ಐಪಿಎಲ್ ಕ್ರೇಜ್ ಕಮ್ಮಿಯಾಗಿದ್ದೇಕೆ? RCB, CSK ಮಾತ್ರ TRP ಮ್ಯಾಚ್ಗಳಾ?

ಇಂಡಿಯನ್ ಪ್ರೀಮಿಯರ್ ಲೀಗ್.. ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್.. ಸಾವಿರಾರು ಕೋಟಿ ಹಣದ ಹೊಳೆಯೇ ಹರಿಯುತ್ತೆ.. 2008 ರಲ್ಲಿ ಪ್ರಾರಂಭವಾಗಿದ್ದು 18 ಸೀಸನ್ ಕೂಡ ಅಮೋಘ ಪ್ರದರ್ಶನ ಕಾಣುತ್ತಿದೆ. ಐಪಿಎಲ್ ಬಂದ್ರೆ ಈ ಹಿಂದೆ ಸಖತ್ ಕ್ರೇಜ್ ಇತ್ತು. ಜನ ಟಿವಿ ಮುಂದೆ ಕುತ್ತರ ಏಳುತ್ತನೇ ಇರುತ್ತಿಲ್ಲ. ಆದ್ರೆ ಈ ಜನ ಐಪಿಎಲ್ ಬಗ್ಗೆ ಅಷ್ಟಕ್ಕೆ ಅಷ್ಟೇ ಎನ್ನುವಂತಾಗಿದ್ಯಾ ಅನ್ನೋ ಪ್ರಶ್ನೆ ಕಾಡುತ್ತಿದೆ. ಹೌದು ಐಪಿಎಲ್ ಮ್ಯಾಚ್‌ಗಳನ್ನ ಜನ ಜಿಯೋ ಹಾಟ್‌ಸ್ಟಾರ್ ಮತ್ತು ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗಳಲ್ಲಿ ನೋಡ್ತಾರೆ.. ಹಾಗೇ ಸ್ಟೇಡಿಯಂಗಳಲ್ಲಿ ಹೋಗಿ ನೋಡ್ತಾರೆ ಬಟ್.. 18 ನೇ ಸೀಸನಲ್ಲಿ ಐಪಿಎಲ್ ನೋಡುವವರ ಸಂಖ್ಯೆ ಕಮ್ಮಿಯಾಗಿದೆ.
ಐಪಿಎಲ್‌ನಲ್ಲಿ 10 ತಂಡಗಳು ಭಾಗಿಯಾಗ್ತಾವೆ. ಆದ್ರೆ ಇದ್ರಲ್ಲಿ ಕೆಲವೇ ಕೆಲವು ಟೀಮ್‌ಗಳ ಮ್ಯಾಚ್ ಇದ್ದಾಗ ಮಾತ್ರ ವಿಕ್ಷರ ಸಂಖ್ಯೆ ಹೆಚ್ಚಾಗುತ್ತೆ.. ಆರ್‌ಸಿಬಿ ಮ್ಯಾಚ್ ಇದ್ರೆ ಅದು ನೆಕ್ಸ್ಟ್ ಲವೆಲ್ ಕ್ರೇಜ್ ಹುಟ್ಟು ಹಾಕುತ್ತೆ. ಆರ್‌ಸಿಬಿ ಪಂದ್ಯ ಎಲ್ಲೇ ಇರಲಿ ಟಿಕೆಟ್ ಬೆಲೆ ಎಷ್ಟೇ ಇರಲಿ ಅಷ್ಟು ಹಣವನ್ನ ಕೊಟ್ಟು ಹೋಗೋಕೆ ಫ್ಯಾನ್ಸ್ ರೆಡಿ ಇರ್ತಾರೆ.. ಒಂದೇ ಒಂದು ಸರಿ ಕಪ್ ಗೆದ್ದಿಲ್ಲ ಅಂದ್ರು ಫ್ಯಾನ್ಸ್ ಮಾತ್ರ ಎಲ್ಲಾ ಟೀಂಗಿಂತ ಹೆಚ್ಚಾಗಿಯೇ ಇದ್ದಾರೆ.. ಹಾಗೇ ಆರ್‌ಸಿಬಿ ಮ್ಯಾಚ್ ಇದ್ದಾಗ ಸ್ಟಾರ್‌ಸ್ಪೋರ್ಟ್ಸ್ ಟಿಆರ್‌ಪಿ ಕೂಡ ಹೆಚ್ಚಾಗುತ್ತೆ. ಹಾಗೇ ಜಿಯೋ ಹಾಟ್‌ಸ್ಟಾರ್‌ನಲ್ಲಿ ಬೇರೆ ಪಂದ್ಯ ಇದ್ದಾಗ 10 ಕೋಟಿ ಜನ ವಿಕ್ಷಣೆ ಮಾಡಿದ್ರೆ, ಆರ್‌ಸಿಬಿ ಪಂದ್ಯ ಇದ್ದಾಗ 25 ಕೋಟಿಗೂ ಹೆಚ್ಚು ಜನ ನೋಡ್ತಾ ಇರ್ತಾರೆ. ಹಾಗೇ ಆರ್‌ಸಿಬಿ ಮ್ಯಾಚ್ ಇದ್ದಾಗ ಸ್ಟೇಡಿಯಂ ಕೂಡ ತುಂಬಿ ತುಳುಕುತ್ತೆ. ಹೀಗೆ ಆರ್‌ಸಿಬಿ , ಸಿಎಸ್‌ಕೆ, ಮತ್ತು ಡಿಸಿ ಮುಂಬೈ ಟೀಂಗಳನ್ನ ಹೊರತು ಪಡಿಸಿ, ಉಳಿದ ಟೀಂಗಳ ಪಂದ್ಯಗಳಿಗೆ ಫ್ಯಾನ್ಸ್ ಕ್ರೇಜ್ ಕಮ್ಮಿನೇ.. ಆರ್‌ಸಿಬಿ , ಸಿಎಸ್‌ಕೆ, ಮತ್ತು ಡಿಸಿ ಮುಂಬೈ ಬಿಟ್ಟು ಉಳಿದ 6 ಟೀಂಗಳನ್ನ ಪಂದ್ಯವೇಳೆ ಟಿವಿ ಟಿಆರ್‌ಪಿ ಕೂಡ ಕಮ್ಮಿಯಾಗುತ್ತಿದ್ಯಂತೆ ಜೊತೆಗೆ ಜಿಯೋ ಹಾಟ್‌ಸ್ಟಾರ್ ವೀಕ್ಷಣೆ ಕೂಡ ಕಮ್ಮಿಯಾಗುತ್ತಿದೆ. ಅಂದ್ರೆ ಜನ ಐಪಿಎಲ್‌ನಲ್ಲಿ ತಾವು ಸಪೋರ್ಟ್ ಮಾಡೋ ಟೀಂನ ಆಟ ಯಾವಾಗ ಇರುತ್ತೆ ಅವಾಗ ಮಾತ್ರ ಐಪಿಎಲ್ ನೋಡ್ತಾರೆ.. ಬೇರೆ ಟೀಂ ಪಂದ್ಯ ಇದ್ದಾಗ ಗೂಗಲ್‌ನಲ್ಲೋ ಡಿಜಿಟಲ್ ಫಾರ್ಮೆಂಟ್‌ನಲ್ಲಿ ಯಾರ್ ಗೆದ್ದರು ಯಾರ್ ಸೋತ್ರು ಅನ್ನೋದನ್ನ ತಿಳ್ಕೊಳ್ತಾ ಇದ್ದಾರೆ. ಹಾಗೇ ಯೂಟ್ಯೂಬ್, ಫೇಸ್ ಬುಕ್ ಸೇರಿದಂತೆ ಡಿಜಿಟಲ್‌ನಲ್ಲಿ ಐಪಿಎಲ್ ಬಗ್ಗೆ ಮಾಡೋ ಕಂಟೆಂಟ್ ಕೂಡ ಒಡುತ್ತಿಲ್ಲ.. ಹೆಚ್ಚು ವಿಕ್ಷಣೆ ಆಗುತ್ತಿಲ್ಲ.. ಹೀಗಾಗಿ ಎಲ್ಲೋ ಒಂದ್ಕಡೆ ಐಪಿಎಲ್ ಕ್ರೇಜ್ ಕಮ್ಮಿಯಾಗಿದೆ ಅನ್ಸುತ್ತೆ..
ಅಷ್ಟೇ ಯಾಕೆ ತಮ್ಮ ತವರು ನೆಲದಲ್ಲಿ ಚಾಂಪಿಯನ್ ಆಗಿ ಬಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಈ ಬಾರಿ ಸನ್‌ರೈಸರ್ಸ್ ವಿರುದ್ಧ ಹೆಚ್ಚಿನ ಬೆಂಬಲ ಪಡೆಯುತ್ತೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಅಲ್ಲಿ ನಡೆದದ್ದು ಅದಕ್ಕೆ ವಿರುದ್ಧವಾಗಿ. ಪಂದ್ಯದ ಟಾಸ್‌ಗೆ ಮುಂಚೆಯೇ, ಪ್ರೇಕ್ಷಕರ ಕೊರತೆಯು ಎಲ್ಲರ ಗಮನ ಸೆಳೆದಿತ್ತು. ನಂತರ ಟಾಸ್ ಸಮಯದಲ್ಲಿಯೂ ಕ್ರೀಡಾಂಗಣದಲ್ಲಿ ಯಾವುದೇ ರೀತಿಯ ಶಬ್ದವಿಲ್ಲದ ಕಾರಣ ಅಭಿಮಾನಿಗಳ ಕೊರತೆ ಕಂಡುಬಂದಿತು. ಆದಾಗ್ಯೂ, ಪಂದ್ಯ ಪ್ರಾರಂಭವಾಗುವ ಸ್ವಲ್ಪ ಮೊದಲು ಕ್ರೀಡಾಂಗಣವು ಅಭಿಮಾನಿಗಳಿಂದ ತುಂಬಿರುತ್ತದೆ ಎಂದು ನಿರೀಕ್ಷಿಸಲಾಗಿತ್ತು ಆದರೆ ಅದು ಆಗಲಿಲ್ಲ. ಪಂದ್ಯ ಪ್ರಾರಂಭವಾದ ನಂತರವೂ ಕ್ರೀಡಾಂಗಣದ ವಿವಿಧ ಭಾಗಗಳಲ್ಲಿ ಕೆಲವೇ ಅಭಿಮಾನಿಗಳು ಕಂಡುಬಂದರು. ಸುಮಾರು 68 ಸಾವಿರ ಪ್ರೇಕ್ಷಕರ ಸಾಮರ್ಥ್ಯವಿರುವ ಕ್ರೀಡಾಂಗಣದಲ್ಲಿ 10 ಸಾವಿರ ಅಭಿಮಾನಿಗಳು ಕೂಡ ಇರಲಿಲ್ಲ. ಪರಿಸ್ಥಿತಿ ಎಷ್ಟರ ಮಟ್ಟಿಗೆ ತಲುಪಿತ್ತೆಂದರೆ, ಎಸ್ಆರ್ಹೆಚ್ ವಿಕೆಟ್ ಪತನವಾದಾಗ, ಅಭಿಮಾನಿಗಳ ಸಂಭ್ರಮಾಚರಣೆಯ ಸದ್ದು ಕೇಳಲೇ ಇಲ್ಲ. ಅಂದ್ರೆ ಇಲ್ಲೇ ಗೊತ್ತಾಗುತ್ತೆ ನೋಡಿ. ತವರು ತಂಡದ ಪಂದ್ಯವನ್ನೇ ಜನ ನೋಡೋಕೆ ಬರುತ್ತಿಲ್ಲ. ಆರ್‌ಸಿಬಿ ಸಿಎಸ್‌ಕೆ, ಮುಂಬೈ, ಡೆಲ್ಲಿ ಪಂದ್ಯ ಇದ್ದಾಗ ಮಾತ್ರ ಸ್ಪೇಡಿಯಂ ಕ್ರೇಜ್ ಇರುತ್ತೆ.. ಆದ್ರೆ ಉಳಿದ ತಂಡಗಳು ಆಟ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ಹಾಗಾಗಿದೆ..