ಇರಾ-ನೂಪುರ್ ಪ್ರೇಮ್ ಕಹಾನಿ! – 12 ವರ್ಷ ದೊಡ್ಡವನ‌ ಜೊತೆ ಅಮೀರ್ ಖಾನ್ ಪುತ್ರಿಗೆ ಲವ್ ಶುರುವಾಗಿದ್ದು ಇದೇ ಕಾರಣಕ್ಕೆ!

ಇರಾ-ನೂಪುರ್ ಪ್ರೇಮ್ ಕಹಾನಿ! – 12 ವರ್ಷ ದೊಡ್ಡವನ‌ ಜೊತೆ ಅಮೀರ್ ಖಾನ್ ಪುತ್ರಿಗೆ ಲವ್ ಶುರುವಾಗಿದ್ದು ಇದೇ ಕಾರಣಕ್ಕೆ!

ಬಾಲಿವುಡ್​ನಲ್ಲಿ ಸಾಲು ಸಾಲು ಮದುವೆಗಳು ಸದ್ದು ಮಾಡ್ತಿದೆ. ಅಮೀರ್ ಖಾನ್ ಪುತ್ರಿ ಇರಾಖಾನ್ ಮದುವೆ ಕೂಡ ಫಿಕ್ಸ್ ಆಗಿದೆ. ಅಮೀರ್ ಖಾನ್ ಮಗಳು ಇರಾ ಖಾನ್ ಪ್ರೀತಿಸುತ್ತಿರುವ  ನೂಪುರ್  ಶಿಖರೆ, ಇರಾಗಿಂತ 12 ವರ್ಷ ದೊಡ್ಡವರು. ಇಷ್ಟು ವಯಸ್ಸಿನ ಅಂತರವಿದ್ರು ಮನೆಯಲ್ಲಿ ಇಬ್ಬರ ಮದುವೆ ಸಮ್ಮತಿ ನೀಡಿದ್ದು ಯಾಕೆ ಗೊತ್ತಾ? ನೂಪುರ್ ಶಿಖರೆ ನನಗೆ ಮಾಡಿದ್ದ ಸಹಾಯವನ್ನು ಬೇರೆ ಯಾರಿಗೂ ಮಾಡಲು ಸಾಧ್ಯವಿಲ್ಲ ಎಂದು ಇರಾ ಹೇಳಿದ್ದಾರೆ.

ನೂಪುರ್ ಶಿಖರೆ ಜೊತೆಗಿನ ಪ್ರೀತಿ ಬಗ್ಗೆ ಇರಾ ಖಾನ್ ಮುಕ್ತವಾಗಿ ಮಾತಾಡಿದ್ದಾರೆ. ಇರಾ ಖಾನ್ ಖಿನ್ನತೆಯಿಂದ ಬಳಲುತ್ತಿದ್ದರಂತೆ. ಈ ವೇಳೆ ನನ್ನ ಸಹಾಯಕ್ಕೆ ಬಂದವರೇ ನೂಪರ್ ಎಂದು ಸ್ಟಾರ್ ಕಿಡ್ ಇರಾ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇಂಡಿಯಾ ಟುಡೇ ಜೊತೆಗಿನ ಸಂದರ್ಶನದಲ್ಲಿ ಮಾತಾಡಿದ ಇರಾ ಖಾನ್,  ಖಿನ್ನತೆ ವಿರುದ್ಧ ಹೋರಾಡಲು ನೂಪುರ್ ಶಿಖರೆ ಸಹಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ. ‘ನೂಪುರ್ ನನಗಾಗಿ ಹೃದಯಲ್ಲಿ ಜಾಗ ಹಾಗೂ ನನಗೆ ಹೆಚ್ಚು ಸಮಯ ಕೊಟ್ಟರಿ.  ಖಿನ್ನತೆಯಲ್ಲಿದ್ದ ನನಗೆ ಏನು ಬೇಕು ಎನ್ನುವುದನ್ನು ಅವರು ಅರಿತುಕೊಂಡಿದ್ರು. ಭಾವನಾತ್ಮಕವಾಗಿ ನನ್ನನ್ನು ಸೆಳೆದರು. ನನ್ನನ್ನು ಚೆನ್ನಾಗಿ ಅರ್ಥಮಾಡಿಕೊಂಡವರಾಗಿದ್ದರು ಎಂದು ಇರಾ ಹೇಳಿದ್ದಾರೆ.

ಇದನ್ನೂ ಓದಿ: ಅಮೆರಿಕಕ್ಕೆ ವೀಸಾ ಇಲ್ಲದೆ ಹೋಗಲು ಅವಕಾಶ! – ಷರತ್ತು ಅನ್ವಯ!

ಇರಾ ಖಾನ್ ಖಿನ್ನತೆಗೆ ಒಳಗಾಗಿದ್ದಾಗ ಯಾರಾದರೂ ಬಂದು ಏನಾದರೂ ಮಾತಾಡಿಸಿದ್ರೆ ‘ನನಗೆ ಗೊತ್ತಿಲ್ಲ’ ಎಂದು ಇರಾ ಉತ್ತರಿಸುತ್ತಿದ್ದರಂತೆ. ಆದರೆ ನೂಪುರ್ ಶಿಖರೆ, ಇರಾ ಮನಸ್ಸನ್ನು ಬದಲಿಸಿದ್ದಾರೆ. ನನ್ನ ಎಲ್ಲಾ ವಿಷಯಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದರು ನೂಪುರ್ ಎಂದು ಇರಾ ಹೇಳಿಕೊಂಡಿದ್ದಾರೆ.

ಖಿನ್ನತೆಯಿಂದ ಬಳಲುತ್ತಿದ್ದ ಸ್ಟಾರ್ ಕಿಡ್ ಇರಾ 22-23 ನೇ ವಯಸ್ಸಿನಲ್ಲಿ ಮಗುವಿನಂತೆ ವರ್ತಿಸುತ್ತಿದ್ದರು. ಸ್ನಾನ ಕೂಡ ಮಾಡುತ್ತಿರಲಿಲ್ಲ. ಸಣ್ಣ ಮಗುವಿನಂತೆ ವರ್ತಿಸಲು ಶುರು ಮಾಡಿದ್ದರಂತೆ. ಇರಾ ತನ್ನ ಕೆಲಸ ಮಾಡುವುದೂ ಕಷ್ಟವಾಗಿತ್ತು. ಕಷ್ಟದ ಸಮಯದಲ್ಲಿ ನೂಪುರ್, ಇರಾ ಖಾನ್ ಅವರನ್ನು ನೋಡಿಕೊಂಡರು. ಇಬ್ಬರ ನಡುವೆ ಪರಸ್ಪರ ಹೊಂದಾಣಿಕೆ ಮತ್ತು ಪ್ರೀತಿ ಬೆಳೆಯತೊಡಗಿತು. ಇರಾ ಕೂಡ ಅವನಿಗೆ ಸಹಾಯ ಮಾಡಲು ಪ್ರಾರಂಭಿಸಿದರು. ಇಬ್ಬರ ಸಂಬಂಧವು ಅರಳಲು ಕೊಂಚ ಸಮಯ ತೆಗೆದುಕೊಂಡಿತ್ತು.

ಇರಾ ಖಾನ್ ತನಗಿಂತ 12 ವರ್ಷ ದೊಡ್ಡವನಾದ ನೂಪುರ್ ಶಿಖರೆಯೊಂದಿಗೆ ಡೇಟಿಂಗ್ ಮಾಡಿದ್ದರು. ಕೆಲ ದಿನಗಳ ಬಳಿಕ ಮನೆಯವರಿಗೆ ವಿಷಯ ತಿಳಿಸಿ ಎಲ್ಲರನ್ನೂ ಒಪ್ಪಿಸಿ ಈ ಜೋಡಿ ನಿಶ್ಚಿತಾರ್ಥ ಕೂಡ ಅದ್ಧೂರಿಯಾಗಿ ಮಾಡಿಕೊಂಡಿದ್ದಾರೆ. ಇದೀಗ ಮದುವೆಯಾಗಲು ಮುಂದಾಗಿದ್ದಾರೆ.

Shwetha M