CSK ಸೋಲಿಗೆ ಧೋನಿ ಕಾರಣನಾ? – ಚಹಾರ್ ಗೆ ಬೌಲಿಂಗ್ ಕೊಟ್ಟಿಲ್ಲ ಯಾಕೆ? -ತಲೈವಾ ಫ್ಯಾನ್ಸ್ ರೊಚ್ಚಿಗೆದ್ದಿದ್ದೇಕೆ?

CSK ಸೋಲಿಗೆ ಧೋನಿ ಕಾರಣನಾ? – ಚಹಾರ್ ಗೆ ಬೌಲಿಂಗ್ ಕೊಟ್ಟಿಲ್ಲ ಯಾಕೆ? -ತಲೈವಾ ಫ್ಯಾನ್ಸ್ ರೊಚ್ಚಿಗೆದ್ದಿದ್ದೇಕೆ?

ಒಂದು ಓವರ್​ನಲ್ಲಿ ಸಿಎಸ್​ಕೆ ಗೆಲ್ಲುತ್ತೆ ಅನ್ನೋ ನಿರೀಕ್ಷೆ.. ಮತ್ತೊಂದು ಓವರ್​ಗೆ ಇಲ್ಲ ಎಲ್​ಎಸ್​​ಜಿ ಪರವೇ ಪಂದ್ಯ ಇದೆ ಅನ್ನೋ ಭರವಸೆ. ಹೀಗೆ ಕಡೇ ಓವರ್​ಗಳವರೆಗೂ ವಾಲಾಡಿಕೊಂಡೇ ಇದ್ದ ವಿಜಯಲಕ್ಷ್ಮೀ ಕೊನೆಗೆ ಕೆ.ಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೇಂಟ್ಸ್​ಗೆ ಒಲಿದಿದ್ದಾಳೆ. ಆದ್ರೆ ಗೆಲ್ಲೋ ಮ್ಯಾಚ್​ನ ಕೈ ಚೆಲ್ಲಿದ ಸಿಎಸ್​​ಕೆ ಸೋಲಿಗೆ ಧೋನಿಯೇ ಕಾರಣ ಅಂತಾ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಧೋನಿ ಹೇಗೆ ಕಾರಣರಾಗ್ತಾರೆ ಅಂತಾ ನಿಮಗೆ ಅನ್ನಿಸಬಹುದು.. ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ಜೈಸ್ವಾಲ್ KISS ಕೊಟ್ಟಿದ್ಯಾರಿಗೆ? – ಹಿಟ್‌ಮ್ಯಾನ್ ಕಾಮಿಡಿ ಅಪೀಲ್!- YJಗೆ ಪೆಟ್ಟು.. ಪಾಂಡ್ಯಾಗೆ ನೋವು!

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್​ ಪರ ರುತುರಾಜ್ ಗಾಯಕ್ವಾಡ್ ಭರ್ಜರಿ ಶತಕ ಸಿಡಿಸಿದ್ರು. ಈ ಸೆಂಚುರಿ ನೆರವಿನೊಂದಿಗೆ ಸಿಎಸ್​ಕೆ ತಂಡ  20 ಓವರ್​ಗಳಲ್ಲಿ 210 ರನ್ ಕಲೆಹಾಕಿತು. ಚೆನ್ನೈ ಪರ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ನಾಯಕ ರುತುರಾಜ್ ಗಾಯಕ್ವಾಡ್  60 ಎಸೆತಗಳಲ್ಲಿ 3 ಸಿಕ್ಸ್​ ಮತ್ತು 12 ಫೋರ್​ ಮೂಲಕ ಅಜೇಯ 108 ರನ್​​ ಸಿಡಿಸಿದರು. ಈ ಶತಕದ ಮೂಲಕ ರುತು ಸಾಲು ಸಾಲು ದಾಖಲೆಗಳನ್ನು ಬ್ರೇಕ್​ ಮಾಡಿದರು. 3 ಸಿಕ್ಸ್​ ಮತ್ತು 12 ಫೋರ್​ ಮೂಲಕ ಅಜೇಯ 108 ರನ್ ಗಳಿಸಿದ್ರು. ಗಾಯಕ್ವಾಡ್ 56 ಎಸೆತಗಳಲ್ಲಿ ಸಿಡಿಸಿದ ಈ ಶತಕವು ಐಪಿಎಲ್‌ನಲ್ಲಿ ಸಿಎಸ್‌ಕೆ ನಾಯಕನಾಗಿ ಸಿಡಿಸಿದ ಮೊದಲ ಶತಕವಾಗಿದೆ. ಹಾಗೇ ರುತುರಾಜ್​ ಈ ಸೀಸನ್​ ನಲ್ಲಿ 2ನೇ ಅತಿ ಹೆಚ್ಚು ರನ್​ ಗಳಿಸಿದ ಆಟಗಾರರ ಸಾಲಿಗೆ ಎಂಟ್ರಿಕೊಟ್ಟಿದ್ದಾರೆ. ಈ ಮೂಲಕ ಆರೆಂಜ್​ ಕ್ಯಾಪ್​ ರೇಸ್​​ಗೆ ಇಳಿದಿದ್ದಾರೆ. ಅಲ್ದೇ ಈ ಬಾರಿಯ 17ನೇ ಸೀಸನ್​​ ಐಪಿಎಲ್​ನಲ್ಲಿ ಅತಿ ಹೆಚ್ಚು ರನ್​ ಸಿಡಿಸಿದ ನಾಯಕ ಎಂಬ ದಾಖಲೆ ನಿರ್ಮಿಸಿದ್ದಾರೆ.

ಇನ್ನು ಸಿಎಸ್​ಕೆ ಪರ ರುತುರಾಜ್​ಗೆ ಶಿವಂ ದುಬೆ ಉತ್ತಮ ಸಾಥ್ ನೀಡುವ ಮೂಲಕ ಅರ್ಧಶತಕ ಸಿಡಿಸಿದರು. ದುಬೆ 27 ಎಸೆತದಲ್ಲಿ 7 ಸಿಕ್ಸ್​​ ಮತ್ತು 3 ಫೋರ್​​ ಮೂಲಕ 66 ರನ್​​ ಸಿಡಿಸಿ ಅಬ್ಬರಿಸಿದರು. ಜಡೇಜಾ 16, ಸ್ಟಾರ್ಕ್​​ 11, ಧೋನಿ 4 ರನ್​ ಸಹಾಯದಿಂದ ಚೆನ್ನೈ 4 ವಿಕೆಟ್​ ನಷ್ಟಕ್ಕೆ 211 ರನ್​ ಕಲೆ ಹಾಕಿತ್ತು. ಚೆನ್ನೈ ನೀಡಿದ 211 ರನ್​ಗಳ ಬಿಗ್​ ಟಾರ್ಗೆಟ್​ ಬೆನ್ನತ್ತಿದ ಲಕ್ನೋ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಗಿತ್ತು.  ಪರ ಓಪನರ್​ ಆಗಿ ಬಂದ ಡಿಕಾಕ್​​, ಕೆ.ಎಲ್​ ರಾಹುಲ್​ ಕೈ ಕೊಟ್ಟರು. ಡಿಕಾಕ್ ಸೊನ್ನೆಗೆ ಔಟಾದ್ರೆ ರಾಹುಲ್​ 16 ರನ್​ ಗಳಿಸಿ ಕ್ಯಾಚ್​​ ಕೊಟ್ಟು ವಿಕೆಟ್​ ಒಪ್ಪಿಸಿದ್ರು. ಈ ವೇಳೆ ಎಲ್​ಎಸ್​​ಜಿಗೆ ಆಸರೆಯಾಗಿದ್ದೇ ಮಾರ್ಕಸ್ ಸ್ಟೊಯಿನಿಸ್.. ಕೊನೆವರೆಗೂ ಕ್ರೀಸ್​ನಲ್ಲಿ ನಿಂತು ಚೆನ್ನೈ ಬೌಲರ್​ಗಳ ಬೆಂಡೆತ್ತಿದ್ರು. ಕೇವಲ 63 ಬಾಲ್​ನಲ್ಲಿ 6 ಭರ್ಜರಿ ಸಿಕ್ಸರ್​​, 13 ಫೋರ್​ ಸಮೇತ 124 ರನ್​​​ ಸಿಡಿಸಿದ್ರು. ಇವರಿಗೆ ಸಾಥ್​ ನೀಡಿದ ನಿಕೋಲಸ್​ ಪೂರನ್​ ಕೇವಲ 15 ಬಾಲ್​ನಲ್ಲಿ 2 ಸಿಕ್ಸರ್​, 3 ಫೋರ್​ ಸಮೇತ 34 ರನ್​ ಬಾರಿಸಿದ್ರು. ಈ ಮೂಲಕ ಲಕ್ನೋ ತಂಡವನ್ನು ಗೆಲ್ಲಿಸಿದ್ರು.

ಇನ್ನು ಅಜೇಯ ಸೆಂಚುರಿ ಬಾರಿಸಿದ ಸ್ಟೊಯಿನಿಸ್ ಹೊಸ ಇತಿಹಾಸ ಬರೆದಿದ್ದಾರೆ. ಅದು ಸಹ 13 ವರ್ಷಗಳ ಹಳೆಯ ದಾಖಲೆಯನ್ನು ಮುರಿಯುವ ಮೂಲಕ ಎಂಬುದೇ ವಿಶೇಷ. ಈ ಮೂಲಕ ಐಪಿಎಲ್​ನಲ್ಲಿ ಚೇಸಿಂಗ್​ ವೇಳೆ ಅತ್ಯಧಿಕ ರನ್ ಬಾರಿಸಿದ ದಾಖಲೆ ಇದೀಗ ಸ್ಟೊಯಿನಿಸ್ ಪಾಲಾಗಿದೆ. ಮೂಲಕ 13 ವರ್ಷಗಳ ಹಿಂದಿನ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಸ್ಟೊಯಿನಿಸ್ ಯಶಸ್ವಿಯಾಗಿದ್ದಾರೆ.

ಆದ್ರಿಲ್ಲಿ ಲಕ್ನೋ ವಿರುದ್ಧದ ಸಿಎಸ್​ಕೆ ಸೋಲಿಗೆ ಚೆನ್ನೈ ತಂಡ ಮಾಡಿದ ಕೆಲ ತಪ್ಪುಗಳೇ ಕಾರಣ. 211 ರನ್‌ ಗಳ ಗುರಿ ಬೆನ್ನತ್ತಿದ ಲಕ್ನೋ, 15 ಓವರ್‌ಗಳ ನಂತರ 3 ವಿಕೆಟ್ ನಷ್ಟಕ್ಕೆ 137 ರನ್ ಕಲೆಹಾಕಿತ್ತು. ಹೀಗಾಗಿ ಗೆಲುವಿನ ನಿರೀಕ್ಷೆ ಸಿಎಸ್‌ ಕೆ ಪಾಳಯದ ಕಡೆಗೇ ಇತ್ತು. ಯಾಕಂದ್ರೆ ಕೊನೆಯ 5 ಓವರ್‌ಗಳಲ್ಲಿ 74 ರನ್‌ಗಳ ಅಗತ್ಯವಿತ್ತು. ಇದು ಲಕ್ನೋಗೆ ಸುಲಭವೇನೂ ಆಗಿರಲಿಲ್ಲ. ಈ ವೇಳೆ ಶಾರ್ದೂಲ್ ಠಾಕೂರ್ ಎಸೆದ 16ನೇ ಓವರ್‌ನಲ್ಲಿ ಪೂರನ್ ಎರಡು ಸಿಕ್ಸರ್ ಮತ್ತು ಒಂದು ಫೋರ್ ಬಾರಿಸಿದರು. ಒಟ್ಟು ಈ ಓವರ್‌ನಲ್ಲಿ 20 ರನ್ ಬಂದಿತು. ಇದೇ ಲಕ್ನೋ ಪಾಲಿಗೆ ಮ್ಯಾಚ್ ಟರ್ನಿಂಗ್ ಓವರ್ ಆಯ್ತು. ಆದರೆ, 17ನೇ ಓವರ್ ಎಸೆದ ಪತಿರಾಣ ಪೂರನ್ ವಿಕೆಟ್ ಪಡೆದು ಕೇವಲ 7 ರನ್ ನೀಡಿದರು. ಈ ಸಂದರ್ಭದಲ್ಲಿ ಮತ್ತೆ ಸಿಎಸ್‌ಕೆ ಕಡೆಗೆ ಪಂದ್ಯ ವಾಲಿತ್ತು.. ಆದರೆ, 18ನೇ ಓವರ್ ಎಸೆದ ಮುಸ್ತಫಿಜುರ್ 15 ರನ್ ನೀಡಿದರು. ಕೊನೆ 2 ಓವರ್‌ನಲ್ಲಿ ಲಖನೌ ಗೆಲುವಿಗೆ 32 ರನ್ ಬೇಕಿತ್ತು. 19ನೇ ಓವರ್ ಎಸೆದ ಪತಿರಾಣ 15 ರನ್ ನೀಡಿದರು.

ಕೊನೆಯ ಓವರ್‌ನಲ್ಲಿ 17 ರನ್ ಬೇಕಿತ್ತು. ಈ ವೇಳೆ ಮುಸ್ತಫಿಜುರ್ ಬೌಲಿಂಗ್ ಮಾಡಿದರು. ಒಂದು ನೋಬಾಲ್ ಸೇರಿದಂತೆ ನಾಲ್ಕು ಎಸೆತದಲ್ಲಿ ಒಂದು ಸಿಕ್ಸರ್, ನಾಲ್ಕು ಬೌಂಡರಿ ಬಾರಿಸುವ ಮೂಲಕ ಮಾರ್ಕಸ್ ಸ್ಟೋಯಿನಸ್ ಅವರು ಅಮೋಘ ಶತಕದೊಂದಿಗೆ ಲಖನೌ ತಂಡವನ್ನು ಗೆಲುವಿನ ದಡ ಸೇರಿಸಿದರು. ಆದ್ರಿಲ್ಲಿ ಸಿಎಸ್​​ಕೆ ಸೋಲಿಗೆ ಧೋನಿ ಮಾಡಿದ ತಪ್ಪೇ ಕಾರಣ ಎಂಬ ಚರ್ಚೆಯೂ ನಡೀತಿದೆ. ದೀಪಕ್ ಚಹಾರ್‌ಗೆ ಬೌಲಿಂಗ್ ನೀಡದಿರುವುದು ಎಂಬುದು ಅಭಿಮಾನಿಗಳ ವಾದ. ಚಹಾರ್ ಅವರು ಕೇವಲ 2 ಓವರ್‌ಗಳಲ್ಲಿ ಕೇವಲ 11 ರನ್ ನೀಡಿ ವಿಕೆಟ್ ಸಹ ಪಡೆದಿದ್ದರು. ಅಂತಹ ಬೌಲರ್‌ಗೆ ಕೊನೆಯ ಓವರ್ ನೀಡುವ ಸೂಚನೆಯನ್ನು ಧೋನಿ ಅವರು ಗಾಯಕ್ವಾಡ್‌ಗೆ ಏಕೆ ನೀಡಲಿಲ್ಲ? ಕೊನೆಯ ಓವರ್ ಚಾಹರ್‌ಗೆ ನೀಡಿದ್ದರೆ ಫಲಿತಾಂಶ ಬೇರೆಯಾಗುತ್ತಿತ್ತು ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡ್ತಿದ್ದಾರೆ. ಹೀಗಾಗಿ ಚೆನ್ನೈ ಸೋಲಿಗೆ ಧೋನಿ ಕಾರಣ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಸದ್ಯ ಚೆನ್ನೈ ವಿರುದ್ಧ 19.3 ಓವರ್​ಗೆ 213 ರನ್​ ಗಳಿಸುವ ಮೂಲಕ 6 ವಿಕೆಟ್​​ ಗಳ ಭರ್ಜರಿ ಗೆಲುವಿನ ಮೂಲಕ ಲಕ್ನೋ ಸೂಪರ್​ ಜೈಂಟ್ಸ್​ ತಂಡವು ಪ್ಲೇಆಫ್​ ಸನಿಹಕ್ಕೆ ಹತ್ತಿರವಾಗ್ತಿದೆ. ಅಂಕಪಟ್ಟಿಯಲ್ಲಿ ಟಾಪ್-4ಕ್ಕೆ ಜಿಗಿತಗೊಂಡಿದೆ. ರಾಜಸ್ಥಾನ್ ರಾಯಲ್ಸ್ ಇದುವರೆಗೆ 8 ಪಂದ್ಯಗಳನ್ನಾಡಿದ್ದು, ಇದರಲ್ಲಿ 7 ಮ್ಯಾಚ್​ಗಳಲ್ಲಿ ಜಯ ಸಾಧಿಸಿದೆ. ಈ ಮೂಲಕ ಒಟ್ಟು 14 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. 7 ಪಂದ್ಯಗಳಲ್ಲಿ 5 ಜಯ ಸಾಧಿಸಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸೆಕೆಂಡ್ ಪ್ಲೇಸ್​ನಲ್ಲಿದೆ. ಸನ್​ರೈಸರ್ಸ್ ಹೈದರಾಬಾದ್ ತಂಡವು 7 ಪಂದ್ಯಗಳಲ್ಲಿ 5 ಜಯ ಸಾಧಿಸಿದ್ದು, 3ನೇ ಸ್ಥಾನದಲ್ಲಿದೆ.  ಇದೀಗ ಚೆನ್ನೈ ಮಣಿಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ.

Sulekha

Leave a Reply

Your email address will not be published. Required fields are marked *