ಪ್ರವಾಸಕ್ಕೆ ಹೋಗಲು ಪ್ಲ್ಯಾನ್‌ ಮಾಡ್ತಿದ್ದೀರಾ? – IRCTCಯಿಂದ ‘ಡಿವೈನ್ ಈಸ್ಟ್ ಟೆಂಪಲ್ ಟೂರ್’ ಪ್ಯಾಕೇಜ್ ಆರಂಭ!

ಪ್ರವಾಸಕ್ಕೆ ಹೋಗಲು ಪ್ಲ್ಯಾನ್‌ ಮಾಡ್ತಿದ್ದೀರಾ? – IRCTCಯಿಂದ ‘ಡಿವೈನ್ ಈಸ್ಟ್ ಟೆಂಪಲ್ ಟೂರ್’ ಪ್ಯಾಕೇಜ್ ಆರಂಭ!

ಪ್ರವಾಸಕ್ಕೆ ತೆರಳುವವರಿಗೆ ಖುಷಿ ಸುದ್ದಿಯೊಂದಿದೆ. ಇನ್ಮುಂದೆ ಒಂದೇ ಪ್ಯಾಕೇಜ್‌ನಲ್ಲಿ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು. ಐಆರ್‌ಸಿಟಿಸಿಯು 10 ದಿನಗಳ ‘ಡಿವೈನ್ ಈಸ್ಟ್ ಟೆಂಪಲ್ ಟೂರ್’  ಅನ್ನು ಪ್ರಾರಂಭಿಸಿದ್ದು, ಪವಿತ್ರ ತೀರ್ಥಕ್ಷೇತ್ರಗಳು ಮತ್ತು ಸಾಂಸ್ಕೃತಿಕ ಹೇರಿಟೇಜ್ ತಾಣಗಳಿಗೆ ಭೇಟಿ ನೀಡಬಹುದು.

ಇದನ್ನೂ ಓದಿ: ಅಬಕಾರಿ ಇಲಾಖೆ ಹಗರಣ ಕೇಸ್!‌ – ರಾಜೀನಾಮೆ ಒತ್ತಾಯದ ಬೆನ್ನಲ್ಲೇ ದೈವದ ಮೊರೆ ಹೋದ ಸಚಿವ ತಿಮ್ಮಾಪುರ!

ಐಆರ್‌ಸಿಟಿಸಿಯು ಭಾರತದ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ತಾಣಗಳನ್ನು ಒಳಗೊಂಡ 10 ದಿನಗಳ ಡಿವೈನ್ ಈಸ್ಟ್ ಟೆಂಪಲ್ ಟೂರ್ ಅನ್ನು ಪ್ರಾರಂಭಿಸಿದೆ.  ಪ್ರತಿಷ್ಠಿತ ಭಾರತ್ ಗೌರವ್ ಡಿಲಕ್ಸ್ ಎಸಿ ಪ್ರವಾಸಿ ರೈಲಿನಲ್ಲಿ ಪ್ರಸಿದ್ದ ಕ್ಷೇತ್ರಗಳಿಗೆ ಭೇಟಿ ನೀಡಬಹುದು. ಈ ಪ್ಯಾಕೇಜ್ ಮೂಲಕ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿನ ಅತ್ಯಂತ ಪವಿತ್ರ ತೀರ್ಥಕ್ಷೇತ್ರಗಳು ಮತ್ತು ಸಾಂಸ್ಕೃತಿಕ ಹೇರಿಟೇಜ್ ತಾಣಗಳಿಗೆ ಭಕ್ತರು ಹಾಗೂ ಪ್ರವಾಸಿಗರಿಗೆ ಭೇಟಿ ನೀಡುವ ಅಪೂರ್ವ ಅವಕಾಶ ಲಭಿಸುತ್ತದೆ.

ಈ ಯಾತ್ರೆಯು ದೆಹಲಿ ಸಫ್ದರ್ಜಂಗ್ ನಿಲ್ದಾಣದಿಂದ ಆರಂಭವಾಗಿ, ವಾರಾಣಸಿ, ಕೊಲ್ಕತ್ತಾ, ಗಂಗಾಸಾಗರ, ಪುರಿ, ಭುವನೇಶ್ವರ, ಕೊನಾರ್ಕ್, ಚಿಲಿಕಾ ಮತ್ತು ಬೈದ್ಯನಾಥ ಧಾಮ (ದಿಯೋಘರ್)ವರೆಗೂ ತಲುಪಿ ಮತ್ತೆ ದೆಹಲಿಗೆ ಮರಳಲಿದೆ. 9 ರಾತ್ರಿ ಮತ್ತು 10 ದಿನಗಳ ಈ ಪ್ರವಾಸವು ಭಕ್ತರಿಗೆ ಆಧ್ಯಾತ್ಮಿಕ ಅನುಭವ ಹಾಗೂ ಸಾಂಸ್ಕೃತಿಕ ಅರಿವು ಮೂಡಿಸಲಿದೆ.

ಪ್ರವಾಸದ ಮಾರ್ಗ ಮತ್ತು ಪ್ರಮುಖ ಸ್ಥಳಗಳು

ವಾರಣಾಸಿ: ಕಾಶಿ ವಿಶ್ವನಾಥ ದೇವಸ್ಥಾನ (ಜ್ಯೋತಿರ್ಲಿಂಗ) ದರ್ಶನ ಮತ್ತು ಗಂಗಾ ಆರತಿ

ಕೋಲ್ಕತ್ತಾ: ವಿಕ್ಟೋರಿಯಾ ಮೆಮೋರಿಯಲ್, ಕಾಳಿಘಾಟ್ (ಶಕ್ತಿ ಪೀಠ) ಮತ್ತು ದಕ್ಷಿಣೇಶ್ವರ ಕಾಳಿ ಮಂದಿರ

ಗಂಗಾಸಾಗರ: ಸಾಗರ ಸಂಗಮದಲ್ಲಿ ಪವಿತ್ರ ಸ್ನಾನ ಮತ್ತು ಕಪಿಲ ಮುನಿ ಆಶ್ರಮ ಭೇಟಿ

ಒಡಿಶಾ: ಪುರಿ ಜಗನ್ನಾಥ ದೇವಾಲಯ, ಭುವನೇಶ್ವರ, ಧೌಲಿ ಶಾಂತಿ ಸ್ತೂಪ, ಉದಯಗಿರಿ-ಖಂಡಗಿರಿ ಗುಹೆಗಳು ಮತ್ತು ಕೋನಾರ್ಕ್ ಸೂರ್ಯ ದೇವಾಲಯ (ಯುನೆಸ್ಕೋ ಪರಂಪರೆಯ ತಾಣ)

ದಿಯೋಘರ್: ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ವೈದ್ಯನಾಥ ಧಾಮದ ದರ್ಶನ

ಭಾರತ್ ಗೌರವ್ ರೈಲು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಪ್ರಯಾಣಿಕರಿಗೆ ಆರಾಮದಾಯಕ ಅನುಭವ ನೀಡಲಿದೆ. ಎಸಿ I, ಎಸಿ II ಮತ್ತು ಎಸಿ III ದರ್ಜೆಯ ಕ್ಯಾಬಿನ್‌ಗಳು, ಸ್ವಚ್ಛ ಮತ್ತು ರುಚಿಕರವಾದ ಸಸ್ಯಾಹಾರ ಭೋಜನದ ವ್ಯವಸ್ಥೆ, ಪ್ರವಾಸದ ಉದ್ದಕ್ಕೂ ಮಾರ್ಗದರ್ಶನ ನೀಡಲು ವಿಶೇಷ ಟೂರ್ ಮ್ಯಾನೇಜರ್‌ಗಳು ಹಾಗೂ ಪ್ರಯಾಣಿಕರ ಸುರಕ್ಷತೆಗಾಗಿ ಸುಧಾರಿತ ಸೆಕ್ಯೂರಿಟಿ ಫೀಚರ್‌ಗಳು ಈ ರೈಲಿನಲ್ಲಿ ಸಿಗಲಿವೆ.

ದರ ಮತ್ತು ಬುಕ್ಕಿಂಗ್ ವಿವರಗಳು

AC I ಕ್ಲಾಸ್: ಒಬ್ಬರಿಗೆ ₹ 1,06,940

AC II ಕ್ಲಾಸ್: ಒಬ್ಬರಿಗೆ ₹ 98,925

AC III ಕ್ಲಾಸ್: ಒಬ್ಬರಿಗೆ ₹ 79,285

ಪ್ಯಾಕೇಜ್ನಲ್ಲಿ ಏನೇನಿದೆ?

ಈ ಪ್ಯಾಕೇಜ್ ದರದಲ್ಲಿ ಎಸಿ ರೈಲು ಪ್ರಯಾಣ, ಎಸಿ ಹೋಟೆಲ್ ವಸತಿ, ಎಲ್ಲಾ ಸಸ್ಯಾಹಾರಿ ಊಟಗಳು, ಎಸಿ ವಾಹನಗಳಲ್ಲಿ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ, ಪ್ರಯಾಣ ವಿಮೆ ಹಾಗೂ ಐಆರ್‌ಸಿಟಿಸಿ ಟೂರ್ ಮ್ಯಾನೇಜರ್‌ಗಳ ಸೇವೆ ಸೇರಿದಂತೆ ಅನೇಕ ಸೌಲಭ್ಯಗಳು ಒಳಗೊಂಡಿವೆ.

Shwetha M

Leave a Reply

Your email address will not be published. Required fields are marked *