ಐಪಿಎಲ್ ಟೂರ್ನಿ ಮೇಲೆ ಲೋಕಸಭಾ ಚುನಾವಣೆ ಎಫೆಕ್ಟ್ – ಭಾರತದಲ್ಲಿ ನಡೆಯುತ್ತಾ IPL ಟೂರ್ನಿ?

ಐಪಿಎಲ್ ಟೂರ್ನಿ ಮೇಲೆ ಲೋಕಸಭಾ ಚುನಾವಣೆ ಎಫೆಕ್ಟ್ – ಭಾರತದಲ್ಲಿ ನಡೆಯುತ್ತಾ IPL ಟೂರ್ನಿ?

ಈ ಬಾರಿಯ ಐಪಿಎಲ್​​ ಟೂರ್ನಿಯ ಬಗ್ಗೆ ಒಂದಷ್ಟು ರೂಮರ್ಸ್​ಗಳು ಹರಿದಾಡ್ತಾ ಇವೆ. ಐಪಿಎಲ್​​ ಭಾರತದಲ್ಲಿ ನಡೆಯಲ್ಲ. ವಿದೇಶಗಳಿಗೆ ಶಿಫ್ಟ್ ಆಗಬಹುದು ಅಂತೆಲ್ಲಾ. ಅದಕ್ಕೆ ಕಾರಣ ಲೋಕಸಭಾ ಚುನಾವಣೆ. ಐಪಿಎಲ್​​ ಟೂರ್ನಿ ಆರಂಭವಾಗುವ ಹೊತ್ತಲ್ಲೇ ಈ ಬಾರಿಯ ಲೋಕಸಭೆ ಚುನಾವಣೆ ಕೂಡ ಇರುತ್ತೆ. ಐಪಿಎಲ್​ ಮತ್ತು ಲೋಕಸಭೆ ಚುನಾವಣೆ ಆಲ್​ಮೋಸ್ಟ್ ಒಂದೇ ಟೈಮ್​ನಲ್ಲಿ ನಡೆಯುತ್ತೆ. ಹೀಗಾಗಿ ಭದ್ರತಾ ವ್ಯವಸ್ಥೆಗಳನ್ನ ಮಾಡೋದೆ ಒಂದು ದೊಡ್ಡ ಚಾಲೆಂಜ್ ಆಗಲಿದೆ. ಇದೇ ಕಾರಣಕ್ಕೆ ಐಪಿಎಲ್​​ನ್ನ ವಿದೇಶಕ್ಕೆ ಶಿಫ್ಟ್ ಮಾಡೋ ಬಗ್ಗೆ ಮಾತುಗಳು ಕೇಳಿ ಬರ್ತಾ ಇರೋದು. ಆದ್ರೆ ಈ ವಿಚಾರಕ್ಕೆ ಸಂಬಂಧಿಸಿ ಈಗ ಒಂದಷ್ಟು ಕ್ಲ್ಯಾರಿಟಿ ಸಿಕ್ಕಿದೆ.

ಇದನ್ನೂ ಓದಿ: ನೋ ಹಿಟ್.. ಓನ್ಲಿ ಡಕ್! –ಸೊನ್ನೆಗೆ ಔಟ್‌ ಆದ ಹಿಟ್​ಮ್ಯಾನ್!

ಲೋಕಸಭೆ ಚುನಾವಣೆ ಇದ್ರೂ ಕೂಡ ಈ ಬಾರಿಯ ಐಪಿಎಲ್​​ ನಡೆಯೋದು ಭಾರತದಲ್ಲೇ. ಈ ವಿಚಾರದಲ್ಲಿ ಯಾವುದೇ ಕನ್​ಫ್ಯೂಷನ್ ಬೇಡ. ಮಾರ್ಚ್​ 22ರಿಂದ ಭಾರತದಲ್ಲೆ ಐಪಿಎಲ್​​ ಟೂರ್ನಿ ಶುರುವಾಗುತ್ತೆ. ಎಪ್ರಿಲ್​ ಮತ್ತು ಮೇನಲ್ಲಿ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆ ಇದೆ. ಆದ್ರೂ ಕೂಡ ಐಪಿಎಲ್​​ ಶೆಡ್ಯೂಲ್​ನಲ್ಲಿ ಮಾತ್ರ ಯಾವುದೇ ಬದಲಾವಣೆಗಳಾಗೋದಿಲ್ಲ. ಐಪಿಎಲ್​ಗೂ ಮುನ್ನ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ 5 ಮ್ಯಾಚ್​ಗಳ ಟೆಸ್ಟ್ ಸೀರಿಸ್​ನ್ನ ಆಡಲಿದೆ. ಐಪಿಎಲ್​​ ಶುರುವಾಗೋಕೆ 11 ದಿನಗಳ ಮೊದಲು ಟೆಸ್ಟ್ ಸೀರಿಸ್ ಅಂತ್ಯವಾಗುತ್ತೆ. ಮಾರ್ಚ್​ 11ಕ್ಕೆ ಧರ್ಮಶಾಲಾದಲ್ಲಿ 5ನೇ ಟೆಸ್ಟ್ ಮ್ಯಾಚ್ ಎಂಡ್ ಆಗುತ್ತೆ. ಹಾಗೆಯೇ ಮಾರ್ಚ್ 14ಕ್ಕೆ ರಣಜಿ ಟ್ರೋಫಿ ಕೂಡ ಮುಗಿಯುತ್ತೆ. ಹೀಗಾಗಿ ಐಪಿಎಲ್​​ ಶುರುವಾಗೋ ವೇಳೆ ಮೇಜರ್​​ ಕ್ರಿಕೆಟ್​​ ಟೂರ್ನಮೆಂಟ್​​ಗಳೆಲ್ಲಾ ಭಾರತದಲ್ಲಿ ಮುಗಿದಿರುತ್ತೆ. ಲೋಕಸಭೆ ಚುನಾವಣೆ ಇದ್ರೂ ಪರ್ವಾಗಿಲ್ಲ, ಐಪಿಎಲ್​​ನ್ನ ಮಾತ್ರ ಭಾರತದಲ್ಲೇ ನಡೆಸೋದು ಅನ್ನೋ ತೀರ್ಮಾನಕ್ಕೆ ಬಿಸಿಸಿಐ ಬಂದಿದೆ.

ಈ ಹಿಂದೆ 2009ರ ಲೋಕಸಭೆ ಚುನಾವಣೆ ವೇಳೆ ಐಪಿಎಲ್​​ ಟೂರ್ನಿಯನ್ನ ದಕ್ಷಿಣ ಆಫ್ರಿಕಾಗೆ ಶಿಫ್ಟ್ ಮಾಡಲಾಗಿತ್ತು. ಕಂಪ್ಲೀಟ್ ಟೂರ್ನಿ ಸೌತ್ ಆಫ್ರಿಕಾದಲ್ಲೇ ನಡೆದಿತ್ತು. ಬಳಿಕ 2014ರ ಲೋಕಸಭಾ ಚುನಾವಣೆ ವೇಳೆಯೂ ಅಷ್ಟೇ, ಐಪಿಎಲ್​ನ್ನ ಯುಎಇಗೆ ಶಿಫ್ಟ್ ಮಾಡಲಾಗಿತ್ತು. ಫಸ್ಟ್​ 20 ಮ್ಯಾಚ್​​ಗಳು ಯುಎಇನಲ್ಲೇ ನಡೆದಿತ್ತು. ಉಳಿದ ಪಂದ್ಯಗಳನ್ನ ಭಾರತದಲ್ಲೇ ನಡೆಸಲಾಗಿತ್ತು. ಆದ್ರೆ 2019ರಲ್ಲಿ ಲೋಕಸಭೆ ಚುನಾವಣೆ ಇದ್ರೂ ಕೂಡ ಐಪಿಎಲ್​​ನ ಎಲ್ಲಾ ಮ್ಯಾಚ್​ಗಳನ್ನೂ ಭಾರತದಲ್ಲೇ ಹೋಸ್ಟ್ ಮಡಲಾಗಿತ್ತು. ಹೀಗಾಗಿ ಈ ಬಾರಿ ಕೂಡ ಬಿಸಿಸಿಐ ಅದೇ ಪ್ಲ್ಯಾನ್​ನಲ್ಲಿದೆ. ಇದ್ರ ಜೊತೆಗೆ ಈ ಬಾರಿ ಐಪಿಎಲ್​​ನ್ನ ಬೇಗನೆ ಅಂತ್ಯಗೊಳಿಸೋಕೂ ಬಿಸಿಸಿಐ ನಿರ್ಧರಿಸಿದೆ. ಯಾಕಂದ್ರೆ ಜೂನ್​ 1ರಿಂದ ಟಿ-20 ವರ್ಲ್ಡ್​ಕಪ್ ಶುರುವಾಗುತ್ತೆ. ಹೀಗಾಗಿ ಅದಕ್ಕೂ ಕೆಲ ದಿನಗಳ ಮುನ್ನವೇ ಐಪಿಎಲ್​ ಎಂಡ್ ಆಗಬೇಕಿರೋದು ಅನಿವಾರ್ಯ.

ಇಲ್ಲಿ ಇನ್ನೊಂದು ವಿಚಾರ ಕೂಡ ಇದೆ. ಲೋಕಸಭೆ ಚುನಾವಣೆ ವೇಳೆ ಯಾವುದಾದ್ರು ರಾಜ್ಯಗಳು ಐಪಿಎಲ್​ ಟೂರ್ನಿಯನ್ನ ಹೋಸ್ಟ್​ ಮಾಡೋಕೆ ನಿರಾಕರಿಸಿದ್ರೆ, ಅದಕ್ಕೆ ಸಂಬಂಧಿಸಿ ಸೂಕ್ತ ಕಾರಣಗಳನ್ನ ನೀಡಿದ್ರೆ ಆಗ ಅ ರಾಜ್ಯದಲ್ಲಿ ನಡೆಯಬೇಕಿದ್ದ ಮ್ಯಾಚ್​ಗಳನ್ನ ಬೇರೆ ರಾಜ್ಯದ ಗ್ರೌಂಡ್​​ಗೆ ಶಿಫ್ಟ್ ಮಾಡಲಾಗುತ್ತೆ. ಈ ನಡುವೆ ಶ್ರೀಲಂಕಾ ಕ್ರಿಕೆಟ್ ಬೋರ್ಡ್​ ತಾನು ಕೆಲ ಐಪಿಎಲ್​​ ಮ್ಯಾಚ್​ಗಳನ್ನ ಹೋಸ್ಟ್ ಮಾಡೋಕೆ ರೆಡಿ ಇರೋದಾಗಿ ಬಿಸಿಸಿಐಗೆ ಮಾಹಿತಿ ನೀಡಿದೆ. ಶ್ರೀಲಂಕಾದಲ್ಲೂ ಕೆಲ ಪಂದ್ಯಗಳನ್ನ ಆಯೋಜಿಸುವಂತೆ ರಿಕ್ವೆಸ್ಟ್ ಮಾಡಿದೆ. ಇದ್ರಿಂದ ಶ್ರೀಲಂಕಾ ಕ್ರಿಕೆಟ್​​ ಬೋರ್ಡ್​ಗೂ ಒಂದಷ್ಟು ಆದಾಯ ಬರುತ್ತೆ. ಆದ್ರೆ ಈ ಬಗ್ಗೆ ಬಿಸಿಸಿಐಗೆ ಯಾವುದೇ ಪ್ಲ್ಯಾನ್ ಇಲ್ಲ.

Sulekha