ಪಾಂಡ್ಯ OUT.. ಪಾಟಿದಾರ್ SAFE – ರಹಾನೆ, ರುತುರಾಜ್ ಡೇಂಜರ್ ಝೋನ್
10 ಟೀಂ.. ಕ್ಯಾಪ್ಟನ್ಸ್ ಬದಲಾವಣೆ ಎಲ್ಲಿ?

ಪಾಂಡ್ಯ OUT.. ಪಾಟಿದಾರ್ SAFE – ರಹಾನೆ, ರುತುರಾಜ್ ಡೇಂಜರ್ ಝೋನ್10 ಟೀಂ.. ಕ್ಯಾಪ್ಟನ್ಸ್ ಬದಲಾವಣೆ ಎಲ್ಲಿ?

ಒಂದ್ಕಡೆ ಬಿಸಿಸಿಐ ಬ್ಯಾಕ್ ಟು ಬ್ಯಾಕ್ ಟೀಂ ಇಂಡಿಯಾ ಪಂದ್ಯಗಳಲ್ಲಿ ಬ್ಯುಸಿ ಆಗೋದ್ರ ಜೊತೆಗೆ 20ನೇ ಆವೃತ್ತಿಯ ಐಪಿಎಲ್​ಗೂ ಭರ್ಜರಿ ಸಿದ್ಧತೆಗಳನ್ನ ಮಾಡಿಕೊಳ್ತಿದೆ. ಅದೂ ಅಲ್ದೇ 2027ರ ಐಪಿಎಲ್ ಟೂರ್ನಿಯ ಮಿನಿ ಆಕ್ಷನ್ ಭಾರತದಲ್ಲೇ ನಡೆಯಲಿದೆ. 2026ರ ಡಿಸೆಂಬರ್ 16ರಂದು ಗೋವಾದ ಪ್ರಸಿದ್ಧ ಐಟಿಸಿ ಗ್ರಾಂಡ್ ಗೋವಾ  ಹೋಟೆಲ್‌ನಲ್ಲಿ ಈ ಆಕ್ಷನ್ ನಡೆಯಲಿದೆ. ಆಲ್ರೆಡಿ ಫ್ರಾಂಚೈಸಿಗಳ ನಡುವೆ ಸ್ವ್ಯಾಪ್ ಡೀಲ್​ಗಳೂ ನಡೆದಿದ್ದು ಆಟಗಾರರು ಅದಲುಬದಲಾಗಿದ್ದಾರೆ. ಌಂಡ್ ಕೆಲ ಸ್ಟಾರ್ ಪ್ಲೇಯರ್ಸ್ ಕೂಡ ಆಕ್ಷನ್​ಗೆ ಬರೋದು ಪಕ್ಕಾ ಆಗಿದೆ. ಇದ್ರ ಜೊತೆಗೆ ಕೆಲ ತಂಡಗಳಲ್ಲಿ ಕ್ಯಾಪ್ಟನ್​ಗಳೂ ಬದಲಾಗಲಿದ್ದಾರೆ. 20ನೇ ಸೀಸನ್ ಐಪಿಎಲ್ ಟೂರ್ನಿಗೂ ಮುನ್ನ ಕೆಲ ತಂಡಗಳಲ್ಲಿ ನಾಯಕತ್ವ ಬದಲಾವಣೆ ಕನ್ಫರ್ಮ್ ಆಗಿದೆ. & ಇನ್ನೂ ಕೆಲ ತಂಡಗಳ ನಾಯಕರು ಸೇಫ್ ಝೋನ್​ನಲ್ಲಿದರೆ ಕೆಲವ್ರು ಡೇಂಜರ್ ಝೋನ್​ನಲ್ಲಿದ್ದಾರೆ.

ಇದನ್ನೂ ಓದಿ : 

ಕ್ಯಾಪ್ಟನ್ಸ್ ಬದಲಾವಣೆ!

ತಂಡ                     2026ರ ಕ್ಯಾಪ್ಟನ್                     2027ಕ್ಕೆ ಬದಲಾವಣೆ

RCB                     ರಜತ್ ಪಾಟಿದಾರ್                     ಬದಲಾವಣೆ ಇಲ್ಲ

PBKS                    ಶ್ರೇಯಸ್ ಅಯ್ಯರ್                    ಬದಲಾವಣೆ ಇಲ್ಲ

GT                       ಶುಭ್ ಮನ್ ಗಿಲ್                     ಬದಲಾವಣೆ ಇಲ್ಲ

SRH                       ಇಶಾನ್ ಕಿಶನ್                        ಬದಲಾವಣೆ ಇಲ್ಲ

RR                         ರಿಯಾನ್ ಪರಾಗ್                        ಬದಲಾವಣೆ ಇಲ್ಲ

KKR                        ಅಜಿಂಕ್ಯ ರಹಾನೆ                       ಬದಲಾವಣೆ ಪಕ್ಕಾ

LSG                        ರಿಷಭ್ ಪಂತ್                          ಬದಲಾವಣೆ ಪಕ್ಕಾ

MI                         ಹಾರ್ದಿಕ್ ಪಾಂಡ್ಯ                       ಬದಲಾವಣೆ ಪಕ್ಕಾ

CSK                       ರುತುರಾಜ್ ಗಾಯಕ್ವಾಡ್                  ಬದಲಾವಣೆ ಸಾಧ್ಯತೆ

DC                          ಅಕ್ಷರ್ ಪಟೇಲ್                          ಬದಲಾವಣೆ ಸಾಧ್ಯತೆ

ಅಲ್ಲಿಗೆ ಮೂರು ತಂಡಗಳ ನಾಯಕತ್ವ ಬದಲಾಗೋದಂತೂ ಪಕ್ಕಾ ಆಗಿದೆ. ಅದ್ರಲ್ಲೂ ಎಲ್ಲರ ಕಣ್ಣೂ ಕೂಡ ಮುಂಬೈ ಇಂಡಿಯನ್ಸ್ ಮೇಲೆಯೇ ಇರುತ್ತೆ. ಹಾರ್ದಿಕ್ ಪಾಂಡ್ಯ ತಂಡದಿಂದ ಒರಬರೋದು ಆಲ್ಮೊಸ್ಟ್ ಕನ್ಫರ್ಮ್ ಆಗಿದ್ದು ಟ್ರೇಡ್ ಡೀಲ್ ಮಾತುಕತೆಗಳೂ ನಡೆದಿವೆ. ಈ ಡೀಲ್ ಫೈನಲ್ ಆಗ್ದೇ ಇದ್ರೂ ಮಿನಿ ಆಕ್ಷನ್​ಗೆ ರಿಲೀಸ್ ಮಾಡೋದಂತೂ ಪಕ್ಕಾ ಇದೆ.  ಎಲ್ಲಾ 10 ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಮತ್ತು ಬಿಡುಗಡೆ ಮಾಡಿದ ಆಟಗಾರರ ಅಂತಿಮ ಪಟ್ಟಿಯನ್ನು ಸಲ್ಲಿಸಲು 2026ರ ನವೆಂಬರ್ 15 ಕೊನೆಯ ದಿನಾಂಕವಾಗಿದೆ. ಹೀಗಾಗಿ ತಂಡದಲ್ಲಿ ಫೈನಲ್ ಡಿಸ್ಕಷನ್ಸ್ ಜೋರಾಗಿದ್ದು ಯಾರೆಲ್ಲಾ ಮಿನಿ ಆಕ್ಷನ್​ಗೆ ಬರ್ತಾರೆ ಅನ್ನೋದೇ ಕುತೂಹಲ.

Shantha Kumari

Leave a Reply

Your email address will not be published. Required fields are marked *