ಕೈಯಲ್ಲಿ ಖಡ್ಗ ಹಿಡಿದು ವೀರ ವನಿತೆಯಾದ ಡಿ.ರೂಪಾ ಮೌದ್ಗಿಲ್ – ಐಪಿಎಸ್ ಅಧಿಕಾರಿಯ ನ್ಯೂ ಲುಕ್!

ಕೈಯಲ್ಲಿ ಖಡ್ಗ ಹಿಡಿದು ವೀರ ವನಿತೆಯಾದ ಡಿ.ರೂಪಾ ಮೌದ್ಗಿಲ್ – ಐಪಿಎಸ್ ಅಧಿಕಾರಿಯ ನ್ಯೂ ಲುಕ್!

ವೈಯಕ್ತಿಕ ಮತ್ತು ಆಡಳಿತಾತ್ಮಕ ಕಾರಣಗಳಿಂದ ಸದಾ ಸುದ್ದಿಯಲ್ಲಿರುವ ಐಪಿಎಸ್ ಅಧಿಕಾರಿ ಅಂದ್ರೆ ಅದು ಡಿ.ರೂಪಾ ಮೌದ್ಗಿಲ್. ಇದೀಗ ನ್ಯೂ ಗೆಟಪ್​ನಲ್ಲಿ ಕಾಣಿಸಿಕೊಳ್ಳುವ ಮೂಲಕ ಸದ್ದು ಮಾಡ್ತಿದ್ದಾರೆ. ಖಾಕಿ ತೊಟ್ಟು ಖಡಕ್ ಪೊಲೀಸ್ ಆಫೀಸರ್ ಎಂದೇ ಗುರುತಿಸಿಕೊಂಡಿರುವ ಐಪಿಎಸ್ ಅಧಿಕಾರಿ ಡಿ.ರೂಪಾ ಈಗ ರಾಣಿಯಾಗಿದ್ದಾರೆ.

ಕೆಂಪು ಬಣ್ಣದ ರೇಷ್ಮೆ ಸೀರೆ, ಮೈ ತುಂಬಾ ಆಭರಣ ತೊಟ್ಟು, ಕೈಯಲ್ಲಿ ಖಡ್ಗ ಹಿಡಿದು ವೀರ ವನಿತೆಯಂತೆ ಪೋಸ್ ಕೊಟ್ಟಿದ್ದಾರೆ. ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ. ಫ್ಯಾಷನ್ ಡಿಸೈನರ್​​​​ ಆಗಿರುವ ಕೆ.ಆರ್​ ಭಾರ್ಗವಿ ​​​ಎನ್ನುವವರು ರೂಪಾ ಅವರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋ ಕೇವಲ ಫ್ಯಾಷನ್ ಮಾತ್ರ ಅಲ್ಲ, ಬದಲಾಗಿ ಮಹಿಳೆಯ ಶಕ್ತಿ ಹಾಗೂ ಸಬಲೀಕರಣದ ಪ್ರತೀಕ ಎಂದು ಬರೆದುಕೊಂಡಿದ್ದಾರೆ. ಇನ್ನು ಖಡಕ್​​ ಆಫೀಸರ್​​​​ ಮಾತ್ರವಲ್ಲದೇ ಸಂಗೀತದಲ್ಲಿ ಆಸಕ್ತಿ ಹೊಂದಿರುವ ರೂಪಾ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ತರಬೇತಿ ಪಡೆದಿದ್ದಾರೆ. ಹಾಗೇ ಭರತನಾಟ್ಯವನ್ನೂ ಕಲಿತಿದ್ದಾರೆ. 2000ನೇ ಇಸವಿಯ ಬ್ಯಾಚ್​ನಲ್ಲಿ ಐಪಿಎಸ್ ಅಧಿಕಾರಿ ಡಿ ರೂಪಾ ಆಯ್ಕೆಯಾಗಿದ್ದರು.

Shantha Kumari