IPL ಹರಾಜಿನಲ್ಲಿ KLಗೆ ಮೋಸ.. ಸ್ಟಾರ್ಕ್, ಮ್ಯಾಕ್ಸಿ, ಕಿಶನ್ ನಷ್ಟವೆಷ್ಟು? – ಸ್ಟಾರ್ಸ್ ಗೂ ಕೋಟಿ ಕೋಟಿ ಲಾಸ್ 

IPL ಹರಾಜಿನಲ್ಲಿ KLಗೆ ಮೋಸ.. ಸ್ಟಾರ್ಕ್, ಮ್ಯಾಕ್ಸಿ, ಕಿಶನ್ ನಷ್ಟವೆಷ್ಟು? – ಸ್ಟಾರ್ಸ್ ಗೂ ಕೋಟಿ ಕೋಟಿ ಲಾಸ್ 

ಐಪಿಎಲ್ ಹರಾಜು ಮುಗಿದು ಮೂರು ವಾರಗಳಾದ್ರೂ ಅದ್ರ ಬಗೆಗಿನ ಟಾಕ್ ಮಾತ್ರ ಕಮ್ಮಿಯಾಗಿಲ್ಲ. ಈಗಾಗ್ಲೇ ಫ್ರಾಂಚೈಸಿಗಳು ಪ್ಲೇಯಿಂಗ್ 11 ಸೆಟ್ ಮಾಡಿಕೊಳ್ಳೋಕೆ ಮುಂದಾಗಿವೆ. ಓಪನಿಂಗ್ ಬ್ಯಾಟ್ಸ್​​ಮನ್ ಟು ಡೆತ್ ಓವರ್ ಬೌಲರ್​ವರೆಗೂ ಯಾರು ಬೆಸ್ಟ್ ಆಪ್ಶನ್ ಅನ್ನೋದನ್ನ ಕ್ಯಾಲ್ಕುಲೇಟ್ ಮಾಡಿಕೊಳ್ತಿವೆ. ಹೀಗೆ ಫ್ರಾಂಚೈಸಿಗಳೆಲ್ಲಾ 18ನೇ ಸೀಸನ್ ಕಪ್ ಮೇಲೆ ಕಣ್ಣಿಟ್ಟಿದ್ರೆ ಕೆಲ ಆಟಗಾರರು ಇನ್ನೂ ಕೂಡ ನಿರಾಸೆಯಲ್ಲೇ ಇದ್ದಾರೆ. ತಮಗಾದ ನಷ್ಟದ ಬಗ್ಗೆ ತಲೆಬಿಸಿ ಮಾಡಿಕೊಂಡಿದ್ದಾರೆ. ಅದ್ರಲ್ಲಿ ನಮ್ಮ ಕನ್ನಡಿಗ ಕೆಎಲ್ ರಾಹುಲ್ ಕೂಡ ಒಬ್ರು. ಹಾಗಾದ್ರೆ ಹರಾಜಿನಲ್ಲಿ ಯಾರಿಗೆಲ್ಲಾ ಲಾಸ್ ಆಯ್ತು? ಎಷ್ಟು ಕೋಟಿ ನಷ್ಟವಾಗಿದೆ? ಡಿಮ್ಯಾಂಡ್ ಕಡಿಮೆಯಾಗಿದ್ದು ಯಾಕೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಪ್ರಕಟ-ಟಗರು ಪುಟ್ಟಿ ಶ್ರೇಯಾಂಕ ಲೆಕ್ಕಕ್ಕಿಲ್ವಾ?

2025ರ ಐಪಿಎಲ್​ಗೆ ನಡೆದ ಮೆಗಾ ಆಕ್ಷನ್​ ಚರಿತ್ರೆಯನ್ನೇ ಸೃಷ್ಟಿಸಿದೆ. ಬರೋಬ್ಬರಿ 27 ಕೋಟಿ ರೂಪಾಯಿವರೆಗೂ ಆಟಗಾರರ ಮೇಲೆ ಬಿಡ್ಡಿಂಗ್ ಆಗಿದೆ. ರಿಷಬ್ ಪಂತ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಾಹಲ್ ಅವರಂತಹ ಆಟಗಾರರು ಭರ್ಜರಿ ಹಣ ಪಡೆದಿದ್ದಾರೆ. ಇನ್ನೂ ಕೆಲವ್ರು ಕಳೆದ ಸೀಸನ್​ನಲ್ಲಿ ಮೂಲಬೆಲೆಗೆ ಆಡ್ತಿದ್ದವ್ರು ಈ ಸಲ 10 ಕೋಟಿಗೂ ಹೆಚ್ಚು ಸಂಭಾವನೆಗೆ ಸೇಲ್ ಆಗಿದ್ದಾರೆ. ಹೀಗೆ ಒಂದಷ್ಟು ಪ್ಲೇಯರ್ಸ್ ಈ ಸಲ ದಾಖಲೆ ಮೊತ್ತದ ಹಣ ಪಡೆದು ದಿಲ್ ಖುಷ್ ಆಗಿದ್ರೆ ಇನ್ನೂ ಕೆಲವ್ರು ಕಳೆದ ಸೀಸನ್​ಗಿಂತ ಕಡಿಮೆ ಬೆಲೆಗೆ ಮಾರಾಟವಾಗಿ ಬೇಸರದಲ್ಲಿದ್ದಾರೆ.

16.10 ಕೋಟಿ ನಷ್ಟ ಮಾಡಿಕೊಂಡ ಸ್ಯಾಮ್ ಕರ್ರನ್!

ಸ್ಯಾಮ್ ಕರ್ರನ್. ಕಳೆದ ಸೀಸನ್​ನಲ್ಲಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯಲ್ಲಿ ಆಡಿದ್ರು. ಕಳೆದ ಸೀಸನ್ ವರೆಗೆ ಪ್ರತಿ ವರ್ಷ 18.50 ಕೋಟಿ ರೂಪಾಯಿ ಪಡೆಯುತ್ತಿದ್ದ ಸ್ಯಾಮ್ ಕರನ್ ಈಗ 16.10 ಕೋಟಿ ರೂಪಾಯಿ ನಷ್ಟದೊಂದಿಗೆ ಕೇವಲ 2.40 ಕೋಟಿ ರೂಪಾಯಿಗೆ ಮಾರಾಟವಾಗಿದ್ದಾರೆ. ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಸ್ಯಾಮ್ ಕರನ್ ಕೇವಲ 2.40 ಕೋಟಿ ರೂ.ಗೆ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲಿದ್ದಾರೆ. ಈ ಮೂಲಕ ಸ್ಯಾಮ್ ಕರನ್ ಬರೋಬ್ಬರಿ 16.10 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಅಷ್ಟಕ್ಕೂ ಕರ್ರನ್ ಡಿಮ್ಯಾಂಡ್ ಕುಗ್ಗಲು ಕಾರಣ ಅವ್ರ ಪ್ರದರ್ಶನ. ಕಳೆದ ಸೀಸನ್​ನಲ್ಲಿ ಪಂಜಾಬ್ ಕಿಂಗ್ಸ್ ಪರ ಕರನ್ 270 ರನ್ ಬಾರಿಸಿದ್ದರೆ, 16 ವಿಕೆಟ್‌ಗಳನ್ನು ಸಹ ಪಡೆದರು. ಬಟ್ ಎಕಾನಮಿ ರೇಟ್ ಪ್ರತಿ ಓವರ್‌ಗೆ 10 ರನ್‌ಗಳಿಗಿಂತ ಹೆಚ್ಚಿತ್ತು. ಹೀಗಾಗಿ ಪಂಜಾಬ್ ರಿಲೀಸ್ ಮಾಡಿತ್ತು.

20 ಕೋಟಿ ನಿರೀಕ್ಷೆಯಲ್ಲಿದ್ದ ರಾಹುಲ್ ಗೆ ಸಿಕ್ಕಿದ್ದು 14 ಕೋಟಿ!

ಮೆಗಾ ಹರಾಜಿನಲ್ಲಿ ಕನ್ನಡಿಗ ಕೆಎಲ್ ರಾಹುಲ್ 20 ಕೋಟಿಗೂ ಹೆಚ್ಚು ಮೊತ್ತ ಪಡೆಯುತ್ತಾರೆ ಎಂಬ ನಿರೀಕ್ಷೆ ಇತ್ತು. ಅಣಕು ಹರಾಜು, ಮಾಜಿ ಕ್ರಿಕೆಟಿಗರು, ಕ್ರಿಕೆಟ್ ತಜ್ಞರು ಸಹ ಇದೇ ರೀತಿ ಅಂದಾಜು ಮಾಡಿದ್ದರು. ಆದರೆ, ಕೇವಲ 14 ಕೋಟಿ ರೂಪಾಯಿಗೆ ಬಿಕರಿಯಾಗಿದ್ದು ಅಚ್ಚರಿ ಮೂಡಿಸಿದೆ. ವಿಕೆಟ್ ಕೀಪರ್, ಓಪನರ್, ಕ್ಯಾಪ್ಟನ್​ನನ್ನು ಕಡಿಮೆ ಮೊತ್ತಕ್ಕೆ ಖರೀದಿಸಿ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಆಟಗಾರರನ್ನ ತನ್ನ ತೆಕ್ಕೆಗೆ ಹಾಕಿಕೊಂಡಿದೆ. 20 ಕೋಟಿಗೂ ಅಧಿಕ ಮೊತ್ತ ಪಡೆಯಬೇಕಿದ್ದ ಆಟಗಾರ 14 ಕೋಟಿಗೆ ಸೇಲ್ ಆಗುವ ಮೂಲಕ ನಿರಾಸೆಗೊಂಡಿದ್ದಾರೆ. ಕಳೆದ ಮೂರು ಸೀಸನ್​ಗಳಿಂದ ಲಕ್ನೋ ಕ್ಯಾಪ್ಟನ್ ಆಗಿ ರಾಹುಲ್ ಪ್ರತೀ ವರ್ಷ 17 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ರು. ಈ ವರ್ಷ 3 ಕೋಟಿ ಲಾಸ್ ಮಾಡಿಕೊಂಡಿದ್ದಾರೆ.

ಹೈದ್ರಾಬಾದ್ ಸೇರಿದ ಇಶಾನ್ ಕಿಶನ್ ಗೂ ಕೋಟಿ ಕೋಟಿ ಲಾಸ್!

ಮುಂಬೈ ಇಂಡಿಯನ್ಸ್‌ ತಂಡದ ಪರ ಆಡಿ ಸೈ ಎನಿಸಿಕೊಂಡಿದ್ದ ಇಶಾನ್‌ ಕಿಶನ್‌ ರನ್ನು ಹರಾಜಿನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ 11.25 ಕೋಟಿ ರೂ. ನೀಡಿ ತಂಡಕ್ಕೆ ಸೇರಿಸಿಕೊಂಡಿತು. ಮುಂಬೈ ಪರ ಆಡಿ ಮಿಂಚಿದ್ದ ಸ್ಟಾರ್‌ ಆಟಗಾರ ಇಶಾನ್‌ ಕಿಶನ್‌ ಉಳಿಸಿಕೊಳ್ಳಲು ಮುಂಬೈಗೆ ಸಾಧ್ಯವಾಗಲಿಲ್ಲ. ಹರಾಜಿನಲ್ಲಿ ಮುಂಬೈ ಇಂಡಿಯನ್ಸ್‌ 3.20 ಕೋಟಿ ರೂಪಾಯಿವರೆಗೆ ಮಾತ್ರ ಬಿಡ್ ಮಾಡಿ ಹಿಂದೆ ಸರಿಯಿತು. ಇಶಾನ್‌ 2018 ರಿಂದ 2024 ರವರೆಗೆ ಕಿಶನ್ ಮುಂಬೈ ಪರವೇ ಕಣಕ್ಕಿಳಿದಿದ್ರು. ಕಳೆದ ಮೂರು ಸೀಸನ್​ಗಳಿಂದ 15.25 ಕೋಟಿ ಸಂಭಾವನೆ ಪಡೆಯುತ್ತಿದ್ರು. ಈ ಸಲ 4 ಕೋಟಿ ನಷ್ಟವಾಗಿದೆ.

ಕಳಪೆ ಪ್ರದರ್ಶನದಿಂದಲೇ ಡಿಮ್ಯಾಂಡ್ ಕಳೆದುಕೊಂಡ ಮ್ಯಾಕ್ಸಿ!

ಒಂದು ಟೈಮಲ್ಲಿ ಗ್ಲೆನ್ ಮ್ಯಾಕ್ಸ್​​ವೆಲ್ ಕ್ರೀಸ್​ನಲ್ಲಿದ್ರೆ ರನ್​ಗಳ ಮಳೆ ಸುರೀತಿತ್ತು. ಬಟ್ ಲಾಸ್ಟ್ ಸೀಸನ್​ನಲ್ಲಿ ಮ್ಯಾಕ್ಸಿ ಕ್ರಿಕೆಟ್​ನೇ ಮರೆತವರಂತೆ ಆಡಿದ್ರು. ಹೀಗಾಗಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ರಿಲೀಸ್​ ಮಾಡಿತ್ತು. ಕೊನೆಗೆ ಹರಾಜಿನಲ್ಲಿ ಪಂಜಾಬ್​ ಕಿಂಗ್ಸ್​ 4.20 ಕೋಟಿ ನೀಡಿ ಮ್ಯಾಕ್ಸಿ ಅವರನ್ನು ಖರೀದಿಸಿದೆ.  2021ರ ಹರಾಜಿನಲ್ಲಿ ಮ್ಯಾಕ್ಸ್‌ವೆಲ್‌ ಅವರನ್ನು ಆರ್ ಸಿಬಿ ಫ್ರಾಂಚೈಸಿ 14.25 ಕೋಟಿ ರೂಪಾಯಿ ನೀಡಿ  ಖರೀದಿ ಮಾಡಿತ್ತು. 2023ರ ಐಪಿಎಲ್‌ನಲ್ಲಿ 400 ರನ್ ಗಳಿಸಿದ್ದ ಮ್ಯಾಕ್ಸಿ ಕಳೆದ ಸೀಸನ್​ 2024ರ ಐಪಿಎಲ್‌ನಲ್ಲಿ ಕೇವಲ 52 ರನ್​ ಅಷ್ಟೇ ಬಾರಿಸಿದ್ರು. ಈ ಮೂಲಕ ಆರ್​ಸಿಬಿಗೆ ಮ್ಯಾಕ್ಸ್​ವೆಲ್​ ದೊಡ್ಡ ತಲೆನೋವಾಗಿ ಪರಿಣಮಿಸಿದ್ರು. 2021ರಿಂದ 2023ರವರೆಗೆ ಆರ್​ಸಿಬಿ ಪರ ಮ್ಯಾಕ್ಸಿ ಅದ್ಭುತ ಆಲ್​ರೌಂಡರ್ ಆಟವನ್ನಾಡಿದ್ದರು. 2021ರಲ್ಲಿ ಮ್ಯಾಕ್ಸ್​​ವೆಲ್ 513, 2022ರಲ್ಲಿ 301, 2023ರಕ್ಕು 400 ರನ್​​ ಬಾರಿಸಿದ್ದರು. 2024ರಲ್ಲಿ ಕೇವಲ 52 ರನ್​​ ಮಾತ್ರ ಬಾರಿಸಿದ್ರು. ಇದೇ ಕಾರಣಕ್ಕೆ ಫ್ರಾಂಚೈಸಿ ಹರಾಜಿಗೆ ಬಿಟ್ಟಿತ್ತು. ಈ ಮೂಲಕ ಮ್ಯಾಕ್ಸಿ 10 ಕೋಟಿ ನಷ್ಟ ಮಾಡಿಕೊಂಡಿದ್ದಾರೆ.

ಕಳೆದ ಸೀಸನ್ ನ ದಾಖಲೆವೀರ ಸ್ಟಾರ್ಕ್ ಗೂ ಲಾಸ್!

ಕಳೆದ ಸೀಸನ್​ನಲ್ಲಿ 24 ಕೋಟಿ ಸಂಭಾವನೆ ಮೂಲಕ ಸದ್ದು ಮಾಡಿದ್ದ ಆಸ್ಟ್ರೇಲಿಯಾದ ಮಾರಕ ಬೌಲರ್ ಮಿಚೆಲ್ ಸ್ಟಾರ್. ಕೆಕೆಆರ್ ಪರ ಆಡಿದ್ದ ಸ್ಟಾರ್ಕ್ ರನ್ನ ಫ್ರಾಂಚೈಸಿ ರಿಲೀಸ್ ಮಾಡಿತ್ತು. ಹರಾಜಿನಲ್ಲಿ  ಸ್ಟಾರ್ಕ್​​ಗಾಗಿ ಆರ್​ಸಿಬಿ ಕೂಡ ಪೈಪೋಟಿಗೆ ಬಂದಿತ್ತು. ಆದರೆ ಡೆಲ್ಲಿ ಕ್ಯಾಪಿಟಲ್ಸ್​ ಮುಂದೆ ಹರಾಜು ಕೂಗಲು ಆಗಲಿಲ್ಲ. ಹೀಗಾಗಿ ಕೊನೆಗೆ ಮಿಚೆಲ್ ಸ್ಟಾರ್ಕ್ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಪಾಲಾದ್ರು. ಕಳೆದ ಬಾರಿ 24.75 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದ ಸ್ಟಾರ್ಕ್ ಈ ಬಾರಿ 11.75 ಕೋಟಿಗೆ ಖರೀದಿ ಆದ್ರು. ಅಲ್ಲಿಗೆ 13 ಕೋಟಿ ನಷ್ಟವಾಗಿದೆ.

ಇನ್ನು ಇವ್ರಿಷ್ಟೇ ಅಲ್ಲದೆ ಮಿಚೆಲ್ ಮಾರ್ಚ್, ಫಾಫ್ ಡುಪ್ಲೆಸಿಸ್, ಸಮೀರ್ ರಜ್ವಿ ಸೇರಿದಂತೆ ಸಾಕಷ್ಟು ಪ್ಲೇಯರ್ಸ್ ಈ ಸಲ ಕಡಿಮೆ ಬೆಲೆಗೆ ಸೇಲ್ ಆಗಿದ್ದಾರೆ. ಅವ್ರ ಪ್ರದರ್ಶನದ ಆಧಾರದಲ್ಲಿ ಫ್ರಾಂಚೈಸಿಗಳು ಬಿಡ್ ಮಾಡಿವೆ.

Shwetha M

Leave a Reply

Your email address will not be published. Required fields are marked *