RCB Vs LSG ಅಲ್ಲ RCB Vs KKR – ರೀ ಶೆಡ್ಯೂಲ್ ಗೆ BCCI ಬಿಗ್ ಟ್ವಿಸ್ಟ್
ಪ್ಲೇಆಫ್ ಲೆಕ್ಕಾಚಾರ ಬದಲಾಯ್ತಾ?

18ನೇ ಸೀಸನ್ ಐಪಿಎಲ್ ಟೂರ್ನಿ ಇನ್ನೇನು ಪ್ಲೇಆಫ್ಸ್ ಹಂತಕ್ಕೆ ಬಂದಿದೆ ಅನ್ನುವಾಗ್ಲೇ ಭಾರತ ಮತ್ತು ಪಾಕಿಸ್ತಾನ ನಡುವಿನ ವಾರ್ನಿಂದಾಗಿ ಬಿಸಿಸಿಐ ಟೂರ್ನಿಯನ್ನ ಒನ್ ವೀಕ್ ಪೋಸ್ಟ್ ಪೋನ್ ಮಾಡಿತ್ತು. ಸದ್ಯ ಉಭಯ ರಾಷ್ಟ್ರಗಳ ನಡುವಿನ ಸಂಘರ್ಷ ಕಂಟ್ರೋಲ್ಗೆ ಬರ್ತಿದ್ದಂತೆ ಬಿಸಿಸಿಐ ಪಂದ್ಯಗಳ ಮರುಆಯೋಜನೆ ದಿನಾಂಕವನ್ನ ಅನೌನ್ಸ್ ಮಾಡಿದೆ. ಹಾಗೇ ಲೀಗ್ ಹಂತದಲ್ಲಿ 12 ಪಂದ್ಯಗಳ ಅಥವಾ 13 ಪಂದ್ಯಗಳ ಅನ್ನೋ ಗೊಂದಲಕ್ಕೂ ತೆರೆ ಬಿದ್ದಿದೆ.
ಇದನ್ನೂ ಓದಿ : RCB ಪಂದ್ಯಗಳಿಗಿಲ್ಲ ಹೇಜಲ್ ವುಡ್? – ಪ್ಲೇಆಫ್ಸ್ ಹಂತದಲ್ಲೇ ತವರಿಗೆ ವಾಪಸ್
18ನೇ ಸೀಸನ್ ಐಪಿಎಲ್ನ ಉದ್ಘಾಟನಾ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವರು. ಇದೀಗ ಐಪಿಎಲ್ ಅರ್ಧಕ್ಕೆ ನಿಂತು ಮತ್ತೆ ಪುನರ್ ಆರಂಭಗೊಂಡರೂ ಇದೇ ಎರಡು ತಂಡಗಳೇ ಮುಖಾಮುಖಿಯಾಗುತ್ತಿವೆ. ಮೇ 17 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಕೆಕೆಆರ್ ತಂಡಗಳು ಮುಖಾಮುಖಿಯಾಗಲಿವೆ. ಇಂಟ್ರೆಸ್ಟಿಂಗ್ ಅಂದ್ರೆ ಮೇ 27 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗುವ ಮೂಲಕ ಲೀಗ್ ಹಂತಕ್ಕೆ ತೆರೆಬೀಳಲಿದೆ. ಅಂದ್ರೆ ಇಲ್ಲಿ ಆರಂಭವೂ ಆರ್‌ಸಿಬಿ ಜೊತೆ ಅಂತ್ಯವೂ ಆರ್‌ಸಿಬಿ ಜೊತೆಗೇ ಆಗಲಿದೆ. ಹೀಗೆ ಲೀಗ್ ಹಂತದ ಮ್ಯಾಚಸ್ ಮುಗಿದ ಮೇಲೆ ಮೇ 29 ರಂದು ಕ್ವಾಲಿಫೈಯರ್ 1, ಮೇ 30 ರಂದು ಎಲಿಮಿನೇಟರ್ ಪಂದ್ಯಗಳು ನಡೆಯಲಿವೆ. ಹಾಗೇ ಹಾಗೂ ಜೂನ್ 1ರಂದು ಕ್ವಾಲಿಫೈಯರ್-2 ಮತ್ತು ಜೂನ್ 3ರಂದು ಫೈನಲ್ ಪಂದ್ಯ ನಡೆಸಲು ತೀರ್ಮಾನ ಮಾಡ್ಲಾಗಿದೆ. ಬಟ್ ಇಲ್ಲಿ ಪ್ಲೇಆಫ್ ಹಾಗೂ ಸೆಮಿಫೈನಲ್ ಪಂದ್ಯಗಳು ಯಾವ ಮೈದಾನಗಳಲ್ಲಿ ನಡೆಯಲಿವೆ ಅನ್ನೋದನ್ನ ಇನ್ನೂ ಡಿಸೈಡ್ ಮಾಡಿಲ್ಲ.
ಬಿಸಿಸಿಐ ಅನೌನ್ಸ್ ಮಾಡಿರುವ ಹೊಸ ಶೆಡ್ಯೂಲ್ ಪ್ರಕಾರ ಮೇ 17 ಅಂದ್ರೆ ಇದೇ ಶನಿವಾರದಿಂದ ಟೂರ್ನಿ ಮತ್ತೆ ಸ್ಟಾರ್ಟ್ ಆಗುತ್ತೆ. ಹಾಗೇ ಜೂನ್ 3ಕ್ಕೆ ಫೈನಲ್ ಮ್ಯಾಚ್ ನಡೆಯೋ ಮೂಲಕ ಈ ಸೀಸನ್ಗೆ ತೆರೆ ಬೀಳಲಿದೆ.
ಆರ್ ಸಿಬಿ ಜೊತೆ ಆರಂಭ & ಅಂತ್ಯ!
ಐಪಿಎಲ್ ರೀ ಸ್ಟಾರ್ಟ್ ಪಂದ್ಯಕ್ಕೂ ಆರ್ ಸಿಬಿ ವರ್ಸಸ್ ಕೆಕೆಆರ್
ಮೇ 17 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ
ಮೇ 27 ರಂದು ಆರ್ ಸಿಬಿ ಮತ್ತು ಲಕ್ನೋ ಪಂದ್ಯದ ಮೂಲಕ ಲೀಗ್ ಅಂತ್ಯ
ಮೇ 29 ರಂದು ಕ್ವಾಲಿಫೈಯರ್ 1, ಮೇ 30 ರಂದು ಎಲಿಮಿನೇಟರ್ ಪಂದ್ಯ
ಜೂನ್ 1ರಂದು ಕ್ವಾಲಿಫೈಯರ್-2 ಮತ್ತು ಜೂನ್ 3ರಂದು ಫೈನಲ್ ಪಂದ್ಯ
ಪ್ಲೇಆಫ್ ಹಾಗೂ ಸೆಮಿಫೈನಲ್ ಪಂದ್ಯಗಳಿಗೆ ಮೈದಾನ ಇನ್ನೂ ಫೈನಲ್ ಆಗಿಲ್ಲ
ಹೀಗೆ ಲೀಗ್ ಪ್ಲಸ್ ಪ್ಲೇಆಫ್ಸ್ ಸೇರಿ ಈ ಸೀಸನ್ನಲ್ಲಿ ಇನ್ನು 17 ಪಂದ್ಯಗಳು ಬಾಕಿ ಇವೆ. ಇತ್ತ ಈಗಾಗ್ಲೇ 11 ಪಂದ್ಯಗಳನ್ನ ಆಡಿರುವ ಆರ್ ಸಿಬಿ ಲೀಗ್ ಹಂತದಲ್ಲಿ ಮೂರು ಮ್ಯಾಚ್ ಗಳನ್ನ ಆಡ್ಬೇಕಿದೆ. ಈ ಹಿಂದಿನ ಶೆಡ್ಯೂಲ್ನ ನೋಡಿದಾಗ ಐಪಿಎಲ್ನ 59ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಬೇಕಿತ್ತು. ಬಟ್ ಅದೇ ದಿನ ಐಪಿಎಲ್ ಟೂರ್ನಿ ಪೋಸ್ಟ್ಪೋನ್ ಆಗಿತ್ತು. ಆದ್ರೀಗ ರೀ ಶೆಡ್ಯೂಲ್ನಲ್ಲಿ ಕೆಕೆಆರ್ ಮತ್ತು ಆರ್ಸಿಬಿಯನ್ನು ಮೊದಲ ಪಂದ್ಯದಲ್ಲಿ ಕಣಕ್ಕಿಳಿಸಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ. ಆರ್‌ಸಿಬಿ ತಂಡವು ತನ್ನ ಮೊದಲ ಪಂದ್ಯವನ್ನು ಮೇ 17 ರಂದು ಆಡಲಿದ್ದು, ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇನ್ನು ಮೇ 23 ರಂದು ನಡೆಯಲಿರುವ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯ ಕೂಡ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಜರುಗಲಿರುವುದು ವಿಶೇಷ. ಹಾಗೆಯೇ ಆರ್‌ಸಿಬಿ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಲಕ್ನೋ ತಂಡವನ್ನ ಎದುರಿಸಲಿದೆ. ಈ ಮ್ಯಾಚ್ ಲಕ್ನೋದ ಏಕಾನ ಸ್ಟೇಡಿಯಂನಲ್ಲಿ ನಡೆಯಲಿದೆ. ಸೋ ಇಲ್ಲಿ ಆರ್‌ಸಿಬಿ ಮೊದಲೇ ಫಿಕ್ಸ್ ಆಗಿದ್ದ ತಂಡಗಳ ಜೊತೆಯಲ್ಲೇ ಲೀಗ್ನ ಇನ್ನುಳಿದ ಪಂದ್ಯಗಳನ್ನ ಆಡುತ್ತೆ. ಬಟ್ ರೀಶಫಲ್ ಮಾಡಲಾಗಿದೆ ಅಷ್ಟೇ.