ಇರಾಕ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದ ಇರಾನ್ – ನಾಲ್ವರು ಸಾವು
ಇಸ್ರೇಲಿ ಬೇಹುಗಾರಿಕಾ ಸಂಸ್ಥೆಯನ್ನು ಗುರಿಯಾಗಿಸಿಕೊಂಡು ಇರಾಕ್ ಮೇಲೆ ಇರಾನ್ ಭೀಕರ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಇರಾನ್, ಇರಾಕ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಹೌದು, ಇರಾಕ್ನ ಕುರ್ದಿಸ್ತಾನ್ನಲ್ಲಿ ಕ್ಷಿಪಣಿ ದಾಳಿ ನಡೆದಿದೆ. ಇಸ್ರೇಲ್ನ ಬೇಹುಗಾರಿಕಾ ಸಂಸ್ಥೆ ಮೊಸಾದ್ನ ಪ್ರಧಾನ ಕಚೇರಿಯನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಕ್ಷಿಪಣಿ ದಾಳಿಯಲ್ಲಿ ಉದ್ಯಮಿ ಕುರ್ದಿಶ್ ಉದ್ಯಮಿ ಪೆಶ್ರಾ ದಿಜಾಯಿ ಮತ್ತು ಅವರ ಕುಟುಂಬದ ಸದಸ್ಯರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಭಯಾನಕ ದಾಳಿ ನಡೆಸಿರುವ ಬಗ್ಗೆ ಇರಾನ್ನ ರೆವಲ್ಯೂಷನರಿ ಗಾರ್ಡ್ಸ್ (IRGC) ಮಾಹಿತಿ ನೀಡಿದೆ.
ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣಾ ರೇಸ್ನಿಂದ ಹಿಂದೆ ಸರಿದ ಭಾರತ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿ!
ಸಿರಿಯಾದ ಅಲೆಪ್ಪೊ ಗ್ರಾಮಾಂತರ ಪ್ರದೇಶದಲ್ಲಿ ಸ್ಫೋಟದ ಸದ್ದು ಕೇಳಿಬಂದಿದೆ. ಮೆಡಿಟರೇನಿಯನ್ ಸಮುದ್ರದ ದಿಕ್ಕಿನಿಂದ 4 ಕ್ಷಿಪಣಿಗಳು ಬಂದಿತ್ತು ಎಂದು ಸಿರಿಯನ್ ಅಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್ ಮಾನಿಟರ್ ಹೇಳಿದೆ.
ಈ ಪ್ರದೇಶದಲ್ಲಿ ಇರಾನ್ ವಿರೋಧಿಗಳ ಬೇಹುಗಾರಿಕೆ ಕೇಂದ್ರಗಳು ಮತ್ತು ಪಡೆಗಳನ್ನು ನಾಶಮಾಡಲು ಇಂದು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಬಳಸಲಾಗಿದೆ ಎಂದು ಸುದ್ದಿವಾಹಿನಿಗಳು ವರದಿ ಮಾಡಿವೆ. ಇರಾನ್ನ ಕುರ್ದಿಸ್ತಾನ್ನ ರಾಜಧಾನಿ ಎರ್ಬಿಲ್ನಿಂದ ಈಶಾನ್ಯಕ್ಕೆ ಸುಮಾರು 40 ಕಿಮೀ ದೂರದಲ್ಲಿರುವ ಯುಎಸ್ ಕಾನ್ಸುಲೇಟ್ ಮತ್ತು ನಾಗರಿಕರ ನಿವಾಸಗಳ ಸಮೀಪವಿರುವ ಪ್ರದೇಶದಲ್ಲಿ ಸ್ಫೋಟದ ಸದ್ದು ಕೇಳಿಸಿತು.
ದಕ್ಷಿಣದ ನಗರಗಳಾದ ಕೆರ್ಮನ್ ಮತ್ತು ರಾಸ್ನಲ್ಲಿ ಇರಾನಿಯನ್ನರನ್ನು ಕೊಂದ ಭಯೋತ್ಪಾದಕ ಗುಂಪುಗಳು ಇತ್ತೀಚೆಗೆ ನಡೆಸಿದ ದಾಳಿಗೆ ಪ್ರತಿಕ್ರಿಯೆಯಾಗಿ ಸಿರಿಯಾ ಮೇಲಿನ ದಾಳಿ ನಡೆದಿದೆ ಎಂದು ಹೇಳಿದೆ.