8 ಪ್ಲೇಯರ್ಸ್.. ಶತಕ ಜಸ್ಟ್ ಮಿಸ್.. KL ರಾಹುಲ್, ಗಿಲ್ ಗೆ 90ರ ಕಂಟಕ! – IPL ಹೀರೋಗಳಿಗೆ ಕೈಕೊಟ್ಟ ಅದೃಷ್ಟ!

ಐಪಿಎಲ್ ಸೀಸನ್ 18 ಅಂತಿಮ ಹಂತಕ್ಕೆ ಬಂದಿದೆ. ಕೆಲವು ತಂಡಗಳಿಗೆ ಮಾಡು ಇಲ್ಲವೇ ಮಡಿ ಪಂದ್ಯ ಆಗಿದೆ. ಗೆದ್ರಷ್ಟೇ ಪ್ಲೇ ಆಫ್ ಎಂಟ್ರಿ.. ಆದ್ರೆ ಐಪಿಎಲ್ ನಲ್ಲಿ ಸೆಂಚುರಿ ಬಾರಿಸ್ಬೇಕು ಅನ್ನೋದು ಅದೆಷ್ಟೋ ಪ್ಲೇಯರ್ಸ್ ಕನಸು.. ಅದಕ್ಕಾಗಿ ಆಟಗಾರರ ಪರಿಶ್ರಮ ಅಷ್ಟಿಷ್ಟಲ್ಲ.. ಆದ್ರೆ ಏನ್ ಮಾಡೋದು.. ಪ್ರರಿಶ್ರಮದ ಎಷ್ಟೇ ಹಾಕಿದ್ರೂ ಕೆಲವೊಂದ್ಸಲ ಲಕ್ ಕೈಕೊಡುತ್ತೆ.. ಇದೀಗ ಈ ವರ್ಷದ ಟೂರ್ನಿಯಲ್ಲಿ ಕೆಎಲ್ ರಾಹುಲ್, ಗಿಲ್ ಸೇರಿ ಕೆಲ ಆಟಗಾರರ ಪರಿಸ್ಥಿತಿ ಕೂಡ ಇದೇ ಆಗಿದೆ. ಇನ್ನೇನು ಶತಕ ಬಾರಿಸಿ ಸಂಭ್ರಮಿಸ್ಬೇಕು ಅನ್ನುವಷ್ಟರಲ್ಲಿ ಔಟ್ ಆಗಿ ಪೆವಿಲಿಯನ್ ಸೇರಿದ್ದಾರೆ. ಹಾಗಾದ್ರೆ ಈ ಬಾರಿ ಯಾರಿಗೆಲ್ಲಾ ಲಕ್ ಕೈ ಕೊಡ್ತು.. ಯಾವ್ಯಾವ ಪ್ಲೇಯರ್ಸ್‌ಗೆ ಶತಜ ಜಸ್ಟ್ ಮಿಸ್ ಆಯ್ತು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: RCB ಫಾರ್ಮ್ ಕಳೆದುಕೊಳ್ಳುತ್ತಾ? – ನಾಲ್ವರು ಫಾರಿನ್ ಪ್ಲೇಯರ್ಸ್ ವಾಪಸ್?
ಐಪಿಎಲ್‌ನಲ್ಲಿ ಆಡ್ಬೇಕು ಅನ್ನೋದು ಅದೆಷ್ಟೋ ಯುವಕರ ಕನಸು ಆಗಿದ್ರೆ.. ಇದೇ ಐಪಿಎಲ್‌ನಲ್ಲಿ ಶತಕ ಬಾರಿಸಿ ಮಿಂಚ್ಬೇಕು.. ತಾನೂ ಒಬ್ಬ ಬೆಸ್ಟ್ ಪ್ಲೇಯರ್ ಅನ್ನೋದನ್ನ ಜಗತ್ತಿನ ಮುಂದೆ ತೋರಿಸ್ಬೇಕು ಅನ್ನೋದು ಕ್ರಿಕೆಟರ್ಸ್ ಆಸೆ. ಇದಕ್ಕಾಗಿ ಪ್ಲೇಯರ್ ಹಾಕಿರೋ ಶ್ರಮ ಒಂದೆರಡಲ್ಲ.. ಆದ್ರೇನು ಮಾಡೋದು.. ಪರಿಶ್ರಮದ ಜೊತೆ ಲಕ್ ಇದ್ರೇನೆ ಇದೆಲ್ಲ ಸಾಧ್ಯ ಆಗೋದು.. ಈ ಬಾರಿಯ ಐಪಿಎಲ್‌ನಲ್ಲಿ ಕೆಲ ಪ್ಲೇಯರ್ಸ್‌ಗೆ ಶತಕ ಆಸೆ ತೋರಿಸಿ ಲಕ್ ಕೈಕೊಟ್ಟಿದೆ. ಇನ್ನೇನು ಸೆಂಚುರಿ ಬಾರಿಸ್ಬೇಕು ಅನ್ನುವಷ್ಟರಲ್ಲಿ ಔಟ್ ಅಂತಾ ಅಂಪೇರ್ ಅನೌನ್ಸ್ ಮಾಡಿದ್ದೂ ಇದೆ. ಇದೀಗ ಈ ಪ್ಲೇಯರ್ಸ್ ಗೆ 90 ರ ಕಂಟಕ ಕಾಡಿದೆ. ಅತೀ ಹೆಚ್ಚು ಆಟಗಾರರು 90 ರನ್‌ಗೆ ಔಟ್ ಆಗುವ ಮೂಲಕ ಶತಕ ತಪ್ಪಿಸಿಕೊಂಡಿದ್ದಾರೆ. ಕೇವಲ ಔಟ್ ಆಗಿದ್ದು, ಮಾತ್ರವಲ್ಲ ಕೆಲವು ಆಟಗಾರರು ನಾಟೌಟ್ ಆಗಿದ್ರೂ ಶತಕ ಪೂರ್ತಿಗೊಳಿಸಲು ಸಾಧ್ಯವಾಗಿಲ್ಲ. ಅದರಲ್ಲೂ ವಿಶೇಷವಾಗಿ 8 ಮಂದಿ ಆಟಗಾರರು ಈ ಬಾರಿ 90 ರನ್‌ಗೆ ಔಟ್ ಆಗಿ ಶತಕ ಮಿಸ್ ಮಾಡಿಕೊಂಡಿದ್ದಾರೆ.
ಈ ಬಾರಿಯ ಐಪಿಎಲ್ ನಲ್ಲಿ ಮೂವರು ಆಟಗಾರರಿಗೆ ಕಾಡಿದ ಸಂಖ್ಯೆ 97.. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಕಿಂಗ್ಸ್ ಪಂಜಾಬ್ ತಂಡದ ನಾಯಕ ಶ್ರೇಯಸ್ ಐಯ್ಯರ್ ಭರ್ಜರಿ ಬ್ಯಾಟಿಂಗ್ ಮಾಡಿದ್ರು.. ಶ್ರೇಯಸ್ ಆ ಪಂದ್ಯದಲ್ಲಿ 97 ರನ್ ಗಳಿಸುವ ಮೂಲಕ ಔಟ್ ಆಗದೆ ನಾಟೌಟ್ ಆಗಿ ಉಳಿದುಕೊಂಡಿದ್ದರು. ಆ ಮೂಲಕ ಅವರು 3 ರನ್ ಅಂತರದಲ್ಲಿ ಶತಕ ಮಿಸ್ ಮಾಡಿಕೊಂಡರು. ಇವರ ಜೊತೆಗೆ ಗುಜರಾತ್ ಟೈಟನ್ಸ್ ತಂಡದ ಆಟಗಾರ ಜೋಸ್ ಬಟ್ಲರ್ ಗೂ ಶತಕ ಮಿಸ್‌ಆಗಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಜೋಸ್ ಬಟ್ಲರ್ 97 ರನ್ ಗಳಿಸುವ ಮೂಲಕ ನಾಟೌಟ್ ಆಗಿ ಉಳ್ಕೊಂಡಿದ್ರು ಇವ್ರು ಕಕೂಡ ಜಸ್ಟ್ 3 ರನ್ ಅಂತರದಲ್ಲಿ ಶತಕ ಮಿಸ್ ಮಾಡಿಕೊಂಡಿದ್ದಾರೆ. ಇನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಕೂಡ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ಬ್ಯಾಟಿಂಗ್ ಮೂಲಕ ಪರಾಕ್ರಮ ಮೆರೆದ್ರು.. 8 ಬೌಂಡರಿ, 6 ಆಕರ್ಷಕ ಸಿಕ್ಸರ್ ಸಿಡಿಸಿದ ಡಿ ಕಾಕ್ 159ರ ಸ್ಟ್ರೈಕ್ರೇಟ್ನಲ್ಲಿ ರನ್ ಕೊಳ್ಳೆ ಹೊಡೆದ್ರು. 61 ಎಸೆತಗಳಲ್ಲಿ ಅಜೇಯ 97 ರನ್ ಸಿಡಿಸಿದ ಡಿ ಕಾಕ್ ಗೆಲುವಿನ ರೂವಾರಿಯಾದ್ರು. ಆ ಮೂಲಕ ಕೇವಲ 3 ರನ್‌ಗಳಿಂದ ಡಿ ಕಾಕ್ ಶತಕ ವಂಚಿತರಾಗಿದ್ದಾರೆ.
ಇನ್ನು ರಾಜಸ್ಥಾನ ರಾಯಲ್ಸ್ ಹಾಗೂ ಕೆಕೆಆರ್ ನಡುವೆ ನಡೆದ ಪಂದ್ಯದಲ್ಲಿ ರಿಯಾನ್ ಪರಾಗ್ ತಮ್ಮ ಬ್ಯಾಟಿಂಗ್ ಕೌಶಲ್ಯ ಮೆರೆದಿದ್ದಾರೆ. ರಿಯಾನ್ ಸತತ 6 ಎಸೆತಗಳಲ್ಲಿ 6 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಅಂತಿಮವಾಗಿ ರಿಯಾನ್ 45 ಎಸೆತಗಳಲ್ಲಿ 6 ಬೌಂಡರಿ ಮತ್ತು 8 ಸಿಕ್ಸರ್‌ಗಳಿಂದ 95 ರನ್ ಗಳಿಸಿ ಔಟಾದರು. ಈ ಮೂಲಕ ಕೇವಲ 5 ರನ್‌ಗಳಿಂದ ಶತಕ ವಂಚಿತರಾದರು.
ಇನ್ನು ಚೆನ್ನೈ ಸೂಪರ್ ಕಿಂಗ್ಸ್‌ನ ಯುವ ಬ್ಯಾಟರ್ ಆಯುಷ್ ಮ್ಹಾತ್ರೆ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಕಮಾಲ್ ಮಾಡಿದ್ರು.. ಆ ಪಂದ್ಯದಲ್ಲಿ 94 ರನ್ ಗಳಿಸಿ ಔಟ್ ಆದ್ರು, ಆ ಮೂಲಕ ಅವರು 6 ರನ್ ಅಂತರದಲ್ಲಿ ಶತಕ ಮಿಸ್ ಮಾಡಿಕೊಂಡು ನಿರಾಸೆ ಅನುಭವಿಸಿದರು.
ಆರ್‌ಸಿಬಿ vs ಡಿಸಿ ಪಂದ್ಯದಲ್ಲಿ ಕೆಎಲ್ ರಾಹುಲ್ ಸೆಂಚುರಿ ಸಂಭ್ರಮದಿಂದ ಜಸ್ಟ್ ಮಿಸ್ ಆಗಿದ್ದಾರೆ.. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ ಕೇವಲ 53 ಎಸೆತಗಳಲ್ಲಿ ಅಜೇಯ 93 ರನ್ ಗಳಿಸಿ ಮಿಂಚಿದರು. 7 ರನ್‌ಗಳಿಂದ ಶತಕ ಮಿಸ್ ಮಾಡಿಕೊಂಡರು. ಆದ್ರೆ ಕೆಎಲ್ ರಾಹುಲ್ ಸುಮಾರು 9 ವರ್ಷಗಳ ಬಳಿಕ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅರ್ಧ ಶತಕ ಬಾರಿಸಿದ್ರು.. ಶತಕ ಮಿಸ್ ಆಗಿದ್ರು ಈ ತಂಡದ ಗೆಲುವನ್ನ ಕಾಂತಾರ ಸ್ಟೈಲ್‌ನಲ್ಲಿ ಸಂಭ್ರಮಿಸಿದ್ರು.. ಇನ್ನು ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಪ್ರಭ್‌ಸಿಮ್ರಾನ್ ಸಿಂಗ್ ಲಖನೌ ಸೂಪರ್‌ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 91 ರನ್ ಸಿಡಿಸಿ ನಾಟೌಟ್ ಆಗಿ ಉಳಿದುಕೊಂಡರು. ಆ ಮೂಲಕ ಅವರು ಕೂಡ 9 ರನ್‌ಗಳಿಂದ ಶತಕ ಮಿಸ್ ಮಾಡಿಕೊಂಡರು.
ಇನ್ನೂ ಗುಜರಾತ್ ಟೈಟನ್ಸ್ ನಾಯಕ ಶುಭ್ಮಾನ್ ಗಿಲ್ ಅವರು ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಮೂಲಕ ಘರ್ಜಿಸಿದ್ರು.. ಭರ್ಜರಿ ಬ್ಯಾಟಿಂಗ್ ಮಾಡಿದ ಗಿಲ್ 55 ಎಸೆತಗಳಲ್ಲಿ 90 ರನ್ ಗಳಿಸಿ ರಿಂಕು ಸಿಂಗ್ ಅವರಿಗೆ ಕ್ಯಾಚ್ ನೀಡಿದರು. ಈ ರೀತಿಯಾಗಿ, ಗಿಲ್ ದುರದೃಷ್ಟಕರ ರೀತಿಯಲ್ಲಿ ಔಟಾದರು. ಕೇವಲ 10 ರನ್ ಅಂತರದಲ್ಲಿ ಶತಕ ಮಿಸ್ ಮಾಡಿಕೊಂಡಿಡ್ರು.. ಒಟ್ಟಾರೆಯಾಗಿ ಈ ಬಾರಿಯ ಐಪಿಎಲ್‌ನಲ್ಲಿ ಬರೋಬ್ಬರಿ 8 ಆಟಗಾರರು 90ರ ಗಡಿ ತಲುಪಿದ್ದು ಶತಕ ಮಿಸ್ ಮಾಡಿಕೊಂಡಿದ್ದಾರೆ.