ಲಂಕಾದಲ್ಲಿ ಸಿರಾಜ್ ಬ್ಯಾಟ್ ಚೆಕ್! ಬಾಲ್ ಒದ್ದು ಪಂತ್ ಪುಂಡಾಟ

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು
ಭಾರತ ತಂಡದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಮತ್ತೊಮ್ಮೆ ಟೀಮ್ ಇಂಡಿಯಾ ಪರ ಕಣಕ್ಕಿಳಿಯಲು ಸಿದ್ಧ ಎಂದು ಹೇಳಿದ್ದಾರೆ. ಆಯ್ಕೆ ಮಾಡುವುದಾದರೆ, ಟೀಮ್ ಇಂಡಿಯಾ ಪರ ಕಣಕ್ಕಿಳಿಯಲು ನಾನಂತು ರೆಡಿ ಇದ್ದೇನೆ. ಮೊದಲು ಆಯ್ಕೆ ಮಾಡಲಿ, ಆಯ್ಕೆ ಮಾಡಬೇಡಿ ಎಂದು ನಾನಂತು ಹೇಳಿಲ್ಲ. ಹಾಗೆ ಹೇಳಲು ಹೇಗೆ ಸಾಧ್ಯ. ಹೀಗಾಗಿ ನಾನು ಸಹ ಕಂಬ್ಯಾಕ್ ಅನ್ನು ಎದುರು ನೋಡುತ್ತಿದ್ದೇನೆ ಎಂದು ಭುವನೇಶ್ವರ್ ಕುಮಾರ್ ಹೇಳಿದ್ದಾರೆ.
ತಂಡದ ಆಯ್ಕೆ ಪಟ್ಟಿಯಲ್ಲಿ ಕೆಲವು ಆಟಗಾರರ ಹೆಸರಿನ ಮುಂದೆ ಸ್ಟಾರ್ * ಚಿಹ್ನೆ ಇರುವುದರ ಬಗ್ಗೆ ಕೇಳಲಾದ ಪ್ರಶ್ನೆಗೆ ವಿವಿಎಸ್ ಲಕ್ಷಣ್ಮ್ ಉತ್ತರಿಸಿದ್ದಾರೆ. ಯಾರ ಹೆಸರಿನ ಮುಂದೆ ಸ್ಟಾರ್ ಇರುತ್ತದೆಯೋ, ಅವರು ‘ಫಿಟ್ನೆಸ್ಗೆ ಒಳಪಟ್ಟು ಆಯ್ಕೆಯಾಗಲಿದ್ದಾರೆ ಎಂದರ್ಥ. ಇದೇ ಕಾರಣದಿಂದಾಗಿ ಶ್ರೀಲಂಕಾ ಸರಣಿಗೆ ಆಯ್ಕೆಯಾಗಿದ್ದ ಜಸ್ಪ್ರೀತ್ ಬುಮ್ರಾ ಅಥವಾ ಸಾಯಿ ಸುದರ್ಶನ್ ಹೆಸರಿನ ಮುಂದೆ ಸ್ಟಾರ್ ನೀಡಲಾಗಿತ್ತು. ಸ್ಟಾರ್ ಚಿಹ್ನೆ ಪಡೆದಿರುವ ಆಟಗಾರರು ಸರಣಿಗೂ ಮುನ್ನ CoE ಕಡೆಯಿಂದ ಸಂಪೂರ್ಣ ಕ್ಲಿನಿಕಲ್ ಗ್ರೀನ್ ಸಿಗ್ನಲ್ ಪಡೆಯುವುದು ಕಡ್ಡಾಯ ಎಂದಿದ್ದಾರೆ.
ಇದನ್ನೂ ಓದಿ: ಲಂಕೆಗೆ ಬೆಂಕಿ ಇಟ್ಟ DSP ಮೊಹಮ್ಮದ್ ಸಿರಾಜ್ – ಲಾಸ್ಟ್ ಓವರ್.. 4 ಸಿಕ್ಸರ್.. ಸಲ್ಯೂಟ್!
ಭಾರತ ಮತ್ತು ಶ್ರೀಲಂಕಾ ಟೆಸ್ಟ್ ಸರಣಿಗೂ ಮುನ್ನ ಕೊಲಂಬೊದಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾವನ್ನ ಗೆಲ್ಲಿಸಿದ್ದಾರೆ. 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಿರಾಜ್ 8 ಎಸೆತಗಳಲ್ಲಿ 27 ರನ್ಗಳ ಅವಶ್ಯಕತೆ ಇರುವಾಗ ತಮ್ಮ ಶಕ್ತಿ ಪ್ರದರ್ಶಿಸಿದ್ರು. ಸಿರಾಜ್ 4 ಸಿಕ್ಸ್. 1 ಫೋರ್ ಸಿಡಿಸಿ ತಂಡವನ್ನ ಗೆಲ್ಲಿಸಿದ್ರು.
ಸಿರಾಜ್ ಅವರ ಈ ಅನಿರೀಕ್ಷಿತ ಬ್ಯಾಟಿಂಗ್ ಪರಾಕ್ರಮವನ್ನು ಕಂಡು ಶ್ರೀಲಂಕಾ ಆಟಗಾರರು ಶಾಕ್ ಆಗಿದ್ದಾರೆ. ಪಂದ್ಯ ಮುಗಿದ ಬಳಿಕ ಶ್ರೀಲಂಕಾದ ಫೀಲ್ಡರ್ಗಳು ಸಿರಾಜ್ ಅವರನ್ನು ಸುತ್ತುವರಿದ್ರು. ಈ ವೇಳೆ ತಮಾಷೆಯಾಗಿ ಅವರ ಕೈಲಿದ್ದ ಬ್ಯಾಟ್ ಅನ್ನು ಕಸಿದುಕೊಂಡು, ಇದರಲ್ಲಿ ಏನೋ ಮ್ಯಾಜಿಕ್ ಇದೆ ಎಂಬಂತೆ ತಿರುಗಿಸಿ ಚೆಕ್ ಮಾಡಿದ್ರು. ಸಿರಾಜ್ ಕೂಡ ನಗುತ್ತಲೇ ತಮ್ಮ ಬ್ಯಾಟ್ ಅನ್ನು ಅವರಿಗೆ ತೋರಿಸಿದರು.
ಲಂಕಾದಲ್ಲಿ ಮೊಹಮ್ಮದ್ ಸಿರಾಜ್ ಬೊಂಬಾಟ್ ಬ್ಯಾಟಿಂಗ್ ಮಾಡುವುದರ ಹಿಂದೆ ಇದ್ದ ಶಕ್ತಿ ಕೆಎಲ್ ರಾಹುಲ್ ಎನ್ನಲಾಗಿದೆ. ಕೆ.ಎಲ್. ರಾಹುಲ್ ಅವರು ಮೊಹಮ್ಮದ್ ಸಿರಾಜ್ಗೆ ವಿಶೇಷ ಬ್ಯಾಟಿಂಗ್ ತರಬೇತಿ ನೀಡಿದ್ದರಂತೆ. ಲೋವರ್ ಆರ್ಡರ್ನಲ್ಲಿ ಬ್ಯಾಟಿಂಗ್ ಮಾಡುವಾಗ ಯಾವ ರೀತಿಯ ಶಾಟ್ಸ್ಗಳನ್ನು ಆಡಬೇಕು ಮತ್ತು ಬೌಂಡರಿಗಳನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ರಾಹುಲ್ ಅಮೂಲ್ಯ ಸಲಹೆಗಳನ್ನು ನೀಡಿದ್ದರು ಎನ್ನಲಾಗಿದೆ.
ಲಂಕಾ ಬೌಲರ್ ಪದೇ ಪದೇ ವೈಡ್ ಎಸೆಯುತ್ತಿದ್ದಕ್ಕೆ ಸಿಟ್ಟಿಗೆದ್ದ ಪಂತ್, ವೈಡ್ ಬಾಲ್ ಅನ್ನು ಕಾಲಿನಿಂದ ಒದ್ದಿದ್ದಾರೆ. ಇದು ಕೆಲವರಿಗೆ ಹಾಸ್ಯಸ್ಪದ ಎನಿಸಿದರೆ, ಇನ್ನೂ ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ. ದಿಲುಮ್ ಸುದೀರ ಎಸೆದ ಬಾಲ್ ವೈಡ್ ಹೋಗುತ್ತಿದ್ದಂತೆ ಪಂತ್ ಕಾಲಿಂದ ಬಾಲ್ ಒದ್ದಿದ್ದಾರೆ. ಇದ್ದನ್ನ ಗಮನಿಸಿದ ಫ್ಯಾನ್ಸ್, ಇದು ಕ್ರಿಕೆಟ್ಗೆ ಮಾಡುತ್ತಿರುವ ಅವಮಾನ ಅಂತ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಶ್ರೀಲಂಕಾ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ. ಗಾಯಗೊಂಡ ಸಾಯಿ ಸುದರ್ಶನ್ ಬದಲಿಗೆ ಸರ್ಫರಾಜ್ ಖಾನ್ ಸೇರ್ಪಡೆ ಮಾಡಲಾಗಿದೆ. ಬಹಳ ಸಮಯದ ನಂತರ ರಾಷ್ಟ್ರೀಯ ತಂಡಕ್ಕೆ ಮರಳಿದ ಸರ್ಫರಾಜ್ಗೆ ಇದು ದೊಡ್ಡ ಅವಕಾಶ. ಆಗಸ್ಟ್ 15 ರಿಂದ ಸರಣಿ ನಡೆಯಲಿದ್ದು, ಪ್ರಸ್ತುತ ಭಾರತದಲ್ಲಿರುವ ಸರ್ಫರಾಜ್ ಖಾನ್ ಶೀಘ್ರದಲ್ಲೇ ಕೊಲಂಬೊದಲ್ಲಿ ಟೀಂ ಇಂಡಿಯಾವನ್ನು ಸೇರಲಿದ್ದಾರೆ
ಲಂಕಾ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಜಡೇಜಾ ಅವರು ಕುಲ್ದೀಪ್ ಯಾದವ್ ಅವರ ಬೌಲಿಂಗ್ ಶೈಲಿಯನ್ನು ಅನುಕರಣೆ ಮಾಡಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೊದಲ್ಲಿ, ಜಡೇಜಾ ಕುಲ್ದೀಪ್ ಯಾದವ್ ಅವರ ಬೌಲಿಂಗ್ ಶೈಲಿಯನ್ನು ಹಾಸ್ಯಮಯವಾಗಿ ಅನುಕರಿಸುತ್ತಿರುವುದು ಕಂಡುಬಂದಿದೆ. ಅವರ ಅನುಕರಣೆ ಕಂಡ ಗಂಭೀರ್ಗೆ ನಗುವನ್ನು ತಡೆಯಲು ಸಾಧ್ಯವಾಗದೆ, ಬಿದ್ದು ಬಿದ್ದು ನಕ್ಕಿದ್ದಾರೆ.
ಟೀಮ್ ಇಂಡಿಯಾ ಆಟಗಾರರು ಸದ್ಯ ಅನುಭವಿಸುತ್ತಿರುವ ಸರಣಿ ಗಾಯದ ಸಮಸ್ಯೆಗಳ ಹಿಂದೆ ಬಿಸಿಸಿಐನ ಅತಿಯಾದ ಕೆಲಸದ ಒತ್ತಡ ಮಾತ್ರ ಕಾರಣವಲ್ಲ, ಬದಲಿಗೆ ಐಪಿಎಲ್ ತಂಡಗಳ ಬಲವಂತದ ಆಟವೂ ಇದೆ ಎಂಬ ಆಘಾತಕಾರಿ ಸತ್ಯ ಹೊರಬಿದ್ದಿದೆ. ಫ್ರಾಂಚೈಸಿಗಳು ಹರಾಜಿನಲ್ಲಿ ಆಟಗಾರರ ಮೇಲೆ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿರುತ್ತವೆ. ಸಣ್ಣ-ಪುಟ್ಟ ಗಾಯಗಳಿದ್ದರೂ ಆಟಗಾರರು ವಿಶ್ರಾಂತಿ ಪಡೆಯದಂತೆ ಅವರ ಮೇಲೆ ತೀವ್ರ ಮಾನಸಿಕ ಮತ್ತು ಒಪ್ಪಂದದ ಒತ್ತಡ ಹೇರಲಾಗುತ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ.
ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ, ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಶೈಲಿ ಮಹೇಂದ್ರ ಸಿಂಗ್ ಧೋನಿಯ ಬ್ಯಾಟಿಂಗ್ ಶೈಲಿಯನ್ನು ಹೋಲುತ್ತದೆ ಎಂದು ಹೇಳಿದ್ದಾರೆ. ವೈಭವ್ ಕ್ರೀಸ್ನಲ್ಲಿ ತನ್ನ ಬ್ಯಾಕ್ಫೂಟ್ ಮೇಲೆ ಡೀಪ್ ಆಗಿ ಆಡುತ್ತಾತೆ. ಆಫ್-ಸ್ಟಂಪ್ನ ಹೊರಗೆ ಆಡುವುದು ಕಡಿಮೆ. ಹಾಗಾಗಿ ಇವರ ಬ್ಯಾಟಿಂಗ್ ಶೈಲಿ ಧೋನಿಯಂತೆಯೇ ಇರುತ್ತದೆ ಎಂದು ಹೇಳಿದ್ದಾರೆ.

ನೋಡಿರಿ

