ಭಾರತಕ್ಕೆ ಬರುತ್ತಿದ್ದ ಇರಾನ್ ವಿಮಾನದ ಮೇಲೆ ಅಮೆರಿಕ ಅಟ್ಯಾಕ್‌ – ಪರಿಹಾರ ಸಮಾಗ್ರಿ ಸಾಗಿಸೋಕೆ ಬಿಡ್ತಿಲ್ವಾ ಟ್ರಂಪ್‌?

ಭಾರತಕ್ಕೆ ಬರುತ್ತಿದ್ದ ಇರಾನ್ ವಿಮಾನದ ಮೇಲೆ ಅಮೆರಿಕ ಅಟ್ಯಾಕ್‌ –  ಪರಿಹಾರ ಸಮಾಗ್ರಿ ಸಾಗಿಸೋಕೆ ಬಿಡ್ತಿಲ್ವಾ ಟ್ರಂಪ್‌?

  ಇರಾನ್‌ನ ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ ನಡೆಸಿದೆ. ದಾಳಿಯಲ್ಲಿ ಮಹರ್‌ ಏರ್‌ಗೆ ಸಂಬಂಧಿಸಿದ ವಿಮಾನಕ್ಕೆ  ಹಾನಿಯಾಗಿದ್ದು, ಮಾನವೀಯ ನೆರವು ಸಂಗ್ರಹಿಸುವುದ್ದಕ್ಕೆ ಈ ವಿಮಾನ ಭಾರತಕ್ಕೆ ಬರುತಿತ್ತು ಎನ್ನಲಾಗ್ತಿದೆ.

ಇರಾನ್‌ನ ಮಶಾದ್ ವಿಮಾನ ನಿಲ್ದಾಣದಲ್ಲಿ ಮಹಾನ್ ಏರ್ ವಿಮಾನವು ಅಮೆರಿಕದ ವೈಮಾನಿಕ ದಾಳಿಯಲ್ಲಿ ಹಾನಿಗೊಳಗಾಗಿದೆ. ವರದಿಗಳ ಪ್ರಕಾರ, ವಿಮಾನವು ಪರಿಹಾರ ಸಾಮಗ್ರಿಗಳನ್ನು ಪಡೆಯಲು ನವದೆಹಲಿಗೆ ತೆರಳುತ್ತಿತ್ತು. ಏಪ್ರಿಲ್ 1 ರಂದು ಬೆಳಗ್ಗೆ 4 ಗಂಟೆಗೆ ವಿಮಾನ ಆಗಮಿಸಬೇಕಿತ್ತು ಎಂದು ವರದಿಯಾಗಿದೆ.

ಇದನ್ನೂ ಓದಿ: ವೈಭವ್‌ ಸೂರ್ಯವಂಶಿ ಸ್ಫೋ ಅರ್ಧಶತಕ ಬಲ – ಆರ್‌ ಆರ್‌ ವಿರುದ್ಧ ಹೀನಾಯವಾಗಿ ಸೋತ CSK

ಈ ಘಟನೆಯು ದೇಶದಲ್ಲಿ ನಾಗರಿಕ ವಿಮಾನಯಾನ ಸುರಕ್ಷತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಮಹನ್ ಏರ್ ಖಾಸಗಿ ಒಡೆತನದ ಇರಾನಿನ ವಿಮಾನಯಾನ ಸಂಸ್ಥೆಯಾಗಿದ್ದು, ಇದು ಪಶ್ಚಿಮ ಏಷ್ಯಾ, ಮಧ್ಯ ಏಷ್ಯಾ, ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ ಮತ್ತು ಪೂರ್ವ ಏಷ್ಯಾದ ಹಲವಾರು ದೇಶಗಳಿಗೆ ವಿಮಾನಗಳನ್ನು ನಿರ್ವಹಿಸುತ್ತದೆ.ಯುದ್ಧದ ಆರಂಭದಲ್ಲಿ ಇಸ್ರೇಲಿ ನಡೆಸಿದ ದಾಳಿಯಲ್ಲಿ ಮೆಹ್ರಾಬಾದ್ ವಿಮಾನ ನಿಲ್ದಾಣದಲ್ಲಿ ಸುಮಾರು 16-17 ಪ್ರಯಾಣಿಕ ಮತ್ತು ಸರಕು ವಿಮಾನಗಳು ನಾಶವಾಗಿತ್ತು. ಈ ವಿಮಾನಗಳು ಇರಾನಿನ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ (IRGC) ಗೆ ಸೇರಿವೆ ಮತ್ತು ಭಯೋತ್ಪಾದಕರಿಗೆ ಶಸ್ತ್ರಾಸ್ತ್ರಗಳನ್ನು ಸಾಗಿಸಲು ಕುಡ್ಸ್ ಫೋರ್ಸ್ ಬಳಸುತ್ತಿತ್ತು ಎಂದು ಇಸ್ರೇಲ್ ಹೇಳಿಕೊಂಡಿದೆ.

ಉಕ್ರೇನ್ ಯುದ್ಧಕ್ಕಾಗಿ ರಷ್ಯಾಕ್ಕೆ ಶಸ್ತ್ರಾಸ್ತ್ರಗಳನ್ನು ಸಾಗಿಸಲು ಇರಾನ್ ಏರ್ ಮತ್ತು ಮಹಾನ್ ಏರ್ ನಂತಹ ವಾಣಿಜ್ಯ ವಿಮಾನಗಳನ್ನು ಬಳಸಲಾಗುತ್ತಿತ್ತು ಎಂದು ಇಸ್ರೇಲ್ ಹೇಳಿದೆ. ಭಾರತದಿಂದ ಇರಾನ್‌ಗೆ ಔಷಧಿಗಳು ಸೇರಿದಂತೆ 11 ಟನ್‌ಗಳಷ್ಟು ಮಾನವೀಯ ನೆರವನ್ನು ಸಾಗಿಸಬೇಕಿತ್ತು.ಹಿಂದಿನ ಸಾಗಣೆಗಳಲ್ಲಿಯೂ ಭಾರತೀಯ ವಿಮಾನಗಳನ್ನು ಬಳಸಿರಲಿಲ್ಲ. ವಿಮಾನವು ದೆಹಲಿಗೆ ತೆರಳುತ್ತಿತ್ತು ಮತ್ತು ಯುದ್ಧ ಸಂತ್ರಸ್ತರಿಗೆ 11 ಟನ್‌ಗಳಿಗೂ ಹೆಚ್ಚು ಮಾನವೀಯ ಔಷಧಿಗಳನ್ನು ಹೊತ್ತುಕೊಂಡು ಇರಾನ್‌ಗೆ ಹಿಂತಿರುಗಬೇಕಿತ್ತು.

Kishor KV