IPLಗೂ ತಟ್ಟಿದ ಯುದ್ಧ – LPG ಕೊರತೆ.. ವಿಮಾನಗಳು ಬಂದ್
19ನೇ ಸೀಸನ್ ಮತ್ತೆ ಪೋಸ್ಟ್ ಪೋನ್?

ಕ್ರಿಕೆಟ್ ಫ್ಯಾನ್ಸ್ ಎಲ್ರೂ ಐಪಿಎಲ್ ಶೆಡ್ಯೂಲ್ಗಾಗಿ ಕಾಯ್ತಿದ್ರೆ ಈಗ ಟೂರ್ನಿ ಅನ್ಕೊಂಡಿದ್ದ ಡೇಟ್ಗೆ ಸ್ಟಾರ್ಟ್ ಆಗೋದೇ ಡೌಟಿದೆ. ಮಾರ್ಚ್ 28ರಿಂದ ಐಪಿಎಲ್ ಆರಂಭ ಅಂತಾ ಬಿಸಿಸಿಐ ಅಧಿಕೃತವಾಗಿ ಅನೌನ್ಸ್ ಮಾಡಿತ್ತು. ದೇವಜಿತ್ ಸೈಕಿಯಾ ಮಾರ್ಚ್ 12ಕ್ಕೆ ವೇಳಾಪಟ್ಟಿ ರಿಲೀಸ್ ಮಾಡ್ತೀವಿ ಅಂದಿದ್ರು. ಆದ್ರೆ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಎಫೆಕ್ಟ್ ಐಪಿಎಲ್ಗೂ ತಟ್ಟೋ ಸಾಧ್ಯತೆಗಳಿವೆ.
ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್‌ನ 19 ನೇ ಆವೃತ್ತಿಯ ವೇಳಾಪಟ್ಟಿ ಇನ್ನೂ ಘೋಷಣೆ ಆಗಿಲ್ಲ. ಟೂರ್ನಿ ಆರಂಭಕ್ಕೆ ಮೂರು ವಾರಗಳೂ ಉಳಿದಿಲ್ಲ. ಇದ್ರ ನಡುವೆ ಪಶ್ಚಿಮ ಏಷ್ಯಾದ ಸಂಘರ್ಷ ಹಾರ್ಮುಜ್ ಜಲಸಂಧಿ ಬಂದ್ನಿಂದಾಗಿ ದೇಶದಲ್ಲಿ ಎನರ್ಜಿ ರಿಸರ್ವ್ಸ್ ಕ್ರೈಸಿಸ್ ಅಂದ್ರೆ ಇಂಧನ ನಿಕ್ಷೇಪಗಳ ಬಿಕ್ಕಟ್ಟು ಸ್ಟಾರ್ಟ್ ಆಗಿದೆ. ಪೆಟ್ರೋಲಿಯಂ ಮತ್ತು ಎಲ್‌ಪಿಜಿ ಉತ್ಪನ್ನಗಳ ಪೂರೈಕೆಗೆ ಹೊಡೆತ ಬಿದ್ದಿದೆ. ಇದ್ರಿಂದಾಗಿ ಭಾರತದ ಟ್ರಾನ್ಸ್ಪೋರ್ಟ್ ಸಿಸ್ಟಂ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಹೀಗಾಗಿ ಭಾರತ ಸರ್ಕಾರ ಅಗತ್ಯ ಸರಕುಗಳ ಕಾಯ್ದೆಯನ್ನು ಜಾರಿಗೆ ತಂದು ಕೆಲವು ವಲಯಗಳಿಗೆ ನೈಸರ್ಗಿಕ ಅನಿಲ ಪೂರೈಕೆಗೆ ಆದ್ಯತೆ ನೀಡಲಾಗಿದೆ. ಸೋ ಇದೇ ಬಿಸಿ ಈಗ ಐಪಿಎಲ್ಗೂ ತಟ್ಟೋ ಚಾನ್ಸಸ್ ಇದೆ.
ಇದನ್ನೂ ಓದಿ: ಪೊಲೀಸ್ ಇನ್‌ಸ್ಪೆಕ್ಟರ್ ವೇಷದಲ್ಲಿ ಬಂದು ಹಣ, ಚಿನ್ನ ಕದ್ದ! – ಕಳ್ಳ ಸಿಕ್ಕಿಬಿದ್ದಿದ್ದು ಹೇಗೆ?
ಎಲ್ ಪಿಜಿ ಇಲ್ಲದೆ ಹೋಟೆಲ್ಗಳು ಬಂದ್.. ಐಪಿಎಲ್ ಗೆ ಹೊಡೆತ!
ಭಾರತದಲ್ಲಿ ಆಲ್ರೆಡಿ ಎಲ್‌ಪಿಜಿ ಸಿಡಿಂಡರ್ಗಳ ಕೊರತೆ ಸ್ಟಾರ್ಟ್ ಆಗಿದೆ. ಪರಿಣಾಮ ಒಂದಷ್ಟು ಹೋಟೆಲ್ಸ್ ಬಂದ್ ಆಗಿವೆ. ಹೋಟೆಲ್‌ಗಳನ್ನು ಮುಚ್ಚಬೇಕಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಮುಂಬೈ, ಬೆಂಗಳೂರು ಮತ್ತು ಚೆನ್ನೈನಲ್ಲಿರುವ ರೆಸ್ಟೋರೆಂಟ್‌ಗಳು ಕಳೆದ ಕೆಲವು ದಿನಗಳಿಂದ ಎಲ್‌ಪಿಜಿ ಕೊರತೆ ಇದೆ ಅಂತಿದ್ದಾರೆ. ಮುಂದಿನ ಎರಡು ತಿಂಗಳುಗಳ ಕಾಲ ಐಪಿಎಲ್ನಲ್ಲಿ ಭಾಗಿಯಾಗೋ 10 ತಂಡಗಳು ಭಾರತದಾದ್ಯಂತ ವಿವಿಧ ಹೋಟೆಲ್‌ಗಳಲ್ಲಿ ಸ್ಟೇ ಆಗ್ತಾರೆ. ಹೀಗಾಗಿ ಎಲ್‌ಪಿಜಿ ಸಮಸ್ಯೆ ಬೇಗ ಕ್ಲಿಯರ್ ಆಗದೇ ಇದ್ರೆ ಅನಿವಾರ್ಯವಾಗಿ ಐಪಿಎಲ್ಗೂ ಇದ್ರ ಎಫೆಕ್ಟ್ ತಟ್ಟುತ್ತೆ. ಮುಂದಿನ ಕೆಲವು ದಿನಗಳಲ್ಲಿ ಈ ಸಮಸ್ಯೆ ಬಗೆಹರಿಯದೇ ಇದ್ರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಹೇಳಿದ್ದಾರೆ. ಬಿಸಿಸಿಐ ಪರಿಸ್ಥಿತಿಯನ್ನ ನೋಡಿ ಡಿಸೈಡ್ ಮಾಡಬೇಕು
ಪಂದ್ಯಗಳು ಮುಗಿದ್ರೂ ಭಾರತದಲ್ಲೇ ಸಿಲುಕಿರುವ ವಿದೇಶಿ ಪ್ಲೇಯರ್ಸ್!
ಇನ್ನು ಐಪಿಎಲ್ಗೆ ಇರೋ ಮತ್ತೊಂದು ಟೆನ್ಷನ್ ಅಂದ್ರೆ ವಿದೇಶಿ ಆಟಗಾರರು ಭಾರತಕ್ಕೆ ಪ್ರಯಾಣ ಬೆಳೆಸೋದು. ಯಾಕಂದ್ರೆ ಗಲ್ಫ್ ದೇಶಗಳಲ್ಲಿ ವಿಮಾನ ಪ್ರಯಾಣದ ಮೇಲಿನ ನಿರ್ಬಂಧಗಳಿಂದಾಗಿ, ವಿಮಾನ ಪ್ರಯಾಣವು ಕೆಲವೆಡೆ ಸ್ಥಬ್ಧವಾಗಿದೆ. ಪ್ರಸ್ತುತ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾದ ಕ್ರಿಕೆಟ್ ತಂಡಗಳು T20 ವಿಶ್ವಕಪ್‌ನಿಂದ ಹೊರಬಿದ್ರೂ ತಮ್ಮ ತಮ್ಮದೇಶಗಳಿಗೆ ಹಿಂತಿರುಗೋಕೆ ಆಗ್ದೇ ಭಾರತದಲ್ಲೇ ಸಿಲುಕಿದ್ದಾರೆ. ಹೀಗಾಗಿ ಯುದ್ಧದ ಬಿಸಿ ಈಗ ಐಪಿಎಲ್ಗೂ ತಟ್ಟುವಂತ ಎಲ್ಲಾ ಲಕ್ಷಣಗಳೂ ಕಾಣ್ತಿವೆ. ಆಲ್ರೆಡಿ ಮಾರ್ಚ್ 26ಕ್ಕೆ ಸ್ಟಾರ್ಟ್ ಆಗ್ಬೇಕಿದ್ದ ಐಪಿಎಲ್ 2 ದಿನ ಪೋಸ್ಟ್ ಪೋನ್ ಆಗಿ 28ರಿಂದ ಆರಂಭ ಎಂದು ಅನೌನ್ಸ್ ಮಾಡಿದ್ರು. ಆದ್ರೀಗ ಸಿಚುಯೇಷನ್ ನೋಡಿದ್ರೆ ಮತ್ತಷ್ಟು ಮುಂದೂಡಿಕೆಯಾಗೋ ಸಾಧ್ಯತೆಗಳಿವೆ.

ನೋಡಿರಿ

