಸ್ನೇಹ.. ಪರಸ್ಪರ ಗೌರವ ಇರಬೇಕು ಎನ್ನುವುದು ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಯ ಬಯಕೆಯೇ ಆಗಿರುತ್ತೆ.. ಆದ್ರೆ ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ನಡುವೆ ಆ ಸ್ನೇಹ.. ಆ ಗೌರವವೇ ಮರೆಯಾಗಿತ್ತು.. ಇಬ್ಬರಲ್ಲೂ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗದಷ್ಟು ವೈಮನಸ್ಸಿತ್ತು.. ಒಬ್ಬರ ಮುಖವನ್ನು ಇನ್ನೊಬ್ಬರು ನೋಡದಷ್ಟು ಸಿಟ್ಟಿತ್ತು.. ಇದಕ್ಕೆಲ್ಲಾ ಕಾರಣವಾಗಿದ್ದು ಗೌತಮ್ ಗಂಭೀರ್ ವರ್ತನೆ.. ವಿರಾಟ್ ಕೊಹ್ಲಿಯ ಅಗ್ರೆಸಿವ್ ಆಟ.. ಅದರಲ್ಲೂ 2023ರ ಸೀಸನ್‌ನಲ್ಲಿ ಈ ಇಬ್ಬರು ಕ್ರಿಕೆಟಿಗರ ನಡುವಿನ ವರ್ತನೆ ತೀರಾ ಕೆಟ್ಟು ಹೋಗಿತ್ತು.. ಆಗ ಲಕ್ನೋ ಸೂಪರ್ ಜೈಂಟ್ಸ್ ಮೆಂಟರ್ ಆಗಿದ್ರು ಗಂಭೀರ್.. ಎಲ್‌ಎಸ್‌ಜಿ ಮತ್ತು ಆರ್‌ಸಿಬಿ ನಡುವಿನ 16 ಮತ್ತು 17ನೇ ಓವರ್‌ನ ಅವಧಿಯಲ್ಲಿ LSG ಬೌಲರ್ ನವೀನ್ ಉಲ್ ಹಕ್ ಹಾಗೂ ಕೊಹ್ಲಿ ನಡುವೆ ಆನ್ ಫೀಲ್ಡ್‌ನಲ್ಲಿ ತಿಕ್ಕಾಟ ನಡೆದಿತ್ತು.. ಕೊಹ್ಲಿ ಕೂಡ ನವೀನ್‌ಉಲ್ ಹಕ್‌ನ ಚಳಿ ಬಿಡಿಸಿದ್ದರು.. ಆದ್ರೆ ಪಂದ್ಯ ಮುಗಿದ್ಮೇಲೆ ನವೀನ್ ಉಲ್ ಹಕ್, ವಿರಾಟ್ ಕೊಹ್ಲಿಗೆ ಶೇಕ್ ಹ್ಯಾಂಡ್ ಮಾಡಿರಲಿಲ್ಲ.. ಮತ್ತೊಂದೆಡೆ ತನ್ನ ತಂಡದ ಆಟಗಾರನ ಪರವಾಗಿ ಟೀಂನ ಮೆಂಟರ್ ಗೌತಮ್ ಗಂಭೀರ್ ಅಖಾಡಕ್ಕಿಳಿದಿದ್ದರು.. ಕೊಹ್ಲಿ ಜೊತೆ ಮಾತಿನ ಸಮರ ನಡೆದಿತ್ತು.. ಗಂಭೀರ್ ಮಾತಿಗೆ ಕೊಹ್ಲಿ ಕೂಡ ಅಷ್ಟೇ ತೀವ್ರಗತಿಯಲ್ಲೇ ತಿರುಗೇಟು ಕೊಟ್ಟಿದ್ದರು.. ಹಾಗಿದ್ದರೂ ನಂತರ ಸೀನಿಯರ್ ಪ್ಲೇಯರ್‌ಗೆ ಕೊಹ್ಲಿ, ಫೀಲ್ಡ್‌ನಲ್ಲಿ ನಡೆದಿದ್ದೇನು ಅಂತ ವಿವರಿಸಲು ಪ್ರಯತ್ನಿಸಿದ್ರೂ ಗಂಭೀರ್ ರೌದ್ರಾವತಾರ ಮಾತ್ರ ಇಳಿದಿರಲಿಲ್ಲ.. ಮನಸ್ಸಿನಲ್ಲಿ ಕೊಹ್ಲಿ ಬಗ್ಗೆ ಮೊದ್ಲೇ ಏನೋ ಪೂರ್ವಾಗ್ರಹ ಇಟ್ಟುಕೊಂಡವರಂತೆ ಗಂಭೀರ್ ವರ್ತಿಸಿದ್ದರು.. ನಂತರ ಆರ್‌ಸಿಬಿಯ ಡ್ರೆಸ್ಸಿಂಗ್ ರೂಂನಲ್ಲಿ ವಿನ್ನಿಂಗ್ ಸೆಲೆಬ್ರೇಷನ್ ವೇಳೆ ಕೊಹ್ಲಿ, ಯಾರಿಗೆ ಕೊಡೋಕೆ ಗೊತ್ತಿದ್ಯೋ.. ಅದಕ್ಕೆ ತಕ್ಕಂತೆ ತಗೊಳ್ಳೋಕು ಗೊತ್ತಿರಬೇಕು.. ಇಲ್ಲಾಂದ್ರೆ ಕೊಡ್ಲೇಬಾರದು.. ಅಂತ ಹೇಳುತ್ತಲೇ ಗಂಭೀರ್ ವರ್ತನೆಗೆ ಉತ್ತರ ಕೊಟ್ಟಿದ್ದರು..
ಇಷ್ಟಕ್ಕೂ ಅಂದು ಕೊಲ್ಕೊತ್ತಾದ ಈಡನ್ ಗಾರ್ಡನ್‌ನಲ್ಲಿ ಆರ್‌ಸಿಬಿ, ಕೆಕೆಆರ್ ವಿರುದ್ಧ 18 ರನ್‌ಗಳ ಗೆಲುವು ದಾಖಲಿಸಿಕೊಂಡಿತ್ತು.. ಆದ್ರೆ ಅದಕ್ಕೂ ಹಿಂದಿನ ಪಂದ್ಯದಲ್ಲಿ ಅಂದರೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಳೆದ ಸೀಸನ್‌ನಲ್ಲಿ ನಡೆದಿದ್ದ ಪಂದ್ಯದಲ್ಲೂ ಕೆಕೆಆರ್ 1 ವಿಕೆಟ್‌ಗಳ ಗೆಲುವು ಸಾಧಿಸಿತ್ತು.. ಆ ಗೆಲುವಿನ ನಂತರ ಪ್ರೇಕ್ಷಕರತ್ತ ಗಂಭೀರ್ ಜೋರಾಗಿ ಚಪ್ಪಾಳೆ ತಟ್ಟುವಂತೆಲ್ಲಾ ಕೈ ಸನ್ನೆ ಮಾಡಿದ್ದರು.. ಜೊತೆಗೆ ಕೊಹ್ಲಿಯನ್ನು ಅಣಕ ಮಾಡುವಂತಹ ವರ್ತನೆ ತೋರಿದ್ದರು.. ಇದಕ್ಕೆ ಉತ್ತರವೆಂಬಂತೆ ಈಡನ್ ಗೌರ್ಡನ್‌ನಲ್ಲಿ ವಿರಾಟ್ ಕೊಹ್ಲಿ, ಗ್ರೌಂಡ್‌ನಲ್ಲಿ ಫೀಲ್ಡಿಂಗ್‌ನಲ್ಲಿದ್ದಾಗಲೇ ಗಂಭೀರ್ ವರ್ತನೆಯನ್ನು ಇಮಿಟೇಟ್ ಮಾಡಿ. ಗೇಲಿ ಮಾಡಿದ್ದರು.. ಇದು ಗಂಭೀರ್‌ಗೆ ಉರಿಯುವಂತೆ ಮಾಡಿತ್ತು. ನಂತರ ನವೀನ್ ಉಲ್ ಹಕ್ ಅದಾದ್ಮೇಲೆ ಕೈಲ್ ಮೇಯರ್ಸ್, ಅಮಿತ್ ಮಿಶ್ರಾ ಜೊತೆಗೆ ಕೊಹ್ಲಿ ತಿಕ್ಕಾಟ ನಡೆಸಿದ್ದರು.. ಈ ಮೂಲಕ ನಮ್ಮನ್ನು ಕೆಣಕಿದ್ರೆ ಸುಮ್ಮನಿರಲ್ಲ ಅಂತ ಗೌತಮ್ ಗಂಭೀರ್‌ಗೆ ಉತ್ತರ ಕೊಟ್ಟಿದ್ದರು.. ಅಂದಿನ ವರ್ತನೆಗೆ ಕೊಹ್ಲಿ, ಗಂಭೀರ್ ಮತ್ತು ನವೀನ್ ಉಲ್ ಹಕ್‌ಗೆ ಐಪಿಎಲ್‌ನ ಶಿಸ್ತು ಉಲ್ಲಂಘನೆಗೆ ಪಂದ್ಯದ ಸಂಭಾವನೆಯಲ್ಲಿ ಹಂಡ್ರೆಡ್ ಪರ್ಸೆಂಟ್ ಫೈನ್ ಹಾಕಲಾಗಿತ್ತು.. ಈ ಇಬ್ಬರು ದಿಗ್ಗಜ ಕ್ರಿಕೆಟಿಗರ ನಡುವೆ ಇಂತದ್ದೊಂದು ತಿಕ್ಕಾಟ ನಡೆದಿದ್ದು ಅದೇ ಮೊದಲಲ್ಲ.. ಅದಕ್ಕೆ ಹತ್ತು ವರ್ಷಗಳ ಇತಿಹಾಸದೆ..
ಇದಕ್ಕೂ ಮೊದಲು ಅಂದ್ರೆ 2013ರಲ್ಲಿ ಆಗ ಆರ್‌ಸಿಬಿ ಕ್ಯಾಪ್ಟನ್ ಆಗಿದ್ದ ವಿರಾಟ್ ಕೊಹ್ಲಿ ಮತ್ತು ಕೆಕೆಆರ್ ಕ್ಯಾಪ್ಟನ್ ಆಗಿದ್ದ ಗೌತಮ್ ಗಂಭೀರ್ ನಡುವೆ ಮೊದಲ ಬಾರಿಗೆ ಆನ್ ಫೀಲ್ಡ್‌ನಲ್ಲಿ ತಿಕ್ಕಾಟ ನಡೆದಿತ್ತು.. ಅಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬ್ಯಾಟಿಂಗ್ ಮಾಡ್ತಿದ್ದ ಕೊಹ್ಲಿ ಔಟಾಗಿ ಪೆವಿಲಿಯನ್ ಕಡೆಗೆ ಹೊರಟಾಗ ಫೀಲ್ಡಿಂಗ್‌ನಲ್ಲಿದ್ದ ಗೌತಮ್ ಗಂಭೀರ್. ಕೊಹ್ಲಿ ಬಗ್ಗೆ ಗೇಲಿ ಮಾಡಿದ್ದರು.. ಗಂಭೀರ್ ಆಡಿದ ಮಾತಿನಿಂದ ಕೆರಳಿದ ಕೊಹ್ಲಿ ವಾಪಸ್ ಗಂಭೀರ್ ಕಡೆಗೆ ಬಂದು ಮಾತಲ್ಲೇ ತಿರುಗೇಟು ಕೊಟ್ಟಿದ್ದರು.. ಇದು ಫೀಲ್ಡ್‌ನಲ್ಲಿ ಇಬ್ಬರ ನೂಕಾಟ ತಳ್ಳಾಟದವರೆಗೂ ನಡೆದಿತ್ತು.. ನಂತರ ಸಹ ಆಟಗಾರರು ಬಂದು ಜಗಳ ಬಿಡಿಸಿದ್ದರು.. ಇದಾದ ನಂತರ 2016ರಲ್ಲಿ ಈಡನ್ ಗಾರ್ಡನ್‌ನಲ್ಲಿ 183 ರನ್‌ಗಳನ್ನು ಹೊಡೆದಿದ್ದರೂ ಕೊಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ ಆರ್‌ಸಿಬಿ 9 ವಿಕೆಟ್‌ಗಳ ದಿಗ್ವಿಜಯ ಸಾಧಿಸಿತ್ತು.. ಆದ್ರೆ ಆ ಮ್ಯಾಚ್‌ನ ಕಡೆಯ ಓವರ್‌ನಲ್ಲಿ ಕೊಹ್ಲಿ, ಒಂದು ರನ್ ಓಡಿ ನಾನ್‌ಸ್ಟ್ರೈಕರ್ ಎಂಡ್‌ಗೆ ತಲುಪಿಯಾಗಿತ್ತು.. ಕೊಹ್ಲಿಯನ್ನು ರನೌಟ್ ಮಾಡಲು ಸಾಧ್ಯವಿಲ್ಲದೇ ಇದ್ದರೂ ಗಂಭೀರ್ ಮಾತ್ರ ಕೊಹ್ಲಿ ಕಡೆಗೆ ಜೋರಾಗಿ ಬಾಲ್ ಎಸೆದಿದ್ದರು.. ಇದು ಕೊಹ್ಲಿಯ ಪಿತ್ತ ನೆತ್ತಿಗೇರುವಂತೆ ಮಾಡಿತ್ತು.. ಅಗ್ರೆಸ್ಸಿವ್ ಆಗಿದ್ದ ಗಂಭೀರ್‌ಗೆ ಅಷ್ಟೇ ಅಗ್ರೆಸ್ಸಿವ್ ಆಗಿ ಉತ್ತರ ಕೊಟ್ಟಿದ್ದರು ಕೊಹ್ಲಿ.. ಅಲ್ಲೂ ಅಂಪೈರ್ ಹಾಗೂ ತಂಡದ ಸಹಆಟಗಾರರು ಬಂದು ಇಬ್ಬರ ನಡುವಿನ ಗಲಾಟೆಯನ್ನು ನಿಲ್ಲಿಸಿದ್ದರು.. ಆ ಮ್ಯಾಚ್‌ನಲ್ಲೂ ಕೊಹ್ಲಿ, 51 ಎಸೆತಗಳಲ್ಲಿ 75 ರನ್ ಬಾರಿಸಿ ನಾಟೌಟ್ ಆಗಿ ಉಳಿದಿದ್ದರು..
ಇನ್ನು ಕೊಹ್ಲಿ ಟೀಂ ಇಂಡಿಯಾದ ಕ್ಯಾಫ್ಟನ್ ಆಗಿದ್ದಾಗ 2104ರಲ್ಲಿ ಟೆಸ್ಟ್ ಟೀಂನಿಂದಲೂ ಗಂಭೀರ್ ಅವರನ್ನು ಡ್ರಾಪ್ ಮಾಡಿದ್ದರು.. ಇದು ಕೂಡ ಇಬ್ಬರ ನಡುವಿನ ತಿಕ್ಕಾಟ ಮತ್ತಷ್ಟು ಜಾಸ್ತಿಯಾಗಲು ಕಾರಣ ಅಂತ ಹೇಳಲಾಗುತ್ತದೆ. ಹಾಗಿದ್ದರೂ ಗಂಭೀರ್ ಮಾತ್ರ ಕೆಲವು ಸಂದರ್ಶನದಲ್ಲಿ ಕೊಹ್ಲಿ ಮತ್ತು ನನ್ನ ನಡುವೆ ವೈಯಕ್ತಿಕವಾಗಿ ಯಾವುದೇ ದ್ವೇಷವಿಲ್ಲ.. ಆನ್ ಫೀಲ್ಡ್‌ನಲ್ಲಿ ನಾವಿಬ್ಬರೂ ಆಗ್ರೆಸ್ಸಿವ್ ಆಟಗಾರರು.. ನಾನು ಕೊಹ್ಲಿಯಿಂದಲೂ ಇಂತದ್ದೇ ವರ್ತನೆಯನ್ನು ಬಯಸುತ್ತೇನೆ.. ನಾಯಕನಾಗಿ ಧೋನಿ ಒಂದು ರೀತಿಯಲ್ಲಿ ವರ್ತಿಸುತ್ತಾರೆ.. ಕೊಹ್ಲಿ ಮತ್ತೊಂದು ರೀತಿಯಲ್ಲಿ ವರ್ತಿಸುತ್ತಾರೆ.. ಯಾರು ಏನೇ ಮಾಡಿದರೂ ತಮ್ಮ ಟೀಂಗೆ ಒಳ್ಳೆಯದಾಗಬೇಕು ಎಂಬ ಉದ್ದೇಶದಿಂದ ಮಾತ್ರ ಹೀಗೆಲ್ಲಾ ಮಾಡುತ್ತೇವೆ ಎಂದು ಗಂಭೀರ್ ಹೇಳಿದ್ದರು.. ಆದ್ರೀಗ ದಶಕದ ತಿಕ್ಕಾಟಕ್ಕೆ ಇಬ್ಬರೂ ಆಟಗಾರರು ತಿಲಾಂಜಲಿ ಇಟ್ಟಂತೆ ಕಾಣುತ್ತಿದೆ.. ಈ ಆವೃತ್ತಿಯಲ್ಲಿ ಮತ್ತೆ ಕೆಕೆಆರ್‌ಗೆ ಮೆಂಟರ್ ಆಗಿ ಬಂದಿರುವ ಗಂಭೀರ್, ವಿರಾಟ್ ಕೊಹ್ಲಿಯನ್ನು ಅಭಿನಂದಿಸಿ, ಖುಷಿಯಿಂದಲೇ ಮಾತಾಡಿದ್ದರು.. ಗಂಭೀರ್ ಪ್ರೀತಿ ತೋರಿಸಿದಾಗ ನಮ್ ಕಿಂಗ್ ಕೊಹ್ಲಿ ಅದಕ್ಕಿಂತ ಡಬಲ್ ಪ್ರೀತಿ ತೋರಿಸಿದ್ದಾರೆ.. ಪ್ರೀತಿಯ ಅಪ್ಪುಗೆ ಕೊಟ್ಟು, ಹೃದಯ ವೈಶಾಲ್ಯ ಮೆರೆದಿದ್ದಾರೆ.. ಈ ಮೂಲಕ ಸಿಟ್ಟಿನಿಂದ ವರ್ತಿಸಿದ್ದರೆ ಅಷ್ಟೇ ಸಿಟ್ಟಿನಿಂದ ಉತ್ತರ ಕೊಡೋದಿಕ್ಕೂ ಗೊತ್ತು.. ಪ್ರೀತಿ ತೋರಿದರೆ ಅಷ್ಟೇ ಬೇಗ ಕರಗಿ ಹೋಗೋದಿಕ್ಕೂ ಗೊತ್ತು ಅಂತ ಕಿಂಗ್ ಕೊಹ್ಲಿ ತೋರಿಸಿಕೊಟ್ಟಿದ್ದಾರೆ.. ಏನೇ ಆಗ್ಲೀ.. ಕೊಹ್ಲಿ ಮತ್ತು ಗಂಭೀರ್ ಇಬ್ಬರೂ ಭಾರತದ ಆಧುನಿಕ ಕ್ರಿಕೆಟ್‌ನಲ್ಲಿ ದಿಗ್ಗಟ ಬ್ಯಾಟ್ಸ್‌ಮನ್‌ಗಳು..
ಟಿ20 ವರ್ಲ್ಡ್ ಕಪ್ ಹಾಗೂ 2011ರ ಕ್ರಿಕೆಟ್ ಏಕದಿನ ವರ್ಲ್ಡ್ ಕಪ್ ಗೆಲ್ಲುವಲ್ಲಿ ಗೌತಮ್ ಗಂಭೀರ್ ಪಾತ್ರ ದೊಡ್ಡದಿತ್ತು.. ದೆಹಲಿಯ ಈ ಇಬ್ಬರು ಅಗ್ರೆಸ್ಸಿವ್ ಪ್ಲೇಯರ್ಸ್ ಇನ್ನಾದ್ರೂ ತಿಕ್ಕಾಟ ಬಿಟ್ಟು ಖುಷಿ ಖುಷಿಯಿಂದಲೇ ಆಟ ಆಡಿ, ತಮ್ಮ ಟೀಂ ಗೆಲ್ಲಿಸಲು ಪ್ರಯತ್ನಿಸಿದ್ರೆ ಅಭಿಮಾನಿಗಳಿಗೂ ಅದಕ್ಕಿಂತ ಖುಷಿ ಬೇರೇನೂ ಇಲ್ಲ.. ಅಲ್ವಾ? ಇದರ ನಡುವೆ ಕೆಕೆಆರ್ ವಿರುದ್ಧ ಬ್ಯಾಟಿಂಗ್‌ಗೆ ಕೊಹ್ಲಿ ಇಳಿದಾಗ ಅವರನ್ನು ಆರ್‌ಸಿಬಿಯ ಕಂದ.. ಬೆಂಗಳೂರಿನ ಸುಪುತ್ರ ಅಂತೆಲ್ಲಾ ಕಾಮೆಂಟೇಟರ್ ಪ್ರೀತಿಯಿಂದ ಕರೆದಿದ್ದಾರೆ.. ಕನ್ನಡದಲ್ಲಿ ಕಾಮೆಂಟ್ರಿ ಮಾಡುತ್ತಿದ್ದಾಗ ಹೀಗೆಲ್ಲಾ ಕೊಹ್ಲಿಯನ್ನು ವರ್ಣಿಸಿದ್ದು ಕನ್ನಡದ ಅತ್ಯುತ್ತಮ ಕಾಮೆಂಟೇಟರ್ ಆಗಿರುವ ಶ್ರೀನಿವಾಸ್ ಮೂರ್ತಿ.. ತಮ್ಮ ಕನ್ನಡ ಕಾಮೆಂಟ್ರಿ ಮೂಲಕ ಯಾವತ್ತೂ ವೀಕ್ಷಕರನ್ನು ರಂಜಿಸುವುದರಲ್ಲಿ ಶ್ರೀನಿವಾಸ್ ಮೂರ್ತಿಯವರದ್ದು ಎತ್ತಿದ ಕೈ.. ಈಗ ಕೊಹ್ಲಿಯನ್ನು ಆರ್‌ಸಿಬಿಯ ಕಂದ.. ಸುಪುತ್ರ ಅಂತೆಲ್ಲಾ ಕರೆದ ತುಣುಕನ್ನು ಜಿಯೋ ಸಿನಿಮಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಹರ್ಷ ವ್ಯಕ್ತಪಡಿಸಿದೆ.. ಆರ್‌ಸಿಬಿ ಅಭಿಮಾನಿಗಳು ಕೂಡ ಶ್ರೀನಿವಾಸ್ ಮೂರ್ತಿ ಮಾತಿಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ..