ಧೋನಿ ಪ್ರಾಕ್ಟೀಸ್ ಫೋಟೋ ಹಾಕಿ ನಂಬಿಕೆ ಹುಟ್ಟಿಸಿದ್ರು– ಧೋನಿ ಹೆಸರಲ್ಲಿ CSK ಮ್ಯಾನೇಜ್ ಮೆಂಟ್ ಮೋಸ ?

ಧೋನಿ ಪ್ರಾಕ್ಟೀಸ್ ಫೋಟೋ ಹಾಕಿ ನಂಬಿಕೆ ಹುಟ್ಟಿಸಿದ್ರು– ಧೋನಿ ಹೆಸರಲ್ಲಿ CSK ಮ್ಯಾನೇಜ್ ಮೆಂಟ್ ಮೋಸ ?

ಐಪಿಎಲ್ 2026 ರಲ್ಲಿ ಎಂಎಸ್ ಧೋನಿ ಕಣಕ್ಕಿಳಿಯುತ್ತಾರೆ. ಆರಂಭಿಕ ಪಂದ್ಯಗಳಲ್ಲಿ ಅಲ್ಲ, ಮೊದಲ 7 ಪಂದ್ಯಗಳಲ್ಲಿ ಆಡಲ್ಲ, ಇನ್ನೇನು 8ನೇ ಪಂದ್ಯಕ್ಕೆ ಧೋನಿ ಆಡ್ತಾರೆ.. ಒಂದರ ಮೇಲೆ ಒಂದರಂತೆ ಪ್ರಾಕ್ಟೀಸ್ ಫೋಟೋ ಶೇರ್ ಮಾಡಿ ಧೋನಿ ಹೆಸರನ್ನು ಸರಿಯಾಗಿ ಬಳಸಿಕೊಂಡಿತ್ತು ಸಿಎಸ್‌ಕೆ ಮ್ಯಾನೇಜ್‌ಮೆಂಟ್. ಇದೀಗ ಮಾಜಿ ಕ್ರಿಕೆಟಿಗ ಕೃಷ್ಣಾಮಾಚಾರಿ ಶ್ರೀಕಾಂತ್ ಸಿಎಸ್‌ಕೆ ಮ್ಯಾನೇಜ್ ಮೆಂಟ್ ಧೋನಿ ಹೆಸರಲ್ಲಿ ಅಭಿಮಾನಿಗಳಿಗೆ ಮೋಸ ಮಾಡಿದ್ದಾರೆ ಎಂದು ನೇರವಾಗಿಯೇ ಆರೋಪಿಸಿದ್ದಾರೆ.

ಇದನ್ನೂ ಓದಿ:ಟಾಪ್-1ಗಾಗಿ ಟಾರ್ಗೆಟ್ ಬಿಟ್ಟ RCB – SMART ಅಲ್ಲ ಸೋಲಿನ SHAME

ಸಿಎಸ್‌ಕೆ ತಂಡ ಐಪಿಎಲ್‌ನಿಂದ ಹೊರಬಿದ್ದಾಗಿದೆ. ಇದರ ಬೆನ್ನಲ್ಲೇ ಸಿಎಸ್‌ಕೆ ಮ್ಯಾನೇಜ್‌ಮೆಂಟ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ ಮಾಜಿ ಕ್ರಿಕೆಟಿರ್ ಕೃಷ್ಣಾಮಾಚಾರಿ ಶ್ರೀಕಾಂತ್ . ಧೋನಿ ಹೆಸರನ್ನು ಸಿಎಸ್‌ಕೆ ಅಭಿಮಾನಿಗಳಿಗೆ ಮೋಸ ಮಾಡಲು ಬಳಸಲಾಗಿದೆ ಎಂದು ಹೇಳಿದ್ದಾರೆ. ಕೃಷ್ಣಮಾಚಾರಿ ಶ್ರೀಕಾಂತ್ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಸಿಎಸ್‌ಕೆ ಬಗ್ಗೆ ಈ ಆರೋಪ ಮಾಡಿದ್ದಾರೆ.

ಸಿಎಸ್‌ಕೆ ಮ್ಯಾನೇಜ್ಮೆಂಟ್ ಧೋನಿ ತಂಡಕ್ಕೆ ಮರಳುವ ಬಗ್ಗೆ ನಿರಂತರವಾಗಿ ಪ್ರಚಾರ ಮಾಡುತ್ತಿತ್ತು. ಆದರೆ ಅವರು ಪಂದ್ಯ ಆಡಲು ಫಿಟ್ ಆಗಿರಲಿಲ್ಲ. ಸಿಎಸ್‌ಕೆ ಮ್ಯಾನೇಜ್ಮೆಂಟ್ ಮುಂದಿನ ಪಂದ್ಯಕ್ಕೆ ಧೋನಿ ಲಭ್ಯವಿರುತ್ತಾರೆ ಎಂದು ಅವರು ಹೇಳುತ್ತಲೇ ಇದ್ದರು. ನಂತರ ಅವರು ಧೋನಿ ನೆಟ್ಸ್‌ನಲ್ಲಿ ಅಭ್ಯಾಸ ಮಾಡುತ್ತಿರುವ ಕೆಲವು ವೀಡಿಯೊಗಳನ್ನು ಪೋಸ್ಟ್ ಮಾಡಿದರು. ನಂತರ ಧೋನಿ ಮತ್ತೆ ಗಾಯಗೊಂಡಿದ್ದಾರೆ ಎಂದು ಅವರು ಹೇಳಿಕೊಂಡರು. ಅವರು ಈ ಮೂರ್ಖತನವನ್ನು ನಿಲ್ಲಿಸಬೇಕಿತ್ತು. ಧೋನಿ ಇಡೀ ಆವೃತ್ತಿಯಲ್ಲಿ ಆಡುವುದಿಲ್ಲ ಎಂದು ಅವರು ನೇರವಾಗಿ ಹೇಳಬೇಕಿತ್ತು. ನೀವು ಹಾಗೆ ಹೇಳಿದ್ದರೆ, ಅಭಿಮಾನಿಗಳು ಮಾನಸಿಕವಾಗಿ ಸಿದ್ಧರಾಗಿರುತ್ತಿದ್ದರು” ಎಂದು ಕೃಷ್ಣಮಾಚಾರಿ ಶ್ರೀಕಾಂತ್ ಕಿಡಿಕಾರಿದ್ದಾರೆ. ಟೀಮ್ ಮ್ಯಾನೇಜ್ಮೆಂಟ್ ಮತ್ತು ನಾಯಕ ಈ ವಿಷಯದಲ್ಲಿ ಸ್ಪಷ್ಟವಾಗಿರಬೇಕು. ಧೋನಿ ಇಡೀ ಆವೃತ್ತಿಯಲ್ಲಿ ಆಡುವುದಿಲ್ಲ ಎಂದು ಹೇಳಿದ್ದರೆ, ಅಭಿಮಾನಿಗಳು ಅದನ್ನು ಒಪ್ಪಿಕೊಂಡು ಮುಂದುವರಿಯುತ್ತಿದ್ದರು. ಧೋನಿಯ ಸಮಯ ಮುಗಿದಿದೆ ಎಂದು ಕೃಷ್ಣಮಾಚಾರಿ ಶ್ರೀಕಾಂತ್ ಹೇಳಿಕೆ ನೀಡಿದ್ದಾರೆ. ಇನ್ನು ಧೋನಿ ಕೂಡಾ ಒಂದೇ ಒಂದು ಪಂದ್ಯವನ್ನಾಡದೇ,  ಚೆನ್ನೈ ತವರು ಚೆಪಾಕ್ ಮೈದಾನದಲ್ಲಿ ಅಭಿಮಾನಿಗಳ ಮುಂದೆ ಕಾಣಿಸಿಕೊಂಡಿದ್ದರು. ಈ ಮೂಲಕ ಧೋನಿ ಅಭಿಮಾನಿಗಳಿಗೆ ವಿದಾಯ ಹೇಳಿರಬಹುದು ಎಂದು ಹೇಳಲಾಗ್ತಿದೆ.

Sulekha

Leave a Reply

Your email address will not be published. Required fields are marked *