RCB ರಹಸ್ಯ ಬಿಚ್ಚಿಟ್ರಾ ಫಾಫ್? – IPL ಸೋಲಿಗೆ ಇದೇ ಕಾರಣ!
6, 4.. ಹೊಡೆಯೋರಿಗೆ ಮಾತ್ರ ಬೆಲೆನಾ?

RCB ರಹಸ್ಯ ಬಿಚ್ಚಿಟ್ರಾ ಫಾಫ್? – IPL ಸೋಲಿಗೆ ಇದೇ ಕಾರಣ!6, 4.. ಹೊಡೆಯೋರಿಗೆ ಮಾತ್ರ ಬೆಲೆನಾ?

2024ರ ಐಪಿಎಲ್ ಸೀಸನ್ ನಲ್ಲೂ ಆರ್ ಸಿಬಿ ಸ್ಥಿತಿ ಬದಲಾಗಿಲ್ಲ.. ಹೊಸ ಅಧ್ಯಾಯ ಅಂತಾ ಹಳೇ ಸಂಪ್ರದಾಯವನ್ನೇ ಮುಂದುವರೆಸಿದೆ.. ಈ ಬಾರಿ ಕಪ್ ನಮ್ದೇ ಅಂತಿದ್ದ ಫ್ಯಾನ್ಸ್ ಮುಂದಿನ ಸಲ ಕಪ್ ನಮ್ದೇ ಅಂತಾ ನಿರಾಸೆಯಿಂದ ಹೇಳಿಕೊಳ್ಳುವಂತೆ ಆಗಿತ್ತು.. ಉತ್ತಮ ಬ್ಯಾಟ್ಸ್‌ಮನ್ ಗಳು ಸಿಕ್ಸ್ ಮೇಲೆ ಸಿಕ್ಸ್.. ಫೋರ್ ಮೇಲೆ ಫೋರ್ ಹೊಡೆದ್ರೂ ಕೂಡ ಪಂದ್ಯ ಗೆಲ್ಲಲು ಸಾಧ್ಯ ಆಗಿಲ್ಲ..  ಬೌಲಿಂಗ್ ನಲ್ಲಿ ಸಂಪೂರ್ಣ ಎಡವಿದ್ದರು .. ಇದೀಗ ಆರ್ ಸಿಬಿ ಕ್ಯಾಪ್ಟನ್ ಫಾಪ್ ಡು ಪ್ಲೇಸಿಸ್ ಕೊಟ್ಟಿರುವ  ಸ್ಟೇಟ್ ಮೆಂಟ್ ಭಾರಿ ಚರ್ಚೆಗೆ ಗ್ರಾಸವಾಗಿದೆ.. ಐಪಿಎಲ್ ನಲ್ಲಿ  ಬರೀ ಸಿಕ್ಸ್ ಹೊಡೆಯೋರ್ಗೆ ಮಾತ್ರ ಬೆಲೆನಾ? ಟೂರ್ನಿ ಗೆದ್ದು, ಕಪ್ ಗೆಲ್ಲಿಸಿ ಕೊಡೋರು ಫ್ರಾಂಚೈಸಿಗಳಿಗೆ ಬೇಡ್ವಾ ಅನ್ನೋ ಪ್ರಶ್ನೆ ಎದ್ದಿದೆ.

ಇದನ್ನೂ ಓದಿ: ಸೌಜನ್ಯಗಾಗಿ NOTAಗೆ VOTE – ಪಕ್ಷಗಳಿಗೆ ಬುದ್ಧಿ ಕಲಿಸಿದ್ರಾ ಜನ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್‌ನಲ್ಲಿ ಮೂರು ಬಾರಿ ಫೈನಲ್ ಪ್ರವೇಶಿಸಿದರೂ ಒಮ್ಮೆಯೂ ಕಪ್ ಗೆದ್ದಿಲ್ಲ.. ಪ್ರತಿ ಬಾರಿ ಈ ಸಲ ಕಪ್ ನಮ್ದೇ ಎಂದು ಅಭಿಮಾನಿಗಳು ಬೆಂಬಲ ಕೊಟ್ಟರೂ, ಆರ್​ಸಿಬಿ ಪ್ರದರ್ಶನ ಮಾತ್ರ ಕಳಪೆಯಾಗಿಯೇ ಇದೆ. ಈ ಬಾರಿ ಆರಂಭದಲ್ಲಿ ಸೋಲಿನ ಮೇಲೆ ಸೋಲು ಕಂಡಿದ್ದ ಆರ್ ಸಿಬಿ ಮಿರಾಕಲ್ ಎಂಬಂತೆ ಪ್ಲೇಆಫ್ ಗೆ ಲಗ್ಗೆ ಇಟ್ಟಿತ್ತು.. ಆದ್ರೆ ಕಪ್‌ಗೆಲ್ಲೋದಕ್ಕೆ ಸಾಧ್ಯ ಆಗಿಲ್ಲ.. ಹೀಗಾಗಿ ಅರ್ ಸಿಬಿ‌ ಅಭಿಮಾನಿಗಳು ಒಳ್ಳೆ ಆಟಗಾರರನ್ನ  ಸೇರಿಸ್ಕೊಳ್ಳಿ.. ಇಲ್ಲ ಅಂದ್ರೆ ಮಾಲೀಕ್ವವನ್ನ ಬಿಟ್ಟು ಟೀಂ ನ ಬೇರೆಯವರಿಗೆ ಮಾರೀಬಿಡಿ‌ ಅಂತ ಹೇಳಿದ್ರು..

ಇ‍ದೀಗ ಆರ್ ಸಿಬಿಯ ನಾಯಕ ಫಾಪ್ ಡು ಪ್ಲೆಸಿಸ್ ಆಡಿದ್ದಾರೆ ಅನ್ನೋ ಮಾತು ಭಾರಿ ಸದ್ದು ಮಾಡ್ತಾ ಇದೆ.. ಐಪಿಎಲ್ ನಲ್ಲಿ ಫ್ರಾಂಚೈಸಿಗಳ ಮಾಲೀಕರು ಸಿಕ್ಸರ್ ಗಳ ಮೇಲೆ ಮಾತ್ರ ಕಾಳಜಿ ವಹಿಸ್ತಾರೆ.. ಸಿಕ್ಸ್ ಹೊಡೆಯೋರನ್ನ ಮಾತ್ರ ಟೀಂ ಗೆ ಸೇರಿಸ್ಕೊಳ್ತಾರೆ ಅಂತಾ ಹೇಳಿದ್ದಾರಂತೆ.. ಸನ್ ರೈಸರ್ಸ್ ಹೈದರಾಬಾದ್ ನ ಬ್ಯಾಟ್ಸ್‌ಮನ್ ಹೆನ್ರಿಚ್ ಕ್ಲಾಸೆನ್ ಈ ಬಗ್ಗೆ ಹೇಳಿದ್ದಾರೆ.. ಕಾರ್ಯಕ್ರಮವೊಂದ್ರಲ್ಲಿ  ನಿಮ್ಮ ಯಶಸ್ಸಿನ  ರಹಸ್ಯವೇನು ಅಂತಾ ಕೇಳಲಾಗಿತ್ತು.. ಈ ವೇಳೆ ಆರ್ ಸಿಬಿ ಕ್ಯಾಪ್ಟನ್ ಫಾಫ್ ಕೊಟ್ಟ ಸಲಹೆಯೇ ತನ್ನ ಯಶಸ್ಸಿಗೆ ಕಾರಣ.. ಐಪಿಎಲ್ ಮಾಲೀಕರು  ಮುಖ್ಯವಾಗಿ ಸಿಕ್ಸರ್‌ಗಳನ್ನು ಬಾರಿಸುವ ಆಟಗಾರರ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ ಎಂದು ಫಾಫ್ ಡು ಪ್ಲೆಸಿಸ್ ತಿಳಿಸಿದ್ದರು. ಈ ಸಲಹೆ ತನ್ನ ಯಶಸ್ಸಿಗೆ ಕಾರಣ ಆಯ್ತು ಅಂತಾ ಹೇಳಿದ್ದಾರೆ.. ಆದ್ರೆ ಈಗ ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳು ಕಾಡ್ತಾ ಇವೆ.

ಐಪಿಎಲ್ ನಲ್ಲಿ ಬರಿ ಸಿಕ್ಸ್ ಹೊಡೆಯೋರಿಗೆ ಮಾತ್ರ ಬೆಲೆನಾ? ಆರ್ ಸಿಬಿ ಸೋಲಿಗೆ ಫ್ರ್ಯಾಂಚೈಸಿಯೆ ಕಾರಣನಾ.. ಅದ್ಯಾಕೆ ಒಳ್ಳೆ ಬೌಲರ್ ಗಳನ್ನು‌ ಟೀಂ ಗೆ ತಗೊಳಲ್ಲಾ ಅಂತಾ ಕೇಳ್ತಿದ್ದಾರೆ.. ಇತ್ತೀಚೆಗೆ ಕೆಕೆಆರ್ ತಂಡದ ಆಟಗಾರ ವೆಂಕಟೇಶ್ ಅಯ್ಯರ್ ಆರ್ ಸಿಬಿ ಬೌಲಿಂಗ್ ದಾಳಿ ಬಗ್ಗೆ ವ್ಯಂಗ್ಯ ಮಾಡಿದ್ದರು..

ಅಂದಹಾಗೆ ಆರ್ ಸಿ ಬಿ ತಂಡ ಗೆದ್ದಿರೋದಕ್ಕಿಂತ ಸೋತಿರೋದೇ ಜಾಸ್ತಿ..  ಪ್ರತಿ ಬಾರಿಯಂತೆ ಈ ಬಾರಿಯೂ ಬೌಲಿಂಗ್ ವಿಚಾರದಲ್ಲಿ ಫೈಲ್ಯೂರ್ ಆಗಿದೆ.. ಇನ್ನು ತಂಡದಲ್ಲಿ ಟಾಪ್ ಆರ್ಡರ್ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದೆ. ಆದರೆ ತಂಡಕ್ಕೆ ಉತ್ತಮ ಫಿನಿಶರ್ ಹುಡುಕುವಲ್ಲಿ ವಿಫಲವಾಗಿದೆ.  ಬಹುತೇಕ ಎಲ್ಲಾ ಪಂದ್ಯಗಳಲ್ಲೂ ಸೋಲಲು ಇದೂ ಕಾರಣ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಉತ್ತಮ ಬೌಲರ್ ಗಳನ್ನು, ಫಿನಿಶರ್ ಗಳನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡು, ಅದಕ್ಕೆ ತಕ್ಕಂತೆ ರಣತಂತ್ರ ರೆಡಿ ಮಾಡಿಕೊಂಡ್ರೆ ಪಂದ್ಯದಲ್ಲಿ ಗೆಲ್ಲಬಹುದು.. ಆದ್ರೆ ಆರ್ ಸಿಬಿ ಮ್ಯಾನೆಜ್‌ಮೆಂಟ್‌ ಮಾತ್ರ ಇದ್ರ ಬಗ್ಗೆ ಅದ್ಯಾಕೋ ಮನಸ್ಸು ಮಾಡ್ತಾ ಇಲ್ಲ.. ಇನ್ನು ಇತ್ತೀಚೆಗೆ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಆರ್​ಸಿಬಿ ಮ್ಯಾನೇಜ್‌ಮೆಂಟ್ ಭಾರತೀಯ ಕ್ರಿಕೆಟಿಗರ ಮೇಲೆ ನಂಬಿಕೆ ಇಡಲ್ಲ ಅಂತಾ ಹೇಳಿದ್ರು.. ಒಂದು ವರ್ಷ ಆಡಲಿಲ್ಲ ಎಂದರೆ ತಂಡದಿಂದ ಬಿಡುಗಡೆ ಮಾಡುತ್ತಾರೆ. ನನ್ನನ್ನು ಸೇರಿದಂತೆ ಸ್ಥಳೀಯ ಆಟಗಾರರಾದ ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ, ಮಯಾಂಕ್ ಅಗರ್ವಾಲ್ ಅಷ್ಟೇ ಏಕೆ ರಾಹುಲ್ ದ್ರಾವಿಡ್ ಅವರನ್ನೂ ತಂಡದಿಂದ ಕೈಬಿಡಲಾಗಿತ್ತು. ಇದು ಕೂಡ ತಂಡದ ವೈಫಲ್ಯಕ್ಕೆ ಪ್ರಮುಖ ಕಾರಣ ಅಂತ ಹೇಳಿದ್ರು.. ಈ ವರ್ಷ ಆಡಿರುವ ಏಳು ಪಂದ್ಯಗಳಲ್ಲಿ 20 ಆಟಗಾರರು ಪ್ಲೇಯಿಂಗ್ ಇಲೆವೆನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಅರ್ಥ ಒಂದೆರಡು ಪಂದ್ಯ ಆಡದಿದ್ದರೆ ಅವರನ್ನು ತಂಡದಿಂದ ಹೊರಗಿಡಲಾಗುತ್ತಿದೆ. ತಂಡದ ಆಟಗಾರರಿಗೆ ಮ್ಯಾನೇಜ್‌ಮೆಂಟ್ ನಂಬಿಕೆ ಇಟ್ಟಿರ್ಬೇಕು. ಆದರೆ ಆ ಕೆಲಸ ಆಗುತ್ತಿಲ್ಲ ಅಂತ ಹೇಳಿದ್ರು… ಈ ವಿಚಾರಗಳನ್ನ ನೋಡ್ತಾ ಬಂದ್ರೆ ಆರ್ ಸಿಬಿ ಕ್ಯಾಪ್ಟನ್ ಫಾಫ್ ಹೇಳಿರೋ ಮಾತು ನಿಜ.. ಫ್ರಾಂಚೈಸಿ ಗಳು ಕೇವಲ ಸಿಕ್ಸ್ ಬಾರಿಸೋರಿಗೆ ಮಾತ್ರ ಚಾನ್ಸ್ ಕೊಡುತ್ತವೆ ಅಂತಾ ಫ್ಯಾನ್ಸ್ ಕೂಡ ಒಪ್ಪಿಕೊಳ್ಳುತ್ತಿದ್ದಾರೆ..

Shwetha M

Leave a Reply

Your email address will not be published. Required fields are marked *