ರಕ್ತವಾಂತಿಯೇ ಧ್ರುವನಾರಾಯಣ್ ಸಾವಿಗೆ ಕಾರಣವಾಯ್ತಾ..?- ವೈದ್ಯರು ಹೇಳಿದ ಸತ್ಯವೇನು..?

ರಕ್ತವಾಂತಿಯೇ ಧ್ರುವನಾರಾಯಣ್ ಸಾವಿಗೆ ಕಾರಣವಾಯ್ತಾ..?- ವೈದ್ಯರು ಹೇಳಿದ ಸತ್ಯವೇನು..?

ದಲಿತ ಮುಖಂಡನಾಗಿ ಹಳೇ ಮೈಸೂರು ಭಾಗದ ಪ್ರಭಾವಿ ನಾಯಕನಾಗಿ ಗುರುತಿಸಿಕೊಂಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಇಂದು ವಿಧಿವಶರಾಗಿದ್ದಾರೆ.. ಮೈಸೂರಿನ ವಿಜಯನಗರದ ತಮ್ಮ ನಿವಾಸದಲ್ಲಿದ್ದ ಧ್ರುವನಾರಾಯಣ್​ಗೆ ಹೃದಯಘಾತವಾಗಿದ್ದು ಬಳಿಕ ರಕ್ತವಾಂತಿಯಿಂದ ಮೃತಪಟ್ಟಿದ್ದಾರೆ..

ಮೈಸೂರಿನ ಅಪೋಲೋ ಆಸ್ಪತ್ರೆಯ ವೈದ್ಯ ಮಂಜುನಾಥ್ ಮಾತನಾಡಿದ್ದು, ಧ್ರುವನಾರಾಯಣ್ ಆಸ್ಪತ್ರೆಗೆ ಆಗಮಿಸುವ ಮೊದಲೇ ಕೋಮಾ ಸ್ಥಿತಿಗೆ ತಲುಪಿದ್ದರು. ಹೃದಯಾಘಾತವಾದಾಗ ರಕ್ತವಾಂತಿಯಾಗಿದ್ದು, ಈ ಸಂದರ್ಭದಲ್ಲಿ ದೀರ್ಘವಾಗಿ ಉಸಿರು ಎಳೆದುಕೊಂಡಿದ್ದಾರೆ. ಆಗ ರಕ್ತವು ಶ್ವಾಸಕೋಶದೊಳಕ್ಕೆ ನುಗ್ಗಿದೆ. ಇದ್ರಿಂದ ಉಸಿರಾಟ ಕಷ್ಟವಾಗಿ ಅದೇ ಅವರ ಸಾವಿಗೆ ಕಾರಣವಾಗಿದೆ ಎಂದು ಡಾ. ಮಂಜುನಾಥ್ ತಿಳಿಸಿದ್ದಾರೆ.

ಇದನ್ನೂ ಓದಿ:  ಚುನಾವಣೆ ಹೊಸ್ತಿಲಿನಲ್ಲೇ ‘ಕೈ’ ಗೆ ಮಹಾಘಾತ – ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ವಿಧಿವಶ!

ಹೃದಯಾಘಾತವಾಗಿ ಕೆಲವೇ ನಿಮಿಷಗಳಲ್ಲಿ ಅವರು ಆಸ್ಪತ್ರೆಗೆ ಬಂದಿದ್ದರೆ ಉಳಿಸಿಕೊಳ್ಳಬಹುದಾಗಿತ್ತು. ಆದ್ರೆ ಕಾರಿನಲ್ಲಿ ಬರುವಾಗಲೇ ರಕ್ತವಾಂತಿಯಾಗಿದ್ದು, ಹೆಚ್ಚಿನ ಪ್ರಮಾಣದ ರಕ್ತ ದೇಹದಿಂದ ಆಚೆ ಹೋದಾಗ ಸಾಮಾನ್ಯವಾಗಿ ಅದು ಮಾರಣಾಂತಿಕವಾಗಿರುತ್ತದೆ. ಹೀಗಾಗಿ ಆಸ್ಪತ್ರೆಗೆ ಬರುವಾಗಲೇ ಅವರು ಸಾವನ್ನಪ್ಪಿದ್ದರು. ತಕ್ಷಣವೇ ನಾವು ಚಿಕಿತ್ಸೆಗೆ ಒಳಪಡಿಸಿದಾಗ, ಅವರ ಹೃದಯವು ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದಿದ್ದಾರೆ.

 

suddiyaana