ಡಿಸೆಂಬರ್ 19ರಂದು ಐಪಿಎಲ್ ಹರಾಜು ಪ್ರಕ್ರಿಯೆ- ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಸೇರುವ ಆಟಗಾರರು ಯಾರು?

ಡಿಸೆಂಬರ್ 19ರಂದು ಐಪಿಎಲ್ ಹರಾಜು ಪ್ರಕ್ರಿಯೆ-  ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಸೇರುವ ಆಟಗಾರರು ಯಾರು?

ಡಿಸೆಂಬರ್ 19ರಂದು ಈ ಬಾರಿಯ ಐಪಿಎಲ್​​ ಆಕ್ಷನ್ ನಡೀತಾ ಇದೆ. ಹೀಗಾಗಿ ಎಲ್ಲಾ 10 ಫ್ರಾಂಚೈಸಿಗಳು ಫ್ಲೇಯರ್ಸ್​​ಗಳನ್ನ ಖರೀದಿಸೋಕೆ ಭಾರಿ ತಯಾರಿ ನಡೆಸುತ್ತಿವೆ. ಈಗಾಗಲೇ ಕೆಲ ಆಟಗಾರರನ್ನ ರಿಟೈನ್​ ಮಾಡಿದ್ದಾರೆ. ಇನ್ನೂ ಕೆಲವರನ್ನ ರಿಲೀಸ್ ಮಾಡಿ, ಹೊಸ ಪ್ಲೇಯರ್ಸ್​ಗಳನ್ನ ತಂಡಕ್ಕೆ ಸೇರಿಸೋಕೆ ಫ್ರಾಂಚೈಸಿಗಳು ಬಜೆಟ್ ಕೂಡ ರೆಡಿ ಮಾಡಿಕೊಂಡಿವೆ. ಹಾಗಾದರೆ, ಯಾವ್ಯಾವ ಫ್ರಾಂಚೈಸಿಗಳು ಯಾವೆಲ್ಲಾ ಆಟಗಾರರ ಮೇಲೆ ಕಣ್ಣಿಟ್ಟಿವೆ? ಯಾರನ್ನ ಖರೀದಿಸೋಕೆ ಪ್ಲ್ಯಾನ್ ಮಾಡುತ್ತಿವೆ? ರಾಯಲ್​ ಚಾಲೆಂಜರ್ಸ್​ ಬೆಂಗಳೂರಿಗೆ ಜಾಯಿನ್ ಆಗಬಹುದಾದ ಪ್ಲೇಯರ್ ಯಾರು? ಅತೀ ಹೆಚ್ಚು ಡಿಮ್ಯಾಂಡ್​​ನಲ್ಲಿರುವ ಆಟಗಾರರು ಯಾರೆಲ್ಲಾ? ಇವೆಲ್ಲದರ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ವಿಶ್ವಕಪ್‌ನ ಹೀರೋ ಶಮಿ ಮುಂದಿನ ಟಿ-20 ವಿಶ್ವಕಪ್‌ನಲ್ಲಿ ಆಡ್ತಾರಾ? – ಸೆಲೆಕ್ಷನ್ ಕಮಿಟಿಯ ಲೆಕ್ಕಾಚಾರವೇನು?

ಎಂ.ಎಸ್.ಧೋನಿ ನೇತೃತ್ವದ ಚೆನ್ನೈ ಸೂಪರ್​ ಕಿಂಗ್ಸ್​ ಒಟ್ಟು 6 ಮಂದಿ ಪ್ಲೇಯರ್ಸ್​ಗಳನ್ನ ಪರ್ಚೇಸ್ ಮಾಡುವ ಪ್ಲ್ಯಾನ್​ನಲ್ಲಿದೆ. ಆಸ್ಟ್ರೇಲಿಯಾದ ವರ್ಲ್ಡ್​​ಕಪ್ ವಿನ್ನಿಂಗ್ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್, ಫಾಸ್ಟ್ ಬೌಲರ್ ಜಾಶ್ ಹೇಜಲ್​ವುಡ್, ಮನೀಶ್ ಪಾಂಡೆ, ತಮಿಳುನಾಡು ಬ್ಯಾಟ್ಸ್​ಮನ್ ಶಾರುಕ್ ಖಾನ್ ಮತ್ತು ಕರುಣ್ ನಾಯರ್​ರನ್ನ ತಂಡಕ್ಕೆ ಸೇರ್ಪಡೆಗೊಳಿಸೋಕೆ ಚೆನ್ನೈ ಸೂಪರ್​ ಕಿಂಗ್ಸ್ ಮ್ಯಾನೇಜ್ಮೆಂಟ್ ಪ್ಲ್ಯಾನ್ ಮಾಡಿದೆ. ಈ ಆರು ಮಂದಿ ಆಟಗಾರರಿಗೆ ಸಿಎಸ್​​ಕೆ ಬಿಡ್ಡಿಂಗ್​​ ಮಾಡುವ ಸಾಧ್ಯತೆ ಇದೆ. ಅದ್ರಲ್ಲೂ ಮನೀಶ್ ಪಾಂಡೆಯನ್ನ ಮಾತ್ರ ಯಾವುದೇ ಕಾರಣಕ್ಕೂ ಬಿಟ್ಟು ಕೊಡದೆ ಇರಲು ಸಿಎಸ್​ಕೆ ತೀರ್ಮಾನ ಮಾಡಿದೆ ಎನ್ನಲಾಗಿದೆ.

ಗುಜರಾತ್ ಟೈಟಾನ್ಸ್

ಇನ್ನು ಕ್ಯಾಪ್ಟನ್​ ಆಗಿದ್ದ ಹಾರ್ದಿಕ್ ಪಾಂಡ್ಯ ಮತ್ತೆ ಮುಂಬೈ ಇಂಡಿಯನ್ಸ್​ ಸೇರಿಕೊಂಡಿರೋದ್ರಿಂದ ಟೀಂಗೆ ಒಬ್ಬ ಕ್ವಾಲಿಟಿ ಆಲ್ರೌಂಡರ್​ನ​ ಅವಶ್ಯಕತೆ ಕೂಡ ಇದೆ. ಗುಜರಾತ್ ಟೈಟಾನ್ಸ್ ಈಗಾಗ್ಲೇ 9 ಪ್ಲೇಯರ್ಸ್​ಗಳನ್ನ ರಿಲೀಸ್ ಮಾಡಿದ್ದು, ಇನ್ನೂ 8 ಸ್ಲಾಟ್​ಗಳನ್ನ ಫಿಲ್​ ಮಾಡೋಕೆ ಬಾಕಿ ಇದೆ. ಆಟಗಾರರನ್ನ ಖರೀದಿಸೋಕೆ ಗುಜರಾತ್ ಟೈಟಾನ್ಸ್​ ಪರ್ಸ್​​ನಲ್ಲಿರೋದು 38.15 ಕೋಟಿ ರೂಪಾಯಿ. ಸದ್ಯ ಜಿಟಿ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್, ಇಂಗ್ಲೆಂಡ್​​ನ ಹ್ಯಾರಿ ಬ್ರೂಕ್ ಮತ್ತು ನ್ಯೂಜಿಲ್ಯಾಂಡ್​ನ ಫಿನ್ ಅಲೆನ್​ರನ್ನ ಖರೀದಿಸೋಕೆ ಗುಜರಾತ್ ಟೈಟಾನ್ಸ್ ಮ್ಯಾನೇಜ್ಮೆಂಟ್ ಪ್ಲ್ಯಾನ್ ಮಾಡ್ತಿದೆ.

ಮುಂಬೈ ಇಂಡಿಯನ್ಸ್

ಇನ್ನು ಮುಂಬೈ ಇಂಡಿಯನ್ಸ್​ ಅಂತೂ ಈಗಾಗ್ಲೇ ಗುಜರಾತ್​ ಟೈಟಾನ್ಸ್​​​ನಲ್ಲಿದ್ದ ಹಾರ್ದಿಕ್ ಪಾಂಡ್ಯಾರನ್ನ 15 ಕೋಟಿಗೂ ಹೆಚ್ಚು ಹಣ ಕೊಟ್ಟು ತಂಡಕ್ಕೆ ಸೇರ್ಪಡೆಗೊಳಿಸಿದೆ. ಜೊತೆಗೆ ಲಕ್ನೋ ಸೂಪರ್​ ಜಯಾಂಟ್ಸ್​​ನಲ್ಲಿದ್ದ ವೆಸ್ಟ್​​ಇಂಡೀಸ್ ಮೂಲದ ಬೌಲರ್ ರೊಮಾರಿಯೊ ಶೆಫರ್ಡ್​ರನ್ನ ಕೂಡ ಪರ್ಚೇಸ್ ಮಾಡಿದೆ. ಹೀಗಾಗಿ ಆಕ್ಷನ್​ನಂದು ಪ್ಲೇಯರ್ಸ್​ಗಳನ್ನ ಖರೀದಿಸೋಕೆ ಅಂಬಾನಿ ಪರ್ಸ್​ನಲ್ಲಿ 17.75 ಕೋಟಿ ರೂಪಾಯಿ ಅಷ್ಟೇ ಉಳಿದಿದೆ. ದಕ್ಷಿಣ ಆಫ್ರಿಕಾದ ಕ್ರಿಕೆಟಿಗರಾದ ಜಾರ್ಜ್ ಲಿಂಡೆ ಮತ್ತು ಬ್ಯೂರನ್ ಹೆಂಡ್ರಿಕ್ಸ್​ರನ್ನ ಮುಂಬೈ ಇಂಡಿಯನ್ಸ್ ಖರೀದಿಸುವ ಸಾಧ್ಯತೆ ಇದೆ. ಹಾಗೆಯೇ ಬಾಂಗ್ಲಾದೇಶದ ಮುಜೀಬ್ ಉರ್ ರೆಹ್ಮಾನ್ ಮೇಲೆಯೂ ಮುಂಬೈ ಇಂಡಿಯನ್ಸ್ ಕಣ್ಣಿಟ್ಟಿದೆ.

ದೆಹಲಿ ಕ್ಯಾಪಿಟಲ್ಸ್​

ದೆಹಲಿ ಕ್ಯಾಪಿಟಲ್ಸ್ ಈಗಾಗ್ಲೇ 11 ಮಂದಿ ಆಟಗಾರರನ್ನ ರಿಲೀಸ್ ಮಾಡಿದೆ. 9 ಸ್ಲಾಟ್​​ಗಳಲ್ಲಿ ಫಿಲ್ ಮಾಡಬೇಕಿದೆ. ಫ್ರಾಂಚೈಸಿಯ ಪರ್ಸ್​​ನಲ್ಲಿ 28.95 ಕೋಟಿ ರೂಪಾಯಿ ಬಾಕಿ ಉಳಿದಿದೆ. ಒಟ್ಟು ಮೂವರು ಪ್ಲೇಯರ್ಸ್​​ಗಳನ್ನ ಡಿಸಿ ಟಾರ್ಗೆಟ್ ಮಾಡಿದೆ. ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್, ಪ್ಯಾಟ್ ಕಮಿನ್ಸ್​ ಮತ್ತು ನ್ಯೂಜಿಲ್ಯಾಂಡ್​ನ ರಚಿನ್​ ರವೀಂದ್ರ ಹಾಗೆಯೇ ಡ್ಯಾರಿಲ್ ಮಿಚೆಲ್ ಮೇಲೆ ಹೂಡಿಕೆ ಮಾಡೋಕೆ ದೆಹಲಿ ಕ್ಯಾಪಿಟಲ್ಸ್ ಪ್ಲ್ಯಾನ್ ಮಾಡಿದೆ.

ಲಕ್ನೋ ಸೂಪರ್ ಜೈಂಟ್ಸ್

ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೇಂಟ್ಸ್​​​ಗೆ ಇನ್ನೂ ಆರು ಮಂದಿ ಆಟಗಾರರ ಅವಶ್ಯಕತೆ ಇದೆ. ಲಕ್ನೋ ಫ್ರಾಂಚೈಸಿ ಪರ್ಸ್​ನಲ್ಲಿ 13.15 ಕೋಟಿ ರೂಪಾಯಿ ಇದೆ. ದೆಹಲಿ ಕ್ಯಾಪಿಟಲ್ಸ್​ನಂತೆ ಲಕ್ನೋ ಸೂಪರ್ ಜಯಾಂಟ್ಸ್ ಕೂಡ ನ್ಯೂಜಿಲ್ಯಾಂಡ್​ನ ಡ್ಯಾರಿಲ್ ಮಿಚೆಲ್ ಮತ್ತು ಬಾಂಗ್ಲಾದೇಶದ ಶಕಿಬುಲ್ ಹಸನ್ ಮೇಲೆ ಕಣ್ಣಿಟ್ಟಿದೆ.

ಕೊಲ್ಕತ್ತಾ ನೈಟ್ ರೈಡರ್ಸ್

ಕೊಲ್ಕತ್ತಾ ನೈಟ್​ ರೈಡರ್ಸ್​ಗಂತೂ ಈ ಬಾರಿಯ ಆಕ್ಷನ್ ತುಂಬಾನೆ ಇಂಪಾರ್ಟೆಂಟ್. ಯಾಕಂದ್ರೆ ಕೆಕೆಆರ್​ ಈ ಬಾರಿ ಒಟ್ಟು 12 ಪ್ಲೇಯರ್ಸ್​​ಗಳನ್ನ ರಿಲೀಸ್ ಮಾಡಿದೆ. 32.7 ಕೋಟಿ ರೂಪಾಯಿ ಕೆಕೆಆರ್​​ ಪರ್ಸ್​ನಲ್ಲಿದೆ. ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್​ಗೆ ಕೆಕೆಆರ್​ ಕೂಡ ಗಾಳ ಹಾಕ್ತಿದೆ. ಇದ್ರ ಜೊತೆಗೆ ರಿಂಕು ಸಿಂಗ್​ಗೆ ಇನ್ನೊಬ್ಬ ಫಿನಿಶಿಂಗ್ ಪಾರ್ಟ್ನರ್ ನೀಡೋಕೆ ಕೂಡ ಕೆಕೆಆರ್​ ಪ್ಲ್ಯಾನ್ ಮಾಡಿದೆ. ಇನ್ನು ಆಸ್ಟ್ರೇಲಿಯಾ ಜಾಶ್ ಹೇಜಲ್​ವುಡ್​ರನ್ನ ಪರ್ಚೇಸ್ ಮಾಡೋಕೆ ಕೂಡ ಕೆಕೆಆರ್​​ ಚಿಂತನೆ ನಡೆಸಿದೆ.

ಸನ್ ರೈಸರ್ಸ್ ಹೈದರಾಬಾದ್

ಸನ್ ರೈಸರ್ಸ್ ಹೈದರಾಬಾದ್ ಪರ್ಸ್​​ನಲ್ಲಿ ಈಗ ಸುಮಾರು 34 ಕೋಟಿ ರೂಪಾಯಿ ಇದೆ. ಅಫ್ಘಾನಿಸ್ತಾನದ ಮೊಹಮ್ಮದ್ ನಬಿ ಮೇಲೆ ಎಸ್​ಆರ್​ಎಚ್ ಒಂದು ಕಣ್ಣಿಟ್ಟಿದೆ. ಜೊತೆಗೆ ಟ್ರಾಔಇಸ್ ಹೆಡ್, ಡ್ಯಾರಿಲ್ ಮಿಚೆಲ್ ಮತ್ತು ರಚಿನ್ ರವೀಂದ್ರ ಮೇಲೆಯೂ ಬಿಡ್ಡಿಂಗ್ ಮಾಡೋಕೆ ಸನ್ ರೈಸರ್ಸ್ ಮ್ಯಾನೇಜ್ಮೆಂಟ್ ಪ್ಲ್ಯಾನ್ ಮಾಡಿದೆ.

ರಾಜಸ್ಥಾನ ರಾಯಲ್ಸ್

ರಾಜಸ್ಥಾನ ರಾಯಲ್ಸ್ ಈಗಾಗ್ಲೇ ಜೋ ರೂಟ್ ಮತ್ತು ಜೇಸನ್ ಹೋಲ್ಡರ್​​ರನ್ನ ರಿಲೀಸ್ ಮಾಡಿದೆ. ಈಗ ಒಟ್ಟು ಐದು ಮಂದಿ ಪ್ಲೇಯರ್ಸ್​​ಗಳಲ್ಲಿ ಖರೀದಿಸೋ ಪ್ಲ್ಯಾನ್​ನಲ್ಲಿದೆ. ಹ್ಯಾರಿ ಬ್ರೂಕ್, ಡ್ಯಾರಿಲ್ ಮಿಚೆಲ್, ಸ್ಟೀವ್ ಸ್ಮಿತ್, ರೋವ್​ಮನ್ ಪೋವೆಲ್ ಮತ್ತು ಶಾರುಖ್​ ಖಾನ್​​ರನ್ನ ತಂಡಕ್ಕೆ ಸೇರ್ಪಡೆಗೊಳಿಸೋಕೆ ರಾಜಸ್ಥಾನ ರಾಯಲ್ಸ್ ಪ್ಲ್ಯಾನ್ ಮಾಡಿದೆ. ರಾಯಲ್ಸ್​ ಪರ್ಸ್​ನಲ್ಲಿ ಇನ್ನು 14.5 ಕೋಟಿ ರೂಪಾಯಿ ಇದೆ.

ಪಂಜಾಬ್ ಕಿಂಗ್ಸ್

ಇನ್ನು ಪಂಜಾಬ್ ಕಿಂಗ್ಸ್ ಈಗಾಗ್ಲೇ 17 ಪ್ಲೇಯರ್ಸ್​ಗಳನ್ನ ರೀಟೇನ್ ಮಾಡಿದೆ. 29.1 ಕೋಟಿ ರೂಪಾಯಿ ಪಂಜಾಬ್​ ಫ್ರಾಂಚೈಸಿ ಪರ್ಸ್​​ನಲ್ಲಿದೆ. ಸದ್ಯ ಪಂಜಾಬ್ ಇಂಗ್ಲೆಂಡ್​ನ ಹ್ಯಾರಿ ಬ್ರೂಕ್​​ರನ್ನ ಪರ್ಚೇಸ್ ಮಾಡೋಕೆ ಪ್ಲ್ಯಾನ್ ಮಾಡ್ತಿದೆ. ಇದ್ರ ಜೊತೆಗೆ ಶಾರುಕ್ ಖಾನ್ ಮೇಲೂ ಕಣ್ಣಿಟ್ಟಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು

ಐಪಿಎಲ್​ನ 17ನೇ ಸೀಸನ್​ನಲ್ಲಾದ್ರೂ ಕಪ್ ಗೆಲ್ಲೋಣ ಅಂದುಕೊಂಡಿರೋ ಆರ್​ಸಿಬಿ ಈಗಾಗ್ಲೇ ಆಸ್ಟ್ರೇಲಿಯಾದ ಜಾಶ್ ಹೇಜಲ್​​ವುಡ್​ರನ್ನ ರಿಲೀಸ್ ಮಾಡಿಯಾಗಿದೆ. ಹರ್ಷಲ್ ಪಟೇಲ್ ಮತ್ತು ಹಸರಂಗ ಕೂಡ ಟೀಂನಲ್ಲಿ ಇರೋದಿಲ್ಲ. ಮುಂಬೈ ಇಂಡಿಯನ್ಸ್​​ನಿಂದ ಕ್ಯಾಮರೂನ್​ ಗ್ರೀನ್​ರನ್ನ ಖರೀದಿ ಮಾಡದೆ. ಆಟಗಾರರನ್ನ ಪರ್ಚೇಸ್ ಮಾಡೋಕೆ ಆರ್​ಸಿಬಿ ಪರ್ಸ್​​ನಲ್ಲಿ ಉಳಿದಿರೋದು 23.25 ಕೋಟಿ ರೂಪಾಯಿ. ಇಷ್ಟು ಹಣದಲ್ಲಿ ಆರು ಸ್ಲಾಟ್​ಗಳನ್ನ ಫಿಲ್ ಮಾಡಬೇಕು. ಇದೀಗ ಆರ್​ಸಿಬಿ ಒಟ್ಟು ಐದು ಮಂದಿ ಆಟಗಾರರನ್ನ ಟಾರ್ಗೆಟ್ ಮಾಡುವ ಸಾಧ್ಯತೆ ಇದೆ. ಕಾರ್ತಿಕ್ ತ್ಯಾಗಿ, ಆದಿಲ್​ ರಶೀದ್, ಮಿಚೆಲ್ ಸ್ಟಾರ್ಕ್, ಶಾರುಖ್ ಖಾನ್ ಮತ್ತು ಡೇನಿಯಲ್ ಸ್ಯಾಮ್ಸ್. ಈ ಐವರ ಮೇಲೆ ಬಿಡ್ಡಿಂಗ್ ಮಾಡೋಕೆ ಆರ್​ಸಿಬಿ ಮ್ಯಾನೇಜ್ಮೆಂಟ್ ಮುಂದಾಗಿದೆ.

ಅಂತೂ ಈ ಬಾರಿಯ ಬಿಡ್ಡಿಂಗ್​ನಲ್ಲಿ ಟ್ರಾವಿಸ್​ ಹೆಡ್, ಡ್ಯಾರೆಲ್ ಮಿಚೆಲ್, ರಚಿನ್ ರವೀಂದ್ರ ಮತ್ತು ಶಾರುಖ್ ಖಾನ್ ಈ ನಾಲ್ಕೂ ಮಂದಿಗೆ ಭಾರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಡಿಸೆಂಬರ್​ 19ರಂದು ದುಬೈನಲ್ಲಿ ಆಕ್ಷನ್ ನಡೆಯಲಿದ್ದು, ಯಾರು ಎಷ್ಟು ಕೋಟಿ ಬಾಚುತ್ತಾರೋ ನೋಡಬೇಕಿದೆ.

Sulekha