IPL ನ ಚೀಪ್‌ & ಬೆಸ್ಟ್ ಪ್ಲೇಯರ್ಸ್ ಕಡಿಮೆ ಹಣಕ್ಕೆ ಧಮಾಕ ಪರ್ಫಾಮೆನ್ಸ್
RCBಯಲ್ಲೂ ಇಬ್ಬರು ಮ್ಯಾಚ್ ವಿನ್ನರ್ಸ್

IPL ನ ಚೀಪ್‌ & ಬೆಸ್ಟ್ ಪ್ಲೇಯರ್ಸ್   ಕಡಿಮೆ ಹಣಕ್ಕೆ ಧಮಾಕ ಪರ್ಫಾಮೆನ್ಸ್RCBಯಲ್ಲೂ ಇಬ್ಬರು ಮ್ಯಾಚ್ ವಿನ್ನರ್ಸ್

ಐಪಿಎಲ್​​ ಅಂದ್ರೆ ಬೌಂಡರಿ, ಸಿಕ್ಸರ್​, ರನ್​ಗಳ​ ಮಾತ್ರ ನೆನಪಾಗಲ್ಲ. ಕೋಟಿ ಕೋಟಿ ಹಣ ಕೂಡ ನೆನಪಾಗುತ್ತೆ. ಆದ್ರೆ, ಈ ಸೀಸನ್​​ ಐಪಿಎಲ್​​ನಲ್ಲಿ ದಾಖಲೆಯ ಮೊತ್ತಕ್ಕೆ ಸೇಲ್​ ಆದ ಕೆಲ ಆಟಗಾರರು ಸೈಲೆಂಟ್​ ಆಗಿ ಬಿಟ್ಟಿದ್ದಾರೆ. ಕಡಿಮೆ ಮೊತ್ತಕ್ಕೆ ಸೇಲ್​ ಆದವರು ಆರ್ಭಟಿಸ್ತಿದ್ದಾರೆ. ಫ್ರಾಂಚೈಸಿಗಳು ಅಳೆದುತೂಗಿ ಲೆಕ್ಕಾಚಾರ ಹಾಕಿ ಖರೀದಿಸಿದ ಆಟಗಾರರು ಮ್ಯಾಚ್​ ವಿನ್ನರ್​​ಗಳಾಗಿದ್ದಾರೆ.

ಇಂಡಿಯನ್​​ ಪ್ರೀಮಿಯರ್​​ ಲೀಗ್​.. ಐಪಿಎಲ್​ ಅಂದ್ರೆ ಇಲ್ಲಿ ಕಾಂಚಾಣ ಸಖತ್ ಸೌಂಡ್ ಮಾಡುತ್ತೆ..  ಸ್ಟಾರ್​ ಆಟಗಾರರ ಮೇಲೆ ಫ್ರಾಂಚೈಸಿಗಳು ಕೋಟಿ-ಕೋಟಿ ಹಣ ಸುರಿಯುತ್ತವೆ. ಈ ಐಪಿಎಲ್​ಗೂ ಮುನ್ನ ನಡೆದ ಮೆಗಾ ಹರಾಜಲ್ಲೂ ಅಷ್ಟೇ. ಬಿಗ್​​ ಸ್ಟಾರ್​​ಗಳೆಲ್ಲಾ ಬಿಗ್​ ಅಮೌಂಟ್​ ಬಾಚಿಕೊಂಡ್ರು. ಅದ್ರಲ್ಲಿ ಹಲವರು ಫ್ಲಾಪ್​ ಆದ್ರೆ, ಕೆಲವರು ಮಾತ್ರ ಹಿಟ್​ ಆಗಿದ್ದಾರೆ. ಆದ್ರೆ, ಫ್ರಾಂಚೈಸಿಗಳು ಅಳೆದು ತೂಗಿ ಲೆಕ್ಕಾಚಾರ ಹಾಕಿ ಕಡಿಮೆ ಮೊತ್ತಕ್ಕೆ ಬುಟ್ಟಿಗೆ ಹಾಕಿಕೊಂಡ ಪ್ಲೇಯರ್ಸ್​ ರಿಯಲ್​​ ಮ್ಯಾಚ್​ ವಿನ್ನರ್ಸ್​ ಆಗಿದ್ದಾರೆ. ಹಾಗಿದ್ರೆ ಯಾವೆಲ್ಲಾ ಆಟಹಾರರು ಕಡಿಮೆ ಹಣಕ್ಕೆ ಧಮಾಕ ಫಾರ್ಮಾಮೆನ್ಸ್ ನೀಡುತ್ತಿದ್ದಾರೆ ಅನ್ನೋದನ್ನ ನೋಡೋಣ ಬನ್ನಿ..

 ಟಿಮ್​ ಡೇವಿಡ್​ – ಆರ್​ಸಿಬಿ

ಟಿಮ್​ ಡೇವಿಡ್​ ಈ ಸೀಸನ್​ನಲ್ಲಿ ಆರ್​​ಸಿಬಿ ಪಾಲಿನ ಆಪತ್ಭಾಂದವನಾಗಿದ್ದಾರೆ. ಫಿನಿಶರ್​​ ರೂಲ್​ನ ಪರ್ಫೆಕ್ಟ್​ ಆಗಿ ನಿಭಾಯಿಸ್ತಿದ್ದಾರೆ. 187.50ಯ ಸ್ಟ್ರೈಕ್​​ರೇಟ್​ನಲ್ಲಿ ಘರ್ಜಿಸ್ತಿರೋ ಆಲ್​​ರೌಂಡ್​ ರನ್​ ಸುನಾಮಿ ಸೃಷ್ಟಿಸ್ತಿದ್ದಾರೆ. ಬ್ಯಾಟಿಂಗ್​ ಮಾತ್ರವಲ್ಲ, ಚುರುಕಿನ ಫೀಲ್ಡಿಂಗ್​ನಿಂದಲೂ ಗಮನ ಸೆಳೆ​​ದಿದ್ದಾರೆ. ಈ ರಿಯಲ್​ ಮ್ಯಾಚ್​ ವಿನ್ನರ್​ನ ಆರ್​​ಸಿಬಿ ಖರೀದಿಸಿದ್ದು ಕೇವಲ 3 ಕೋಟಿ ಹಣಕ್ಕೆ.

ದೇವ್​​ದತ್ ಪಡಿಕ್ಕಲ್ – ಆರ್​ಸಿಬಿ

ಕನ್ನಡಿಗ ದೇವದತ್​ ಪಡಿಕ್ಕಲ್​ ಆರ್​​ಸಿಬಿಯ ಬ್ಯಾಟಿಂಗ್​ ಬೆನ್ನುಲುಬಾಗಿದ್ದಾರೆ. ಆಡಿದ ಪಂದ್ಯಗಳಲ್ಲಿ ಸಖತ್‌ ಪರ್ಫಾಮೆನ್ಸ್​ ನೀಡ್ತಾ ಇರೋ ಪಡಿಕ್ಕಲ್​ ರನ್​ ಕೊಳ್ಳೆ ಹೊಡೀತ್ತಿದ್ದಾರೆ. ಈ ಪಡಿಕ್ಕಲ್​ ಆರ್​​ಸಿಬಿಯ ಮತ್ತೊಂದು ಚೀಪ್​ & ಬೆಸ್ಟ್​ ಪಿಕ್ ಅಂದ್ರೆ​ ತಪ್ಪಾಗಲ್ಲ. ಕೇವಲ 2 ಕೋಟಿ ಬೇಸ್​ಪ್ರೈಸ್​ ನೀಡಿ ಖರೀದಿಸಿದ ಈ ಕನ್ನಡಿಗ ಇದೀಗ ತಂಡದ ಬ್ಯಾಟಿಂಗ್​ ವಿಭಾಗದ ಶಕ್ತಿಯಾಗಿ ಹೊರಹೊಮ್ಮಿದ್ದಾರೆ.

ಎಡೆನ್​ ಮರ್ಕರಮ್​​ – ಲಕ್ನೋ

ಸನ್​​ರೈಸರ್ಸ್​ ಹೈದ್ರಾಬಾದ್​ ತಂಡದಿಂದ ರಿಲೀಸ್​ ಆಗಿದ್ದ ಆಲ್​​ರೌಂಡರ್​ ಎಡೆನ್​ ಮರ್ಕರಮ್​ನ ಲಕ್ನೋ ಸೂಪರ್​ ಜೈಂಟ್ಸ್​​ ತಂಡ ಬೇಸ್​​​ಪ್ರೈಸ್​ಗೆ ಖರೀದಿಸಿತು. 27 ಕೋಟಿ ನೀಡಿ ಖರೀದಿಸಿದ ರಿಷಭ್​ ಪಂತ್​ಗಿಂತ 2 ಕೋಟಿಗೆ ಲಕ್ನೋ ಸೇರಿದ ಮರ್ಕರಮ್​ ಬೆಸ್ಟ್​​ ಪರ್ಫಾಮೆನ್ಸ್​ ನೀಡ್ತಿದ್ದಾರೆ. ಆಲ್​​ರೌಂಡ್​ ಆಟದಿಂದ ಎಡೆನ್‌​ ಮಿಂಚ್ತಿದ್ದಾರೆ. ಓಪನರ್​ ಆಗಿ ಸಕ್ಸಸ್​ ಕಂಡಿರೋದಲ್ಲದೇ ಪಾರ್ಟ್​ ಟೈಮ್​ ಬೌಲರ್​ ಆಗಿ 4 ವಿಕೆಟ್​ಗಳನ್ನೂ ಬೇಟೆಯಾಡಿದ್ದಾರೆ.

 ಸಾಯಿ ಕಿಶೋರ್ –  ಗುಜರಾತ್

​​ರಶೀದ್​ ಖಾನ್​​​ ಫಾರ್ಮ್​ ಸಮಸ್ಯೆ ಎದುರಿಸ್ತಾ ಇರೋ ಸಂದರ್ಭದಲ್ಲಿ ಭರ್ಜರಿ ಆಟವಾಡ್ತಿರೋ ಸ್ಪಿನ್​ ಆಲ್​​ರೌಂಡರ್​ ಸಾಯಿ ಕಿಶೋರ್​​ ಗುಜರಾತ್​ ಟೈಟನ್ಸ್​ನ ಬಲ ಹೆಚ್ಚಿಸಿದ್ದಾರೆ. ಎಕಾನಮಿಕಲ್​ ಸ್ಪೆಲ್​ ಹಾಕಿ ಮಿಂಚಿರೋ ಸಾಯಿ ಕಿಶೋರ್ 12 ವಿಕೆಟ್​ಗಳನ್ನ ಬೇಟೆಯಾಡಿದ್ದಾರೆ. ಬ್ಯಾಟ್ಸ್​​ಮನ್​ಗಳಿಗೆ ಕಂಟಕವಾಗಿ ಕಾಡ್ತಿರೋ ಈ ಸಾಯಿ ಕಿಶೋರ್​​ನ ಗುಜರಾತ್​ ಖರೀದಿಸಿದ್ದು ಕೇವಲ 2 ಕೋಟಿ ರೂಪಾಯಿಗೆ.

ಅಜಿಂಕ್ಯಾ ರಹಾನೆ –  ಕೆಕೆಆರ್

ಕೊಲ್ಕತ್ತಾ ನೈಟ್​​ ರೈಡರ್ಸ್​​ ಫ್ರಾಂಚೈಸಿ ತಂಡದ ಕ್ಯಾಪ್ಟನ್​​ ಅಜಿಂಕ್ಯಾ ರಹಾನೆ ಕೊಟ್ಟ ಹಣ ಎಷ್ಟು ಗೊತ್ತಾ ಕೇವಲ 1.50 ಕೋಟಿ ಮಾತ್ರ. ಹರಾಜಿನಲ್ಲಿ ಫಸ್ಟ್​ ರೌಂಡ್​ನಲ್ಲಿ ಅನ್​ಸೋಲ್ಡ್​ ಆಗಿದ್ದ ರಹಾನೆಯನ್ನ ಕೊನೆ ರೌಂಡ್​ನಲ್ಲಿ ಬೇಸ್​​ಪ್ರೈಸ್​ ನೀಡಿ ಕೆಕೆಆರ್​ ಖರೀದಿಸಿತು. ನಾಯಕನ ಪಟ್ಟವನ್ನೂ ಕಟ್ತು. ನಾಯಕನಾಗಿ ಸಕ್ಸಸ್​ ಆಗದಿದ್ರೂ, ಬ್ಯಾಟಿಂಗ್​ನಲ್ಲಿ ರಹಾನೆ ಮಿಂಚ್ತಿದ್ದಾರೆ. ಕೆಕೆಆರ್​​ ರಿಟೈನ್​ ಮಾಡಿಕೊಂಡ ಆಟಗಾರರಿಗಿಂತ ರಹಾನೆನೇ ಒಳ್ಳೆ ಆಟ ಆಡ್ತಿದ್ದಾರೆ. ಕಡಿಮೆ ಮೊತ್ತಕ್ಕೆ ಫ್ರಾಂಚೈಸಿಗಳು ಖರೀದಿಸಿದ ಆಟಗಾರರು ಮ್ಯಾಚ್​ ವಿನ್ನಿಂಗ್​ ಆಟದಿಂದ ತಂಡಗಳ ರಿಯಲ್​ ಮ್ಯಾಚ್​ ವಿನ್ನರ್​​ಗಳಾಗಿ ರೂಪುಗೊಂಡಿದ್ದಾರೆ. ತಮ್ಮ ಆಟದಿಂದ ಸೀಸನ್​ 18ರಲ್ಲಿ ತಂಡದ ಹಣೆಬರಹವನ್ನೆ ಬದಲಿಸಿರೋದು ಸುಳ್ಳಲ್ಲ.

Kishor KV

Leave a Reply

Your email address will not be published. Required fields are marked *