IPL ಹೀರೋ.. TEST ಝೀರೋ – ಆಲ್ ರೌಂಡರ್ ಗಳೇ ಪಂದ್ಯ ಗೆಲ್ಲಿಸೋದಾ?
BCCI ಬ್ಲಂಡರ್ಸ್ ಗೆ ಬೆಲೆ ತೆತ್ತ ಭಾರತ

IPL ಹೀರೋ.. TEST ಝೀರೋ – ಆಲ್ ರೌಂಡರ್ ಗಳೇ ಪಂದ್ಯ ಗೆಲ್ಲಿಸೋದಾ?BCCI ಬ್ಲಂಡರ್ಸ್ ಗೆ ಬೆಲೆ ತೆತ್ತ ಭಾರತ

ಟೆಸ್ಟ್ ಸರಣಿ ನಡೀತಿರೋದು ಭಾರತದಲ್ಲೇ ಆದ್ರೂ ಡಾಮಿನೇಷನ್ ಮಾಡಿದ್ದು ಮಾತ್ರ ಸೌತ್ ಆಫ್ರಿಕಾ.  ಕೊಲ್ಕತ್ತಾದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಲೋ ಸ್ಕೋರ್ ಪಿಚ್ ಅಂತಾ ಹೇಳಿ ಎರಡೂ ತಂಡಗಳಿಂದ ಬಿಗ್ ಸ್ಕೋರ್ ಬರ್ಲಿಲ್ಲ. ಆದ್ರೆ ಫೈನಲ್ಲಾಗಿ ದಕ್ಷಿಣ ಆಫ್ರಿಕಾ ಪಂದ್ಯ ಗೆದ್ದಿತ್ತು. ಇನ್ನು ಗುವಾಹಟಿ ಪಿಚ್​​ನಲ್ಲಿ ಸೌತ್ ಆಫ್ರಿಕಾ ಪ್ಲೇಯರ್ಸ್ ಬ್ಯಾಟಿಂಗ್ & ಬೌಲಿಂಗ್ ಎರಡರಲ್ಲೂ ನೆಕ್ಸ್​​ಟ್ ಲೆವೆಲ್ ಪರ್ಫಾಮೆನ್ಸ್ ನೀಡಿದ್ರು. ಭಾರತದ ಪ್ಲೇಯರ್ಸ್ ಇಲ್ಲೂ ಕ್ಲಿಕ್ ಆಗ್ಲಿಲ್ಲ. ವಿದೇಶದಲ್ಲಿ ಸಕ್ಸಸ್ ಆದವ್ರು ತವರಿನಲ್ಲಿ ಯಾಕೆ ಸೋಲ್ತಿದ್ದಾರೆ ಅಂದ್ರೆ ಅದಕ್ಕೆ ಒಂದಷ್ಟು ಕಾರಣಗಳಿವೆ.

ಇದನ್ನೂ ಓದಿ : 1.10 ಕೋಟಿ ರೂ.ಗೆ ಡೆಲ್ಲಿ ತಂಡದ ಪಾಲಾದ ದಕ್ಷಿಣ ಆಫ್ರಿಕಾ ನಾಯಕಿ ಲಾರಾ ವೊಲ್ವಾರ್ಡ್ಟ್

ವಿಶ್ವಕ್ರಿಕೆಟ್​ನಲ್ಲಿ ಟೀಂ ಇಂಡಿಯಾ ಅತೀ ಬಲಿಷ್ಠ ತಂಡ.. ಟೆಸ್ಟ್ ಕ್ರಿಕೆಟ್​​ನಲ್ಲಂತೂ ಭಾರತವನ್ನ ಕಟ್ಟಿ ಹಾಕಿದವ್ರೇ ಇಲ್ಲ. ಕಪಿಲ್​ದೇವ್​ರಿಂದ ಹಿಡಿದು ರೋಹಿತ್ ಶರ್ಮಾವರೆಗೂ ಭಾರತವ ವಿಜಯಯಾತ್ರೆ ಉತ್ತುಂಗದಲ್ಲಿತ್ತು. ಆದ್ರೆ ಯಾವಾಗ ಗೌತಮ್ ಗಂಭೀರ್ ಹೆಡ್​ಕೋಚ್ ಆದ್ರೋ ಅಲ್ಲೀಂದ ಈಚೆಗೆ ರೆಡ್ ಬಾಲ್ ಫಾರ್ಮೆಟ್ ನೆಲ ಕಚ್ಚುತ್ತಲೇ ಇದೆ. ತವರಿನಲ್ಲಂತೂ ಅತೀ ಕೆಟ್ಟ ಪ್ರದರ್ಶನ ಬರ್ತಿದೆ. ಕಪಿಲ್ ದೇವ್, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕಟ್ಟಿದ್ದ ಬೃಹತ್ ಸಾಮ್ರಾಜ್ಯ ಅಲುಗಾಡೋಕೆ ಶುರು ಮಾಡಿದೆ. ಅದಕ್ಕೆ ಕಾರಣ ತಂಡದಲ್ಲಿ ಆಗ್ತಿರೋ ಬದಲಾವಣೆಗಳು.

ಗಂಭೀರ್ ಮಾಡ್ತಿರೋ ಎಡವಟ್ಟುಗಳು!

  1. ಐಪಿಎಲ್ ಹೀರೋಗಳಿಗೆ ಟೆಸ್ಟ್ ಫಾರ್ಮೆಟ್ ನಲ್ಲಿ ಅವಕಾಶ
  2. ರಣಜಿ ಹೀರೋಗಳನ್ನ ವಿದೇಶಿ ಪ್ರವಾಸಗಳಿಗೆ ಸೆಲೆಕ್ಟ್ ಮಾಡೋದು
  3. ತಂಡದ ಸೆಲೆಕ್ಷನ್ ನಲ್ಲಿ ಆಲ್ ​ರೌಂಡರ್ ​ಗಳ ಮೇಲೆಯೇ ಫೋಕಸ್
  4. ಲೆಫ್ಟ್ ಹ್ಯಾಂಡ್ ಬ್ಯಾಟರ್​ ಗಳ ಮೇಲೆಯೇ ಮೋಹ, ಹೆಚ್ಚು ಅವಕಾಸ
  5. ಪಿಚ್ ವಿಚಾರದಲ್ಲೂ ಸ್ಪಿನ್ ಗೆ ಒತ್ತು, ವೇಗಿಗಳನ್ನ ನೆಗ್ಲೆಕ್ಟ್ ಮಾಡೋದು

Shantha Kumari