HITಮ್ಯಾನ್ ಸೈಡ್ ಗಿಟ್ಟು ಕೆಟ್ಟ MI – 5 ಕಪ್ ಗಿಂತ ಬ್ಯುಸಿನೆಸ್ ಮುಖ್ಯನಾ?
RCB & CSK ಫ್ರಾಂಚೈಸಿಗಳೇ ಗ್ರೇಟ್!

2026ರ ಸೀಸನ್ನಲ್ಲಿ 10 ಪಂದ್ಯಗಳನ್ನ ಆಡಿರೋ ಮುಂಬೈ ಇಂಡಿಯನ್ಸ್ ಕೇವಲ 3 ಪಂದ್ಯಗಳನ್ನ ಮಾತ್ರ ಗೆದ್ದಿದೆ. ಉಳಿದಿದ್ದು ಇನ್ನು ನಾಲ್ಕು ಪಂದ್ಯಗಳು ಮಾತ್ರ. ಮುಂದಿನ ಎಲ್ಲಾ ಮ್ಯಾಚಸ್ ಗೆದ್ರೂ ಪ್ಲೇಆಫ್ಗೆ ಹೋಗ್ತಾರೆ ಅನ್ನೋ ನಂಬಿಕೆ ಇಲ್ಲ.
ಇದನ್ನೂ ಓದಿ : ರಾಜಸ್ಥಾನ & ಗುಜರಾತ್ ನಡುವೆ ಇಂದು ಹೈವೋಲ್ಟೇಜ್ ಫೈಟ್ – ಜೈಪುರದಲ್ಲಿ ಗೆದ್ದವರಿಗೆ ಟಾಪ್-2 ಸ್ಥಾನ ಫಿಕ್ಸ್!
ಮುಂಬೈ ಇಂಡಿಯನ್ಸ್.. ಐಪಿಎಲ್ನಲ್ಲಿ 5 ಬಾರಿ ಚಾಂಪಿಯನ್ ಪಟ್ಟಕ್ಕೇರಿದ ಮೊದಲ ತಂಡ. ಌಂಡ್ ಐದೂ ಕಪ್ಗಳನ್ನ ಗೆಲ್ಲಿಸಿಕೊಟ್ಟ ಯಶಸ್ವೀ ನಾಯಕ ಹಿಟ್ಮ್ಯಾನ್ ರೋಹಿತ್ ಶರ್ಮಾ. ಟೀಂ ಇಂಡಿಯಾಗೆ ಎರಡು ಐಸಿಸಿ ಟ್ರೋಫಿ ಗೆಲ್ಲಿಸಿಕೊಟ್ಟ ರೋಹಿತ್ ಶರ್ಮಾ ಮುಂಬೈ ತಂಡದ ಅಭಿಮಾನಿಗಳ ಪಾಲಿಗೂ ಹೀರೋ. ಆರ್ಸಿಬಿಯಲ್ಲಿ ವಿರಾಟ್ ಕೊಹ್ಲಿ, ಸಿಎಸ್ಕೆಯಲ್ಲಿ ಎಂಸ್ ಧೋನಿ ಹೇಗೋ ಮುಂಬೈನಲ್ಲಿ ರೋಹಿತ್ ಹಾಗೇ. ಆದ್ರೆ ರೋಹಿತ್ರನ್ನ ಸೈಡ್ಲೈನ್ ಮಾಡಿ ಹಾರ್ದಿಕ್ ಪಾಂಡ್ಯ ಅನ್ನೋ ಹೊಸ ಹೀರೋ ಹುಟ್ಟುಹಾಕಲು ಹೊರಟಿದ್ದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಈಗ ಸೋಲಿನ ಸುಳಿಯಲ್ಲಿ ಬಿದ್ದು ಒದ್ದಾಡ್ತಿದೆ. ಸಾಲು ಸಾಲು ಸೋಲು ಹೊಸ ನಾಯಕನ ಚರ್ಚೆಯನ್ನ ಹುಟ್ಟು ಹಾಕಿದೆ.
ರೋಹಿತ್ ಶರ್ಮಾರನ್ನ ಪಟ್ಟದಿಂದ ಇಳಿಸಿ ಕೆಟ್ಟ ಫ್ರಾಂಚೈಸಿ!
2024ರ ಐಪಿಎಲ್ಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡದಲ್ಲಿ ರೋಹಿತ್ ಶರ್ಮಾರನ್ನ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ಪಟ್ಟ ಕಟ್ಟಲಾಗಿತ್ತು. ಫ್ರಾಂಚೈಸಿಯೇ ಈ ನಿರ್ಧಾರ ಮಾಡಿತ್ತು. ರೋಹಿತ್ರಿಂದ ನಾಯಕತ್ವ ಕಸಿದಿದ್ದು ಅಭಿಮಾನಿಗಳಿಗೆ ದೊಡ್ಡ ಶಾಕ್ ಕೊಟ್ಟಿತ್ತು. ಌಂಡ್ ಫ್ರಾಂಚೈಸಿ ವಿರುದ್ಧವೇ ತಿರುಗಿ ಬಿದ್ದಿದ್ರು. ಆದ್ರೆ ಇದ್ಯಾವುದಕ್ಕೂ ಕ್ಯಾರೇ ಎನ್ನದ ಮಾಲೀಕರು ಮತ್ತೆ ಪಾಂಡ್ಯರನ್ನೇ ಕಂಟಿನ್ಯೂ ಮಾಡಿದ್ರು. ಆದ್ರೆ ಪಾಂಡ್ಯ ಕ್ಯಾಪ್ಟನ್ಸಿಯಲ್ಲಿ 2024ರ ಸೀಸನ್ನಲ್ಲಿ 14 ಪಂದ್ಯಗಳ ಪೈಕಿ ಕೇವಲ 4ರಲ್ಲಿ ಗೆದ್ದು 10ನೇ ಸ್ಥಾನದಲ್ಲಿ ಸೀಸನ್ ಮುಗಿಸಿದ್ರು. 2025ರಲ್ಲಿ ಬೆಟರ್ ಅನ್ಸಿ ಪ್ಲೇ ಆಫ್ಗೆ ಬಂದ್ರೂ ಕ್ವಾಲಿಫೈಯರ್ 2ನಲ್ಲಿ ಸೋತು ಸೀಸನ್ ಮುಗಿಸಿದ್ರು. ಆದ್ರೆ ಈ ಸೀಸನ್ನಲ್ಲಿ ಮತ್ತದೇ ಸ್ಟ್ರಗಲ್. ಕ್ಯಾಪ್ಟನ್ಸಿ ಕಾಂಟ್ರವರ್ಸಿಯಾಗಿದೆ. ಈ ಸೀಸನ್ನಲ್ಲಿ 10 ಪಂದ್ಯಗಳನ್ನ ಆಡಿ 3ರಲ್ಲಿ ಮಾತ್ರ ಗೆದ್ದಿದ್ದಾರೆ. ಪ್ಲೇ ಆಫ್ ಚಾನ್ಸ್ ಅಂತೂ ಮಿಸ್ ಆಗೋದು ಪಕ್ಕಾ ಎನ್ನುವಂತೆಯೇ ಇದೆ. ಅಷ್ಟಕ್ಕೂ ಇಲ್ಲಿ ಎಂಐ ತಂಡ ಸೋಲುತ್ತೋ ಗೆಲ್ಲುತ್ತೋ ಮ್ಯಾಟ್ರ್ ಅಲ್ಲ. ಬಟ್ ರೋಹಿತ್ ಶರ್ಮಾರನ್ನ ನಡೆಸಿಕೊಳ್ತಿರೋ ರೀತಿಯೇ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಯಾಕೆ ಅನ್ನೋದನ್ನ ಹೇಳ್ತಾ ಹೋಗ್ತೇನೆ ನೋಡಿ.
ಮುಂಬೈ ಮಹಾರಾಜ ರೋಹಿತ್!
ರೋಹಿತ್ ಗೆ ಹೆಚ್ಚು ಫ್ಯಾನ್ಸ್ ಬೇಸ್.. ರೋಹಿತ್ ಪರ ಘೋಷಣೆ
ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಆಗಿ 5 ಬಾರಿ ಟ್ರೋಫಿ ಗೆಲುವು
ಏಕಾಏಕಿ ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿ ಅವಮಾನ ಮಾಡಿದ ಸಿಟ್ಟು
ಕೊಹ್ಲಿ ನಾಯಕನಾಗಿ ಕಪ್ ಗೆಲ್ಲದೇ ತಾನೇ ಕ್ಯಾಪ್ಟನ್ಸಿ ಬಿಟ್ಟುಕೊಟ್ರು
ಪ್ರತೀ ಸೀಸನ್ ನಲ್ಲೂ ಕೊಹ್ಲಿಯನ್ನೇ ಹೊತ್ತು ಮೆರೆಸೋ ಫ್ರಾಂಚೈಸಿ
ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಧೋನಿಗೆ ಫ್ರಾಂಚೈಸಿ ವಿಶೇಷ ಗೌರವ
ಮುಂಬೈ ತಂಡದಲ್ಲಿ ರೋಹಿತ್ ರನ್ನ ಬ್ಯುಸಿನೆಸ್ ಮೈಂಡ್ ನಲ್ಲಿ ಟ್ರೀಟ್
ಪಾಂಡ್ಯ ನಾಯಕತ್ವದಡಿ ತಂಡದಲ್ಲಿ ಗ್ರೂಪ್ ಗಳಾದ್ರೂ ಡೋಂಟ್ ಕೇರ್
ಐಪಿಎಲ್ನಲ್ಲಿ ಟ್ರೋಫಿ, ಹಣ ಅನ್ನೋದ್ರ ಜೊತೆಗೆ ಫ್ಯಾನ್ಸ್ ಎಮೋಷನ್ಸ್ಗೂ ಬೆಲೆ ಕೊಡ್ಬೇಕಾಗುತ್ತೆ. ಈಗ ಆರ್ಸಿಬಿಯನ್ನೇ ತಗೊಳ್ಳಿ. 17 ವರ್ಷ ಕಪ್ ಗೆಲ್ಲದೇ ಇದ್ರೂ ಅಂದು ಇಂದು ಮುಂದೆ ಎಂದೆಂದೂ ವಿರಾಟ್ ಕೊಹ್ಲಿಯೇ ರಾಜ. ಫ್ಯಾನ್ಸ್ ಆಗ್ಲಿ ಫ್ರಾಂಚೈಸಿಯಾಗ್ಲಿ ಅವ್ರನ್ನ ನಂಬರ್ 1 ಪೊಸೀಷನ್ನಲ್ಲೇ ಇಟ್ಟಿದೆ. ಸಿಎಸ್ಕೆ ಪಾಲಿಗೂ ಕೂಡ ಧೋನಿಯೇ ಜೀವಾಳ. ಆದ್ರೆ ಮುಂಬೈ ಇಂಡಿಯನ್ಸ್ ಮಾತ್ರ ರೋಹಿತ್ರನ್ನ ಒಬ್ಬ ಎಂಪ್ಲಾಯ್ನಂತೆ ನಡೆಸಿಕೊಂಡಿದೆ. ಐದು ಕಪ್ಗಳು ಲೆಕ್ಕಕ್ಕಿಲ್ಲ ಅನ್ನೋ ಥರ ವರ್ತಿಸಿದ್ರು. ಯೂಸ್ ಌಂಡ್ ಥ್ರೋ ಥರ ಬಳಸಿಕೊಳ್ತಿದ್ದಾರೆ. ಈಗಲೂ ಅಷ್ಟೇ ಇಂಪ್ಯಾಕ್ಟ್ ಪ್ಳೇಯರ್ ಆಗಿಯೇ ಬಳಸಿಕೊಳ್ತಿದ್ದಾರೆ.ಹೀಗೆ ರೋಹಿತ್ರನ್ನ ನೋಡೋದು ಅಭಿಮಾನಿಗಳಿಗೂ ಕಷ್ಟವಾಗ್ತಿದೆ. ಒಂದ್ಕಡೆ ಪಾಂಡ್ಯ ಕ್ಯಾಪ್ಟನ್ಸಿಯಲ್ಲಿ ತಂಡ ಗೆಲ್ತಿಲ್ಲ.. ಅತ್ತ ರೋಹಿತ್ ಬಗ್ಗೆ ನಿರ್ಲಕ್ಷ್ಯ. ಇದೇ ಕಾರಣಕ್ಕೆ ಕ್ಯಾಪ್ಟನ್ಸಿ ಬದಲಾವಣೆ ಕೂಗು ಪದೇ ಪದೆ ಎದ್ದೇಳ್ತಾನೇ ಇದೆ. ಸದ್ಯಕ್ಕಿರೋ ಮಾಹಿತಿ ಪ್ರಕಾರ ಈ ಸೀಸನ್ ಅಂತೂ ಯಾವುದೇ ಕಾರಣಕ್ಕೂ ಕ್ಯಾಪ್ಟನ್ಸಿ ಬದಲಾವಣೆ ಮಾಡಲ್ಲ. ಫ್ರಾಂಚೈಸಿ ಮಾಲೀಕರು ಕೂಡ ಇದನ್ನೇ ಹೇಳಿದ್ದಾರೆ. ಹಾಗೇನಾದ್ರೂ ಮಾಡ್ಬೇಕು ಅಂದ್ರೆ ಚಾಯ್ಸ್ ಅಂತೂ ಇವೆ. ಶಾರ್ಟ್ ಟರ್ಮ್ ಬೇಕಂದ್ರೆ ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ ಇದ್ದಾರೆ. ಲಾಂಗ್ ಟರ್ಮ್ ಕ್ಯಾಪ್ಟನ್ಸಿ ಅಂದ್ರೆ ತಿಲಕ್ ವರ್ಮಾ ಇದ್ದಾರೆ. ಬಟ್ ಯಾರನ್ನೇ ಪಟ್ಟಕ್ಕೇರಿಸಿದ್ರೂ ರೋಹಿತ್ ಶರ್ಮಾ ಇನ್ಮುಂದೆ ಮುಂಬೈನಲ್ಲಿ ನಾಯಕನಾಗೋದು ಕನಸಿನ ಮಾತು. ಅಟ್ಲಿಸ್ಟ್ ಅವ್ರು ಆಡೋವರೆಗಾದ್ರೂ ಅವ್ರನ್ನೇ ಕಂಟಿನ್ಯೂ ಮಾಡಬಹುದಿತ್ತು. ಹಾಗಂತ ಇಲ್ಲಿ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ಸಿ ಬಗ್ಗೆಯಾಗ್ಲಿ ಅವ್ರ ಆಟದ ಬಗ್ಗೆಯಾಗ್ಲಿ ನಮ್ಮ ಯಾವ ತಕರಾರೂ ಇಲ್ಲ. ಪಾಂಡ್ಯ ನಿಜಕ್ಕೂ ಅದ್ಭುತ ಆಲ್ರೌಂಡರ್. ಆದ್ರೆ ಫ್ರಾಂಚೈಸಿ ರೋಹಿತ್ ಶರ್ಮಾರನ್ನ ನಡೆಸಿಕೊಂಡ ರೀತಿಯಷ್ಟೇ ಅಭಿಮಾನಿಗಳ ಸಿಟ್ಟಿಗೆ ಕಾರಣ.

ನೋಡಿರಿ

