ಜಿತೇಶ್, ಶೆಫರ್ಡ್ DANGER ZONE! – RCBಗೆ ಬೇಡವಾದ 3 ಪ್ಲೇಯರ್ಸ್
ರಿಲೀಸ್ ಲಿಸ್ಟ್ ನಲ್ಲಿ ಯಾರೆಲ್ಲಾ ಹೆಸರಿದೆ?

ಜಿತೇಶ್, ಶೆಫರ್ಡ್ DANGER ZONE! – RCBಗೆ ಬೇಡವಾದ 3 ಪ್ಲೇಯರ್ಸ್ರಿಲೀಸ್ ಲಿಸ್ಟ್ ನಲ್ಲಿ ಯಾರೆಲ್ಲಾ ಹೆಸರಿದೆ?

ಸತತ 17 ವರ್ಷ ಟ್ರೋಫಿಯನ್ನೇ ಗೆಲ್ಲದ ಆರ್​ಸಿಬಿ ಈಗ ಐಪಿಎಲ್​ನ ಮೋಸ್ಟ್ ಡೇಂಜರಸ್ ಟೀಂ. 2025 ಮತ್ತು 2026ರಲ್ಲಿ ಬ್ಯಾಕ್ ಟು ಬ್ಯಾಕ್ ಚಾಂಪಿಯನ್ ಪಟ್ಟಕ್ಕೇರಿದ್ದ ರೆಡ್ ಆರ್ಮಿ ಈಗ ಹ್ಯಾಟ್ರಿಕ್ ಗೆಲುವಿನ ಕ್ಯೂನಲ್ಲಿದ್ದಾರೆ. ಹೀಗಿದ್ರೂ ನೆಕ್ಸ್​ಟ್ ಸೀಸನ್​ಗೂ ಮುನ್ನ ತಂಡದಿಂದ ಕೆಲವ್ರಿಗೆ ಗೇಟ್​ಪಾಸ್ ಪಕ್ಕಾ. ಅರೆ ಬೆಂಗಳೂರು ಟೀಂ ಟ್ರೋಫಿ ಗೆದ್ರೂ ತಂಡದಲ್ಲಿ ಸರ್ಜರಿ ಇರುತ್ತಾ ಅಂದ್ರೆ ಖಂಡಿತ ಇರುತ್ತೆ. ಅದ್ರಲ್ಲೂ ಪ್ಲೇಯಿಂಗ್ 11ನಲ್ಲಿ ಆಡಿದ್ದ ಮೂವರು ಡೇಂಜರ್​ಝೋನ್​ನಲ್ಲಿ ಇದ್ದಾರೆ.

ಇದನ್ನೂ ಓದಿ : ಭಾರತಕ್ಕೆ HAT-TRICK ಭಯ – ಸೋಲಿನ ಸರಣಿಗೆ ಲಕ್ಷ್ಮಣ ರೇಖೆ ಹಾಕ್ತಾರಾ

ಸತತ ಎರಡು ಆವೃತ್ತಿಗಳಲ್ಲಿ ಕಪ್ ಗೆದ್ದಿರೋ ಬೆಂಗಳೂರು ನೆಕ್ಸ್​ಟ್ ಆವೃತ್ತಿಗೂ ಟ್ರೋಫಿ ಗೆಲ್ಲೋ ಫೇವರೆಟ್ ಟೀಂ. ಅದ್ರಲ್ಲೂ ಐಪಿಎಲ್​ನಲ್ಲಿ ಮೆಗಾ ಆಕ್ಷನ್ ಏನಾದ್ರೂ ಬರದೇ ಇದ್ರೆ ಇನ್ಮುಂದಿನ ಎಲ್ಲಾ ಟ್ರೋಫಿಗಳನ್ನ ಬೆಂಗಳೂರೇ ಗೆಲ್ಲುತ್ತೆ ಅಂತಾ ಮಾಜಿ ಕ್ರಿಕೆಟಿಗರೇ ಭವಿಷ್ಯ ನುಡಿದಿದ್ದಾರೆ. ಅಷ್ಟರ ಮಟ್ಟಿಗೆ ತಂಡ ಸೂಪರ್ ಸ್ಟ್ರಾಂಗ್ ಇದೆ ಅನ್ನೋದು ಅವ್ರ ಲೆಕ್ಕಾಚಾರ. ಹೀಗಿದ್ರೂ ಮುಂದಿನ ಸೀಸನ್​ಗೂ ಮುನ್ನ ಕೆಲವರನ್ನ ಹೊರ ಕಳಿಸಲೇಬೇಕಾಗುತ್ತೆ. ಈ ಪೈಕಿ ಮೂವರು ಸ್ಟಾರ್ ಆಟಗಾರರೇ ಇದ್ದಾರೆ.

ನಂಬರ್ -1

ಬ್ಯಾಟಿಂಗ್ ನಲ್ಲಿ ಸದ್ದೇ ಮಾಡದ ಜಿತೇಶ್ ತಂಡದಿಂದ ಔಟ್!

ಬೆಂಗಳೂರಿನ ರಿಲೀಸ್ ಲಿಸ್ಟ್​ನಲ್ಲಿ ಕೇಳಿ ಬರ್ತಿರೋ ಮೊದಲ ಹೆಸರು ಜಿತೇಶ್ ಶರ್ಮಾ. ವಿಕೆಟ್ ಕೀಪರ್ ಕಂ ಬ್ಯಾಟರ್ ಆಗಿರೋ ಜಿತೇಶ್ ಶರ್ಮಾ 2025ರಲ್ಲಿ ಆರ್​ಸಿಬಿ ಪಾಲಿಗೆ ಒನ್ ಆಫ್ ದಿ ಮ್ಯಾಚ್ ವಿನ್ನಿಂಗ್ ಪ್ಲೇಯರ್. ಆದ್ರೆ 2026ರಲ್ಲಿ ಅವ್ರ ಬ್ಯಾಟಿಂದ ಒಂದೇ ಒಂದು ಆವರೇಜ್ ಸ್ಕೋರ್ ಕೂಡ ಬರ್ಲಿಲ್ಲ. ವಿಕೆಟ್ ಕೀಪಿಂಗ್ ಕಾಲಂನಲ್ಲಿ ಮಾತ್ರ ಅವ್ರ ಕಾಂಟ್ರಿಬ್ಯೂಷನ್ ಕಾಣ್ಸಿದ್ದು. ಬ್ಯಾಟಿಂಗ್​ನಲ್ಲಿ ಇದ್ದೂ ಇಲ್ಲದಂತಾಗಿದ್ರು.  ಪ್ರಸ್ತುತ ಆರ್​ಸಿಬಿ ಫ್ರಾಂಚೈಸಿಯಿಂದ ಸೀಸನ್​ವೊಂದಕ್ಕೆ ಬರೋಬ್ಬರಿ 11 ಕೋಟಿ ರೂಪಾಯಿ ಪಡೆದಿದ್ದ ಜಿತೇಶ್ ಶರ್ಮಾ ಲಾಸ್ಟ್ ಸೀಸನ್ ಸಿಕ್ಕಾಪಟ್ಟೆ ಹರ್ಟ್ ಮಾಡಿದ್ರು. ಇಡೀ ಸೀಸನ್‌ನಲ್ಲಿ ಅವರು ಆಡಿದ 16 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 116 ರನ್ ಮಾತ್ರ. ಇಂಡಿವಿಶ್ಯುಯಲ್ ಹೈಸ್ಕೋರ್ ಅಂದ್ರೆ ಅದು 23 ರನ್ಸ್ ಮಾತ್ರ,. ಕ್ರೂಶಿಯಲ್ ಟೈಮಲ್ಲೇ ಕೈಕೊಡ್ತಿದ್ರು. ಹೀಗಾಗಿ ಜಿತೇಶ್ ಶರ್ಮಾ ಮುಂದಿನ ಆವೃತ್ತಿಗೆ ಬೇಡ ಅನ್ನೋದು ಕೆಲವ್ರ ಸಜೇಷನ್. ಆದ್ರೆ ಮ್ಯಾನೇಜ್​ಮೆಂಟ್ ಇವ್ರನ್ನ ಸದ್ಯ ವೇಯ್ಟಿಂಗ್ ಲಿಸ್ಟ್​ನಲ್ಲಿ ಇಟ್ಟಿದೆ.

ನಂಬರ್ -2

ಬ್ಯಾಟಿಂಗ್ & ಬೌಲಿಂಗ್ ಎರಡ್ರಲ್ಲೂ ಬೇಡವಾದ ಶೆಫರ್ಡ್!

ಇನ್ನು 19ನೇ ಆವೃತ್ತಿಯಲ್ಲಿ ಬೆಂಗಳೂರು ತಂಡಕ್ಕೆ ತೀವ್ರ ನಿರಾಸೆ ಮೂಡಿಸಿದ ಮತ್ತೊಬ್ಬ ಆಟಗಾರ ರೊಮ್ಯಾರಿಯೋ ಶೆಫರ್ಡ್. ವೆಸ್ಟ್ ಇಂಡೀಸ್​ಗೆ ಈ ಆಲ್​ರೌಂಡರ್ 2025ರಲ್ಲಿ ಚೆನ್ನೈ ವಿರುದ್ಧ 13 ಬಾಲಲ್ಲೇ ಅರ್ಧಶತಕ ಬಾರಿಸಿ ಹಲ್​ಚಲ್ ಎಬ್ಬಿಸಿದ್ರು. ಌಂಡ್ ಫೈನಲ್ ಮ್ಯಾಚಲ್ಲಿ ಶ್ರೇಯಸ್ ಅಯ್ಯರ್​ರನ್ನ 1 ರನ್​ಗೆ ಪೆವಿಲಿಯನ್​ಗೆ ಅಟ್ಟಿದ್ರು. ಆದ್ರೆ 2026ರಲ್ಲಿ ಈ ಥರದ್ದು ಒಂದೇ ಒಂದು ಇನ್ನಿಂಗ್ಸ್ ಬರಲಿಲ್ಲ. 2026ರ ಆವೃತ್ತಿಯಲ್ಲಿ ಅವರು 15 ಪಂದ್ಯಗಳನ್ನು ಆಡಿ ಕೇವಲ 6 ವಿಕೆಟ್ ಪಡೆದು, ಬ್ಯಾಟಿಂಗ್‌ನಲ್ಲಿ 83 ರನ್ ಮಾತ್ರ ಗಳಿಸಿದರು. ಅದೂ ಕೂಡ ಬ್ಯಾಟಿಂಗ್ ಸ್ಟ್ರೈಕ್​ರೇಟ್ 125 ಇತ್ತು. ಬೌಲಿಂಗ್ ಅಂತೂ ಸಿಕ್ಕಾಪಟ್ಟೆ ಎಕ್ಸ್​ಪೆನ್ಸಿವ್ ಆಗಿದ್ದಾರೆ. ಅದ್ರಲ್ಲೂ ಡೆತ್ ಓವರ್​ನಲ್ಲಿ ಇವ್ರು ಕೊಟ್ಟ ರನ್ಸ್​ನಿಂದಲೇ ತಂಡ ಸೋತಿದ್ದೂ ಇದೆ. ಕ್ರೂಶಿಯಲ್ ಟೈಮಲ್ಲೂ ಒಂದೇ ಒಂದು ಮ್ಯಾಚಲ್ಲೂ ಸದ್ದು ಮಾಡದ ಶೆಫರ್ಡ್ ರನ್ನ ತಂಡದಿಂದ ಕೈಬಿಡಿ ಅನ್ನೋ ಮಾತುಗಳಿವೆ. ಒಂದೂವರೆ ಕೋಟಿ ಸಂಭಾವನೆ ಪಡೆಯುತ್ತಿರೋ ಶೆಫರ್ಡ್​ಗೆ ಮತ್ತೆ ಚಾನ್ಸ್ ಕೊಡಬೇಕಾ ಅಥವಾ ಕೈಬಿಡಬೇಕಾ ಅನ್ನೋ ಬಗ್ಗೆ ಮ್ಯಾನೇಜ್​ಮೆಂಟ್​​ನಲ್ಲಿ ಚರ್ಚೆ ನಡೀತಿದೆ.

ನಂಬರ್ -3

ಬೌಲಿಂಗ್ ನಲ್ಲಿ ಇಂಪ್ರೆಸ್ ಮಾಡದ ಸುಯಾಶ್ ಶರ್ಮಾ!

ಲೆಗ್ ಸ್ಪಿನ್ನರ್ ಸುಯಶ್ ಶರ್ಮಾ ಕೂಡ ಫಾರ್ಮ್ ಕಳ್ಕೊಂಡಿದ್ದಾರೆ. ಬೆಂಗಳೂರು ಪರ 2.60 ಕೋಟಿ ಸಂಭಾವನೆ ಪಡೆಯುತ್ತಿರೋ ಸುಯಾಶ್​ 19ನೇ ಆವೃತ್ತಿಯಲ್ಲಿ ಕೇವಲ 9 ವಿಕೆಟ್ ಪಡೆದಿದ್ರು.  18ನೇ ಆವೃತ್ತಿಯಲ್ಲಿ 8 ವಿಕೆಟ್ ಮಾತ್ರ ಪಡೆಯಲು ಯಶಸ್ವಿಯಾಗಿದ್ದರು. ಇವರ ಎಕಾನಮಿ ದರ ಸ್ವಲ್ಪ ದುಬಾರಿಯಾಗಿದೆ.  ಅದೂ ಅಲ್ದೇ ಬೆಂಗಳೂರು ತಂಡಕ್ಕೆ ಒಬ್ಬ ಪ್ಯೂರ್ ಌಂಡ್ ಸ್ಪೆಷಲಿಸ್ಟ್ ಸ್ಪಿನ್ನರ್ ಕೊರತೆ ಇರೋದ್ರಿಂದ ಸುಯಾಶ್​ರನ್ನ ಕೈಬಿಟ್ಟು ಮಿನಿ ಆಕ್ಷನ್​ನಲ್ಲಿ ಒಳ್ಳೆ ಬೌಲರ್​ ಖರೀದಿ ಮಾಡೋಕೆ ಆರ್​ಸಿಬಿ ಫ್ರಾಂಚೈಸಿ ತಯಾರಿ ಮಾಡ್ಕೊಂಡಿದೆ. ಹೀಗಾಗಿ ಸುಯಾಶ್ ಕೂಡ ಡೇಂಜರ್ ಝೋನ್​ನಲ್ಲಿದ್ದಾರೆ. ಹೀಗೆ ಈ ಮೂವರು ಪ್ಲೇಯರ್ಸ್ ಸದ್ಯ ರಿಲೀಸ್ ಲಿಸ್ಟ್​ನಲ್ಲಿ ಇದ್ದಾರೆ. ಮುಂದಿನ ಆವೃತ್ತಿಗೆ ಮತ್ತೆ ಕಪ್ ಗೆದ್ದು ಹ್ಯಾಟ್ರಿಕ್ ವಿಕ್ಟರಿಯ ಇತಿಹಾಸ ಸೃಷ್ಟಿಸೋಕೆ ಹೊರಟಿರೋ ಫ್ರಾಂಚೈಸಿ ಯಾವ ನಿರ್ಧಾರಗಳನ್ನ ತೆಗೆದುಕೊಳ್ಳುತ್ತೆ ಅನ್ನೋದು ಮುಖ್ಯವಾಗುತ್ತೆ.

Shantha Kumari

Leave a Reply

Your email address will not be published. Required fields are marked *