RCB ಲೀಗ್ಸ್ ಪಂದ್ಯಗಳಿಗಿಲ್ಲ ಜೋಶ್ – ಪ್ಲೇಆಫ್ಸ್ ಗಾಗಿ KKR ಗೇಮ್ ಪ್ಲ್ಯಾನ್
ಕೊಹ್ಲಿಗೆ ಸಿಗುತ್ತಾ ಲೈಫ್ ಟೈಂ ಗಿಫ್ಟ್?

RCB ಲೀಗ್ಸ್ ಪಂದ್ಯಗಳಿಗಿಲ್ಲ ಜೋಶ್ – ಪ್ಲೇಆಫ್ಸ್ ಗಾಗಿ KKR ಗೇಮ್ ಪ್ಲ್ಯಾನ್ಕೊಹ್ಲಿಗೆ ಸಿಗುತ್ತಾ ಲೈಫ್ ಟೈಂ ಗಿಫ್ಟ್?

9 ದಿನಗಳ ಬ್ರೇಕ್ ಬಳಿಕ ಐಪಿಎಲ್ ರೀ ಸ್ಟಾರ್ಟ್ ಆಗ್ತಿದೆ. ಚಿನ್ನಸ್ವಾಮಿ ಮೈದಾನದಲ್ಲಿ ಇವತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಎದುರು ಬದುರಾಗಲಿವೆ.  ಆರ್‌ಸಿಬಿ ಗೆದ್ದರೆ ಡೈರೆಕ್ಟ್ ಫಿನಾಲೆಗೆ ಲಗ್ಗೆ ಇಡಲಿದೆ. ಕೆಕೆಆರ್ ಸೋತರೆ ಇಡೀ ಟೂರ್ನಿಯಿಂದಲೇ ಹೊರಬೀಳಲಿದೆ. ಅದ್ರಲ್ಲೂ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಬಳಿಕ ಫಸ್ಟ್ ಮ್ಯಾಚ್ ಆಡ್ತಿದ್ದು ಅವ್ರೇ ಈ ಪಂದ್ಯದ ಹೈಲೆಟ್ ಆಗಲಿದ್ದಾರೆ.

ಇದನ್ನೂ ಓದಿ : ಚಿನ್ನಸ್ವಾಮಿಯಲ್ಲಿ 10 ವರ್ಷಗಳಿಂದ ಕೊಲ್ಕತ್ತಾ ಸೋತೇ ಇಲ್ಲ – ಸೇಡು ತೀರಿಸಿಕೊಳ್ಳುತ್ತಾ ಆರ್ ಸಿಬಿ?

ಕೊಲ್ಕತ್ತಾ ವಿರುದ್ಧ ಕಣಕ್ಕಿಳಿಯೋಕೆ ರೆಡಿಯಾಗಿರೋ ಆರ್​ಸಿಬಿಗೆ ಶಾಕಿಂಗ್ ವಿಚಾರ ಅಂದ್ರೆ ಈ ಪಂದ್ಯದಲ್ಲಿ ಜೋಶ್ ಹೇಜಲ್​ವುಡ್ ಕಣಕ್ಕಿಳಿಯಲ್ಲ. ಯಾಕಂದ್ರೆ ಭುಜದ ನೋವಿನಿಂದ ಇನ್ನೂ ಕಂಪ್ಲೀಟ್ ಆಗಿ ರಿಕವರ್ ಆಗಿಲ್ಲ. ಹೀಗಾಗಿ ಲೀಗ್ ಹಂತದ ಪಂದ್ಯಗಳಲ್ಲಿ ರೆಸ್ಟ್ ಮಾಡಿ ಪ್ಲೇಆಫ್ಸ್ ಮ್ಯಾಚ್​ಗಳಿಗೆ ಕಣಕ್ಕಿಳಿಯಬಹುದು.  ಮತ್ತೊಂದೆಡೆ ಚೆನ್ನೈ ವಿರುದ್ಧದ ಪಂದ್ಯದ ವೇಳೆ ಕೈಬೆರಳಿನ ಗಾಯಕ್ಕೆ ತುತ್ತಾಗಿದ್ದ ನಾಯಕ ರಜತ್‌ ಪಾಟೀದಾರ್‌ ಚೇತರಿಸಿಕೊಂಡಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಆಡುವುದು ಕನ್ಫರ್ಮ್ ಆಗಿದೆ. ಬಟ್ ಕಳೆದ 5 ಪಂದ್ಯಗಳಲ್ಲಿ ಪಾಟಿದಾರ್ ಅವ್ರ ಬ್ಯಾಟ್‌ನಿಂದ ದೊಡ್ಡ ಇನ್ನಿಂಗ್ಸ್‌ ಮೂಡಿಬಂದಿಲ್ಲ. ಸೋ ಜೋಶ್‌ ಹೇಜಲ್‌ವುಡ್‌ ಅನುಪಸ್ಥಿತಿ ಆರ್‌ಸಿಬಿಗೆ ಕಾಡಲಿದ್ದು, ಲುಂಗಿ ಎನ್‌ಗಿಡಿ ಮೇಲೆ ಹೆಚ್ಚಿನ ಜವಾಬ್ದಾರಿ ಇರಲಿದೆ. ದೇವದತ್‌ ಪಡಿಕ್ಕಲ್‌ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ಕಾರಣ ಅವರ ಬದಲು ಮಯಾಂಕ್‌ ಅಗರ್‌ವಾಲ್‌ ಸ್ಥಾನ ಪಡೆಯಬಹುದು.

ಐಪಿಎಲ್​ನಲ್ಲಿ ಸಾಲಿಡ್ ಫಾರ್ಮ್​ನಲ್ಲಿರೋ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ನೀಡ್ತಿದ್ದಾರೆ. ಪ್ರಸ್ತುತ 11 ಪಂದ್ಯಗಳಿಂದ 505 ರನ್ ಕಲೆ ಹಾಕಿದ್ದಾರೆ. ಇನ್ನು ಮುಂಬೈ ಇಂಡಿಯನ್ಸ್​ನ ಸೂರ್ಯಕುಮಾರ್ ಯಾದವ್ 510 ರನ್ ಗಳಿಸೋ ಮೂಲಕ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ. ಹೀಗಾಗಿ ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ವಿರಾಟ್‌ 6 ರನ್‌ ಬಾರಿಸಿದ್ದೇ ಆದಲ್ಲಿ ಮತ್ತೆ ಆರೆಂಜ್‌ ಕ್ಯಾಪ್‌ ತಮ್ಮ ಮುಡಿಗೇರಿಸಿಕೊಳ್ಳಬಹದು. ಅಲ್ದೇ ಹೋಂ ಗ್ರೌಂಡ್ ನಲ್ಲಿ ವಿರಾಟ್‌ ಅವರ ಬಿಗ್ ಇನಿಂಗ್ಸ್‌ ನೋಡಲು ಅಭಿಮಾನಿಗಳು ಸಹ ಕಾತುರದಿಂದ ಕಾಯುತ್ತಿದ್ದಾರೆ. ಅಲ್ದೇ ಈ ಪಂದ್ಯದಲ್ಲಿ ಆರ್‌ಸಿಬಿ ಪರ ಫಿಲ್‌ ಸಾಲ್ಟ್‌ ಮತ್ತೆ ಕಣಕ್ಕೆ ಇಳಿಯುವ ಸಾದ್ಯತೆ ಇದೆ. ಮಧ್ಯಮ ಕ್ರಮಾಂಕದಲ್ಲಿ ರಜತ್ ಪಟಿದಾರ್, ಜಿತೇಶ್ ಶರ್ಮಾ ಒಳ್ಳೆ ಸ್ಕೋರ್ ಮಾಡಿದ್ರೆ ಟಿಮ್ ಡೇವಿಡ್‌ ಮತ್ತು ರೋಮಾರಿಯೊ ಶೆಫರ್ಡ್ ಅದ್ಭುತ ಫಿನಿಶಿಂಗ್ ರೋಲ್ ಪ್ಲೇ ಮಾಡ್ತಾರೆ.

11 ಪಂದ್ಯಗಳಲ್ಲಿ 8 ಗೆಲುವುಗಳ ಮೂಲಕ 16 ಅಂಕ ಗಳಿಸಿರುವ ಆರ್‌ಸಿಬಿಗೆ ಲೀಗ್‌ ಹಂತದಲ್ಲಿ ಇನ್ನೂ 3 ಪಂದ್ಯ ಬಾಕಿ ಇದೆ. ಇದರಲ್ಲಿ 2ರಲ್ಲಿ ಗೆದ್ದರೂ ತಂಡ ಅಂಕಪಟ್ಟಿಯಲ್ಲಿ ಅಗ್ರ-2ರಲ್ಲಿ ಸ್ಥಾನ ಪಡೆಯಲಿದೆ. ಸೋ ಇವತ್ತಿನ ಮ್ಯಾಚಲ್ಲಿ 2 ಪಾಯಿಂಟ್ಸ್ ಬಂದ್ರೆ ಪ್ಲೇಆಫ್ಸ್ ಕನ್ಫರ್ಮ್ ಆಗುತ್ತೆ, ಹಾಗೇ ಲೀಗ್ ಹಂತದಲ್ಲಿ ಇನ್ನು ಎರಡು ಮ್ಯಾಚ್ ಉಳಿಯಲಿದ್ದು ಒಂದು ಪಂದ್ಯ ಗೆದ್ರೂ ಪಾಯಿಂಟ್ಸ್ ಟೇಬಲ್ ನಲ್ಲಿ ಮೊದಲ 2 ಸ್ಥಾನಗಳಲ್ಲಿ ಅರ್ಹತೆ ಪಡೀಬಹುದು. ಆಗ ಕ್ವಾಲಿಫೈಯರ್ ಒನ್ ನಲ್ಲಿ ಗೆದ್ರೆ ಡೈರೆಕ್ಟ್ ಫಿನಾಲೆ ಟಿಕೆಟ್ ಸಿಗುತ್ತೆ. ಆರ್‌ಸಿಬಿ ಕೊನೆಯ ಬಾರಿಗೆ ಅಗ್ರ-2ರಲ್ಲಿ ಸ್ಥಾನ ಪಡೆದಿದ್ದು 2016ರಲ್ಲಿ. ಆ ವರ್ಷ ತಂಡ ರನ್ನರ್‌-ಅಪ್‌ ಆಗಿತ್ತು. ಈ ಸೀಸನ್​ನಲ್ಲೂ ಕೂಡ ಅದೇ ಹೋಪ್ಸ್​ನಲ್ಲಿದ್ದಾರೆ. ಇನ್ನು ಕೆಕೆಆರ್‌ 12 ಪಂದ್ಯಗಳಲ್ಲಿ 11 ಅಂಕಗಳನ್ನು ಕಲೆ ಹಾಕಿದ್ದು, ಮುಂದಿನ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಪ್ಲೇ ಆಫ್‌ ಆಸೆ ಜೀವಂತವಾಗುತ್ತದೆ. ಅದೂ ಕೂಡ ಬೇರೆ ಟೀಂ ಗಳ ಸೋಲು ಗೆಲುವಿನ ಮೇಲೆ ಡಿಪೆಂಡ್ ಆಗ್ಬೇಕಾಗುತ್ತೆ. ಕೆಕೆಆರ್ ತಂಡದ ಕ್ಯಾಪ್ಟನ್ ಅಜಿಂಕ್ಯ ರಹಾನೆ ಒಬ್ರು ಒಳ್ಳೆ ಫಾರ್ಮ್​ನಲ್ಲಿ ಇದ್ದಾರೆ ಅನ್ನೋದನ್ನ ಬಿಟ್ರೆ ಉಳಿದವರ್ಯಾರು ಸಾಥ್ ಕೊಡ್ತಾ ಇಲ್ಲ.

ಇನ್ನು ಪ್ರತೀ ಬಾರಿ ಆರ್​ಸಿಬಿ ಮ್ಯಾಚ್ ಇದ್ದಾಗ ಫ್ಯಾನ್ಸ್ ಎಲ್ರೂ ಆರ್​ಸಿಬಿ ಜೆರ್ಸಿ ತೊಟ್ಟು ಬರ್ತಿದ್ರು. ಬಟ್ ಫಾರ್ ಎ ಚೇಂಜ್ ಈ ಮ್ಯಾಚ್​ಗೆ ವೈಟ್ ಜೆರ್ಸಿ ತೊಟ್ಟು ಬರೋ ಪ್ಲ್ಯಾನ್​ನಲ್ಲಿದ್ದಾರೆ. ಇದು ಕಂಪ್ಲೀಟ್ ಆಗಿ ವಿರಾಟ್ ಕೊಹ್ಲಿಗೋಸ್ಕರ. ಅವ್ರ ಟ್ರಿಬ್ಯೂಟ್​ಗೋಸ್ಕರ. ಟೆಸ್ಟ್‌ ಕ್ರಿಕೆಟ್‌ಗೆ ದಿಢೀರ್‌ ನಿವೃತ್ತಿ ಘೋಷಿಸಿದ ವಿರಾಟ್‌ ಕೊಹ್ಲಿಗೆ ಗೌರವ ಸೂಚಿಸುವ ಸಲುವಾಗಿ ಬೆಂಗಳೂರಿನ ಅಭಿಮಾನಿಗಳು ಶನಿವಾರ, ‘ವಿರಾಟ್‌ 18’ ಎಂದು ಬರೆದಿರುವ ಬಿಳಿ ಜೆರ್ಸಿಗಳನ್ನು ತೊಟ್ಟು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬರಲು ನಿರ್ಧಾರ ಮಾಡಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲೂ ಈ ಬಗ್ಗೆ ಮನವಿ ಮಾಡಿದ್ದಾರೆ. ನಿವೃತ್ತಿ ಬಳಿಕ ಕೊಹ್ಲಿ ಆಡ್ತಿರೋ ಫಸ್ಟ್ ಮ್ಯಾಚ್ ಇದು. ಹೀಗಾಗಿ ಶುಕ್ರವಾರವೇ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಬಿಳಿ ಜೆರ್ಸಿಗಳ ಮಾರಾಟ ಜೋರಾಗಿತ್ತು. ಶನಿವಾರವೂ ಕ್ರೀಡಾಂಗಣದ ಆಚೆ ಜೆರ್ಸಿ ಮಾರಾಟ ಭರ್ಜರಿಯಾಗಿ ನಡೆದಿದೆ.

Shantha Kumari

Leave a Reply

Your email address will not be published. Required fields are marked *