IPL ಸ್ಟಾರ್ ಗಳೇ ಟೀಂ ಇಂಡಿಯಾಗೆ ವಿಲನ್ – ENG ತಂಡದಲ್ಲಿ RCB ಸ್ಟಾರ್ಸ್ ಹವಾ!
ರಜತ್, ಕೃನಾಲ್, ಭುವಿ ಬೇಡವಾಗಿದ್ದೇಕೆ?

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ-20ಐ ಸರಣಿ ಆರಂಭಕ್ಕೆ ಕೌಂಟ್ಡೌನ್ ಸ್ಟಾರ್ಟ್ ಆಗಿದೆ. ಒಂದ್ಕಡೆ ಐರ್ಲೆಂಡ್ ವಿರುದ್ಧ ಕ್ಲೀನ್ ಸ್ವೀಪ್ ಆಗಿರೋ ಭಾರತಕ್ಕೆ ಈಗ ಡು ಆರ್ ಡೈ ಸಿಚುಯೇಷನ್. ಅತ್ತ ವಿಶ್ವಚಾಂಪಿಯನ್ ಭಾರತವನ್ನ ಸೋಲಿಸೋಕೆ ಇಂಗ್ಲೆಂಡ್ ಪಡೆಯಲ್ಲಿ ಐಪಿಎಲ್ ಸ್ಟಾರ್ಗಳ ದಂಡೇ ಇದೆ. ಒಂದ್ಕಡೆ ಒಬ್ಬರೂ ಆರ್ಸಿಬಿ ಪ್ಲೇಯರ್ ಇಲ್ಲದ ಭಾರತ ತಂಡ ಮತ್ತೊಂದು ಕಡೆ ಮೂವರು ಆರ್ಸಿಬಿ ಸ್ಟಾರ್ಸ್ ಇರೋ ಇಂಗ್ಲೆಂಡ್ ಟೀಂ. ಟೋಟಲಿ ಡಿಫ್ರೆಂಡ್ ಸ್ಕ್ಯಾಡ್ನಲ್ಲಿ ಕಣಕ್ಕಿಳಿಯೋ ಈ ಪಂದ್ಯ ತುಂಬಾನೇ ಇಂಟ್ರೆಸ್ಟಿಂಗ್ ಆಗಿರಲಿದೆ.
ಇದನ್ನೂ ಓದಿ : ವೈಭವ್ ಬೇಡ.. ಸಂಜು ಬೆಸ್ಟ್- ಭಾರತದ ಸೋಲಿಗೆ PAK ಸಂಭ್ರಮ
ಭಾರತ ವಿರುದ್ಧದ ಟಿ-20ಐ ಸರಣಿಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ 17 ಸದಸ್ಯರ ತಂಡವನ್ನ ಅನೌನ್ಸ್ ಮಾಡಿತ್ತು. ಟಿ-20 ವಿಶ್ವಕಪ್ನಲ್ಲಿ ಬ್ಯಾಕ್ ಟು ಬ್ಯಾಕ್ ಚಾಂಪಿಯನ್ ಆಗಿರೋ ಭಾರತ ತಂಡವನ್ನ ಹೊಸ ಕ್ಯಾಪ್ಟನ್ ಅಡಿಯಲ್ಲಿ ಕಟ್ಟಿ ಹಾಕೋಕೆ ಬಲಿಷ್ಠ ಪಡೆಯನ್ನೇ ಕಟ್ಟಿದ್ದಾರೆ. ಌಂಡ್ ಈ ಸ್ಕ್ಯಾಡ್ನಲ್ಲಿ ಐಪಿಎಲ್ ಸ್ಟಾರ್ಗಳಿಗೇ ಪ್ರಿಯಾರಿಟಿ ನೀಡಿರೋದು ಗೊತ್ತಾಗುತ್ತೆ.
17 ಸದಸ್ಯರ ತಂಡದಲ್ಲಿ 8 ಜನ ಐಪಿಎಲ್ ಪ್ಲೇಯರ್ಸ್!
ಭಾರತ ವಿರುದ್ಧದ ಸರಣಿಗೆ ಅನೌನ್ಸ್ ಆಗಿರೋ 17 ಸದಸ್ಯರ ತಂಡದಲ್ಲಿ 8 ಮಂದಿ ಐಪಿಎಲ್ನಲ್ಲಿ ಆಡುವ ಪ್ಲೇಯರ್ಗಳೇ ಇದ್ದಾರೆ. ಇನ್ನೂ ನಾಲ್ವರು ಐಪಿಎಲ್ ಆಡ್ತೀವಿ ಅಂತಾ ಬಂದಿದ್ರೂ ಅನ್ಸೋಲ್ಡ್ ಆದವ್ರು ಇದ್ದಾರೆ. ಅಷ್ಟೇ ಇಲ್ಲ ಐಪಿಎಲ್ನಲ್ಲಿ ಆಡೋಕೆ ಸೆಲೆಕ್ಟ್ ಆಗಿದ್ರೂ ಇಂಜುರಿ ಕಾರಣಕ್ಕೆ ರೂಲ್ಡ್ ಔಟ್ ಆಗಿರೋ ಇಬ್ಬರು ಪ್ಲೇಯರ್ಸ್ ಕೂಡ ಇದ್ದಾರೆ. ಹ್ಯಾರಿ ಬ್ರೂಕ್ ಕ್ಯಾಪ್ಟನ್ಸಿಯ ಇಂಗ್ಲೆಂಡ್ ತಂಡದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವ ರೆಹಾನ್ ಅಹ್ಮದ್, ರಾಜಸ್ಥಾನ ರಾಯಲ್ಸ್ ತಂಡದ ಜೋಫ್ರಾ ಆರ್ಚರ್, ಆರ್ ಸಿಬಿಯ ಫಿಲ್ ಸಾಲ್ಟ್, ಜೇಕಬ್ ಬೆಥೆಲ್, ಜೋರ್ಡಾನ್ ಕಾಕ್ಸ್, ಗುಜರಾತ್ ತಂಡದ ಜೋಸ್ ಬಟ್ಲರ್, ಲ್ಯೂಕ್ ವುಡ್, ಮುಂಬೈ ಇಂಡಿಯನ್ಸ್ ನ ವಿಲ್ ಜಾಕ್ಸ್ ಇದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ 2026ರ ಐಪಿಎಲ್ ಚಾಂಪಿಯನ್ ಆರ್ಸಿಬಿ ತಂಡದ ಮೂವರು ಪ್ಲೇಯರ್ಸ್ ಆಂಗ್ಲರ ಟೀಮ್ನಲ್ಲಿದ್ರೆ ಭಾರತದ ತಂಡದಲ್ಲಿ ಒಬ್ರೇ ಒಬ್ರಿಗೂ ಚಾನ್ಸ್ ಕೊಟ್ಟಿಲ್ಲ.
ಇಂಗ್ಲೆಂಡ್ ನಲ್ಲಿ ಚಾನ್ಸ್.. ಭಾರತದಲ್ಲಿ ಅಸಡ್ಡೆ ಯಾಕೆ?
ಕಳೆದ ಆವೃತ್ತಿಯಲ್ಲಿ ಆರ್ಸಿಬಿ ಪರ ಆಡಿದ ಮೂವರು ಆಟಗಾರರು ಸದ್ಯ ಇಂಗ್ಲೆಂಡ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಫಿಲ್ ಸಾಲ್ಟ್, ಜೇಕಬ್ ಬೆಥೆಲ್ ಹಾಗೇ ಜೋರ್ಡಾನ್ ಕಾಕ್ಸ್.. ಫಿಲ್ ಸಾಲ್ಟ್ ಬೆಂಗಳೂರು ಪರ ಆರಂಭದ 6 ಪಂದ್ಯಗಳಲ್ಲಿ ಓಪನರ್ ಆಗಿ ಕಣಕ್ಕಿಳಿದಿದ್ರು. ಆ ನಂತ್ರ ಇಂಜುರಿಯಿಂದಾಗಿ ಪ್ಲೇಯಿಂಗ್ 11ನಲ್ಲಿ ಆಡೋಕೆ ಸಾಧ್ಯವಾಗ್ಲಿಲ್ಲ. ಹಾಗೇ ಸಾಲ್ಡ್ ಬದಲಿಗೆ ಮತ್ತೊಬ್ಬ ಇಂಗ್ಲೆಂಡ್ ಪ್ಲೇಯರ್ ಜೇಕಬ್ ಬೆಥೆಲ್ ಅವಕಾಶ ಗಿಟ್ಟಿಸಿಕೊಂಡಿದ್ರು. 7 ಇನ್ನಿಂಗ್ಸ್ಗಳಲ್ಲಿ ಆಡಿಸಿದ್ರೂ ಬೆಥೆಲ್ ಕಡೆಯಿಂದ ಬಿಗ್ ಇನ್ನಿಂಗ್ಸ್ ಬರಲಿಲ್ಲ. ಸೋ ಪ್ಲೇ ಆಫ್ಸ್ ಪಂದ್ಯಗಳ ವೇಳೆ ತವರಿಗೆ ವಾಪಸ್ ಆಗಿದ್ರು. ಇನ್ನು ಜೋರ್ಡಾನ್ಸ್ ಕಾಕ್ಸ್ ತಂಡದಲ್ಲಿದ್ರೂ ಫೀಲ್ಡಿಂಗ್ ವೇಳೆ ಚಾನ್ಸ್ ಸಿಕ್ಕಿದ್ರೂ ಬ್ಯಾಟಿಂಗ್ಗೆ ಅವಕಾಶ ಇರ್ಲಿಲ್ಲ. ಹೀಗಿದ್ರೂ ಈಗ ಭಾರತದ ವಿರುದ್ಧ ಟಿ-20ಐ ಸ್ಕ್ವಾಡ್ನಲ್ಲಿದ್ದಾರೆ. ಆದ್ರೆ ಅದೇ ಐಪಿಎಲ್ನಲ್ಲಿ ಬೆಂಗಳೂರನ್ನ ಚಾಂಪಿಯನ್ ಮಾಡಿದ್ದ ಮೂವರು ಪ್ಲೇಯರ್ಸ್ ಭಾರತದ ಟಿ-20ಐ ಟೀಮ್ನಲ್ಲಿ ಆಡೋಕೆ ಮೋಸ್ಟ್ ಡಿಸರ್ವಿಂಗ್ ಇದ್ರೂ ಸೆಲೆಕ್ಟ್ ಆಗಿಲ್ಲ.
ಸೂಪರ್ ಸ್ಟಾರ್ಸ್ ಬಿಟ್ಟ ಭಾರತ!
- ಮಿಡಲ್ ಆರ್ಡರ್ ನಲ್ಲಿ ಸ್ಟ್ರೆಂಥ್ ರಜತ್ ಪಾಟಿದಾರ್!
- ಬ್ಯಾಟಿಂಗ್ & ಬೌಲಿಂಗ್ ಎರಡ್ರಲ್ಲೂ ಪ್ಲಸ್ ಕೃನಾಲ್ ಪಾಂಡ್ಯ
- ಪವರ್ ಪ್ಲೇನಲ್ಲೇ ವಿಕೆಟ್ ತೆಗೆಯೋ ಬೌಲಿಂಗ್ ಅಸ್ತ್ರ ಭುವನೇಶ್ವರ್

ನೋಡಿರಿ

