RCB ಗೆದ್ದ ಮೇಲೆ ಅಂಕಪಟ್ಟಿ ಲೆಕ್ಕಾಚಾರ ಉಲ್ಟಾ – 3 ಸ್ಥಾನಗಳಿಗೆ 7 ತಂಡಗಳ ಜಿದ್ದಾಜಿದ್ದಿ!

ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲ್ಲೋ ಮೂಲಕ ಪಾಯಿಂಟ್ಸ್ ಪಟ್ಟಿಯ ಲೆಕ್ಕಾಚಾರ ಉಲ್ಟಾ ಪಲ್ಟಾ ಆಗಿದೆ. ಕೆಲ ತಂಡಗಳ ಪ್ಲೇ ಆಫ್ಸ್ ಕನಸು ಜೀವಂತವಾಗಿದ್ರೆ ಇನ್ನೂ ಕೆಲವರು ಕ್ರಿಟಿಕಲ್ ಕಂಡೀಷನ್ ನಲ್ಲಿದ್ದಾರೆ. ಮುಂದಿನ ಒಂದೊಂದು ಪಂದ್ಯಗಳು ಅವರ ಹಣೆಬರಹದ ಜೊತೆಗೆ ಇತರೆ ತಂಡಗಳ ಭವಿಷ್ಯವನ್ನೂ ನಿರ್ಧಾರ ಮಾಡಲಿದೆ.
ಇದನ್ನೂ ಓದಿ : ಕೊಹ್ಲಿಗಿಲ್ಲ ಪವರ್ ಫುಲ್ ಪಾರ್ಟ್ನರ್ – ಪಂಜಾಬ್ ಬೇಟೆಗೂ ಬೆಥೆಲ್ ಬೇಕಾ?
18 ಅಂಕಗಳೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಪ್ಲೇ ಆಫ್ಸ್ ಗೆ ಅಧಿಕೃತವಾಗಿ ಕಾಲಿಟ್ಟಿದೆ. ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಆರ್ಸಿಬಿ ಪಂಜಾಬ್ ತಂಡವನ್ನು ಸೋಲಿಸಿದ್ದರಿಂದ ತಲಾ ನಾಲ್ಕು ತಂಡಗಳಿಗೆ ದೊದ್ದ ಲಾಭವಾಗಿದೆ. ಪಂಜಾಬ್ ಪ್ರಸ್ತುತ 13 ಪಂದ್ಯಗಳಿಂದ 13 ಅಂಕಗಳನ್ನು ಹೊಂದಿದೆ. ಇತ್ತ, ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ರಾಜಸ್ಥಾನ್ ರಾಯಲ್ಸ್ (RR) ತಲಾ 12 ಅಂಕಗಳನ್ನು ಗಳಿಸಿವೆ. ಚೆನ್ನೈಗೆ 2 ಮತ್ತು ರಾಜಸ್ಥಾನ್ಗೆ 2 ಪಂದ್ಯಗಳು ಬಾಕಿ ಇವೆ. ಈಗ ಸಿಎಸ್ಕೆ ಮತ್ತು ರಾಜಸ್ಥಾನ್ ತಮ್ಮ ಉಳಿದ ಪಂದ್ಯಗಳನ್ನು ಗೆದ್ದರೆ ಆಗ ಸಿಎಸ್ಕೆ 16 ಮತ್ತು ಆರ್ಆರ್ 16 ಅಂಕಗಳನ್ನು ಹೊಂದುತ್ತದೆ. ಪಿಬಿಕೆಎಸ್ ಕೊನೆಯ ಲೀಗ್ ಪಂದ್ಯವನ್ನು ಗೆದ್ದರೂ ಕೇವಲ 15 ಅಂಕಗಳು ಮಾತ್ರ ಇರುತ್ತವೆ.
ಆರ್ಸಿಬಿ ಗೆಲುವು ರಾಜಸ್ಥಾನ್ ರಾಯಲ್ಸ್, ಸಿಎಸ್ಕೆ ತಂಡಗಳಿಗೆ ಮಾತ್ರವಲ್ಲದೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ಲೇಆಫ್ ಭರವಸೆಯನ್ನು ಜೀವಂತವಾಗಿರಿಸುತ್ತದೆ. ಅಲ್ಲದೇ ಕೆಕೆಆರ್ ಕೊನೆಯ ಕ್ಷಣದಲ್ಲಿ ಭರ್ಜರಿಯಾಗಿ ಕಂಬ್ಯಾಕ್ ಮಾಡಿದ್ದು, KKR ಒಟ್ಟು 12 ಪಂದ್ಯಗಳನ್ನು ಆಡಿದ್ದು, 11 ಅಂಕಗಳನ್ನು ಗಳಿಸಿದೆ. ಆರ್ಸಿಬಿ ವಿರುದ್ಧ ಪಂಜಾಬ್ ಸೋತು ಕೊನೆಯ ಪಂದ್ಯ ಗೆದ್ರೆ ಗರಿಷ್ಠ 15 ಅಂಕಕ್ಕೆ ತಲುಪಲಿದೆ. ಆಗ KKR ತನ್ನ ಉಳಿದ ಎರಡೂ ಪಂದ್ಯಗಳನ್ನು ಗೆದ್ದರೆ, ಅದು 15 ಅಂಕಗಳನ್ನು ಸಹ ತಲುಪುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ರನ್ ರೇಟ್ ಆಧಾರದ ಮೇಲೆ ಕೋಲ್ಕತ್ತಾ ತಂಡಕ್ಕೆ ಒಂದು ಅವಕಾಶವಿರುತ್ತದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ದೊಡ್ಡ ಭರವಸೆ ಇಲ್ಲವಾದರೂ ಸಹ ತಮ್ಮ ಎರಡೂ ಪಂದ್ಯಗಳನ್ನು ಗೆಲ್ಲುವುದು ಮಾತ್ರವಲ್ಲದೆ, ಸಿಎಸ್ಕೆ, ಕೆಕೆಆರ್ ಮತ್ತು ಪಂಜಾಬ್ನ ಸೋಲುಗಳಿಗಾಗಿ ಪ್ರಾರ್ಥಿಸಬೇಕಾಗುತ್ತದೆ. ಡೆಲ್ಲಿ ಹೆಚ್ಚೆಂದರೆ 14 ಅಂಕಗಳನ್ನು ಮಾತ್ರ ತಲುಪಬಹುದು. ಸಿಎಸ್ಕೆ, ರಾಜಸ್ಥಾನ ಮತ್ತು ಪಂಜಾಬ್ ಇಲ್ಲಿಂದ ಒಂದೇ ಒಂದು ಪಂದ್ಯವನ್ನು ಗೆಲ್ಲದಿದ್ದರೆ, ಡೆಲ್ಲಿ 14 ಅಂಕಗಳೊಂದಿಗೆ ಪ್ಲೇಆಫ್ಗೆ ಅರ್ಹತೆ ಪಡೆಯುವ ಮ್ಯಾಜಿಕಲ್ ಚಾನ್ಸ್ ಮಾತ್ರ ಹೊಂದಿದೆ.

ನೋಡಿರಿ

