IPL ಮುಂದೆ ICC ಪಂದ್ಯಗಳೂ ಡಲ್ – ರಾಷ್ಟ್ರೀಯ ತಂಡಗಳಿಗೆ ಸ್ಟಾರ್ಸ್ ಗುಡ್ ಬೈ
ಫ್ರಾಂಚೈಸಿ ಲೀಗ್ ಗಳಿಗೆ ಬ್ರೇಕ್ ಹಾಕ್ತಾರಾ?

IPL ಮುಂದೆ ICC ಪಂದ್ಯಗಳೂ ಡಲ್ – ರಾಷ್ಟ್ರೀಯ ತಂಡಗಳಿಗೆ ಸ್ಟಾರ್ಸ್ ಗುಡ್ ಬೈಫ್ರಾಂಚೈಸಿ ಲೀಗ್ ಗಳಿಗೆ ಬ್ರೇಕ್ ಹಾಕ್ತಾರಾ?

ಕ್ರಿಕೆಟ್ ಕ್ರೇಜ್ ಜಾಸ್ತಿಯಾದಂತೆಲ್ಲಾ ಫ್ರಾಂಚೈಸಿ ಟಿ-20 ಲೀಗ್​ಗಳು ಕೂಡ ಹೆಚ್ಚಾಗ್ತಿದೆ. ಕೆಲವು ಸಲ ಈ ಅಂತಾರಾಷ್ಟ್ರೀಯ ಪಂದ್ಯಗಳಿಗಿಂತ ಐಪಿಎಲ್, ಬಿಬಿಎಲ್, ಎಸ್​ಎ 20 ಲೀಗ್​ಗಳ ಹವಾನೇ ಜಾಸ್ತಿ ಇರುತ್ತೆ. ಇಂಟ್ರೆಸ್ಟಿಂಗ್ ಅಂದ್ರೆ ಲೀಗ್​ಗಳಿಗಾಗಿ ಸ್ಟಾರ್ ಪ್ಲೇಯರ್​ಗಳು ರಾಷ್ಟ್ರೀಯ ತಂಡಗಳಿಗೇ ಗುಡ್ ಬೈ ಹೇಳಿದ್ದಾರೆ. ಹಾಗೇ ಶೆಡ್ಯೂಲ್​ನಲ್ಲಿ ಕ್ಲಾಶ್ ಆಗ್ತಿದೆ. ಇದೇ ಕಾರಣಕ್ಕೆ ಈಗ ಐಸಿಸಿ ಅಲರ್ಟ್ ಆಗಿದೆ. ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ.

ಇದನ್ನೂ ಓದಿ : IND Vs NZ ಕದನಕ್ಕೆ ಮುಹೂರ್ತ – RO-KOಗಾಗಿ 5 ಏಕದಿನ ಪಂದ್ಯ!

ಐಪಿಎಲ್ ಅಬ್ಬರದ ಮುಂದೆ ಟೀಂ ಇಂಡಿಯಾ ಮ್ಯಾಚಸ್, ಸರಣಿಗಳು, ಅಂತಾರಾಷ್ಟ್ರೀಯ ಪಂದ್ಯಗಳು ಅಷ್ಟೇ ಯಾಕೆ ಐಸಿಸಿ ಪಂದ್ಯಗಳೇ ಡಲ್ ಅನ್ನಿಸೋ ಮಟ್ಟಿಗೆ ಐಪಿಎಲ್​ಗೆ ರೆಸ್ಪಾನ್ಸ್ ಸಿಗ್ತಿದೆ. ಅಟ್ ದಿ ಸೇಮ್ ಟೈಂ ಇಂಗ್ಲೆಂಡ್, ಸೌತ್ ಆಫ್ರಿಕಾ, ಆಸ್ಟ್ರೇಲಿಯಾ, ಪಾಕಿಸ್ತಾನ್ ಲೀಗ್​ಗಳೂ ದಿನೇ ದಿನೇ ಇಂಪ್ರೂವ್ ಆಗ್ತಿರುವಂಥದ್ದು. ಆದ್ರೆ ಇದೇ ಲೀಗ್​ಗಳ ಮುಂದೆ ಇಂಟರ್​ನ್ಯಾಷನಲ್ ಕ್ರಿಕೆಟ್ ಮಂಕಾಗ್ತಿರೋದು ಐಸಿಸಿಗೆ ತಲೆಬಿಸಿ ತಂದಿದೆ.

ವೇಳಾಪಟ್ಟಿ ಜಟಾಪಟಿ ತಪ್ಪಿಸಲು ಸಮಿತಿ ರಚನೆಗೆ ಐಸಿಸಿ ಅನುಮೋದನೆ!

ದೇಶೀಯ ಕ್ರಿಕೆಟ್ ಲೀಗ್​ಗಳು ಮತ್ತು ಅಂತರರಾಷ್ಟ್ರೀಯ ದ್ವಿಪಕ್ಷೀಯ ಸರಣಿಗಳು ಮತ್ತು ಐಸಿಸಿ ಭವಿಷ್ಯದ ಟೂರ್ನಿಗಳ ಮೇಲೆ ಪರಿಣಾಮ ಬೀರ್ತಿದೆ. ಜೊತೆಗೆ ಶೆಡ್ಯೂಲ್​ನಲ್ಲೂ ಕ್ಲಾಶ್ ಆಗ್ತಿದೆ ಅಂತಾ ಸದಸ್ಯ ಕ್ರಿಕೆಟ್ ಮಂಡಳಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪ್ರಸ್ತುತ ಅಂತರರಾಷ್ಟ್ರೀಯ ಕ್ಯಾಲೆಂಡರ್ ಅನ್ನು ಅಡ್ಡಿಪಡಿಸದೆ ಫ್ರಾಂಚೈಸಿ ಕ್ರಿಕೆಟ್ ಮತ್ತು ಅಂತರರಾಷ್ಟ್ರೀಯ ಪಂದ್ಯಗಳು ಹೇಗೆ ಒಂದೇ ಸಮಯದಲ್ಲಿ ಮುಂದುವರಿಯಬಹುದು ಎಂಬುದನ್ನು ಪರಿಶೀಲಿಸಲು ವಿಶೇಷ ಸಮಿತಿಯನ್ನು ರಚಿಸಲು ಐಸಿಸಿ ಮಂಡಳಿ ಅನುಮೋದನೆ ನೀಡಿದೆ.

ಫ್ರಾಂಚೈಸಿ ಲೀಗ್ ಕ್ರಿಕೆಟ್ ನಲ್ಲೂ ಹೆಚ್ಚಿನ ವ್ಯವಹಾರ!

ಕ್ರಿಕೆಟ್​ನ ಫೈನಾನ್ಶಿಯಲ್ ಸಪೋರ್ಟ್ ಹಿಂದೆ ಫ್ರಾಂಚೈಸಿ ಲೀಗ್​ಗಳದ್ದು ದೊಡ್ಡ ಕೊಡುಗೆ ಇದೆ. ಐಪಿಎಲ್ ಜೊತೆಗೆ, ದಕ್ಷಿಣ ಆಫ್ರಿಕಾದ ಎಸ್‌ಎ 20, ಯುಎಇಯ ಐಎಲ್‌ಟಿ 20, ಬಿಗ್ ಬ್ಯಾಷ್ ಲೀಗ್ (ಬಿಬಿಎಲ್), ಪಾಕಿಸ್ತಾನ ಪ್ರೀಮಿಯರ್ ಲೀಗ್, ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್), ಲಂಕಾ ಪ್ರೀಮಿಯರ್ ಲೀಗ್ (ಎಲ್‌ಪಿಎಲ್), ದಿ ಹಂಡ್ರೆಡ್, ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಹೀಗೆ ವರ್ಷಪೂರ್ತಿ ಲೀಗ್ ಗಳು ನಡೆಯುತ್ತ. ಆಟಗಾರರ ಪ್ರಸೆನ್ಸ್, ರಾಷ್ಟ್ರೀಯ ತಂಡದ ಇಂಪಾರ್ಟೆನ್ಸ್ ಮತ್ತು ಲೀಗ್‌ಗಳ ಫೈನಾನ್ಶಿಯಲ್ ಇನ್ಕಮ್​ನೂ ಬ್ಯಾಲೆನ್ಸ್ ಮಾಡೋದೇ ಐಸಿಸಿಗೆ ದೊಡ್ಡ ಸವಾಲಾಗಿದೆ. ಅದೆಲ್ಲಕ್ಕಿಂತ ಮುಖ್ಯವಾಗಿ ಅಂತರರಾಷ್ಟ್ರೀಯ ಕ್ರಿಕೆಟ್‌ಗಿಂತ ಆರ್ಥಿಕವಾಗಿ ಲಾಭದಾಯಕ ವೃತ್ತಿ ಆಯ್ಕೆಯಾಗಿ ಆಟಗಾರರು ಫ್ರಾಂಚೈಸಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಲೀಗ್ ಪಂದ್ಯಗಳಿಗಾಗಿ ರಾಷ್ಟ್ರೀಯ ತಂಡಗಳನ್ನೇ ಬಿಟ್ಟ ಸ್ಟಾರ್ಸ್!

ಐಸಿಸಿ ಈ ಬಗ್ಗೆ ಇಷ್ಟೊಂದು ತಲೆಬಿಸಿ ಮಾಡಿಕೊಳ್ಳೋಕೆ ಮತ್ತೊಂದು ಕಾರಣವೂ ಇದೆ. ಅನೇಕ ಸ್ಟಾರ್ ಆಟಗಾರರು ಫ್ರಾಂಚೈಸಿ ಕ್ರಿಕೆಟ್‌ಗಾಗಿ ಅಂತರರಾಷ್ಟ್ರೀಯ ಕ್ರಿಕೆಟ್​ನಿಂದಲೇ ಹೊರಬಂದಿದ್ದಾರೆ. ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ 30 ವರ್ಷ ತುಂಬುವ ಮೊದಲೇ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದರು. ವಿಶ್ವದಾದ್ಯಂತ ಟಿ20 ಲೀಗ್‌ಗಳಲ್ಲಿ ಮೋಸ್ಟ್ ವಾಂಟೆಡ್ ಆಟಗಾರನಾಗಿದ್ದ ದಕ್ಷಿಣ ಆಫ್ರಿಕಾದ ಪವರ್‌ಹೌಸ್ ಹೆನ್ರಿಕ್ ಕ್ಲಾಸೆನ್ ಕೂಡ ರಾಷ್ಟ್ರೀಯ ತಂಡದ ಜವಾಬ್ದಾರಿಗಳಿಂದ ಮುಕ್ತರಾಗಿದ್ದಾರೆ. ವೆಸ್ಟ್ ಇಂಡೀಸ್‌ನ ಮಾಜಿ ಸ್ಪಿನ್ನರ್ ಸುನಿಲ್ ನರೈನ್ ಕೂಡ ತಮ್ಮ ವೃತ್ತಿಜೀವನದಲ್ಲಿ ದೇಶಕ್ಕಿಂತ ಫ್ರಾಂಚೈಸಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರು. ಹೀಗಾಗಿ ಹೊಸ ಲೀಗ್‌ಗಳ ಉದಯವನ್ನ ನಿಯಂತ್ರಣ ಮಾಡದೇ ಇದ್ರೆ  ದ್ವಿಪಕ್ಷೀಯ ಸರಣಿಗಳ ಕ್ರೇಜ್ ಕಮ್ಮಿಯಾಗುತ್ತೆ ಅನ್ನೋ ಭಯ ಐಸಿಸಿಯನ್ನ ಕಾಡ್ತಿದೆ.

Shantha Kumari

Leave a Reply

Your email address will not be published. Required fields are marked *