ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಮಗಳನ್ನೇ ರೇ*ಪ್ ಮಾಡಿ ಕೊಲೆಗೈದ ಕಟುಕರು

ದೆಹಲಿಯ ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ 22 ವರ್ಷದ ಮಗಳನ್ನು ಅವರ ಮನೆಯಲ್ಲಿಯೇ ಬರ್ಬರವಾಗಿ ಕೊಲೆ ಮಾಡಲಾಗಿದೆ. ಇಂದು ಬೆಳಿಗ್ಗೆ ದೆಹಲಿಯ ಅಮರ್ ಕಾಲೋನಿ ಪ್ರದೇಶದ ತನ್ನ ಮನೆಯಲ್ಲಿ ಆ ಯುವತಿ ಶವವಾಗಿ ಪತ್ತೆಯಾಗಿದ್ದಾಳೆ. ಈ ವೇಳೆ ಐಆರ್ಎಸ್ ಅಧಿಕಾರಿ ಇದು ಪೊಲೀಸ್ ತನಿಖೆಗೆ ಕಾರಣವಾಗಿದೆ. ಪ್ರಾಥಮಿಕ ತನಿಖೆಗಳು ಪ್ರಕಾರ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಮೊಬೈಲ್ ಫೋನ್ ಚಾರ್ಜಿಂಗ್ ಕೇಬಲ್ ಬಳಸಿ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ.
ಪೊಲೀಸರ ಪ್ರಕಾರ, ಘಟನೆ ನಡೆದಾಗ ಆ ಯುವತಿ ಮನೆಯಲ್ಲಿ ಒಬ್ಬಳೇ ಇದ್ದಳು. ಆಕೆಯ ಪೋಷಕರು ಜಿಮ್ಗೆ ಹೋಗಿದ್ದರು. ತನಿಖಾಧಿಕಾರಿಗಳು ಸುಮಾರು 6 ವಾರಗಳ ಹಿಂದೆ ಕೆಲಸದಿಂದ ತೆಗೆದುಹಾಕಲಾಗಿದ್ದ ಮಾಜಿ ಕೆಲಸಗಾರ ಈ ಕೃತ್ಯ ಎಸಗಿರುವ ಸಾಧ್ಯತೆಯಿದೆ ಎಂದು ಶಂಕಿಸಿದ್ದಾರೆ.
ಇದನ್ನೂ ಓದಿ: ಪ್ರಾಕ್ಟೀಸ್ ವೇಳೆಯಲ್ಲೇ ಸಿಗರೇಟ್ ಸೈದ ಕಗಿಸೋ ರಬಾಡ – ವಿಡಿಯೋ ವೈರಲ್, ಮುಂದಿನ ಕ್ರಮವೇನು?
ಆಗ್ನೇಯ ದೆಹಲಿಯ ಐಷಾರಾಮಿ ಪ್ರದೇಶವಾದ ಅಮರ್ ಕಾಲೋನಿಯಲ್ಲಿ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯು ರಾಜಧಾನಿ ದೆಹಲಿಯ ಭದ್ರತಾ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮೃತ ಯುವತಿ 1997ರ ಬ್ಯಾಚ್ನ ಹಿರಿಯ ಐಆಅರ್ಎಸ್ ಅಧಿಕಾರಿಯ ಮಗಳು. ಎಂಜಿನಿಯರಿಂಗ್ ಓದಿದ್ದ ಆಕೆ ಅಪ್ಪನಂತೆ ಆಫೀಸರ್ ಆಗಬೇಕೆಂಬ ಆಸೆಯಿಂದ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ಐಆರ್ಎಸ್ ಅಧಿಕಾರಿಯಾಗಿದ್ದರಿಂದ ಅವರ ಮನೆಗೆ ಭದ್ರತೆಯಿತ್ತು. ಆದರೂ ಆಕೆಯ ಮನೆಯೊಳಗೇ ನಡೆದಿರುವ ಈ ಅತ್ಯಾಚಾರ ಮತ್ತು ಕೊಲೆ ದೆಹಲಿಯನ್ನು ಬೆಚ್ಚಿಬೀಳಿಸಿದೆ.
ಕೊಲೆಗಾರ ಆ ಯುವತಿಗೆ ಚೇತರಿಸಿಕೊಳ್ಳಲು ಅವಕಾಶವನ್ನೇ ನೀಡಲಿಲ್ಲ ಎಂಬ ಅಂಶದಿಂದಲೇ ಅಪರಾಧದ ಕ್ರೌರ್ಯ ಎಷ್ಟಿತ್ತು ಎಂಬುದನ್ನು ಊಹಿಸಬಹುದು. ಪ್ರಾಥಮಿಕ ಪೊಲೀಸ್ ತನಿಖೆಯ ಪ್ರಕಾರ, ಕೊಲೆಯಾಗುವ ಮೊದಲು ಆಕೆಯ ಮೇಲೆ ಅತ್ಯಾಚಾರ ನಡೆದಿರುವ ಸಾಧ್ಯತೆ ಹೆಚ್ಚಾಗಿದೆ. ನಂತರ ಕೊಲೆಗಾರ ಮೊಬೈಲ್ ಫೋನ್ ಚಾರ್ಜರ್ ವೈರ್ನಿಂದ ಆಕೆಯ ಕುತ್ತಿಗೆ ಹಿಸುಕಿ ಕೊಂದಿದ್ದಾನೆ.
ಪ್ರಾಥಮಿಕ ತನಿಖೆಯಲ್ಲಿ ರಾಜಸ್ಥಾನದ ನಿವಾಸಿ ರಾಹುಲ್ ಎಂಬ ಮಾಜಿ ಕೆಲಸದಾಳು ಮೇಲೆ ಶಂಕೆ ವ್ಯಕ್ತವಾಗಿದೆ. ಸುಮಾರು 2 ತಿಂಗಳ ಹಿಂದೆ ಆತನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಪೊಲೀಸರು ತನಿಖೆ ಆರಂಭಿಸಿ ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ರಾಹುಲ್ ಬೆಳಿಗ್ಗೆ 6ರ ಸುಮಾರಿಗೆ ಸಿಸಿಟಿವಿಯಲ್ಲಿ ಕಾಣಿಸಿಕೊಂಡಿದ್ದ. ರಾಹುಲ್ 8 ತಿಂಗಳಿನಿಂದ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಸುಮಾರು 2 ತಿಂಗಳ ಹಿಂದೆ ಆತನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು.

ನೋಡಿರಿ

