ತಾನು ತಪ್ಪು ಮಾಡುತ್ತಾ, ಬೇರೆ ದೇಶಕ್ಕೆ ಬುದ್ಧಿ ಹೇಳುವ ಟ್ರಂಪ್ – ಇರಾನ್ ಮೇಲೆ ಯುದ್ಧಕ್ಕೆ ರೆಡಿ?

ತಾನು ತಪ್ಪು ಮಾಡುತ್ತಾ, ಬೇರೆ ದೇಶಕ್ಕೆ  ಬುದ್ಧಿ ಹೇಳುವ ಟ್ರಂಪ್ – ಇರಾನ್ ಮೇಲೆ ಯುದ್ಧಕ್ಕೆ ರೆಡಿ?

ಬೇರೆ ದೇಶಗಳ ಯುದ್ಧವನ್ನ ನಾನೇ ನಿಲ್ಲಿಸಿದ್ದು, ಶಾಂತಿ ಇರಬೇಕು ಅಂತ ಹೇಳುವ ಟ್ರಂಪ್ ಈಗ ತಾನೇ ಯುದ್ಧಕ್ಕೆ ರೆಡಿಯಾಗಿದ್ದಾರೆ.  ನಿನ್ನೆಯಷ್ಟೇ ಇರಾನ್’ಗೆ ಎಚ್ಚರಿಕೆ ಕೊಟ್ಟಿದ್ದ ಟ್ರಂಪ್ ಅವರು, ನಮ್ಮ ದೊಡ್ಡ ಪಡೆಗಳು ಇರಾನ್ ಕಡೆ ಹೋಗುತ್ತಿವೆ. ಇರಾನ್ ಅನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಇದೇ ವೇಳೆ, “ಬಹುಶಃ ನಾವು ಇವುಗಳನ್ನು ಬಳಸಬೇಕಾಗುವುದಿಲ್ಲ’ ಎಂದೂ ಹೇಳುವ ಮೂಲಕ ಇರಾನ್ ಆಡಳಿತಕ್ಕೆ ತಾನು ಹೇಳಿದ ಮಾತು ಕೇಳುವಂತೆ ಸಂದೇಶ ರವಾನಿಸಿದ್ದಾರೆ.

ಇದನ್ನೂ ಓದಿ: ಚಿನ್ನದ ಸರ ಹಾಕಿಕೊಂಡು ಮಿರ ಮಿರ ಮಿಂಚಿದ ಗಿಲ್ಲಿ – ನಂಗೇ ಅನ್ಕೊಂಡೆ ವಾಪಸ್ ಕೇಳಿದಾಗ ಶಾಕ್ ಆಯ್ತು ಅಂದ ಬಿಗ್ಬಾಸ್ ವಿನ್ನರ್

ನಾವು ಇರಾನ್ ಅನ್ನು ಗಮನಿ ಸುತ್ತಿದ್ದೇವೆ. ಆ ದಿಕ್ಕಿನಲ್ಲಿ ನಮ್ಮ ಬಹಳಷ್ಟು ಹಡಗುಗಳು ಹೋಗುತ್ತಿವೆ. ಆ ಕಡೆ ನಮ್ಮ ದೊಡ್ಡ ಪಡೆಯೇ ಹೋಗುತ್ತಿದೆ. ಏನೂ ಆಗುವುದು ಬೇಡ ಎಂದು ನಾನು ಬಯುಸುತ್ತೇನೆಂದು ಹೇಳಿದ್ದರು. ಮುಂಬರುವ ದಿನಗಳಲ್ಲಿ ಅರಬ್ಬಿ ಸಮುದ್ರ ಅಥವಾ ಪರ್ಶಿಯನ್ ಕೊಲ್ಲಿ ಪ್ರದೇಶದಲ್ಲಿ ಅಮೆರಿಕ ನೌಕಾ ದಾಳಿ ನಡೆಸಲಿದೆ ಎಂದು ಅಮೆರಿಕ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.ಇದಕ್ಕೆ ಪೂರಕವಾಗಿ ಅಮೆರಿಕ ರಕ್ಷಣಾ ಇಲಾಖೆ ತನ್ನ ಯುದ್ಧ ವಿಮಾನ ಅನಾಮಿಕ ಸ್ಥಳದಲ್ಲಿ ಇಳಿಯುತ್ತಿರುವ ಚಿತ್ರವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದೆ.ಥಾಡ್ ಮತ್ತು ಪೇಟ್ರಿಯಾಟ್‌ನಂತಹ ಕ್ಷಿಪಣಿ ದಾಳಿ ತಡೆ ವ್ಯವಸ್ಥೆಗಳನ್ನೂ ಪಶ್ಚಿಮ ಏಷ್ಯಾದಾದ್ಯಂತ ಅಮೆರಿಕ ನಿಯೋಜಿಸುತ್ತಿದೆ ಎಂದು ವರದಿಗಳು ತಿಳಿಸಿವೆ.

ಸಂದರ್ಶನದಲ್ಲಿ ಇರಾನ್‌ ಸೈನ್ಯದ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿದ್ದು, ಈ ಬಾರಿ ಯಾವುದೇ ದಾಳಿ ನಡೆದರೂ, ನಾವು ಅದನ್ನು ಸಂಪೂರ್ಣ ಯುದ್ಧವೆಂದು ಪರಿಗಣಿಸಿ ಅತ್ಯಂತ ಕಠಿಣ ರೀತಿಯಲ್ಲಿ ಪ್ರತಿಕ್ರಿಯಿಸುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ.ಹಿಂಸಾಚಾರ ಪೀಡಿತ ಮಧ್ಯಪ್ರಾಚ್ಯ ದೇಶದ ಕಡೆಗೆ ಅಮೆರಿಕಾದ ಯುದ್ಧನೌಕೆಗಳ ದೊಡ್ಡ ಪಡೆ ಸಾಗುತ್ತಿದೆ ಎಂದು ಡೊನಾಲ್ಡ್ ಟ್ರಂಪ್ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಇರಾನ್ ಎಚ್ಚರಿಕೆ ನೀಡಿದೆ.

Kishor KV