ಅಂದು ಗವಾಸ್ಕರ್.. ಇಂದು ಪಠಾಣ್ – ಆಟಗಾರರ ವೈಯಕ್ತಿಕ ನಿಂದನೆ ಸರಿನಾ?

ಅಂದು ಗವಾಸ್ಕರ್.. ಇಂದು ಪಠಾಣ್ – ಆಟಗಾರರ ವೈಯಕ್ತಿಕ ನಿಂದನೆ ಸರಿನಾ?

ಯಾವುದೇ ಲೈವ್ ಮ್ಯಾಚ್ ನಡೀವಾಗ ನೋಡುಗರಿಗೆ ಖುಷಿ ಕೊಡೋದೇ ಕಾಮೆಂಟೇಟರ್ಸ್. ಬ್ಯಾಟರ್ಸ್  ಸಿಕ್ಸ್, ಫೋರ್ ಹೋಡೆದಾಗ, ಬೌಲರ್ಸ್ ವಿಕೆಟ್ ಕಿತ್ತಾಗ ಕಾಮೆಂಟ್ರಿ ಕೇಳೋದೇ ಚೆಂದ. ಅದೆಲ್ಲಕ್ಕಿಂತ ಹೆಚ್ಚಾಗಿ ಮ್ಯಾಚ್ ಟೈಮಲ್ಲಿ ಕ್ರಿಕೆಟ್ ಬಗೆಗಿನ ಕೆಲ ಇಂಟ್ರೆಸ್ಟಿಂಗ್ ವಿಚಾರಗಳನ್ನ ಹೇಳ್ತಾರೆ. ಪಂದ್ಯದ ಬಗ್ಗೆ ಪ್ರೆಡೆಕ್ಟ್ ಮಾಡ್ತಿರ್ತಾರೆ. ಸೋ ಟೋಟಲಿ ನೋಡುಗರಿಗೆ ಮ್ಯಾಚ್ ಬಗೆಗಿನ ಥ್ರಿಲ್ ಹೆಚ್ಚಿಸೋದೇ ಕ್ರಿಕೆಟ್ ವಿಶ್ಲೇಷಕರು. ಹೀಗೆ ಕ್ರಿಕೆಟ್​​ನಿಂದ ನಿವೃತ್ತಿಯಾದ ಅದೆಷ್ಟೋ ಆಟಗಾರರು ಕಾಮೆಂಟ್ರಿ ಮೂಲಕ ಮತ್ತೆ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಆದ್ರೆ ಅದೇ ಕಾಮೆಂಟ್ರಿ ಇರ್ಫಾನ್ ಪಠಾಣ್ ಪಾಲಿಗೆ ಕಂಟಕವಾಗಿದೆ.

ಇದನ್ನೂ ಓದಿ : RCB ಟಿಕೆಟ್ ಇಷ್ಟೊಂದು ಕಾಸ್ಟ್ಲಿ – ಫ್ಯಾನ್ಸ್ ನಿಷ್ಠೆಯೇ ಬಂಡವಾಳವಾಯ್ತಾ?

ಇರ್ಫಾನ್ ಪಠಾಣ್ ಟೀಂ ಇಂಡಿಯಾ ಮಾಜಿ ಆಟಗಾರ. ಕ್ರಿಕೆಟ್​ನಿಂದ ನಿವೃತ್ತರಾದ ಬಳಿಕ ಟೀಂ ಇಂಡಿಯಾದ ಕಾಮೆಂಟ್ರಿ ಪ್ಯಾನಲ್​ನಲ್ಲಿದ್ರು. ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್‌ನ 18 ನೇ ಸೀಸನ್‌ಗೆ ಕ್ರಿಕೆಟ್‌ ವಿಶ್ಲೇಷಕರ ಪಟ್ಟಿ ರಿಲೀಸ್ ಆಗಿದ್ದು ಎಲ್ಲರಿಗೂ ಅಚ್ಚರಿ ಮೂಚಿಸಿದೆ. ಕ್ರಿಕೆಟ್‌ ವಿಶ್ಲೇಷಕರಾಗಿ ಹೆಸರು ಮಾಡಿರುವ ಎಲ್ಲರ ಹೆಸರೂ ಕೂಡ ಅಂದಾಜು ಎರಡೂವರೆ ತಿಂಗಳು ಕಾಲ ನಡೆಯಲಿರುವ ವಿಶ್ವದ ಶ್ರೀಮಂತ ಟಿ20 ಲೀಗ್‌ನ ಪ್ಯಾನೆಲ್‌ನಲ್ಲಿದೆ. ಅದರೆ, ಅನುಭವಿ ವೇಗದ ಬೌಲರ್ ಇರ್ಫಾನ್ ಪಠಾಣ್ ಅವರ ಹೆಸರು ಎಲ್ಲಿಯೂ ಕಂಡಿಲ್ಲ. ಹಿಂದಿ, ಇಂಗ್ಲೀಷ್‌ ಯಾವ ಭಾಷೆಯ ಕಾಮೆಂಟರಿ ಟೀಮ್‌ನಲ್ಲೂ ಅವರ ಹೆಸರಿಲ್ಲ. ಸಾಮಾನ್ಯವಾಗಿ ಹಿಂದಿ ಕಾಮೆಂಟರಿ ಟೀಮ್‌ನಲ್ಲಿ ಇರ್ಫಾನ್‌ ಪಠಾಣ್‌ ಇರುತ್ತಿದ್ದರು. ಆದರೆ, ಈ ಬಾರಿ ಹಿಂದಿ ಕಾಮೆಂಟರಿ ಪ್ಯಾನೆಲ್‌ನಲ್ಲಿ ಪ್ರತಿ ಬಾರಿಯೂ ಇರುವ ಎಲ್ಲಾ ಹೆಸರುಗಳಿದ್ದವು, ಇರ್ಫಾನ್ ಅವರ ಹೆಸರನ್ನು ಮಾತ್ರವೇ ಕೈಬಿಡಲಾಗಿದೆ.

ಬಾರ್ಡರ್ ಗವಾಸ್ಕರ್ ಟ್ರೋಫಿ ವೇಳೆ ಇರ್ಫಾನ್ ಪಠಾಣ್ ಆಡಿದ ಮಾತುಗಳೇ ಮುಳುವಾಗಿವೆ.  ಕಳೆದ ಎರಡು ವರ್ಷಗಳಿಂದ ಅವರು ಕೆಲವು ಆಟಗಾರರ ವಿರುದ್ಧ ತಮ್ಮ ವೈಯಕ್ತಿಕ ಕಾಮೆಂಟ್‌ಗಳನ್ನು ವೀಕ್ಷಕ ವಿವರಣೆ ಸಂದರ್ಭದಲ್ಲಿ ಹಂಚಿಕೊಳ್ಳುತ್ತಿದ್ದರು. ಇದರಿಂದ ಆಟಗಾರರು ಬೇಸರಗೊಂಡಿದ್ದರು ಎನ್ನಲಾಗಿದೆ. ಅನೇಕ ಆಟಗಾರರು ಇರ್ಫಾನ್ ಉದ್ದೇಶಪೂರ್ವಕವಾಗಿ ತಮ್ಮ ಬಗ್ಗೆ ವೈಯಕ್ತಿಕ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ ಎಂದು ಬಿಸಿಸಿಐಗೆ ದೂರು ನೀಡಿದ್ದರು. ಒಬ್ಬ ಆಟಗಾರ ಪಠಾಣ್ ಅವರ ಸಂಖ್ಯೆಯನ್ನು ಕೂಡ ಬ್ಲಾಕ್‌ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಹೀಗಾಗೇ ಈ ವರ್ಷದ ಐಪಿಎಲ್​ ಕಾಮೆಂಟ್ರಿಯಿಂದ ವಜಾಗೊಳಿಸಲಾಗಿದೆ. ಇದಾದ ಬೆನ್ನಲ್ಲೇ ಇರ್ಫಾನ್ ಪಠಾಣ್ ಯೂಟ್ಯೂಬ್‌ನತ್ತ ಹೊರಟಿದ್ದಾರೆ. ಸೀದಿ ಬಾತ್ ಹೆಸರಿನಲ್ಲಿ ಹೊಸ ಯೂಟ್ಯೂಬ್ ಚಾನೆಲ್ ಆರಂಭಿಸುವುದಾಗಿ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಅಷ್ಟಕ್ಕೂ ಈ ರೀತಿಯ ಶಿಕ್ಷೆಯಿಂದ ಹೊರ ಬೀಳ್ತಿರೋದು ಇದೇ ಮೊದಲೇನು ಅಲ್ಲ. ಇದಕ್ಕೂ ಮೊದಲು, ಭಾರತೀಯ ಕ್ರಿಕೆಟಿಗರಾದ ಸಂಜಯ್ ಮಂಜ್ರೇಕರ್ ಮತ್ತು ಕ್ರಿಕೆಟ್ ಎಕ್ಸ್​ಪರ್ಟ್ ಹರ್ಷ ಭೋಗ್ಲೆ ವಿರುದ್ಧ ಇಂಥದ್ದೇ ದೂರುಗಳು ದಾಖಲಾಗಿದ್ದವು. 2020 ರಲ್ಲಿ, ಭಾರತ vs ದಕ್ಷಿಣ ಆಫ್ರಿಕಾ ಸರಣಿಯ ಮೊದಲು, ಮಂಜ್ರೇಕರ್ ಅವರನ್ನು ಬಿಸಿಸಿಐ ಕಾಮೆಂಟರಿ ತಂಡದಿಂದ ವಜಾ ಮಾಡಿತ್ತು. 2019 ರಲ್ಲಿ, ಸೌರವ್ ಗಂಗೂಲಿ ಬಗ್ಗೆ ವೈಯಕ್ತಿಕ ಟೀಕೆಗಳನ್ನು ಮಾಡಿದ್ದಕ್ಕಾಗಿ ಹರ್ಷ ಭೋಗ್ಲೆ ಶಿಕ್ಷೆಯನ್ನು ಎದುರಿಸಬೇಕಾಗಿತ್ತು. ಒಟ್ನಲ್ಲಿ ಲೈವ್ ಮ್ಯಾಚ್ ವೇಳೆ ಕೋಟ್ಯಂತರ ಅಭಿಮಾನಿಗಳು ಮ್ಯಾಚ್ ನೋಡ್ತಿರ್ತಾರೆ. ಇಂಥಾ ಟೈಮಲ್ಲಿ ಕಾಮೆಂಟೇಟರ್ಸ್ ಮಾತುಗಳ ಮೇಲೆ ನಿಗಾ ಇರಬೇಕು. ಯಾವುದೋ ಒಂದು ದೃಷ್ಟಿಕೋನದಲ್ಲಿ ನೀಡುವಂತ ಹೇಳಿಕೆ ಆಟಗಾರರ ಮನಸ್ಸಿನ ಮೇಲೆಯೂ ಪರಿಣಾಮ ಬೀರುತ್ತೆ. ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ವೇಳೆ ಸುನಿಲ್ ಗವಾಸ್ಕರ್ ಕೂಡ ರಿಷಭ್ ಪಂತ್ ಗೆ ಸ್ಟುಪಿಡ್ ಸ್ಟುಪಿಡ್ ಅಂತಾ ಕರೆದು ವಿವಾದ ಮಾಡಿಕೊಂಡಿದೆ. ಹಾಗೆ ನೋಡಿದ್ರೆ ಈ ಹಿಂದಿ, ಇಂಗ್ಲಿಂಗ್ ಕಾಮೆಂಟೇಟರ್ಸ್​ಗಿಂತ ನಮ್ಮ ಕನ್ನಡದ ವಿಶ್ಲೇಷಕರೇ ನೂರು ಪಟ್ಟು ಮೇಲು. ಅವ್ರು ಬಳಸೋ ಭಾಷೆ ಯಾವತ್ತೂ ಹಿಡಿತ ತಪ್ಪಿಲ್ಲ. ಅವ್ರ ಬಾಯಲ್ಲಿ ನಮ್ಮ ಕನ್ನಡದ ಪದಗಳನ್ನ ಕೇಳೋದೇ ಚೆಂದ.

Shantha Kumari

Leave a Reply

Your email address will not be published. Required fields are marked *