ಮಗಳ ಮದುವೆ ಖಚಿತ ಪಡಿಸಿದ ಅಮೀರ್ ಖಾನ್ – ಇರಾ, ಭಾವಿ ಅಳಿಯನ ಬಗ್ಗೆ ನಟ ಹೇಳಿದ್ದೇನು?
ಬಾಲಿವುಡ್ ಖ್ಯಾತ ನಟ ಅಮೀರ್ ಖಾನ್ ಪುತ್ರಿ ಇರಾ ಖಾನ್ ಮತ್ತು ನೂಪುರ್ ಶಿಖಾರೆ ಮದುವೆ ಬಗ್ಗೆ ಅಧಿಕೃತ ಮಾಹಿತಿ ಹೊರ ಬಿದ್ದಿದೆ. ಜನವರಿಯಲ್ಲಿ ಈ ಜೋಡಿ ಹಸೆಮಣೆ ಏರಲಿದೆ ಎಂದು ಸ್ವತಃ ಅಮೀರ್ ಖಾನ್ ಅವರೇ ಹೇಳಿಕೊಂಡಿದ್ದಾರೆ. 2024ರಲ್ಲಿ ಈ ಜೋಡಿ ಮದುವೆಯಾಗಲಿದ್ದು, ತಮ್ಮ ಮಗಳು ಹಾಗೂ ಭಾವಿ ಅಳಿಯನ ಬಗ್ಗೆ ಅಮೀರ್ ಖಾನ್ ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ಕಳೆದ ವರ್ಷ ನವೆಂಬರ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡು, ತನ್ನ ಪ್ರಿಯಕರಿಗೆ ಉಂಗುರ ತೊಡಿಸಿ, ಮುತ್ತಿಡುವ ಮೂಲಕ ಎಂಗೇಜ್ಡ್ ಆಗಿರುವುದಾಗಿ ಅವರು ಘೋಷಣೆ ಮಾಡಿತ್ತು ಈ ಜೋಡಿ. ಇದೀಗ ಇರಾ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಉದಯಪುರದಲ್ಲಿ ಸಂಪ್ರದಾಯಿಕವಾಗಿ ಈ ಜೋಡಿ ಸಪ್ತಪದಿ ತುಳಿಯಲಿದೆ. ಒಟ್ಟು ಮೂರು ದಿನಗಳ ಕಾಲ ಈ ಮದುವೆ ನಡೆಯಲಿದೆ. ಮದುವೆಗೆ ಖ್ಯಾತ ತಾರೆಗಳು ಆಗಮಿಸಲಿದ್ದಾರೆ.
ಇದನ್ನೂ ಓದಿ: ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಕೊನೇ ಆಸೆ ಈಡೇರಿಸಿದ ಕುಟುಂಬ – ತಿಮ್ಮಪ್ಪನ ಸನ್ನಿಧಿಗೆ ಸೇರಿತು ದೇಣಿಗೆ
ನಿಶ್ಚಿತಾರ್ಥಕ್ಕಿಂತ ಮುಂಚೆನೇ ಈ ಜೋಡಿ ಸಖತ್ ಫೇಮಸ್ ಆಗಿದ್ದರು. ಬಹಿರಂಗವಾಗಿಯೇ ತಾವಿಬ್ಬರೂ ಪ್ರೀತಿಸುತ್ತಿರುವ ವಿಚಾರವನ್ನೂ ಅವರು ಹಂಚಿಕೊಂಡಿದ್ದರು. ಇರಾ ಹಾಗೂ ನೂಪುರ್ ಮದುವೆ ಮುಂದಿನ ವರ್ಷ ಜನವರಿ 3ರಂದು ನಡೆಯಲಿದೆ ಎಂದು ವರದಿ ಆಗಿತ್ತು. ಇದನ್ನು ನಿಜ ಎಂದು ಅಮಿರ್ ಖಾನ್ ಅವರು ಒಪ್ಪಿಕೊಂಡಿದ್ದಾರೆ. ‘ನಾನು ಸಾಕಷ್ಟು ಎಮೋಷನಲ್ ವ್ಯಕ್ತಿ. ಮದುವೆ ದಿನ ನಾನು ಸಾಕಷ್ಟು ಕಣ್ಣೀರು ಹಾಕುತ್ತೇನೆ. ಆ ದಿನ ಅಮಿರ್ ಖಾನ್ ಬಗ್ಗೆ ಕಾಳಜಿವಹಿಸಬೇಕು ಎಂದು ಎಲ್ಲರೂ ಈಗಲೇ ಮಾತನಾಡಿಕೊಳ್ಳುತ್ತಿದ್ದಾರೆ. ನನಗೆ ಕಣ್ಣೀರು ಹಾಗೂ ನಗುವನ್ನು ತಡೆದುಕೊಳ್ಳೋಕೆ ಆಗಲ್ಲ’ ಎಂಬುದು ಅಮಿರ್ ಖಾನ್ ಮಾತು. ‘ಇರಾ ಜನವರಿ 3ರಂದು ಮದುವೆ ಆಗುತ್ತಿದ್ದಾಳೆ. ಅವಳು ಆಯ್ಕೆ ಮಾಡಿರುವ ಹುಡುಗ ನಿಜಕ್ಕೂ ಚೆನ್ನಾಗಿದ್ದಾರೆ. ಅವನು ಲವ್ಲಿ ಬಾಯ್. ವೃತ್ತಿಯಲ್ಲಿ ಆತ ಟ್ರೇನರ್. ಆಕೆ ಖಿನ್ನತೆಗೆ ಒಳಗಾದಾಗ ನೂಪುರ್ ಅವಳ ಜೊತೆ ಇದ್ದ. ಭಾವನಾತ್ಮಕವಾಗಿ ಅವಳಿಗೆ ಬೆಂಬಲವಾಗಿ ನಿಂತಿದ್ದ. ಇಬ್ಬರೂ ಖುಷಿಯಿಂದ ಇರಲಿ ಎಂದು ಹಾರೈಸುತ್ತೇನೆ’ ಎಂದು ಅಮಿರ್ ಖಾನ್ ಹೇಳಿದ್ದಾರೆ.
ಇರಾ ಖಾನ್ ಮತ್ತು ನೂಪುರ್ ಶಿಖಾರೆ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆ ಪ್ರೀತಿ ಇದೀಗ ಮತ್ತೊಂದು ಹಂತ ಪಡೆದುಕೊಂಡಿದೆ. ಪ್ರೀತಿಸುತ್ತಿರುವಾಗಲೇ ಒಟ್ಟಿಗೆ ವಾಸವಿದ್ದ ಈ ಜೋಡಿ ಇದೀಗ ಅಧಿಕೃತವಾಗಿ ಸತಿ ಪತಿಯಾಗಲು ಹೊರಟಿದೆ. ಆಕೆಗೆ ಫಿಸಿಕಲ್ ಟ್ರೈನರ್ ಆಗಿದ್ದ ನೂಪುರ್ ನನ್ನು ಇರಾ ಇಷ್ಟಪಡುತ್ತಾಳೆ. ಅವನ ಜೊತೆಯೇ ಹಲವು ಟ್ರಿಪ್ ಗಳನ್ನು ಕೂಡ ಮಾಡಿದ್ದಾರೆ. ಅಲ್ಲದೇ ಇಬ್ಬರೂ ಒಂದೇ ಮನೆಯಲ್ಲೇ ಹಲವು ದಿನಗಳಿಂದ ವಾಸಿಸುತ್ತಿದ್ದರು. ಇದೊಂದು ಸಹಜೀವನ ಎಂದೇ ಬಾಲಿವುಡ್ ಮಾತಾಡಿಕೊಂಡಿತ್ತು. ಅದಕ್ಕೀಗ ಫುಲ್ ಸ್ಟಾಪ್ ಇಡುವಂತಹ ಕೆಲಸವನ್ನು ಈ ಜೋಡಿ ಮಾಡಿದೆ.