IPL ಬ್ರ್ಯಾಂಡ್ ವ್ಯಾಲ್ಯೂ ಎಷ್ಟಿದೆ? ಟಾಪ್ -3 ಪ್ರಾಂಚೈಸಿ ಯಾವುವು?
ನಂ.1 ಪ್ರಾಂಚೈಸಿ ಆಗುತ್ತಾ ಆರ್ಸಿಬಿ?

IPL ಬ್ರ್ಯಾಂಡ್ ವ್ಯಾಲ್ಯೂ ಎಷ್ಟಿದೆ?  ಟಾಪ್ -3 ಪ್ರಾಂಚೈಸಿ ಯಾವುವು?ನಂ.1 ಪ್ರಾಂಚೈಸಿ ಆಗುತ್ತಾ ಆರ್ಸಿಬಿ?

ಬ್ರ್ಯಾಂಡ್ ಫೈನಾನ್ಸ್‍ನ ಇತ್ತೀಚಿನ ವರದಿಯ ಪ್ರಕಾರ 2025ರಲ್ಲಿ ಐಪಿಎಲ್‍ನ ಬ್ರ್ಯಾಂಡ್ ವ್ಯಾಲ್ಯೂ 12 ಬಿಲಿಯನ್ ಯುಎಸ್ ಡಾಲರ್. ಅಂದ್ರೆ ಭಾರತೀಯ ರೂಪಾಯಿಗಳಲ್ಲಿ ಒಂದು ಲಕ್ಷ ಕೋಟಿ ರೂಪಾಯಿ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಶೇ.13ರಷ್ಟು ಏರಿಕೆಯಾಗಿದೆ. 2009ರಲ್ಲಿ ಐಪಿಎಲ್‍ನ ಬ್ರ್ಯಾಂಡ್ ವ್ಯಾಲ್ಯೂ ಜಸ್ಟ್ 2 ಬಿಲಿಯನ್. 15 ವರ್ಷದಲ್ಲೇ ಅದ್ರ 5 ಪಟ್ಟು ಹೆಚ್ಚಾಗಿದೆ. ಇನ್ನು ಫ್ರಾಂಚೈಸಿಗಳು ಕೂಡ ದುಡ್ಡು ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಫ್ರಾಂಚೈಸಿ ಆಟಗಾರರನ್ನೇ ಬ್ರ್ಯಾಂಡ್ ಮಾಡಿಕೊಂಡು ಹಣದ ಹೊಳೆಯನ್ನೇ ಹರಿಸುತ್ತಿವೆ.

 CSK- ಬ್ರ್ಯಾಂಡ್ ವ್ಯಾಲ್ಯೂ 1,012 ಕೋಟಿ ರೂ.

2025ರಲ್ಲೂ ಬ್ರ್ಯಾಂಡ್ ವ್ಯಾಲ್ಯೂ ವಿಚಾರದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಟಾಪ್‌ 1ನಲ್ಲಿ ಇದೆ. ಇದ್ರ ಬ್ರ್ಯಾಂಡ್ ವ್ಯಾಲ್ಯೂ  122 ಮಿಲಿಯನ್ ಯುಎಸ್ ಡಾಲರ್ ಅಂದ್ರೆ 1,012 ಕೋಟಿ ರೂ. ಇದೆ.

2ನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್  

ಇನ್ನು ಎರಡನೇ ಸ್ಥಾನದಲ್ಲಿದೆ ಐದು ಬಾರಿಯ ಚಾಂಪಿಯನ್ ತಂಡ ಮುಂಬೈ ಇಂಡಿಯನ್ಸ್ ಇದೆ. ಈ ತಂಡದ ಬ್ರ್ಯಾಂಡ್ ವ್ಯಾಲ್ಯೂ – 119 ಮಿಲಿಯನ್ ಯುಎಸ್ ಡಾಲರ್. ಅಂದ್ರೆ 987 ಕೋಟಿ ರೂಪಾಯಿ.

ಆರ್‌ಸಿಬಿ ಬ್ರ್ಯಾಂಡ್ ವ್ಯಾಲ್ಯೂ 971 ಕೋಟಿ ರೂ.

ಮೂರನೇ ಸ್ಥಾನದಲ್ಲಿದೆ 2025ರ  ಐಪಿಎಲ್ ಚಾಂಪಿಯನ್ ತಂಡ. ಆರ್‍ಸಿಬಿಯ ಬ್ರ್ಯಾಂಡ್ ವ್ಯಾಲ್ಯೂ 118 ಮಿಲಿಯನ್ ಯುಎಸ್ ಡಾಲರ್. 971 ಕೋಟಿ ರೂ. ಐಪಿಎಲ್‍ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಮೂರನೇ ಸ್ಥಾನದಲ್ಲಿದ್ದು, ಟಾಪ್‌ 1 ಗೆ ಬರುವ ಸಾಧ್ಯತೆ ತುಂಬಾ ಇದೆ.

  KKR ವ್ಯಾಲ್ಯೂ 905 ಕೋಟಿ ರೂ.

ನಾಲ್ಕನೇ ಸ್ಥಾನದಲ್ಲಿ ಶಾರೂಕ್ ಖಾನ್ ಒಡೆತನದ ಕೆಕೆಆರ್ ತಂಡವಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ರ್ಯಾಂಡ್ ವ್ಯಾಲ್ಯೂ 109 ಮಿಲಿಯನ್ ಯುಎಸ್ ಡಾಲರ್. ಅಂದ್ರೆ 905 ಕೋಟಿ ರೂಪಾಯಿ.  ಐದನೇ ಸ್ಥಾನದಲ್ಲಿದೆ ಕಾವ್ಯಾ ಮಾರನ್ ಒಡೆತನದ ಸನ್ ರೈಸರ್ಸ್ ಹೈದ್ರಬಾದ್ ತಂಡವಿದ್ದು ಇದ್ರ ಬ್ರ್ಯಾಂಡ್ ವ್ಯಾಲ್ಸೂ 706 ಕೋಟಿ ರೂಪಾಯಿ ಆಗಿದೆ.

 RR – 672 ಕೋಟಿ ರೂ.

ಆರನೇ ಸ್ಥಾನದಲ್ಲಿದೆ ಚೊಚ್ಚಲ ಐಪಿಎಲ್ ಚಾಂಪಿಯನ್ ಚಾಂಪಿಯನ್ ರಾಜಸ್ಥಾನ ರಾಯಲ್ಸ್ . ಆರ್ ಆರ್ ತಂಡದ ಬ್ರ್ಯಾಂಡ್ ವ್ಯಾಲೂ   672 ಕೋಟಿ ರೂಪಾಯಿ.

7 ನೇ ಸ್ಥಾನದಲ್ಲಿದೆ ಡೆಲ್ಲಿ ಕ್ಯಾಪಿಟಲ್ಸ್   

ಏಳನೇ ಸ್ಥಾನದಲ್ಲಿದೆ ದೆಹಲಿ ಕ್ಯಾಪಿಟಲ್ಸ್ ತಂಡವಿದ್ದು, ಇದ್ರ  ಬ್ರ್ಯಾಂಡ್ ವ್ಯಾಲ್ಯೂ  664 ಕೋಟಿ ರೂಪಾಯಿ ಇದೆ.

ಎಂಟನೇ ಸ್ಥಾನದಲ್ಲಿದೆ ಗುಜರಾತ್ ಟೈಟಾನ್ಸ್ ತಂಡವಿದ್ದು,  573 ಕೋಟಿ ರೂ. ಬ್ರ್ಯಾಂಡ್ ವ್ಯಾಲ್ಯೂ ಹೊಂದಿದೆ.

2025ರ ಐಪಿಎಲ್ ರನ್ನರ್ ಅಪ್ ಪಂಜಾಬ್ ಕಿಂಗ್ಸ್ ತಂಡ 9ನೇ ಸ್ಥಾನದಲ್ಲಿದ್ದುಸ  564 ಕೋಟಿ ರೂಪಾಯಿ ಹೊಂದಿದೆ.

10ನೇ ಹಾಗೂ ಕೊನೆಯ ಸ್ಥಾನದಲ್ಲಿದೆ ಲಕ್ನೋ ಸೂಪರ್ ಜೈಂಟ್ಸ್ ತಂಡ. 60 ಮೀಲಿಯನ್ ಅಂದ್ರೆ 498 ಕೋಟಿ ರೂ. ಬ್ರ್ಯಾಂಡ್ ವ್ಯಾಲ್ಯೂ  ಹೊಂದಿದೆ.

 

ಒಟ್ಟಾರೆ ಐಪಿಎಲ್ ಶ್ರೀಮಂತಗೊಳಿಸಲು ಬಿಸಿಸಿಐ ನಾನಾ ರೀತಿಯ ಪ್ಲ್ಯಾನ್‍ಗಳನ್ನು ಮಾಡಿಕೊಳ್ಳುತ್ತಿದೆ. ಜೊತೆಗೆ ಫ್ರಾಂಚೈಸಿಗಳ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಾದಂತೆ ಐಪಿಎಲ್‍ನ ಬ್ರ್ಯಾಂಡ್ ವ್ಯಾಲ್ಯೂಗಳು ಸಹ ಹೆಚ್ಚಾಗುತ್ತಿದೆ. ಅಲ್ಲದೆ ಮಾಧ್ಯಮ ಹಕ್ಕುಗಳು, ಡಿಜಿಟಲ್ ಹಕ್ಕಗಳು, ಜಾಗತೀಕ ಜಾಹೀರಾತುಗಳು, ಫ್ರಾಂಚೈಸಿಯ ಹೂಡಿಕೆಗಳು ಎಲ್ಲವೂ ಐಪಿಎಲ್‍ನ ಬ್ರ್ಯಾಂಡ್ ವ್ಯಾಲ್ಯೂವನ್ನು ಹೆಚ್ಚಿಸುತ್ತದೆ. ಇನ್ನು ಐಪಿಎಲ್ ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿದ್ದಂತೆ ವಿದೇಶಿ ಕಂಪೆನಿಗಳು ಹೂಡಿಕೆ ಮಾಡಲು ಮುಂದೆ ಬರುತ್ತಿವೆ.

Kishor KV

Leave a Reply

Your email address will not be published. Required fields are marked *