SRHಗೆ ಅಭಿಷೇಕ್ ಗುಡ್ ಬೈ? – IPL ಕ್ಯಾಪ್ಟನ್ಸಿ ಆಫರ್ ಸಿಕ್ಕಿತಾ?
ಟಿಂ ಇಂಡಿಯಾ ಪಟ್ಟಕ್ಕೂ ಕಣ್ಣಿಟ್ರಾ?

SRHಗೆ ಅಭಿಷೇಕ್ ಗುಡ್ ಬೈ? – IPL ಕ್ಯಾಪ್ಟನ್ಸಿ ಆಫರ್ ಸಿಕ್ಕಿತಾ?ಟಿಂ ಇಂಡಿಯಾ ಪಟ್ಟಕ್ಕೂ ಕಣ್ಣಿಟ್ರಾ?

ಟೀಂ ಇಂಡಿಯಾ ಟಿ-20ಐ ತಂಡದ ಹಾರ್ಡ್ ಹಿಟ್ಟರ್ ಅಭಿಷೇಕ್ ಶರ್ಮಾ ಬ್ಯಾಟಿಂಗ್​ನಲ್ಲಿ ಈಗಾಗ್ಲೇ ತಮ್ಮದೇ ಆದ ಟ್ರೇಡ್​ಮಾರ್ಕ್ ಸೆಟ್ ಮಾಡಿದ್ದಾರೆ. ಏಷ್ಯನ್ ಗೇಮ್ಸ್ ಫೈನಲ್​ನಲ್ಲೂ ಪಾಕಿಸ್ತಾನ ವಿರುದ್ಧ ಜಸ್ಟ್ 28 ಬಾಲಲ್ಲೇ 61 ರನ್ಸ್ ಸಿಡಿಸಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿನೂ ಪಡೆದ್ರು. ಹೀಗೆ ಡೇ ಬೈ ಡೇ ಡೇಂಜರಸ್ ಆಗ್ತಿರೋ ಅಭಿಷೇಕ್ ಶರ್ಮಾರ ನೆಕ್ಸ್​ಟ್ ಟಾರ್ಗೆಟ್ ಕ್ಯಾಪ್ಟನ್ಸಿ. ಕ್ಯಾಪ್ಟನ್ ಪಟ್ಟಕ್ಕಾಗಿ ಅತಿ ದೊಡ್ಡ ನಿರ್ಧಾರಕ್ಕೂ ಮುಂದಾಗಿದ್ದಾರೆ. ಐಪಿಎಲ್​ನಲ್ಲಿ ಹೈದ್ರಾಬಾದ್ ತಂಡಕ್ಕೆ ಗುಡ್ ಬೈ ಹೇಳೋ ಚಾನ್ಸಸ್ ಇದೆ.

ಇದನ್ನೂ ಓದಿ : ಕೊಹ್ಲಿ ನಿವೃತ್ತಿ ಆದ್ರೆ… ತಿಲಕ್‌ಗೆ 3ನೇ ಕ್ರಮಾಂಕ! – ವಾಸಿಂ ಜಾಫರ್ ಕೊಟ್ರಾ ಬಿಗ್ ಹಿಂಟ್‌?

ಸನ್ ರೈಸರ್ಸ್ ಹೈದ್ರಾಬಾದ್ ತಂಡದ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಈಗ ಐಪಿಎಲ್​ನಲ್ಲಿ ಹೊಸ ಹೆಜ್ಜೆ ಇಡೋ ನಿರ್ಧಾರ ಮಾಡಿದಂತಿದೆ. ಅಂದ್ರೆ 2027 ಐಪಿಎಲ್ ಮಿನಿ ಹರಾಜಿಗೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್ ಟೀಮ್​ಗೆ ಗುಡ್ ಬೈ ಹೇಳಬಹುದು. ಯಾಕಂದ್ರೆ ಆರೆಂಜ್ ಆರ್ಮಿಯಲ್ಲಿ ಕ್ಯಾಪ್ಟನ್ ಆಗ್ಬೇಕಿ ಅನ್ಕೊಂಡಿದ್ದ ಅಭಿಗೆ ಅದು ಸಾಧ್ಯ ಇಲ್ಲ ಅನ್ನೋದು ಗೊತ್ತಾಗ್ತಿದ್ದಂತೆ ತಂಡವನ್ನೇ ಬದಲಿಸೋ ನಿರ್ಧಾರ ಮಾಡಿದ್ದಾರೆ. ಌಂಡ್ ಅಭಿಷೇಕ್ ರನ್ನ ವೆಲ್ಕಂ ಮಾಡೋಕೆ ಸಾಕಷ್ಟು ತಂಡಗಳೂ ಎಕ್ಸೈಟ್ ಆಗಿವೆ.

ಪ್ಯಾಟ್ ಕಮಿನ್ಸ್ ಗೈರಿನಲ್ಲಿ ಕಿಶನ್ ಕ್ಯಾಪ್ಟನ್.. ಅಭಿಷೇಕ್ ಅಸಮಾಧಾನ!

20ನೇ ಆವೃತ್ತಿಯ ಐಪಿಎಲ್​ಗಾಗಿ ಈಗಾಗ್ಲೇ ಸಾಕಷ್ಟು ತಂಡಗಳಲ್ಲಿ ಬದಲಾವಣೆಗಳಾಗಿವೆ. ನೆಕ್ಸ್​ಟ್ ಕೂಡ ಆಗ್ಬೇಕಿದೆ. ಮುಂದಿನ ಡಿಸೆಂಬರ್ ತಿಂಗಳಲ್ಲಿ ಮಿನಿ ಹರಾಜು ನಡೆಯಲಿದೆ. ಅದಕ್ಕೂ ಮುನ್ನ ಎಲ್ಲಾ 10 ಫ್ರಾಂಚೈಸಿಗಳು ರಿಲೀಟ್ ರಿಟೇಲ್ ಪ್ಲೇಯರ್ಸ್ ಲಿಸ್ಟ್ ಅನೌನ್ಸ್ ಮಾಡ್ಬೇಕು. ಹೀಗಿರುವಾಗ್ಲೇ ಸನ್​ರೈಸರ್ಸ್​ ಹೈದರಾಬಾದ್ ತಂಡದ ಪವರ್ ಹಿಟ್ಟರ್ ಅಭಿಷೇಕ್ ಶರ್ಮಾ ತಂಡವನ್ನ ಬಿಡೋಕೆ ನಿರ್ಧಾರ ಮಾಡಿದ್ದಾರೆ ಎನ್ನಲಾಗ್ತಿದೆ. ನಾಯಕತ್ವದ ರೇಸ್​ನಿಂದ ತಮ್ಮನ್ನ ಹೊರಗಿಟ್ಟಿದ್ದಕ್ಕೆ ಇಂಥಾದ್ದೊಂದು ನಿರ್ಧಾರಕ್ಕೆ ಬಂದಿದ್ದಾರೆ. ಕಳೆದ ಆವೃತ್ತಿಯಲ್ಲಿ ಪ್ಯಾಟ್ ಕಮ್ಮಿನ್ಸ್ ಆಬ್ಸೆನ್ಸ್​ನಲ್ಲಿ ಆರಂಭದ ಪಂದ್ಯಗಳಿಗೆ ಹೈದ್ರಾಬಾದ್ ತಂಡಕ್ಕೆ ಹಂಗಾಮಿ ನಾಯಕನಾಗಿ ಇಶಾನ್ ಕಿಶನ್ ಅವರನ್ನು ನೇಮಿಸಿತ್ತು. ಆಡಳಿತ ಮಂಡಳಿಯ ಇದೇ ನಿರ್ಧಾರ ಅಭಿ ಸಿಟ್ಟಿಗೆ ಕಾರಣ ಎನ್ನಲಾಗಿದೆ. ನೆಕ್ಸ್​ಟ್ ಆವೃತ್ತಿಗೆ ಪ್ಯಾಟ್ ಕಮ್ಮಿನ್ಸ್ ಹೈದರಾಬಾದ್ ತಂಡದಲ್ಲಿ ಆಡುವುದು ಡೌಟ್ ಇದೆ. ಅಪ್​ಕಮಿಂಗ್ ಆಶಸ್ ಸರಣಿ ಮತ್ತು 2027 ರ ಏಕದಿನ ವಿಶ್ವಕಪ್‌ ಪ್ರಿಯಾರಿಟಿ ನೀಡೋದ್ರಿಂದ ಆಸ್ಟ್ರೇಲಿಯಾ ಪರ ಕಮಿಟ್​ಮೆಂಟ್​ ಇರೋದ್ರಿಂದ ಐಪಿಎಲ್​ನಿಂದ ಹೊರಗಿರೋ ಡಿಸಿಚನ್​ಗೆ ಬಂದಿದ್ದಾರೆ.  ಆದ್ರೆ ಕಮಿನ್ಸ್ ಆಬ್ಸೆನ್ಸ್​ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಆಡಳಿತ ಮಂಡಳಿಯು ಇಶಾನ್ ಕಿಶನ್ ಅವರನ್ನು ಮತ್ತೆ ತಂಡದ ನಾಯಕನನ್ನಾಗಿ ಮಾಡಲು ನಿರ್ಧರಿಸಿದೆ. ಆದರೆ 2019 ರಿಂದ ಹೈದರಾಬಾದ್‌ ತಂಡದಲ್ಲಿರುವ ಅಭಿಷೇಕ್ ತನಗೆ ನಾಯಕತ್ವ ಸಿಗದಿರುವುದಕ್ಕೆ ಅಸಮಾಧಾನಗೊಂಡಿದ್ದು, ಹೊಸ ತಂಡವನ್ನು ಆಯ್ಕೆ ಮಾಡುವ ಬಗ್ಗೆ ಕೆಲ ಫ್ರಾಂಚೈಸಿಗಳೊಂದಿಗೆ ಮಾತುಕತೆ ಈಗಾಗಲೇ ಆರಂಭಿಸಿದ್ದಾರೆ ಎನ್ನುವ ಸುದ್ದಿಗಳು ಹೊರಬಿದ್ದಿವೆ.

ಅಭಿ ಮೇಲೆ ಯಾರೆಲ್ಲಾ ಕಣ್ಣು?

5 ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಕಡೆಯಿಂದ ಮಾತುಕತೆ

ಯುವಿ ಬ್ಯಾಟಿಂಗ್ ಕೋಚ್ & ಮೆಂಟರ್ ಆಗಿರುವ ಡೆಲ್ಲಿಯಿಂದಲೂ ಆಫರ್

ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ಕಿಂಗ್ಸ್ ಕಡೆಯಿಂದಲೇ ಆಸಕ್ತಿ

ಅಭಿಷೇಕ್ ಮೂಲತಃ ಪಂಜಾಬ್‌, ಡೊಮೆಸ್ಟಿಕ್ ಕ್ರಿಕೆಟ್‌ ನಲ್ಲಿ ತಂಡದ ಕ್ಯಾಪ್ಟನ್

ಇನ್ನು ಇಷ್ಟೆಲ್ಲಾ ಬೆಳವಣಿಗೆಗಳ ಬಳಿಕ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಿಇಓ ಕೆ. ಷಣ್ಮುಗಂ ಅವರು ರಿಯಾಕ್ಟ್ ಮಾಡಿದ್ದಾರೆ. ಇವೆಲ್ಲವೂ ಕೇವಲ ಸುಳ್ಳು ಸುದ್ದಿಯಾಗಿದ್ದು, ಅಭಿಷೇಕ್ ತಂಡದಲ್ಲೇ ಮುಂದುವರಿಯಲಿದ್ದಾರೆ ಎಂದಿದ್ದಾರೆ, ಆದ್ರೆ ಇನ್​ಸೈಡ್​ನಲ್ಲಿ ಮಾತ್ರ ಈ ಬಗ್ಗೆ ಡವಲಪ್​ಮೆಂಟ್ಸ್ ಆಗ್ತಿದೆ.

Shantha Kumari

Leave a Reply

Your email address will not be published. Required fields are marked *